ಹಾಗೇ ಸುಮ್ಮನೆ ಉಗುರಿಗೆ ಬಣ್ಣ ಹಚ್ಚುವುದು ಸುಲಭ ಕೆಲಸ. ಆದರೆ ಉಗುರಿನ ಆರೋಗ್ಯ, ಸೌಂದರ್ಯ, ಹೊಳಪು ಎಲ್ಲವನ್ನೂ ಗಮನದಲ್ಲಿರಿಸಿ ಉಗುರಿಗೆ ನೈಲ್ ಪಾಲಿಶ್ ಕಚ್ಚುವುದು ಬರೀ ಕೆಲಸ ಮಾತ್ರವಲ್ಲ, ಅದೊಂದು ಕಲೆ. ನೀಟಾಗಿ ನೈಲ್ ಪಾಲಿಶ್ ಹಚ್ಚಿಕೊಳ್ಳಲು ಇಲ್ಲಿದೆ ಸುಲಭ ಟಿಪ್ಸ್.
ಸೌಂದರ್ಯದ ಬಗ್ಗೆ ಮಾತನಾಡಿದರೆ ತಟ್ಟನೇ ಮುಖದ ಸೌಂದರ್ಯವೇ ನೆನಪಾಗುವುದು. ಮುಖದ ಚಂದವನ್ನು ಆಧರಿಸಿಯೇ ಹೆಚ್ಚಿನವರು ವ್ಯಕ್ತಿಯ ಸೌಂದರ್ಯ ವಿಮರ್ಶಿಸುತ್ತಾರೆ. ಆದರೆ ವಾಸ್ತವದದಲ್ಲಿ ವೈಯಕ್ತಿಕವಾಗಿ ದೇಹದ ಬಗ್ಗೆ ಕಾಳಜಿ ವಹಿಸಿ, ಆರೈಕೆ ಮಾಡುವ ಅಗತ್ಯವಿದೆ. ತಲೆಗೂದಲು, ಪಾದ, ಉಗುರುಗಳಲ್ಲಿಯೂ ಸೌಂದರ್ಯವಿದೆ. ನೀಟಾಗಿ ಕತ್ತರಿಸಿ, ನೈಲ್ ಪಾಲಿಶ್ ಹಚ್ಚಿಕೊಂಡರೆ ನಿಮ್ಮ ಕೈಗಳ ಸೌಂದರ್ಯ ಹೆಚ್ಚುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಹಾಗೇ ಸುಮ್ಮನೆ ಉಗುರಿಗೆ ಬಣ್ಣ ಹಚ್ಚುವುದು ಸುಲಭ ಕೆಲಸ. ಆದರೆ ಉಗುರಿನ ಆರೋಗ್ಯ, ಸೌಂದರ್ಯ, ಹೊಳಪು ಎಲ್ಲವನ್ನೂ ಗಮನದಲ್ಲಿರಿಸಿ ಉಗುರಿಗೆ ನೈಲ್ ಪಾಲಿಶ್ ಕಚ್ಚುವುದು ಬರೀ ಕೆಲಸ ಮಾತ್ರವಲ್ಲ. ಅದೊಂದು ಕಲೆ.
ನೈಲ್ ಪಾಲಿಶ್ ನೈಸ್ ಆಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ
ಉಗುರಿಗೆ ನೈಸರ್ಗಿಕ ಬಣ್ಣವಿರುತ್ತದೆ. ತಿಳಿಗುಲಾಬಿ ಬಣ್ಣದ ನ್ಯಾಚುರಲ್ ಉಗುರಿನ ಬಣ್ಣ ಮಾಸದೆ, ಆರೋಗ್ಯವಾಗಿರುವಂತೆ ಕಾಪಾಡಿಕೊಳ್ಳುವುದು ಸುಲಭವಲ್ಲ. ಅದಕ್ಕೂ ಸ್ವಲ್ಪ ಕಾಳಜಿ ತೋರಿಸುವುದು ಅಗತ್ಯ. ಸುಮ್ಮನೆ ಉಗುರು ಬೇಕಾಬಿಟ್ಟಿ ಬೆಳೆಯಲು ಬಿಟ್ಟರೆ ಅದು ನೀಟಾಗಿ ಕಾಣುವುದಿಲ್ಲ. ಉಗುರನ್ನು ಒಂದೇ ರೀತಿಯಾಗಿ ನೀಟಾಗಿ ಕತ್ತರಿಸಿ, ನಂತರ ನೈಲ್ ಕಟ್ಟರ್‌ನ ದೊರಗಿನ ಭಾಗದಲ್ಲಿ ನಿಧಾನವಾಗಿ ತಿಕ್ಕಿ. ಶಾರ್ಪ್ ಆಗಿ ಉಳಿದ ಉಗುರಿನ ತುದಿಗಳು ಈಗ ನುಣುಪಾಗಿ ಕೂರುತ್ತವೆ.
ಉಗುರು ಬೆಚ್ಚಗಿನ ಸೋಪಿನ ನೀರಲ್ಲಿ ಕೈಗಳನ್ನೂ ಪಾದಗಳನ್ನೂ ಇಟ್ಟುಬಿಡಿ. ನಿಧಾನವಾಗಿ ನಿಮ್ಮ ಉಗುರಿನಲ್ಲಿ ಕೊಳೆ ಬಿಟ್ಟುಕೊಳ್ಳುತ್ತದೆ. ಬೇಕಾದರೆ ನೈಲ್ ಬ್ರಶ್‌ನಿಂದ ಉಗುರನ್ನು ಸ್ವಚ್ಛಗೊಳಿಸಿ. ನಂತರ ಸ್ವಲ್ಪ ಬಾಡಿ ಲೋಶನ್ ಹಚ್ಚಿ ಬಿಡಿ.
ನೈಲ್ ಪಾಲಿಶ್ ಹಚ್ಚುವ ಮುನ್ನ ಬೇಸ್ ಕೋಟ್ ಹಾಕುವುದನ್ನು ಮಾತ್ರ ಮರೆಯಬಾರದು. ಕೆಮಿಕಲ್ ಉಪಯೋಗಿಸಿಯೇ ನೈಲ್ ಪಾಲಿಶ್‌ಗಳನ್ನು ತಯಾರಿಸುತ್ತಾರೆ ಎಂಬುದು ತಿಳಿದಿರುವ ವಿಚಾರ. ಕೆಮಿಕಲ್ ನಮ್ಮ ಉಗುರಿನ ನೈಸರ್ಗಿಕ ಬಣ್ಣವನ್ನು ನುಂಗಿ ಹಾಕುವುದೂ ಹೌದು. ಹಾಗಿರುವಾಗ ಅಗತ್ಯವಾಗಿ ಬೇಸ್ ಕೋಟ್ ಹಚ್ಚಲೇ ಬೇಕು.
ನೈಲ್ ಪಾಲಿಶ್ ಹಚ್ಚೋದು ಸುಲಭ. ಆದರೆ ನೀಟಾಗಿ ಹಚ್ಚುವುದು ಕಷ್ಟ. ಉಗುರಿಗೆ ಬಣ್ಣ ಹಚ್ಚುವಾಗ ಚರ್ಮ ಭಾಗಕ್ಕೆ ನೇಲ್ ಪಾಲಿಶ್ ತಾಗದಂತೆ, ಉಗುರಿನ ಸುತ್ತೆಲ್ಲ ನೇಲ್ ಪಾಲಿಶ್ ಅಂಟಿದರೆ ಖಂಡಿತ ನಿಮ್ಮ ಬೆರಳುಗಳು ಆಕರ್ಷಕವಾಗಿ ಕಾಣಲಾರದು. ಹಾಗಾಗಿ ಜಾಗರೂಕತೆಯಿಂದ, ತಾಳ್ಮೆಯಿಂದ, ಆಸಕ್ತಿಯಿಂದ ನಿಧಾನವಾಗಿ ನೇಲ್ ಪಾಲೀಶ್ ಹಚ್ಚುವುದು ಸೂಕ್ತ.
ರಾತ್ರಿ ಉಗುರು ಕತ್ತರಿಸಿದ್ರೆ ಏನು ಪ್ರಾಬ್ಲಂ ಅನ್ನೋರು ಇದನ್ನೊಮ್ಮೆ ಓದಿ!
ನೈಲ್ ಪಾಲಿಶ್ ಹಚ್ಚುವುದು ತೀರ ಕಷ್ಟ ಎಂದಾದರೆ ಉಗುರಿಗೆ ಬಣ್ಣ ಹಚ್ಚುವ ಮೊಲದೇ ಉಗುರಿನ ಸುತ್ತ ಸ್ವಲ್ಪ ವ್ಯಾಸ್ಲೀನ್ ಅಥವಾ ಇನ್ಯಾವುದೇ ಬಾಡಿಲೋಶನ್‌ಗಳಂತಹ ಲೋಶನ್ ಬಳಸಿ. ಹೀಗೆ ಮಾಡಿದರೆ ಉಗುರಿನ ಬಣ್ಣ ಹಚ್ಚಿದ ಮೇಲೆ ಹೊರಗುಳಿದ ಬಣ್ಣ ತೆಗೆಯುವುದು ಸುಲಭ.
ಯಾವುದೇ ನೈಲ್ ಪಾಲಿಶ್ ಹಚ್ಚುವಾಗಲೂ ಕೋಟ್‌ಗಳ ಬಗ್ಗೆ ಗಮನವಿರಲಿ. ಒಂದು ಸಲ ನೈಲ್ ಪಾಲಿಶ್ ಹಚ್ಚುವಾಗ ಇಡೀ ಉಗುರಿಗೆ ತಾಗಲಿ. ಅರ್ಧ ಬಿಟ್ಟು ಅರ್ಧ ಹಚ್ಚುವುದರಿಂದ ಪರ್ಫೆಕ್ಷನ್ ಹೋಗಿ ಬಿಡುತ್ತದೆ. ಉಗುರಿನ ಆರಂಭದಿಂದ ತುದಿಯವರೆಗೂ ಹಚ್ಚಿ ಆಮೇಲೆ ಅದರ ಮೇಲಿನಿಂದ ಗಾಢ ಬಣ್ಣ, ತಿಳಿ ಬಣ್ಣ ಬರುವಂತೆ ಹಚ್ಚಿಕೊಳ್ಳಬಹುದು.
ಹೆಚ್ಚಿನವರು ನೈಲ್ ಪಾಲಿಶ್ ಹಚ್ಚೋದು ಸುಲಭ ಎಂದು ಫಂಕ್ಷನ್‌ಗೆ ಹೊರಡುವ ಕೊನೆ ಘಳಿಗೆಯಲ್ಲಿ ನೈಲ್ ಪಾಲೀಶ್ ಹಚ್ಚುತ್ತಾರೆ. ಅದು ಸರಿಯಾಗಿ ಒಣಗದೆ, ಉಗುರಿನ ಹೊರಗೆಲ್ಲ ತಾಗಿ ನಿಮ್ಮ ಉಗುರಿನ ಸೌಂದರ್ಯವನ್ನೇ ಕೆಡಿಸಿಬಿಡುತ್ತದೆ. ಹಾಗಾಗಿ ತರಾತುರಿಯಲ್ಲಿ ನೈಲ್‌ಪಾಲಿಶ್ ಹಚ್ಚುವುದರ ಬದಲು ನಿಧಾನವಾಗಿ ನೈಲ್ ಪಾಲೀಶ್ ಹಚ್ಚಿ. ಒಣಗಲು ಬಿಡಿ. ಆಗ ನೈಲ್ ಪಾಲೀಶ್ ನೀಟಾಗಿ ಅಂಟಿಕೊಳ್ಳುತ್ತದೆ.