
ಕರ್ನಾಟಕದ ಹೆಸರಾಂತ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ತಮ್ಮ ವಿಶಿಷ್ಟ ವಧುವಿನ ಲುಕ್‌ನಿಂದಾಗಿ ಗಮನ ಸೆಳೆದಿದ್ದಾರೆ. ವೈರಲ್ ಆಗಿರುವ ವೀಡಿಯೊ ಮತ್ತು ಫೋಟೋಗಳಲ್ಲಿ, ಅವರು ಸಾಂಪ್ರದಾಯಿಕ ಕಾಂಜೀವರಂ ಸೀರೆಯನ್ನು ಧರಿಸಿ ಆತ್ಮವಿಶ್ವಾಸದಿಂದ ತಮ್ಮ ಬೈಸೆಪ್ಸ್‌ಗಳನ್ನು (ಸ್ನಾಯುಗಳನ್ನು) ಪ್ರದರ್ಶಿಸುತ್ತಿರುವುದು ಕಂಡುಬರುತ್ತದೆ.
ಶಕ್ತಿ ಮತ್ತು ಸಾಂಪ್ರದಾಯಿಕ ಉಡುಪಿನ ಈ ಮಿಶ್ರಣವು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಮತ್ತು ಹಾಸ್ಯದ ಮಿಶ್ರಣವನ್ನು ಹುಟ್ಟುಹಾಕಿದೆ. ಇನ್ನು ಯಾವಾಗಲೂ ತನ್ನ ಬಾಡಿ ಬಿಲ್ಡಿಂಗ್ ಮೂಲಕ ದೇದಾರ್ಢ್ಯತೆ ತೋರಿಸುತ್ತಿದ್ದ ಚಿತ್ರಾ ಇದೀಗ ಸುಂದರ ಹುಡುಗಿಯಂತೆ ಸಿಂಗರಿಸಿಕೊಂಡು ಮದುವೆ ಮಾಡಿಕೊಳ್ಳಲು ಬಂದಿದ್ದಕ್ಕೆ ಅನೇಕರು ಅವರನ್ನು ಹೊಗಳಿದ್ದಾರೆ. ಚಿತ್ರಾ ಮಿಸ್ ಇಂಡಿಯಾ ಫಿಟ್‌ನೆಸ್ ಮತ್ತು ವೆಲ್‌ನೆಸ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇನ್ನು ಚಿತ್ರಾ ಅವರು ಹಂಚಿಕೊಂಡಿರುವ ಈ ಫೋಟೋ ಸೌಂದರ್ಯ ಎನ್ನುವುದು ಜಿಮ್ ಹಾಗೂ ವ್ಯಾಯಾಮ ಕ್ಷೇತ್ರಗಳಿಗೂ ವಿಸ್ತರಣೆಗೊಳ್ಳುತ್ತಿದೆ ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: 110 ಕೆಜಿ ಭಾರ ಎತ್ತಿದ ನಟಿ ಸಮಂತಾ: ಯಾರ ಮೇಲೆ ಕೋಪ ತೀರಿಸಿಕೊಳ್ಳೋಕೆ ಈ ಸಾಧನೆ ಎಂದ ಫ್ಯಾನ್ಸ್!
ಭಾರತೀಯ ಸಂಪ್ರದಾಯ ಮತ್ತು ಶಕ್ತಿಯ ಗಮನಾರ್ಹ ಮಿಶ್ರಣದಲ್ಲಿ ಕರ್ನಾಟಕ ಮೂಲದ ಬಾಡಿ ಬಿಲ್ಡರ್ ಚಿತ್ರಾ ಪುರುಷೋತ್ತಮ್ ತಮ್ಮ ಅಸಾಂಪ್ರದಾಯಿಕ ವಧುವಿನ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು ದೇಶದಾದ್ಯಂತ ಭಾರೀ ವೈರಲ್ ಆಗುತ್ತಿವೆ. ಕ್ಲಾಸಿಕ್ ಕಾಂಜೀವರಂ ಸೀರೆಯಲ್ಲಿ ಮತ್ತು ಸಾಂಪ್ರದಾಯಿಕ ಆಭರಣಗಳಿಂದ ಅಲಂಕರಿಸಲ್ಪಟ್ಟ ಚಿತ್ರಾ, ಸಾಂಪ್ರದಾಯಿಕ ವಧುವಿನ ಸೌಂದರ್ಯಶಾಸ್ತ್ರಕ್ಕೆ ಸವಾಲು ಹಾಕುತ್ತಾ ಆತ್ಮವಿಶ್ವಾಸದಿಂದ ತನ್ನ ಬೈಸೆಪ್ಸ್ ಅನ್ನು ತೋರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿರುವ ಇವರ ಫೋಟೋಗಳು ಹಾಗೂ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಕಾಮೆಂಟ್‌ಗಳು ಕೂಡ ಬಂದಿವ. ಫಿಟ್‌ನೆಸ್‌ಗಾಗಿ ಅವರ ಸಮರ್ಪಣೆ ಮತ್ತು ಸಾಂಪ್ರದಾಯಿಕ ರೂಢಿಗಳಿಂದ ಹೊರಬಂದು ಜಿಮ್ ಮಾಡಿ 6-ಪ್ಯಾಕ್ ಮಾಡಿಕೊಂಟಡಿರುವ ಚಿತ್ರಾ ಅವರಿಗೆ ನೆಟಿಜನ್‌ಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಚಿತ್ರಾ ಅವರನ್ನು ನೋಡಿ ಹುಡುಗನಂತೆ ಇದ್ದಾರೆ ಎಂದು ನಗಾಡಿದ್ದಾರೆ. ಒಬ್ಬ ಬಳಕೆದಾರರು, ಅವಳ ಅತ್ತೆ, ಮಾವಂದಿರು ಅವಳೊಂದಿಗೆ ಜಗಳ ಮಾಡುವ ಮೊದಲು ಯಾವಾಗಲೂ ಎರಡು ಬಾರಿ ಯೋಚಿಸುತ್ತಾರೆ! ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚಿನ್ನದ ಆಭರಣಗಳ ಜೊತೆಗೆ, ಅವಳು ತನ್ನ ದೇಹದಾರ್ಡ್ಯ ಪದಕಗಳನ್ನು ಸಹ ಧರಿಸಬೇಕು ಎಂದು ಹೇಳಿದ್ದಾರೆ.
ಬಾಡಿ ಬಿಲ್ಡರ್ ಆಗಿರುವ ಚಿತ್ರಾ ಪುರುಷೋತ್ತಮ್ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ಮುನ್ನೆಲೆಗೆ ಬರುತ್ತಿರುವುದು ಮೊದಲೇನಲ್ಲ. ಅವರು ಮಿಸ್ ಇಂಡಿಯಾ ಫಿಟ್‌ನೆಸ್ ಮತ್ತು ವೆಲ್‌ನೆಸ್, ಮಿಸ್ ಸೌತ್ ಇಂಡಿಯಾ ಕೂಡ ಆಗಿದ್ದಾರೆ. ಮಿಸ್ ಕರ್ನಾಟಕ ಮತ್ತು ಮಿಸ್ ಬೆಂಗಳೂರು ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ, ಅವರ ಇತ್ತೀಚಿನ ವಧುವಿನ ಫೋಟೋಶೂಟ್, ಸಂಪ್ರದಾಯಕ್ಕೆ ಜೋತುಬೀಳುವುದನ್ನು ಒಪ್ಪಿಕೊಳ್ಳದೇ ಹೊರಬಂದಿರುವ ಅವರಿಗೆ ಶ್ಲಾಘನೆ ವ್ಯಕ್ತವಾಗಿದೆ. ಮಹಿಳೆ ಎಂದರೆ ಸೌಂದರ್ಯ ಮತ್ತು ಸ್ತ್ರೀತ್ವ (ಮೃದು) ಎನ್ನುವ ಸಾಮಾಜಿಕ ಮಾನದಂಡಗಳನ್ನು ಮರು ವ್ಯಾಖ್ಯಾನಿಸಲು ಮುಂದಾದಂತೆ ಕಾಣುತ್ತದೆ. ಶಕ್ತಿ ಮತ್ತು ಸಂಪ್ರದಾಯದ ಸಮ್ಮಿಲನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ದಪ್ಪ, ಕ್ರಿಕೆಟ್‌ಗೆ ಫಿಟ್ ಅಲ್ಲವೆಂದು ವಿವಾದದಲ್ಲಿರುವ ಶಮಾಗೂ ಮಂಗಳೂರಿಗೂ ನಂಟೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.