ವಿಶ್ವದ ಅತಿ ದುಬಾರಿ ವಾಚುಗಳ ದರ ಕೇಳಿದರೆ ಸಾಮಾನ್ಯರಿಗೆ ಅಚ್ಚರಿಯಾಗುತ್ತದೆ. ಅಷ್ಟೆಲ್ಲ ದುಬಾರಿ ಯಾಕೆ ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಅವುಗಳಲ್ಲಿರುವ ಕಲಾಕುಸುರಿ, ಅಪರೂಪದ ಹರಳುಗಳೇ ಕಾರಣ. ಇದು ವಿಶ್ವದ ದುಬಾರಿ ವಾಚುಗಳ ಕತೆ.
ಲಕ್ಸುರಿ ವಾಚ್ ಗಳ ಬಗ್ಗೆ ಜನರಿಗೆ ಭಾರೀ ಕ್ರೇಜ್ ಇದೆ. ಸಾಮಾನ್ಯ ವಾಚ್ ಗಳು ಹೆಚ್ಚು ಜನಪ್ರಿಯತೆ ಹೊಂದಿಲ್ಲದ ಈ ಕಾಲದಲ್ಲಿ ದುಬಾರಿ ವಾಚ್ ಗಳಿಗೆ ದೊಡ್ಡ ಮಾರುಕಟ್ಟೆ ನಿರ್ಮಾಣವಾಗಿದೆ. ಸಾಮಾನ್ಯವಾಗಿ ನಾವೆಲ್ಲ 2-3 ಲಕ್ಷದ ವಾಚುಗಳ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ, ವಿಸ್ಮಯ ಪಟ್ಟಿರುತ್ತೇವೆ. ಆದರೆ, ಡೈಮಂಡ್ ಭರಿತ ವಾಚುಗಳು ಅದಕ್ಕಿಂತ ಸಿಕ್ಕಾಪಟ್ಟೆ ದುಬಾರಿಯಾಗಿರುತ್ತವೆ. ಅಲ್ಲಿ ಬೆಲೆ ಇರುವುದು ವಾಚಿಗಲ್ಲ. ಡೈಮಂಡ್ ಗಳಿಗೆ. ಹೀಗಾಗಿ, ಅದು ಎಷ್ಟು ಬೇಕಿದ್ದರೂ ದುಬಾರಿಯಾಗಿರಬಹುದು. ಅಲ್ಲದೆ, ಕಲಾತ್ಮಕತೆ, ಪಾರಂಪರಿಕ ಶೈಲಿಗೂ ಇಲ್ಲಿ ವಿಶಿಷ್ಟ ಸ್ಥಾನವಿದೆ. ಕೆಲವು ವಾಚ್ ಗಳಲ್ಲಿ ವಿವಿಧ ರೀತಿಯ ಹರಳುಗಳನ್ನು ಬಹಳ ಸೂಕ್ಷ್ಮವಾಗಿ ಕಲಾತ್ಮಕತೆಯಿಂದ ಕೂರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅವು ಹೆಚ್ಚು ಮೌಲ್ಯ ಹೊಂದುತ್ತವೆ. ಅಂಥದ್ದೇ ಒಂದು ವಾಚ್ ಇದು. 2014ರಲ್ಲಿ ಲಂಡನ್ ಮೂಲದ ಆಭರಣ ತಯಾರಿಕಾ ಸಂಸ್ಥೆಯಾಗಿರುವ ಗ್ರಾಫ್ ಡೈಮಂಡ್ಸ್ ಒಂದು ವಾಚ್ ಅನ್ನು ಬಾಸೆಲ್ ವರ್ಲ್ಡ್ ನಲ್ಲಿ ಬಿಡುಗಡೆ ಮಾಡಿತು. ಗ್ರಾಫ್ ಹ್ಯಾಲುಸಿನೇಷನ್ ಎಂದು ಹೆಸರಿಸಲಾದ ಈ ವಾಚ್ ಸಂಸ್ಥೆಯ ಸ್ಥಾಪಕರಾದ ಲಾರೆನ್ಸ್ ಗ್ರಾಫ್ ಅವರ ಕನಸಿನ ಕೂಸಾಗಿತ್ತು.
ಗ್ರಾಫ್ ಹ್ಯಾಲುಸಿನೇಷನ್ (Graff Hallucination) ವಾಚ್ (Watch) ವಿಶ್ವದ ಅತಿ ದುಬಾರಿ (Costly) ವಾಚ್. ಇಂದಿಗೂ ಇದರ ದಾಖಲೆಯನ್ನು ಯಾವುದೂ ಹಿಂದಿಕ್ಕಿಲ್ಲ. ನವಿರಾದ ರಂಗುರಂಗಿನ, ಅಪರೂಪದ ಡೈಮಂಡ್ (Diamonds) ಗಳನ್ನು ಕೂರಿಸಿರುವ ಈ ವಾಚ್ ಒಟ್ಟು 110 ಕ್ಯಾರಟ್ (Carrots) ತೂಕ ಹೊಂದಿದೆ. 30 ವಿಶೇಷ ತಜ್ಞರು ಸೇರಿ ಇದನ್ನು ನಿರ್ಮಿಸಿದ್ದಾರೆ. ವಿನ್ಯಾಸಗಾರರು, ಹರಳು ತಜ್ಞರು, ಕುಶಲಕರ್ಮಿಗಳು ಸೇರಿ ಒಟ್ಟಾರೆ ನಾಲ್ಕೂವರೆ ವರ್ಷಗಳ ಕಾಲ ಈ ಅದ್ಭುತವನ್ನು ನಿರ್ಮಿಸಲು ಶ್ರಮ ಹಾಕಿದ್ದಾರೆ. ಒಂದು ವಾಚ್ ತಯಾರಿಸಲು ಇಷ್ಟೆಲ್ಲ ಸಮಯ (Time) ಬೇಕಾ ಎನ್ನಬೇಡಿ. ಇದರಲ್ಲಿರುವ ಕಲಾಕುಸುರಿ (Craft) ನೋಡಿದರೆ ಎಂಥವರೂ ತಲೆಬಾಗಬೇಕು, ಹಾಗಿದೆ.
ಅದ್ಭುತ ಕಲಾಕುಸುರಿ ಹಾಗೂ ವಿಶಿಷ್ಟ ಹರಳುಗಳಿಂದಾಗಿ ಗ್ರಾಫ್ ಹ್ಯಾಲುಸಿನೇಷನ್ ವಾಚ್ ಬೆಲೆಯನ್ನು 55 ಮಿಲಿಯನ್ ಡಾಲರ್ ಗೆ ಏರಿಸಿದೆ. ಅಂದರೆ, ಸರಿಸುಮಾರು 456 ಕೋಟಿ ರೂಪಾಯಿ! ಇದೇ ವಿಶ್ವದ ಅತ್ಯಂತ ದುಬಾರಿ ವಾಚ್.
240 ಕೋಟಿಯ ಏರ್‌ಬಸ್, 451 ಕೋಟಿಯ ನೆಕ್ಲೇಸ್; ಅಂಬಾನಿ ಫ್ಯಾಮಿಲಿ ಕೊಡೋ ಗಿಫ್ಟ್ಸ್ ಸಿಕ್ಕಾಪಟ್ಟೆ ಕಾಸ್ಟ್ಲೀ!
2ನೇ ಅತಿದುಬಾರಿ ವಾಚ್
2015ರಲ್ಲಿ ಗ್ರಾಫ್ ಡೈಮಂಡ್ಸ್ ಸಂಸ್ಥೆ ಮತ್ತೊಂದು ವಿಸ್ಮಯವನ್ನು ಪರಿಚಯಿಸಿತು. ಕೆಲವು ಭಾಗವನ್ನು ತೆಗೆದು ರಿಂಗ್ (Ring) ನಂತೆ ಪರಿವರ್ತಿಸಲು ಸಾಧ್ಯವಿರುವ ಡೈಮಂಡ್ ನಿಂದ ಕೂಡಿರುವ ವಾಚ್ ಪರಿಚಯಿಸಿತು. 152 ಕ್ಯಾರೆಟ್ ಬಿಳಿ ವಜ್ರದ ಹರಳು ಹಾಗೂ ಅಪರೂಪದ ಪಿಯರ್ ಶೇಪ್ (Pear Shape) ನ 38 ಕ್ಯಾಟರ್ ವಜ್ರಗಳನ್ನು ಕೇಂದ್ರಭಾಗದಲ್ಲಿ ಹೊಂದಿದ್ದ ಈ ವಾಚ್ ಬೆಲೆ 40 ಮಿಲಯನ್ ಡಾಲರ್ ಆಗಿತ್ತು. ನಮ್ಮ ರೂಪಾಯಿಯಲ್ಲಿ 331 ಕೋಟಿ ರೂಪಾಯಿಗಳು. ಇದಕ್ಕೆ ವಿಶ್ವದ 2ನೇ ಅತಿದುಬಾರಿ ವಾಚ್ ಎನ್ನುವ ಹೆಗ್ಗಳಿಕೆ ಇದೆ.
ಡಯಾನಾ ಧರಿಸಿದ್ದ ಚಿನ್ನದ ಕಾರ್ಟಿಯರ್
ಇತರ ಲಕ್ಸುರಿ (Luxury) ವಾಚುಗಳಲ್ಲಿ ಮುಖ್ಯವಾಗಿ ವಿಂಟೇಜ್ ಮಾದರಿಯ ವಾಚುಗಳಲ್ಲಿ ಮುಖ್ಯವಾಗಿದ್ದುದು ಕಾರ್ಟಿಯರ್ ಟ್ಯಾಂಕ್ ಫ್ರಾಂಕೈಸ್ ವಾಚ್. ಇದು ಚಿನ್ನದ್ದು. ಇದನ್ನು ಹಿಂದೆ ರಾಜಕುಮಾರಿ ಡಯಾನಾ (Princess Diana) ಧರಿಸುತ್ತಿದ್ದರು ಬಳಿಕ ಇದು ರಾಜಕುಮಾರ ಹ್ಯಾರಿಗೆ ದೊರೆಯಿತು. ಇದನ್ನು ಅವರು ಬಳಿಕ ಮೆಘನ್ ಮಾರ್ಕೆಲ್ ಅವರಿಗೆ ಉಡುಗೊರೆಯಾಗಿ ನೀಡಿದರು. ಇದೇ ರೀತಿ, ನಟ ಪಾಲ್ ನ್ಯೂಮನ್ ಅವರಿಗೆ ಸೇರಿದ್ದ ರೋಲೆಕ್ಸ್ (Rolex) ಡೇಟೋನಾ ವಾಚ್ 2017ರಲ್ಲಿ 140 ಕೋಟಿ ರೂಪಾಯಿಗೆ ಹರಾಜಾಗಿತ್ತು.
ಮುಂಬೈನ ಅತೀ ದುಬಾರಿ ಬಂಗಲೆಯಿದು; ಬೆಲೆ ನಾವು, ನೀವ್ ಗೆಸ್ ಮಾಡಿರೋದಕ್ಕಿಂತ ಸಿಕ್ಕಾಪಟ್ಟೆ ಹೆಚ್ಚು!
ಅನಂತ್ ಅಂಬಾನಿ ಬಳಿಯೂ ಇದೆ ದುಬಾರಿ ವಾಚ್
ಇನ್ನು, ನಮ್ಮ ದೇಶದ ಸಿರಿವಂತ (Wealthy) ಕುಟುಂಬವಾದ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ವಿಶ್ವದ ದುಬಾರಿ ವಾಚುಗಳಲ್ಲಿ ಒಂದನ್ನು ಹೊಂದಿದ್ದಾರೆ. ಅಪರೂಪದ (Rare) ವಸ್ತುಗಳನ್ನು ಸಂಗ್ರಹಿಸುವ (Collection) ಅವರ ಹವ್ಯಾಸವೂ ಇದಕ್ಕೆ ಕಾರಣ. ಸುಮಾರು 18 ಕೋಟಿ ರೂಪಾಯಿಗಳ ಪ್ಯಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚಿಮ್ ವಾಚ್ ಅವರ ಸಂಗ್ರಹದಲ್ಲಿದೆ. ಅವರ ವಾಚ್ ಒಮ್ಮೆ ಎಲ್ಲರ ಗಮನ ಸೆಳೆದಿತ್ತು.