Beauty News: ಈ ನೇಲ್ ಪಾಲಿಶ್ ಬೆಲೆಯಲ್ಲಿ ನೀವು ಮನೆ ಖರೀದಿಸಬಹುದು!

By Suvarna News  |  First Published Mar 1, 2023, 4:01 PM IST

ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂದರ್ಯ ವರ್ದಕಗಳಿವೆ. ಕೆಲವು ಕೈಗೆಟಕುವ ಬೆಲೆಯಲ್ಲಿದ್ರೆ ಮತ್ತೆ ಕೆಲವನ್ನು ಟಚ್ ಮಾಡೋಕೂ ಸಾಧ್ಯವಿಲ್ಲ. ಇದ್ದವರು ಇಷ್ಟೊಂದು ಹಣ ನೀಡಿ ಇದನ್ನು ಖರೀದಿ ಮಾಡ್ತಾರೆ. ದುಡ್ಡಿಲ್ಲದೆ ಹೋದವರು ಕಣ್ಣು ಕಣ್ಣು ಬಿಡ್ತಾರೆ. ಈ ದುಬಾರಿ ಪಟ್ಟಿಯಲ್ಲಿ ಒಂದು ನೇಲ್ ಪಾಲಿಶ್ ಕೂಡ ಸೇರಿದೆ. 
 


ಹುಡುಗಿಯರ ಸೌಂದರ್ಯ ಹೆಚ್ಚಿಸುವ ಅಲಂಕಾರಿಕ ವಸ್ತುಗಳ ಪೈಕಿ ನೇಲ್ ಪಾಲಿಶ್ ಕೂಡ ಒಂದು. ಇದು ಮಹಿಳೆಯರ ಉಗುರಿನ ಅಂದವನ್ನು ಇಮ್ಮಡಿಗೊಳಿಸುತ್ತದೆ. ಸಣ್ಣ ಪುಟ್ಟ ಸಮಾರಂಭದಿಂದ ಹಿಡಿದು ಮದುವೆ ಕಾರ್ಯಕ್ರಮಗಳ ತನಕ ಈಗ ನೇಲ್ ಪಾಲಿಶ್ ಬಳಕೆಯಾಗುತ್ತದೆ. ಇದಕ್ಕೆ ಮನಸೋಲುವ ಹುಡುಗಿಯರೇ ಇಲ್ಲ. ಮನೆಯ ವಾರ್ಡ್ರೋಬ್ ನಲ್ಲಿ ನಾನಾ ಬಣ್ಣದ, ನಾನಾ ಬ್ರ್ಯಾಂಡ್ ನ ನೇಲ್ ಪಾಲಿಶ್ ತುಂಬಿರುತ್ತದೆ. ಹುಡುಗಿಯರ ವ್ಯಾನಿಟಿ ಬ್ಯಾಗ್ ನಲ್ಲಿ ಒಂದು ನೇಲ್ ಪಾಲಿಶ್ ಇಲ್ಲ ಅಂದ್ರೆ ಅದನ್ನು ನಂಬೋದು ಸಾಧ್ಯವಿಲ್ಲ. 

ಇತ್ತೀಚೆಗಂತೂ ನೇಲ್ ಪಾಲಿಶ್ (Nail Polish) ನ ಕ್ರೇಜ್ ದುಪ್ಪಟ್ಟಾಗಿದೆ. ಈಗಿನ ಯುವಜನತೆ ನೇಲ್ ಪಾಲಿಶ್ ಅನ್ನು ಹೆಚ್ಚು ಬಳಸುತ್ತಾರೆ. ಕೈಗಳಿಗೆ ನೇಲ್ ಪಾಲಿಶ್ ಹಚ್ಚಿ ಅದರ ಮೇಲೆ ನವೀನ ವಿನ್ಯಾಸ (Design) ಗಳನ್ನು ಮಾಡುವ ನೇಲ್ ಆರ್ಟ್ ಪರಿಣಿತರು ಅನೇಕ ಕಡೆ ಇದ್ದಾರೆ. ಇತ್ತೀಚೆಗೆ ಯುವತಿಯರು ತಮ್ಮ ಡ್ರೆಸ್ ಗೆ ಮ್ಯಾಚ್ ಆಗುವಂತ ನೇಲ್ ಪಾಲಿಶ್  ಹಚ್ಚಿಕೊಳ್ತಾರೆ. ಈ ನೇಲ್ ಆರ್ಟ್ (Art ) ಅನ್ನು ವಿವಿಧ ಬಣ್ಣದ ಶೇಡ್ ಗಳು, ಸ್ಟೋನ್ ವರ್ಕ್ ನೇಲ್ ಆರ್ಟ್, ಗ್ಲಿಟರ್ ನೇಲ್ ಆರ್ಟ್, ಮೆಟಾಲಿಕ್ ಕಲರ್ ಗಳ ನೇಲ್ ಪಾಲಿಶ್, ಹೂವಿನ ಚಿತ್ರದ ಫ್ಲೋರಲ್ ನೇಲ್ ಆರ್ಟ್ ಮುಂತಾದವುಗಳಿಂದ ಉಡುಗೆಗೆ ಹೊಂದುವಂತ ನೇಲ್ ಆರ್ಟ್ ಅನ್ನು ಪರಿಣಿತರು ಚಿತ್ರಿಸುತ್ತಾರೆ.

Tap to resize

Latest Videos

Eye Care: ಕಾಂಟ್ಯಾಕ್ಟ್ ಲೆನ್ಸ್ ಹಾಗೂ ಕನ್ನಡಕ.. ಯಾವುದು ಬೆಸ್ಟ್?

ಜನರ ಬೇಡಿಕೆ (Demand) ಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೂಡ ಹಲವಾರು ರೀತಿಯ ನೇಲ್ ಪಾಲಿಶ್ ಗಳು ಲಭ್ಯವಾಗುತ್ತದೆ. ಗುಣಮಟ್ಟ ಮತ್ತು ಗಾತ್ರದ ಅನುಗುಣವಾಗಿ ನೇಲ್ ಪಾಲಿಶ್ ನ ಬೆಲೆ (Price) ಯನ್ನು ಕೂಡ ನಿಗದಿ ಮಾಡಲಾಗುತ್ತದೆ. ಇಪ್ಪತ್ತು ಮೂವತ್ತು ರೂಪಾಯಿಯಿಂದ ಆರಂಭವಾಗುವ ನೇಲ್ ಪಾಲಿಶ್ ಲಕ್ಷ, ಕೋಟಿಗೂ ಬೆಲೆಬಾಳುತ್ತೆ.

ಇದು ಜಗತ್ತಿನ ಬೆಲೆಬಾಳುವ ನೇಲ್ ಪಾಲಿಶ್! : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಚಿಕ್ಕ ಬಾಟಲ್ ನಲ್ಲಿರುವ ನೇಲ್ ಪಾಲಿಶ್ ಕೋಟಿಗಟ್ಟಲೆ ಬೆಲೆಬಾಳುತ್ತೆ ಎನ್ನುವುದನ್ನು ನೀವು ನಂಬಲೇಬೇಕು. ಇದುವರೆಗೆ ನೀವು ಬೆಲೆಬಾಳುವ ಕಾರು, ಬೈಕ್ ಮತ್ತು ಇನ್ನಿತರ ವಸ್ತುಗಳ ಬಗ್ಗೆ ಕೇಳಿರುತ್ತೀರಿ. ಆದರೆ ಇಂದು ನಾವು ನಿಮಗೆ ಜಗತ್ತಿನ ದುಬಾರಿ ನೇಲ್ ಪಾಲಿಶ್ ಗಳ ಬಗ್ಗೆ ಕೆಲವು ಮಾಹಿತಿ ಹೇಳ್ತೇವೆ. ಈ ನೇಲ್ ಪಾಲಿಶ್ ಗೆ ಇರುವ ಬೆಲೆಯಲ್ಲಿ ನಾವು ಮನೆ, ಕಾರನ್ನೇ ಖರೀದಿಸಬಹುದು.

ಈ ಬೆಲೆಬಾಳುವ ನೇಲ್ ಪಾಲಿಶ್ ಹೆಸರು ಅಜೇಚರ್. ಈ ದುಬಾರಿ ಬೆಲೆಯ ನೇಲ್ ಪಾಲಿಶ್ ಅನ್ನು ಲಾಸ್ ಎಂಜೆಲಿಸ್ ನ ವಿನ್ಯಾಸಕ ಎಜೆಟ್ಯೂರ್ ಪೊಗೋಸಿಯನ್ ಅವರು ತಯಾರಿಸಿದ್ದಾರೆ. ಇದರ ಬೆಲೆಯನ್ನು ನೀವು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಅಜೇಚರ್ ನೇಲ್ ಪಾಲಿಶ್ ಬೆಲೆ ಸುಮಾರು 250000 ಡಾಲರ್ ಗಳು. ಅಂದರೆ ಸುಮಾರು 1 ಕೋಟಿ 90 ಲಕ್ಷ ರೂಪಾಯಿಗಳು. ಬೆಲೆ ಬಾಳುವ ವಸ್ತುಗಳನ್ನು ಬಳಸಿ ತಯಾರಿಸಲಾಗುವ ಈ ನೇಲ್ ಪಾಲಿಶ್ ‘ಬ್ಲ್ಯಾಕ್ ಡೈಮಂಡ್ ಕಿಂಗ್’ ಎಂದೇ ಪ್ರಖ್ಯಾತಿ ಪಡೆದಿದೆ. 

ಸಾಮಾನ್ಯವಾಗಿ ಎಲ್ಲ ನೇಲ್ ಪಾಲಿಶ್ ಗಳನ್ನು ಕೆಲವು ರಾಸಾಯನಿಕಗಳನ್ನು ಬಳಸಿ ತಯಾರಿಸುತ್ತಾರೆ. ಆದರೆ ಈ ದುಬಾರಿ ಬೆಲೆಯ ನೇಲ್ ಪಾಲಿಶ್ ತಯಾರಿಸಲು ಪ್ಲೆಟೆನಿಯಮ್ ಪೌಡರ್ ಮತ್ತು ಡೈಮಂಡ್ ಅನ್ನು ಬಳಸಲಾಗುತ್ತದೆ. ಹಾಗಾಗಿ 267 ಕ್ಯಾರೆಟ್ ಡೈಮಂಡ್ ಅನ್ನು ಈ ನೇಲ್ ಪಾಲಿಶ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

73 ವರ್ಷದ ಡಿಸೈನರ್ ಫಿಟ್ನೆಸ್ ಮುಂದೆ ಶಿಲ್ಪಾ ಶೆಟ್ಟಿ, ಮಲೈಕಾ ಏನೇನೂ ಅಲ್ಲ

ಇಷ್ಟು ದಿನ ಕುತ್ತಿಗೆಯ ಚೈನ್, ಉಂಗರ, ಬಳೆ, ಕಿವಿಯೋಲೆ ಮುಂತಾದ ಆಭರಣಗಳಲ್ಲಿ ಉಪಯೋಗವಾಗುವ ಡೈಮಂಡ್ ಗಳು ಈಗ ಉಗುರಲ್ಲೂ ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯರ ಕೈಗೆ ಹುಳಿ ದ್ರಾಕ್ಷಿಯಾಗಿರುವ ಈ ನೇಲ್ ಪಾಲಿಶ್ ನೋಡುಗರ ಕಣ್ಣಿಗೆ ಮನಮೋಹಕವಾಗಿದೆ.

click me!