Lakme Brand: ಲಕ್ಷ್ಮೀಗೂ, ಲ್ಯಾಕ್ಮೆಗೂ, ನೆಹರುಗೂ ಇದೆ ಗಾಢ ಸಂಬಂಧ! ಬ್ಯೂಟಿ ಕ್ರೀಮ್​ ರೋಚಕ ಸ್ಟೋರಿ..

Published : Jun 28, 2025, 05:31 PM IST
Lakhme and Lakshmi

ಸಾರಾಂಶ

ಆರ್​ಜೆಡಿ ಟಾಟಾ ಅವರು ಹುಟ್ಟುಹಾಕಿರುವ ಭಾರತದ ಮೊದಲ ಸ್ವದೇಶಿ ಬ್ಯೂಟಿ ಬ್ರ್ಯಾಂಡ್​ ಲ್ಯಾಕ್ಮೆಗೂ, ಲಕ್ಷ್ಮೀಗೂ, ಆಗಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಇದೆ ಸಂಬಂಧ. ಇದರ ಕುತೂಹಲದ ಸ್ಟೋರಿ ಇಲ್ಲಿದೆ... 

ಲ್ಯಾಕ್ಮೆ ಕ್ರೀಮ್​ ಹೆಸರು ಕೇಳದವರೇ ಇಲ್ಲ ಎನ್ನಬಹುದೇನೋ. ಸೌಂದರ್ಯವರ್ಧಕ ಬ್ರಾಂಡ್ ಆಗಿರೋ ಇದಕ್ಕೆ ಹಲವಾರು ವಿಶೇಷತೆಗಳಿವೆ. ಇದು ಭಾರತದ ಮೊದಲ ಸ್ವದೇಶಿ ಉತ್ಪನ್ನವಾಗಿರುವ ಸೌಂದರ್ಯವರ್ಧಕ ಕ್ರೀಮ್​ ಆಗಿದೆ. ಹಿಂದೂಸ್ತಾನ್ ಯೂನಿಲಿವರ್‌ನ ಒಡೆತನದಲ್ಲಿರುವ ಈ ಬ್ರ್ಯಾಂಡ್​ ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಪ್ರಮುಖ ಸೌಂದರ್ಯವರ್ಧಕ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಲ್ಯಾಕ್ಮೆ ಬಣ್ಣದ ಸೌಂದರ್ಯವರ್ಧಕಗಳು, ಚರ್ಮದ ರಕ್ಷಣೆ, ಮತ್ತು ಕೂದಲ ರಕ್ಷಣೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. 1952 ರಲ್ಲಿ ಸ್ಥಾಪನೆಯಾದ ಈ ಬ್ರ್ಯಾಂಡ್​ ಲಿಪ್‌ಸ್ಟಿಕ್‌ಗಳು, ಐಲೈನರ್‌ಗಳು ಮತ್ತು ಸ್ಕಿನ್‌ಕೇರ್ ಉತ್ಪನ್ನಗಳಂತಹ ಬಣ್ಣದ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುತ್ತದೆ. ಬ್ರ್ಯಾಂಡ್ ತನ್ನದೇ ಆದ ಸೌಂದರ್ಯ ಸಲೊನ್ಸ್ ಜಾಲವನ್ನು ಸಹ ಹೊಂದಿದೆ ಮತ್ತು ಮುಂಬೈನಲ್ಲಿ ನಡೆಯುವ ಲ್ಯಾಕ್ಮೆ ಫ್ಯಾಷನ್ ವೀಕ್‌ಗೆ ಪ್ರಮುಖ ಪ್ರಾಯೋಜಕರಾಗಿದ್ದಾರೆ.

 

ಅಂದಹಾಗೆ, ಇದು ಸ್ಥಾಪನೆಯಾಗಿದ್ದು, 1952 ರಲ್ಲಿ. ಟಾಟಾ ಆಯಿಲ್ ಮಿಲ್ಸ್‌ನ ಅಂಗಸಂಸ್ಥೆ ಇದರ ಸ್ಥಾಪಕ. ಹಿಂದೂಸ್ತಾನ್ ಯೂನಿಲಿವರ್ ಈಗ ಬ್ರ್ಯಾಂಡ್‌ನ ಮಾಲೀಕರಾಗಿದ್ದಾರೆ. ಲ್ಯಾಕ್ಮೆ ಭಾರತದಲ್ಲಿ 70 ವರ್ಷಗಳನ್ನು ಪೂರೈಸಿದ ಮೊದಲ ಭಾರತೀಯ ಸೌಂದರ್ಯವರ್ಧಕ ಬ್ರಾಂಡ್ ಎನ್ನಿಸಿಕೊಂಡಿದೆ. ಆದರೆ ಈ ಹೆಸರು ಹೇಗೆ ಬಂತು ಎಂದು ನಿಮಗೆ ಗೊತ್ತಾ? ಇದಕ್ಕೂ ಲಕ್ಷ್ಮೀ ದೇವತೆಗೂ ಭಾರಿ ಸಂಬಂಧವಿದೆ! ಅಲ್ಲಿಯವರೆಗೆ ಸೌಂದರ್ಯವರ್ಧಕದಲ್ಲಿ ಭಾರತದ ಸ್ವದೇಶಿ ಬ್ರ್ಯಾಂಡ್​ ಇರಲಿಲ್ಲ. ಆಗ ಪ್ರಧಾನಿಯಾಗಿದ್ದ ಜವಾಹರಲಾಲ ನೆಹರೂ ಅವರು, ಜೆಆರ್​ಡಿ ಟಾಟಾ ಅವರಿಗೆ ಸ್ವದೇಶಿ ನಿರ್ಮಾಣದ ಬ್ರ್ಯಾಂಡ್​ ತಯಾರಿಸುವಂತೆ ಹೇಳಿದಾಗ ಹುಟ್ಟಿಕೊಂಡ ಕಂಪೆನಿ ಇದು. ಕೊನೆಗೆ ಇದಕ್ಕೆ ಏನು ಹೆಸರು ಇಡಬೇಕು ಎಂದು ಚಿಂತಿಸಿದಾಗ, ಲಕ್ಷ್ಮೀ ದೇವಿಯಿಂದ ಪ್ರೇರೇಪಿತರಾದ JRD Tata ಅವರು ಇದಕ್ಕೆ ಲ್ಯಾಕ್ಮೆ ಎಂದು ಹೆಸರು ಇಟ್ಟರು.

ಅಷ್ಟಕ್ಕೂ ಲಕ್ಷ್ಮೀ ದೇವಿಯ ಹೆಸರನ್ನು ಇಡಲು ಟಾಟಾ ಅವರು ಮನಸ್ಸು ಮಾಡಿದ್ದು ಏಕೆಂದರೆ, ಲಕ್ಷ್ಮೀ ಸಂಪತ್ತು ಮತ್ತು ಸೌಂದರ್ಯದ ದೇವತೆ. ಇದು ಕೂಡ ಸೌಂದರ್ಯವರ್ಧಕ ಪ್ರಾಡಕ್ಟ್​ ಆಗಿರುವ ಕಾರಣ ಅವರಿಗೆ ಅದೇ ಹೆಸರು ಹೊಳೆದಿದೆ. ಅಂದಹಾಗೆ ಲ್ಯಾಕ್ಮೆ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಕಂಪೆನಿಯಾಗಿದೆ. ಜವಾಹರಲಾಲ್ ನೆಹರು, ಭಾರತೀಯ ಮಹಿಳೆಯರು ಸೌಂದರ್ಯವರ್ಧಕಗಳ ಮೇಲೆ ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತಿದ್ದಾರೆಂದು ಕಳವಳಗೊಂಡ ನಂತರ, ಜೆಆರ್‌ಡಿ ಟಾಟಾ ಅವರು ಸ್ಥಳೀಯ ಬ್ರಾಂಡ್ ಅನ್ನು ಪ್ರಾರಂಭಿಸಲು ಪ್ರೇರೇಪಿಸಿದರು.

ಅಷ್ಟಕ್ಕೂ ಲ್ಯಾಕ್ಮೆ ಎಂಬ ಹೆಸರು ಲಕ್ಷ್ಮಿ ದೇವಿಯ ಫ್ರೆಂಚ್ ರೂಪಾಂತರವಾಗಿದೆ ಮತ್ತು ಇದು ಒಪೆರಾ "ಲ್ಯಾಕ್ಮೆ" ಯಿಂದ ಸ್ಫೂರ್ತಿ ಪಡೆದಿದೆ. ಟಾಟಾ ಅವರು ಈ ಉತ್ಪನ್ನ ಶುರು ಮಾಡಿದಾಗ ಸಿಮೋನ್ ಅವರು ಟಾಟಾ ಕಂಪೆನಿಯನ್ನು ನಿರ್ದೇಶಕಿಯಾಗಿ ಸೇರಿಕೊಂಡರು ಮತ್ತು ನಂತರ ಅಧ್ಯಕ್ಷರಾದರು. ಅವರೇ ಇದರ ಉಸ್ತುವಾರಿ ವಹಿಸಿಕೊಂಡರು. 1998 ರಲ್ಲಿ, ಟಾಟಾ ಲ್ಯಾಕ್ಮೆಯಲ್ಲಿನ ತಮ್ಮ ಪಾಲನ್ನು ಹಿಂದೂಸ್ತಾನ್ ಯೂನಿಲಿವರ್‌ಗೆ 200 ಕೋಟಿ ರೂಪಾಯಿಗೆ ಮಾರಾಟ ಮಾಡಿದರು. ಡಿಸೆಂಬರ್ 2018 ರಲ್ಲಿ, ಇದು ತನ್ನ ಇ-ಕಾಮರ್ಸ್ ವೇದಿಕೆಯನ್ನು ಪ್ರಾರಂಭಿಸಿತು 2021 ರ ಹೊತ್ತಿಗೆ, ಲ್ಯಾಕ್ಮೆ ಲಿವರ್ ಅಡಿಯಲ್ಲಿ 485 ಬ್ಯೂಟಿ ಸಲೂನ್‌ಗಳನ್ನು ಸಹ ನಡೆಸುತ್ತಿದೆ. ಮುಂಬೈನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಫ್ಯಾಷನ್ ವೀಕ್ ಆದ ಲ್ಯಾಕ್ಮೆ ಫ್ಯಾಷನ್ ವೀಕ್ (LFW) ಗೆ ಕಂಪನಿಯು ಶೀರ್ಷಿಕೆ ಪ್ರಾಯೋಜಕವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?