Udupi: ಮಿಸ್‌ ಇಂಡಿಯಾ ಸಿನಿ ಶೆಟ್ಟಿಗೆ ಬಂಟರ ಸಂಘದಿಂದ ಅಭಿನಂದನೆ

Published : Jul 20, 2022, 12:18 PM ISTUpdated : Jul 20, 2022, 12:24 PM IST
Udupi: ಮಿಸ್‌ ಇಂಡಿಯಾ ಸಿನಿ ಶೆಟ್ಟಿಗೆ ಬಂಟರ ಸಂಘದಿಂದ ಅಭಿನಂದನೆ

ಸಾರಾಂಶ

ಮಿಸ್‌ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಮಡಿರುವ ಸಿನಿಶೆಟ್ಟಿಯನ್ನುಬಂಟರ ಯಾನೆ ನಾಡವರ ಸಂಘದಿಂದ ಅಭಿನಂದಿಸಲಾಯಿತು  ಸಿನಿ ಶೆಟ್ಬೆಟಿ ಮೂಲತಃ ಬೆಳ್ಳಂಪಳ್ಳಿಯವರು ಎಂಬುದು ವಿಶೇಷ

ಉಡುಪಿ (ಜು.20): ಮಿಸ್‌ ಇಂಡಿಯಾ ಪ್ರಶಸ್ತಿಯನ್ನು ಗೆದ್ದು, ಮಿಸ್‌ ವರ್ಲ್ಡ್ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ, ಮೂಲತಃ ಇಲ್ಲಿನ ಬೆಳ್ಳಂಪಳ್ಳಿಯವರಾದ, ಮುಂಬೈಯ ಸಿನಿ ಶೆಟ್ಟಿಅವರನ್ನು ಮಂಗಳವಾರ ಬಂಟರ ಯಾನೆ ನಾಡವರ ಸಂಘದಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿನಿ ಶೆಟ್ಟಿ, ತಾನು ಭರತನಾಟ್ಯ ಕಲಾವಿದೆಯಾಗಿದ್ದು, ಇದು ತನ್ನಲ್ಲಿ ಸಭಾಕಂಪನವನ್ನು ದೂರ ಮಾಡಿ, ಆತ್ಮವಿಶ್ವಾಸವನ್ನು ಬೆಳೆಸಿದ್ದು ಮಿಸ್‌ ಇಂಡಿಯಾ ಗೆಲ್ಲುವಲ್ಲಿ ಸಹಕಾರಿಯಾಯಿತು ಎಂದರು.

ಆಸಕ್ತಿಯ ಕ್ಷೇತ್ರದಲ್ಲಿ ಛಲಬಿಡದೆ ಮುಂದುವರಿದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದ ಅವರು, ತಾವು ಪ್ರಸ್ತುತ ಮಿಸ್‌ ವರ್ಲ್ಡ್(Miss World) ಸ್ಪರ್ಧೆ ಕಡೆಗೆ ಗಮನಹರಿಸಿದ್ದು, ಸ್ಪರ್ಧೆಯಲ್ಲಿ ಗೆದ್ದ ಬಳಿ ಪುನಃ ಉಡುಪಿ(Udupi)ಗೆ ಬರುತ್ತೇನೆ ಎಂದು ಪೂರ್ಣ ಭರವಸೆ ವ್ಯಕ್ತಪಡಿಸಿದರು.

ಮಿಸ್‌ ವರ್ಲ್ಡ್‌’ ನನ್ನ ಗುರಿ: ಮಿಸ್‌ ಇಂಡಿಯಾ ಸಿನಿ ಶೆಟ್ಟಿ

ಖ್ಯಾತ ಸಂಗೀತ ನಿರ್ದೇಶಕ(Music Director) ಗುರುಕಿರಣ್‌(Gurukiran) ಅಭಿನಂದನಾ ಭಾಷಣ ಮಾಡಿ, ಸಿನಿ ಶೆಟ್ಟಿ(Cine Shetty)ಅವರು ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮಾತೃಭಾಷೆ ಮೇಲೆ ಅಪಾರ ಪ್ರೀತಿ ಹೊಂದಿರುವ ಸಿನಿ ಅವರು ಯುವತಿಯರಿಗೆ ಮಾದರಿಯಾಗಿದ್ದಾರೆ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ(Ajith Kumar Rai) ಅಧ್ಯಕ್ಷತೆ ವಹಿಸಿದ್ದರು. 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಸಂಘದಿಂದ ಬಂಟರ ವಿಶ್ವಕೋಶ ತಯಾರಿಸಲಾಗುತ್ತಿದ್ದು, ಸಿನಿ ಶೆಟ್ಟಿಇದಕ್ಕೆ ಬ್ರಾಂಡ್‌ ಅಂಬಾಸಿಡರ್‌ ಆಗಬೇಕು ಎಂದು ಆಶಿಸಿದರು.

ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ, ಸಿನಿ ಶೆಟ್ಟಿತಂದೆ ಸದಾನಂದ ಶೆಟ್ಟಿ, ತಾಯಿ ಹೇಮಾ ಶೆಟ್ಟಿ, ಅಭಿನಂದನಾ ಸಮಿತಿ ಸಂಚಾಲಕ ಜಯರಾಜ್‌ ಹೆಗ್ಡೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

'ಮಿಸ್ ಇಂಡಿಯಾ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿಯ ಸುಂದರ ಫೋಟೋಗಳು

 

ಭರತನಾಟ್ಯ ಪ್ರವೀಣೆ ಸಿನಿ ಶೆಟ್ಟಿ: ಭರತನಾಟ್ಯದಲ್ಲೂ ಸಿನಿ ಶೆಟ್ಟಿ ಪ್ರವೀಣೆಯಾಗಿದ್ದಾರೆ. ಫ್ಯಾಷನ್ ಲೋಕದ ಜತೆ ಜತೆಗೆ ಭರತನಾಟ್ಯದಲ್ಲೂ ಆಸಕ್ತಿ ವಹಿಸಿದ್ದಾಳೆ ಹಲವು ಕಡೆ ಪ್ರೆದರ್ಶನವಾಗಿವೆ. ಸಿನಿ ಶೆಟ್ಟಿಯ ಭರತನಾಟ್ಯಕ್ಕಾಗಿ  ಊರಿನಿಂದ ಹೋಗಿ ಸದಾನಂದ ಶೆಟ್ಟರ ಅತ್ತೆ ಮಾವ ನೋಡಿ ಬಂದಿದ್ದಾರೆ. ಕೇವಲ ಮಿಸ್ ಇಂಡಿಯಾ ಅಲ್ಲ ಮಿಸ್ ವರ್ಲ್ಡ್ ಆಗಿ ಸಿನಿ ಆಯ್ಕೆಯಾಗಲಿ ಎಂದು ಹಾರೈಸಿದ್ದಾರೆ.ಬಾಲಿವುಡ್ ನಲ್ಲೂ ಸಿನಿ ಶೆಟ್ಟಿ ಮಿಂಚಬೇಕು ಅನ್ನೋದು ಆಕೆಯ ಕುಟುಂಬದ ಆಸೆಯಷ್ಟೇ ಅಲ್ಲ, ಇಡೀ ಬಂಟರ ಸಂಘದ ಆಸೆಯೂ ಆಗಿದೆ. ಇನ್ನೂ ಹೆಚ್ಚಿನ ಸಾಧನೆಯ ಗರಿ ಸಿನಿಶೆಟ್ಟಿಯ ಮುಡಿಗೇರಲಿ ಎಂದು ಹಾರೈಸಿದ್ದಾರೆ. ಆಕೆಯ ನೃತ್ಯ ಪ್ರತಿಭೆ ಹಾಗೂ ಮಾಡೆಲಿಂಗ್ ಟ್ಯಾಲೆಂಟ್ ಇನ್ನಷ್ಟು ಸಾಧನೆಗೆ ಸಹಕಾರಿಯಾಗಲಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?