Fashion Week : 40  ಸೂಪರ್‌ ಮಾಡೆಲ್‌ಗಳು ಒಂದೇ ವೇದಿಕೆಯಲ್ಲಿ... ಜೆಕೆ, ಶ್ವೇತಾ ರಂಗು!

By Contributor Asianet  |  First Published Feb 17, 2022, 9:52 PM IST

* ಫೆ.18ಕ್ಕೆ ಅಂತಾರಾಷ್ಟ್ರೀಯ ಫ್ಯಾಷನ್ ವೀಕ್
* ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ "ಟಾಕ್ ಆಫ್ ದಿ ಟೌನ್-ಅಂತಾರಾಷ್ಟ್ರೀಯ ಫ್ಯಾಷನ್ ವೀಕ್ "
*40 ಸೂಪರ್ ಮಾಡೆಲ್‌ಗಳು ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ. 
*ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆನ್ನೈನ ಕರುಣ್ ರಾಮನ್ ಈ ಫ್ಯಾಷನ್ ಶೋನ ಡೈರೆಕ್ಟರ್


ಬೆಂಗಳೂರು(ಫೆ. 17) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru)  "ಟಾಕ್ ಆಫ್ ದಿ ಟೌನ್-ಅಂತಾರಾಷ್ಟ್ರೀಯ ಫ್ಯಾಷನ್ ವೀಕ್ " ನಡೆಯಲಿದ್ದು, 40 ಸೂಪರ್ ಮಾಡೆಲ್‌ಗಳು ಫ್ಯಾಷನ್ ಶೋನಲ್ಲಿ (fashion week) ಹೆಜ್ಜೆ ಹಾಕಲಿದ್ದಾರೆ.  ಫೆ.18ರ ಸಂಜೆ 5ಕ್ಕೆ ವೈಟ್‌ಫೀಲ್ಡ್‌ನಲ್ಲಿರುವ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಫ್ಯಾಷನ್ ವೀಕ್ ನಡೆಯಲಿದೆ.  

ಜಯಂತಿ ಬಲ್ಲಾಳ್(Jayanthi Ballal) ರೇಷ್ಮಾ ಕುನ್ಹಿ, ಸಮಂತಾ ಅರ್ಪಣಾ, ಮಾನವ್, ವೈಲ್ಡ್‌ಕ್ಯಾಟ್ ಅವರಂತಹ ಪ್ರಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿರುವ ಭಿನ್ನ ವಿಭಿನ್ನವಾದ ನೂತನ ಶೈಲಿಯ ಧಿರಿಸುಗಳು ಹಾಗೂ ಆಭರಣಗಳನ್ನು ಧರಿಸಿ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ.

Tap to resize

Latest Videos

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆನ್ನೈನ ಕರುಣ್ ರಾಮನ್ ಈ ಫ್ಯಾಷನ್ ಶೋನ ಡೈರೆಕ್ಟರ್ ಆಗಿದ್ದು, ನಂದಿನಿ ನಾಗರಾಜ್ ಅವರು ಆಯೋಜಕರಾಗಿದ್ದಾರೆ.

ಸದಾಶಿವನಗರದ ಗಣೇಶ್ ಗೋಲ್ಡ್ ಅಂಡ್ ಡೈಮೆಂಡ್ ಜ್ಯೂವೆಲ್ಲರಿ ಹಾಗೂ ಕೀರ್ತಿಲಾಲ್ಸ್ ಡೈಮೆಂಡ್ಸ್ ಅಂಡ್ ಗೋಲ್ಡ್ ಜ್ಯುವೆಲ್ಲರಿ ಈ ಫ್ಯಾಷನ್ ವೀಕ್‌ನ ಸಹ ಪ್ರಾಯೋಜಕರಾಗಿದ್ದಾರೆ. ಧ್ರುವ ಪ್ರೊಡಕ್ಷನ್ ಪಾರ್ಟ್‌ನರ್ ಆಗಿದ್ದಾರೆ.

ನಟಿಯರಾದ ಶ್ವೇತಾ ಶ್ರೀವಾತ್ಸವ್(Shwetha Srivatsav), ಇತಿ ಆಚಾರ್ಯ, ನಟ ಜಯರಾಮ್ ಕಾರ್ತಿಕ್(ಜೆಕೆ) ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಫ್ಯಾಷನ್ ವೀಕ್‌ಗೆ ಮತ್ತಷ್ಟು ರಂಗು ತುಂಬಲಿದ್ದಾರೆ.

ಸೂಪರ್ ಮಾಡೆಲ್ ಆದ ದಿನಗೂಲಿ ನೌಕರ:  ತೀರಾ ಸಾಮಾನ್ಯ ವ್ಯಕ್ತಿ ಲಾಟರಿ (Lottery) ಹೊಡೆದು ದೊಡ್ಡ ಶ್ರೀಮಂತ ಅನಿಸಿಕೊಳ್ತಾನೆ. ಕೋಟಿ ಕೋಟಿ ಸಂಪಾದಿಸುತ್ತಿದ್ದವ ಭಿಕ್ಷೆ ಬೇಡುವ ಲೆವೆಲ್‌ಗೆ ಬಂದಿರ್ತಾನೆ. ನಮ್ಮ ಕಣ್ಣೆದುರೇ ನಡೆಯೋ ಇಂಥಾ ವಿದ್ಯಮಾನಗಳ ಸಾಲಿಗೆ ಇದೊಂದು ಸೇರ್ಪಡೆ.

ಕೇರಳದ ಮಮ್ಮಿಕ (Mammikka) ಎಂಬ ವ್ಯಕ್ತಿಯ ಕತೆಯೂ ಹೀಗೇ. ಮಮ್ಮಿಕ್ಕಗೀಗ 60 ಚಿಲ್ರೆ ವಯಸ್ಸು. ಅವರು ಅರವತ್ತು ಅಂದ್ರೂ ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಆ ಫ್ಯಾಮಿಲಿ ಡೇಟ್‌ ಆಫ್‌ ಬರ್ತ್ ಕರೆಕ್ಟಾಗಿ ಇಟ್ಟುಕೊಂಡಿರೋದು ಡೌಟು. ಆದರೆ ಈ ವ್ಯಕ್ತಿಯ ವಿಚಾರದಲ್ಲಿ ಗಾದೆಯನ್ನು ಕರೆಕ್ಷನ್ ಮಾಡದೇ ವಿಧಿಯಿಲ್ಲ. ಈ ಮಮ್ಮಿಕ್ಕ ಅವರಿಂದಾಗಿ 'ಅರವತ್ತರಲ್ಲಿ ಅದೃಷ್ಟ' ಅಂತ ಗಾದೆ ಮಾತನ್ನೇ ಬದಲಾಯಿಸಬೇಕಾದ ಸ್ಥಿತಿ. ಇಲ್ಲವಾದರೆ ಈ ಕೂಲಿ ಕಾರ್ಮಿಕ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಸೂಪರ್ ಮಾಡೆಲ್‌ ಆಗಿ ಮಿಂಚಿದ್ದಾರೆ

ಯುವಕರ ಹೃದಯ ಬಡಿತ ಹೆಚ್ಚಿಸಿದ ಮಿಯಾ ಖಲೀಫಾ; Topless ಶವರ್ ಫೋಟೋ ವೈರಲ್‌!

ಆ ದಿನ ಬೆಳಗ್ಗೆ ಮಮ್ಮಿಕ್ಕ ಅದ್ಯಾವ ಮಗ್ಗುಲಿಂದ ಎದ್ದರೋ ಗೊತ್ತಿಲ್ಲ. ತನ್ನ ಪಾಡಿಗೆ ಕೆಲಸ ಮಾಡಿ ಸಂಜೆ ತನ್ನ ಎಂದಿನ ಸ್ಟೈಲಿನಲ್ಲಿ ಮಾಸಲು ಅಂಗಿ, ಪಂಚೆ ತೊಟ್ಟು, ತಲೆಗೊಂದು ಟವೆಲ್‌ ಕಟ್ಟಿಕೊಂಡು ಪ್ಲಾಸ್ಟಿಕ್ ಕವರ್‌ನಲ್ಲಿ ಮನೆಗೆ ಬೇಕಾದ ಸಾಮಗ್ರಿ ತಗೊಂಡು ಬರ್ತಾ ಇದ್ರು. ಆದರೆ ಅಚಾನಕ್‌ ಆಗಿ ಇವರನ್ನು ನೋಡಿದ ಒಬ್ಬ ಫೇಮಸ್‌ ಫೋಟೋಗ್ರಾಫರ್‌ಗೆ (Photographer) ತಲೆಯಲ್ಲೇನೋ ಯೋಚನೆ ಚಕ್ಕನೆ ಮಿಂಚಿ ಹೋಯ್ತು. ಅರೆ ಕ್ಷಣದಲ್ಲಿ ಆತನ ಕ್ಯಾಮರ ಈ ತಾತನ  ಫೋಟೋವನ್ನು ಚಕ ಚಕನೆ ಕ್ಲಿಕ್ಕಿಸಿತು. ಸೀನ್ ಕಟ್ ಮಾಡಿದ್ರೆ ಆ ತಾತ ಸೂಪರ್ ಮಾಡೆಲ್! ಪ್ರಸಿದ್ಧ ಕಂಪನಿಯೊಂದರ ಉತ್ಪನ್ನಗಳಿಗೆ ರೂಪದರ್ಶಿ. (Model) ಇದೆಲ್ಲ ನಿಜಕ್ಕೂ ನಡೀತಿದ್ಯಾ ಅಥವಾ ಕನಸಾ ಅಂತ ಮಮ್ಮಿಕ್ಕ ಅವರೇ ಮೈ ಮುಟ್ಟಿಕೊಂಡು ನೋಡುವ ಸ್ಥಿತಿ. ಇತ್ತು.  ಒಂದೇ ದಿನದಲ್ಲಿ ದಿನಗೂಲಿ ನೌಕರ  ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡಿದ್ದರು. 

ಸೋಶಿಯಲ್ ಮೀಡಿಯಾ ಟ್ರೆಂಡ್ ಗಳು ಕೆಲವೊಮ್ಮೆ ಫ್ಯಾಷನ್ ಲೋಕ್ ಮೇಲೆ ಪರಿಣಾಮ ಉಂಟುಮಾಡುತ್ತವೆ. ಬೆಂಗಳೂರು ಮತ್ತು ಮುಂಬೈನಲ್ಲಿ ನಡೆಯುವ  ಮಾಡೆಲ್‌ಗಳ ವಾಲ್  ಹೊಸ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುತ್ತವೆ.

click me!