ತೊಟ್ಟಿಯಲ್ಲಿ ಮೀನುಗಳನ್ನು ಹಾಕಿ ಅದ್ರೊಳಗೆ ಕಾಲಿಟ್ಟರೆ ಮುಗಿತು. ನಿಮ್ಮ ಪಾದಗಳು ಕ್ಲೀನ್ ಆಗಿ ಬರುತ್ವೆ. ಈಗಿನ ದಿನಗಳಲ್ಲಿ ಪ್ರಸಿದ್ಧಿ ಪಡೆದಿರುವ ಈ ಫಿಶ್ ಸ್ಪಾ ಎಷ್ಟು ಒಳ್ಳೆಯದು ಎನ್ನುವ ಮಾಹಿತಿ ಇಲ್ಲಿದೆ.
ಸುಂದರವಾಗಿ ಕಾಣ್ಬೇಕು ಎನ್ನುವುದು ಎಲ್ಲರ ಆಸೆ. ಮಹಿಳೆಯರು ಇದ್ರಲ್ಲಿ ನೂರು ಹೆಜ್ಜೆ ಮುಂದಿರುತ್ತಾರೆ. ಮುಖ, ಕಣ್ಣು, ಕೂದಲು ಮಾತ್ರವಲ್ಲ ಕೈ, ಕಾಲಿನ ಸೌಂದರ್ಯಕ್ಕೂ ಹೆಚ್ಚಿನ ಮಹತ್ವ ನೀಡ್ತಾರೆ. ಡ್ರಸ್ ಗೆ ತಕ್ಕಂತೆ ದೇಹ ಇರಬೇಕು ಎನ್ನುವ ಕಾರಣಕ್ಕೆ ಪೆಡಿಕ್ಯೂರ್, ಮೆನಿಕ್ಯೂರ್ ಸೇರಿದಂತೆ ಅನೇಕ ಬಗೆಯ ಸೌಂದರ್ಯ ವರ್ಧಕಗಳನ್ನು ಬಳಸ್ತಾರೆ.
ಚೆಂದದ ಡ್ರೆಸ್ ಧರಿಸಿ, ಮೇಕಪ್ ಮಾಡಿ, ಹೈ ಹೀಲ್ಡ್ ಧರಿಸಿ ಹೋಗೋವಾಗ ಕಾಲು, ಪಾದ (Feet) ಕೊಳಕಾಗಿದ್ರೆ, ಡೆಡ್ ಸ್ಕಿನ್ ಇದ್ರೆ ಎಷ್ಟು ಚೆಂದ ಹೇಳಿ?. ಈ ಡೆಡ್ ಸ್ಕಿನ್ ತೆಗೆದು, ಪಾದಗಳನ್ನು ಸುಂದರಗೊಳಿಸಲು ನಮ್ಮಲ್ಲಿ ಸಾಕಷ್ಟು ಬ್ಯೂಟಿ ಪ್ರಾಡಕ್ಟ್, ಥೆರಪಿ ಇದೆ. ಇದ್ರಲ್ಲಿ ಫಿಶ್ ಪೆಡಿಕ್ಯೂರ್ (Fish Pedicure) ಅಥವಾ ಫಿಶ್ ಸ್ಪಾ ಕೂಡ ಒಂದು.
ಹಿಂಬದಿಯಲ್ಲಿ ಆಗೋ ಮೊಡವೆಯಿಂದ ಯಮ ಯಾತನೆ, ಇಲ್ಲಿದೆ ಇದಕ್ಕೆ ಈಸಿ ಪರಿಹಾರ!
ಮೊದಲು ಮಾಲ್ ಸೇರಿದಂತೆ ಅಲ್ಲೋ ಇಲ್ಲೋ ಒಂದೆರಡು ಫಿಶ್ ಸ್ಪಾ ನಿಮಗೆ ಕಾಣಿಸ್ತಿತ್ತು. ಆದ್ರೀಗ ಅನೇಕ ಕಡೆ ನೀವು ಫಿಶ್ ಸ್ಪಾ ನೋಡ್ಬಹುದು. ಇದು ಒಂದು ರೀತಿಯ ಮಸಾಜ್. ಪಾದಗಳ ಡೆಸ್ ಸ್ಕಿನ್ ತೆಗೆದು ಕ್ಲೀನ್ ಮಾಡೋದಲ್ಲದೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಅನೇಕರು ಮೀನು ಬಂದು ಕಾಲು ಕಚ್ಚೋದನ್ನು ಎಂಜಾಯ್ ಮಾಡ್ತಾರೆ. ಇದನ್ನು ಮನರಂಜನೆ ರೀತಿಯಲ್ಲಿ ನೋಡ್ತಾರೆ. ಆದ್ರೆ ಫಿಶ್ ಸ್ಪಾ ಒಳ್ಳೆಯದಲ್ಲ. ಕೆಲವೊಮ್ಮೆ ಇದು ನಿಮಗೆ ಅಪಾಯತರುವ ಸಾಧ್ಯತೆ ಇರುತ್ತದೆ.
ವಿಕ್ಟೋರಿಯಾ ಹೆಸರಿನ ಮಹಿಳೆ ಕೂಡ ಈ ಫಿಶ್ ಪೆಡಿಕ್ಯೂರ್ ಪಡೆದು ಯಡವಟ್ಟು ಮಾಡಿಕೊಂಡಿದ್ದಾಳೆ. ವಿಕ್ಟೋರಿಯಾ, ಥೈಲ್ಯಾಂಡ್‌ನಲ್ಲಿ ಫಿಶ್ ಸ್ಪಾ ಮಾಡಿಸಿಕೊಂಡಿದ್ದಾಳೆ. ಮೀನುಗಳು ಆಕೆಯ ಪಾದವನ್ನು ಕಚ್ಚಿ ಡೆಡ್ ಸ್ಕಿನ್ ತೆಗೆದಿವೆ. ಜೊತೆಗೆ ಸೋಂಕನ್ನು ವಿಕೋರಿಯಾಗೆ ರವಾನೆ ಮಾಡಿವೆ. ವಿಕ್ಟೋರಿಯಾಗೆ0 ಶೆವಾನೆಲ್ಲಾ ಎಂಬ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಈ ಬ್ಯಾಕ್ಟೀರಿಯಾ ಅವಳ ಪಾದದ ಮೂಳೆಗಳನ್ನು ತಿನ್ನುತ್ತಿದೆ. ಇದರಿಂದಾಗಿ ಅವಳು 0ಮೊದಲು ತನ್ನ ಹೆಬ್ಬೆರಳನ್ನು ಕಳೆದುಕೊಂಡಿದ್ದಾಳೆ. ಕೆಲವು ವರ್ಷಗಳ ನಂತ್ರ ಒಂದು ಕಾಲಿನ ಎಲ್ಲ ಬೆರಳನ್ನು ಕಳೆದುಕೊಂಡಿದ್ದಾಳೆ. ಬರೀ ಈ ಬ್ಯಾಕ್ಟೀರಿಯಾ ಮಾತ್ರವಲ್ಲ ಫಿಶ್ ಪೆಡಿಕ್ಯೂರ್ ಮಾಡಿಸಿಕೊಳ್ಳೋದ್ರಿಂದ ಅನೇಕ ಅಪಾಯ ನಿಮ್ಮನ್ನು ಕಾಡುವ ಸಾಧ್ಯತೆ ಇದೆ.
ಚರ್ಮದ ಸೋಂಕು (Skin Infection): ಫಿಶ್ ಪೆಡಿಕ್ಯೂರ್ ಮೇಲಿಂದ ನೋಡಿದಾಗ ನಿಮಗೆ ಹಿತವೆನ್ನಿಸಿದ್ರೂ ಇದನ್ನು ಮಾಡಿಸೋದ್ರಿಂದ ಸೋರಿಯಾಸಿಸ್, ಎಸ್ಜಿಮಾ, ಏಡ್ಸ್ ನಂತಹ ಮಾರಕ ಕಾಯಿಲೆ ಕಾಡುವ ಅಪಾಯವಿದೆ. ಈ ಸಮಸ್ಯೆಯಿಂದ ಬಳಲುವ ವ್ಯಕ್ತಿಗೆ ಜಚ್ಚಿದ ಮೀನು ಇನ್ನೊಬ್ಬ ವ್ಯಕ್ತಿಗೆ ಕಚ್ಚಿದಾಗ ಸೋಂಕು ಹರಡುತ್ತದೆ.
16ನೇ ವಯಸ್ಸಿಗೆ ಮನೆ ಬಿಟ್ಟು ಹೊರಟ ಶ್ವೇತಾ ಶಾರ್ದಾ ಇಂದು ಮಿಸ್ ಯೂನಿವರ್ಸ್ ಸ್ಪರ್ಧೆಯ ಭಾರತದ ಪ್ರತಿನಿಧಿ
ಹಾಳಾಗುವ ಚರ್ಮದ ಟೋನ್ : ಈ ಬ್ಯೂಟಿ ಟ್ರೀಟ್ ಮೆಂಟ್ ನಿಂದ ನಿಮ್ಮ ಸ್ಕಿನ್ ಟೋನ್ ಹಾಳಾಗುವ ಅಪಾಯವಿದೆ. ಫಿಶ್ ಪೆಡಿಕ್ಯೂರ್ ಸರಿಯಾಗಿ ಆಗದೆ ಹೋದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಉಗುರಿಗೆ ಹಾನಿ : ಫಿಶ್ ಸ್ಪಾ ಮಾಡಿದಾಗ ಮೀನುಗಳು ಬರೀ ನಿಮ್ಮ ಪಾದದಡಿಯ ಚರ್ಮವನ್ನು ಮಾತ್ರ ಕಚ್ಚೋದಿಲ್ಲ. ನಿಮ್ಮ ಉಗುರು ಹಾಗೂ ಉಗುರಿನ ಸುತ್ತಲೂ ಕಚ್ಚುತ್ತವೆ. ಇದ್ರಿಂದ ನಿಮ್ಮ ಉಗುರು ಹಾಳಾಗುತ್ತದೆ.
ಈ ವಿಷ್ಯ ಗಮನಿಸಿ : ನೀವು ಫಿಶ್ ಪೆಡಿಕ್ಯೂರ್ ಗೆ ಒಳಗಾಗ್ತಿದ್ದರೆ ಮೊದಲು ಅಲ್ಲಿ ಹಾಕಲಾಗಿರುವ ನೀರು ಫ್ರೆಶ್ ಆಗಿದೆಯೇ ಎಂಬುದನ್ನು ಪರಿಶೀಲಿಸಿ. ಅನೇಕರು ಬಳಸಿದ ನೀರಿನಲ್ಲೇ ನೀವು ಕಾಲಿಡ್ತಿದ್ದರೆ ಅದ್ರಿಂದ ಅನೇಕ ಸೋಂಕು ನಿಮ್ಮನ್ನು ಕಾಡುವ ಅಪಾಯವಿರುತ್ತದೆ. ಹಾಗೆಯೇ ಫಿಶ್ ಸ್ಪಾ ಮಾಡಿಸಿಕೊಳ್ಳುವಾಗ ಸಂಪೂರ್ಣ ಗಮನ ನಿಮ್ಮ ಕಾಲಿನ ಮೇಲಿರಲಿ. ಮೀನು ಕಚ್ಚಿದಾಗ ನೋವಾದ್ರೆ ಅಥವಾ ನೀವು ಕಿರಿಕಿರಿ ಅನುಭವಿಸಿದ್ರೆ ತಕ್ಷಣ ಕಾಲನ್ನು ಹೊರಗೆ ತೆಗೆಯಿರಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಈ ಫಿಶ್ ಪೆಡಿಕ್ಯೂರ್ ಮಾಡಿಸಬೇಡಿ. ಮಕ್ಕಳ ಚರ್ಮ ತುಂಬಾ ಮೃದುವಾಗಿರುವ ಕಾರಣ, ಮೀನುಗಳು ಅವುಗಳನ್ನು ಕಚ್ಚಿ ತಿನ್ನುವ ಅಪಾಯವಿರುತ್ತದೆ.