ದಿನ ದಿನಕ್ಕೂ ಫ್ಯಾಷನ್ ಬದಲಾಗ್ತಿರುತ್ತದೆ. ಫ್ಯಾಷನ್ ಜಗತ್ತಿನಲ್ಲಿ ಹೊಸ ಹೊಸ ಪ್ರಯೋಗ ನಡೆಯುತ್ತಿರುತ್ತದೆ. ಈ ಪ್ರಯೋಗ ಮಾಡೋದ್ರಲ್ಲಿ . ಬಾಲೆನ್ಸಿಯಾಗ ಹಿಂದೆ ಬಿದ್ದಿಲ್ಲ. ಈಗ ಹೊಸ ವಿಷ್ಯಕ್ಕೆ ಅದು ಸುದ್ದಿಯಾಗಿದೆ.
ಸ್ನಾನಕ್ಕೆ ಹೋದಾಗ ಟವೆಲ್ ಬಳಸೋದು ಸಾಮಾನ್ಯ. ಮನೆಯಲ್ಲೂ ಸ್ಟೈಲಿಶ್ ಆಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಜನರು ಚೆಂದದ ಟವೆಲ್ ಖರೀದಿ ಮಾಡ್ತಾರೆ. ಸ್ನಾನ ಆದ್ಮೇಲೆ ಟವೆಲ್ ಸುತ್ತಿಕೊಂಡು ಹೊರಗೆ ಬಂದಾಗ ಲುಕ್ ಚೆನ್ನಾಗಿರ್ಬೇಕು ಎನ್ನುವ ಆಸೆ ಕೆಲವರದ್ದು. ಅನೇಕ ಬಾರಿ ಟವೆಲ್ ಸರಿಯಾಗಿ ಸುತ್ತಿಕೊಳ್ಳೋದೇ ಕಷ್ಟ. ಅದು ಉದುರಿ ಬೀಳುವ ಅಪಾಯವಿರುತ್ತದೆ. ಬಿಗಿಯಾಗಿ ಗಂಟು ಹಾಕಿಕೊಂಡು ಹೊರಗೆ ಬಂದ್ರೆ ಸೇಫ್. ನೀವು ಟವೆಲ್ ಸುತ್ತಿಕೊಂಡು ಬಾತ್ ರೂಮಿನಿಂದ ಹೊರಗೆ ಬರೋರಾದ್ರೆ ಇನ್ಮುಂದೆ ಟವೆಲ್ ಬೀಳುತ್ತೆ ಅನ್ನುವ ಟೆನ್ಷನ್ ಬೇಡ. ಹಾಗೆ ಅದನ್ನು ಸುತ್ತಿಕೊಳ್ಳೋಕೆ ಹೆಚ್ಚು ಟೈಂ ಕೊಡ್ಬೇಕಾಗಿಲ್ಲ.
ಈಗ ರೆಡಿಮೆಡ್ ಸೀರೆ, ಪಂಚೆ ಬಂದ ಹಾಗೆ ಟವೆಲ್ ಸ್ಕರ್ಟ್ (Towel Skirt) ಬಂದಿದೆ. ಬಾಲೆನ್ಸಿಯಾಗ (Balenciaga) ಕಂಪನಿ ಮಾರುಕಟ್ಟೆಗೆ ಇದನ್ನು ಪರಿಚಯಿಸಿದೆ. ಬಾಲೆನ್ಸಿಯಾಗ ಕಂಪನಿ ತನ್ನ ಅಸಾಂಪ್ರದಾಯಿಕ ವಿನ್ಯಾಸಗಳಿಗೆ ಕುಖ್ಯಾತಿ ಪಡೆದಿದೆ. ಕೆಲವು ಸಮಯದಿಂದ ಬಾಲೆನ್ಸಿಯಾಗ ಪಾಪ್ ಸಂಸ್ಕೃತಿ (Culture) ಯ ಉತ್ತುಂಗದಲ್ಲಿದೆ. ಉನ್ನತ ಮಟ್ಟದ ಫ್ಯಾಶನ್ ಬ್ರ್ಯಾಂಡ್ ಬಾಲೆನ್ಸಿಯಾಗ, ಈಗ ಹೊಸ ವಿನ್ಯಾಸವೊಂದನ್ನು ಪರಿಚಯಿಸಿದೆ. ಬಾಲೆನ್ಸಿಯಾಗದ ಹೊಸ ಉತ್ಪನ್ನ ಟವೆಲ್ ಸ್ಕರ್ಟ್. ಟವೆಲ್ ಸ್ಕರ್ಟ್ ಕಾಶ್ಮೀರ್ ಅಥವಾ ಶುದ್ಧ ರೇಷ್ಮೆಯಿಂದ ಮಾಡಲ್ಪಟ್ಟಿದೆ ಎಂದು ನೀವು ಭಾವಿಸಿದ್ರೆ ನಿಮ್ಮ ಊಹೆ ತಪ್ಪು. ಇದನ್ನು ಟೆರ್ರಿ ಹತ್ತಿಯಿಂದ ತಯಾರಿಸಲಾಗಿದೆ.
undefined
ಪತಿ ಕುಟುಂಬದ ಜೊತೆ ಪ್ರಿಯಾಂಕ ಚೋಪ್ರಾ ದೀಪಾವಳಿ ;ಮೇಕಪ್ ಸರಿವಿಲ್ಲವೆಂದ್ರು ಫ್ಯಾನ್ಸ್!
ಟವೆಲ್ ಸ್ಕರ್ಟ್ ವಿಶೇಷತೆ ಏನು? : ಪ್ಯಾರಿಸ್‌ನಲ್ಲಿ ನಡೆದ ಡೆಮ್ನಾ ಗ್ವಾಸಲಿಯ ಸ್ಪ್ರಿಂಗ್ 2024 ಪ್ರದರ್ಶನದಲ್ಲಿ ಕಂಪನಿ ಮೊದಲ ಬಾರಿ ತನ್ನ ಉತ್ಪನ್ನವನ್ನು ಪ್ರದರ್ಶಿಸಿದೆ. ಇದನ್ನು ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ಹೊಸ ಸ್ಕರ್ಟ್ ಬಗ್ಗೆ ನನೀವು ನಿಜವಾಗಿಯೂ ಆಸಕ್ತಿ ಹೊಂದಿದ್ದರೆ, ಅದ್ರ ವಿನ್ಯಾಸ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಇದಕ್ಕೆ ಎರಡು ಬಟನ್ ನೀಡಲಾಗಿದೆ. ಸೊಂಟದ ಮಧ್ಯದಲ್ಲಿದ್ದು, ಅದು ಅಡ್ಜೆಸ್ಟ್ ಮಾಡಬಹುದಾದ ಬೆಲ್ಟ್ ಬಕಲ್‌ನೊಂದಿಗೆ ಬರುತ್ತದೆ. ನಿಮ್ಮ ಮೊಣಕಾಲಿನವರೆಗಿನ ಟವೆಲ್ ಸ್ಕರ್ಟ್ ಬರುತ್ತದೆ. ಇದನ್ನು ಇಟಲಿಯಲ್ಲಿ ತಯಾರಿಸಲಾಗ್ತಿದೆ. ಡ್ರೈ ಕ್ಲೀನಿಂಗ್ ಮಾಡ್ಬೇಕು ಎಂದು ಕಂಪನಿ ಹೇಳಿದೆ. ಮಹಿಳೆ ಮತ್ತು ಪುರುಷ ಇಬ್ಬರಿಗೂ ಈ ಟವೆಲ್ ಲಭ್ಯವಿದೆ. ಇದ್ರ ಬೆಲೆ 925 ಅಮೆರಿನ್ ಡಾಲರ್. ಅಂದ್ರೆ ಈ ಟವೆಲ್ ಸ್ಕರ್ಟ್ ಬೆಲೆ 77 ಸಾವಿರ ರೂಪಾಯಿ.
Complexion ಬಗ್ಗೆ ಅಭದ್ರತೆ ಇದ್ದರೂ, ಬಾಲಿವುಡ್ ಆಳಿದ ಸೆಲೆಬ್ಟಿಗಳಿವರು!
ಆನ್ಲೈನ್ ನಲ್ಲಿ ಟವೆಲ್ ಸ್ಕರ್ಟ್ ವೈರಲ್ : ಆನ್‌ಲೈನ್ ಜಗತ್ತಿನಲ್ಲಿ ವೈರಲ್ ಆಗಿರುವ ಟವೆಲ್ ಸ್ಕರ್ಟ್ ಬಗ್ಗೆ ಅಭಿಮಾನಿಗಳು ಮತ್ತು ಫ್ಯಾಷನ್ ಉತ್ಸಾಹಿಗಳಿಂದ ಮಿಶ್ರ ಪ್ರತಿಕ್ರಿಯೆ ಬರ್ತಿದೆ. ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಇದ್ರ ವಿಡಿಯೋಗಳನ್ನು ಹಂಚಿಕೊಳ್ಳಲಾಗ್ತಿದೆ. ಅನೇಕರು ಇದನ್ನು ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವರು ಟವೆಲ್ ಸ್ಕರ್ಟ್ ನೋಡಿ ನಗ್ತಿದ್ದಾರೆ. Balenciaga ನ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಲಭ್ಯವಿದೆ.
ಹಿಂದಿನಿಂದಲೂ ಸಾಕಷ್ಟು ಸುದ್ದಿ ಮಾಡ್ತಿದೆ ಬಾಲೆನ್ಸಿಯಾಗ : ಬ್ರ್ಯಾಂಡ್ ತನ್ನ ಕಡಿಮೆ ಗಂಭೀರ ಉತ್ಪನ್ನಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಟ್ರೋಲ್ ಮಾಡಲ್ಪಟ್ಟಿರುವುದು ಇದೇ ಮೊದಲಲ್ಲ. ಹಿಂದೆ, ಬ್ರ್ಯಾಂಡ್ ಕಸದ ಬ್ಯಾಗ್ ರಚಿಸಿತ್ತು. ಐಷಾರಾಮಿ ವಸ್ತುವಿನ ಮೇಲೆ 1800 ಡಾಲರ್ ಬೆಲೆಯನ್ನು ಹಾಕಿತ್ತು. ಇದಲ್ಲದೆ ಕಂಪನಿ ಶೂಲೆಸ್ ಕಿವಿಯೋಲೆಯೊಂದನ್ನು ಬಿಡುಗಡೆ ಮಾಡಿತ್ತು. ಇದು ಕೂಡ ಇಂಟರ್ನೆಟ್ ನಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಬ್ರ್ಯಾಂಡ್‌ಗೆ ಸಂಬಂಧಿಸಿದ ಎಷ್ಟೇ ವಿವಾದ, ಟೀಕೆಗಳು ಬಂದ್ರೂ ಕಂಪನಿ ತನ್ನ ಸ್ಟೈಲ್ ಬಿಟ್ಟಿಲ್ಲ. ಹೊಸ ಹೊಸ ಫ್ಯಾಷನ್ ನೊಂದಿಗೆ ಮಾರುಕಟ್ಟೆಗೆ ಬರ್ತಿದೆ.