Saree In Match Box: ಬೆಂಕಿ ಪೊಟ್ಟಣದಲ್ಲಿ ಮಡಚಿ ಇಡಬಹುದಾದ ಸುಂದರ ಸೀರೆ ನೇಯ್ದ ತೆಲಂಗಾಣದ ನೇಕಾರ!

By Suvarna NewsFirst Published Jan 12, 2022, 9:14 AM IST
Highlights

*ತೆಲಂಗಾಣದ ನೇಕಾರ ನೇಯ್ದ ವಿಶಿಷ್ಟಸೀರೆ
*ಸಿರ್ಸಿಲಾ ಜಿಲ್ಲೆಯ ನಲ್ಲಾ ವಿಜಯ್‌ ಕುಮಾರ್‌ 
*ಮಷಿನ್‌ ಮೂಲಕ 2 ದಿನಗಳಲ್ಲಿ ಸೀರೆ ರೆಡಿ
 

ಹೈದರಾಬಾದ್‌ (ಜ. 12): ತೆಲಂಗಾಣದ (Telangana) ಕೈಮಗ್ಗ ನೇಕಾರರೊಬ್ಬರು ಹೋಮ್‌ಲೈಟ್ಸ್‌ ಬೆಂಕಿ ಪೊಟ್ಟಣದಲ್ಲಿ (Match Box) ಮಡಚಿ ಇಡಬಹುದಾದಷ್ಟುಗಾತ್ರದ ಸೀರೆಯನ್ನು (Saree) ನೇಯ್ದಿದ್ದಾರೆ. ರಾಜಣ್ಣ ಸಿರ್ಸಿಲಾ ಜಿಲ್ಲೆಯ ನಲ್ಲಾ ವಿಜಯ್‌ ಕುಮಾರ್‌ (Nalla Vijay) ಎಂಬುವರು ತಾವೇ ನೇಯ್ದಿರುವ ಈ ವಿಶಿಷ್ಟರೀತಿಯ ಸೀರೆಯನ್ನು ಮಂಗಳವಾರ ಪ್ರದರ್ಶಿಸಿ, ಬಳಿಕ ಸೀರೆಯನ್ನು ಸಚಿವೆ ಸಬಿತಾ ಇಂದ್ರಾರೆಡ್ಡಿ (Sabitha Indrareddy) ಅವರಿಗೆ ಉಡುಗೊರೆಯಾಗಿ ನೀಡಿದರು. ಸೀರೆಯನ್ನು ಕೈಯಲ್ಲಿ ನೇಯಲು 6 ದಿನ ತೆಗೆದುಕೊಂಡಿದ್ದು, ಮಷಿನ್‌ ಮೂಲಕ 2 ದಿನಗಳಲ್ಲಿ ಈ ಸೀರೆಯನ್ನು ನೇಯಬಹುದಾಗಿದೆ.

ಸಾಂಪ್ರದಾಯಿಕ ಮಗ್ಗದಲ್ಲಿ ನೇಯ್ದ ಸೀರೆಗೆ ಸುಮಾರು ರೂ.12,000 ವೆಚ್ಚವಾಗುತ್ತದೆ ಮತ್ತು ಇದನ್ನು ಯಂತ್ರದಲ್ಲಿ ಮಾಡಿದರೆ ಸುಮಾರು ರೂ.8,000 ವೆಚ್ಚವಾಗುತ್ತದೆ ಎಂದು ವಿಜಯ್ ಹೇಳಿದರು. ನೇಯುವ ವಿದ್ಯೆಯಲ್ಲಿ ನೈಪುಣ್ಯ ಗಳಿಸಿಕೊಂಡ ನಲ್ಲಾ ವಿಜಯ್‌, 2015ರಲ್ಲಿ ತಾವು ನೇಯ್ದಿದ್ದ ಸೂಪರ್‌ ಫೈನ್‌ ಸಿಲ್ಕ್ ಸೀರೆಯನ್ನು ಆಗ 66ನೇ ಭಾರತದ ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಬಂದಿದ್ದ ಆಗಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರ ಪತ್ನಿ ಮಿಶೆಲ್‌ ಒಬಾಮ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ತಮ್ಮ ತಂದೆ ನಲ್ಲಾ ಪರಂದಾಮುಲು ಅವರಿಂದ ಸ್ಫೂರ್ತಿ ಪಡೆದು ವಿಜಯ್‌ ಈ ವೃತ್ತಿಯನ್ನು ಮುಂದುವರೆಸಿದ್ದಾರೆ.ಪ್ರದರ್ಶನ ನೀಡಿದ್ದರು.‌‌

ಇದನ್ನೂ ಓದಿ: Fashion Tips : ಇರುವುದರಲ್ಲೇ ಹೊಸ ರೀತಿ ಕಾಣಿಸುವುದು ಹೇಗೆ?

ವಿಜಯ್ ಅವರ ಕೌಶಲ್ಯವನ್ನು ಶ್ಲಾಘಿಸಿದ ಕೈಮಗ್ಗ ಸಚಿವ ಕೆಟಿ ರಾಮರಾವ್, ಭವಿಷ್ಯದಲ್ಲಿ ಅವರ ಪ್ರಯತ್ನಗಳಿಗೆ ಸರ್ಕಾರದಿಂದ ಎಲ್ಲಾ ಬೆಂಬಲವನ್ನು ನೀಡಲಾಗುವುದು ಎಂದು ಹೇಳಿದರು. ಸಿರ್ಸಿಲ್ಲಾದಲ್ಲಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅವರನ್ನು ವಿಶೇಷವಾಗಿ ಆಹ್ವಾನಿಸಿದರು.

 

అగ్గిపెట్టెలో పట్టే చీరను నేసిన సిరిసిల్లకు చెందిన యువ నేతన్న నల్ల విజయ్ ఈరోజు హైదరాబాద్‌లో మంత్రులు , , , సమక్షంలో తను నేసిన చీరను ప్రదర్శించారు. విజయ్ నేసిన ఈ అద్భుతమైన చీరను చూసి మంత్రులు అభినందించారు pic.twitter.com/r4tVA5GvZf

— Minister for IT, Industries, MA & UD, Telangana (@MinisterKTR)

 

ಸರ್ಕಾರದ ಕ್ರಮಗಳು ಉತ್ತಮ ಫಲಿತಾಂಶ ನೀಡಿವೆ

“ಕಡ್ಡಿ ಪೆಟ್ಟಿಗೆಯಲ್ಲಿ ತುಂಬಬಹುದಾದ ಸೀರೆಯನ್ನು ನೇಯುವ ನೇಕಾರರ ಕೌಶಲ್ಯದ ಬಗ್ಗೆ ನಾನು ಯಾವಾಗಲೂ ಕೇಳಿದ್ದೇನೆ. ನಮ್ಮದೇ ಆದ ಸಿರ್ಸಿಲ್ಲಾದಿಂದ ಇಂತಹ ಸೀರೆಯನ್ನು ವೀಕ್ಷಿಸಲು ನನಗೆ ಸಂತೋಷವಾಗಿದೆ ಎಂದು ಶಿಕ್ಷಣ ಸಚಿವೆ ಪಿ ಸಬಿತಾ ಇಂದ್ರಾರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ವಿಶೇಷ ಸೀರೆ ಗಿಫ್ಟ್ ನೀಡಿದ ಪದ್ಮಶ್ರೀ ಪುರಸ್ಕೃತ!‌

ನಲ್ಲಾ ವಿಜಯ್ ಅವರ ಕೌಶಲ್ಯಕ್ಕಾಗಿ ಸಚಿವರು ಅಭಿನಂದನೆ ಸಲ್ಲಿಸಿದ್ದು ಇಂತಹ ಅದ್ಭುತ ನೇಯ್ಗೆಯ ಎಲ್ಲಾ ವಿವರಗಳನ್ನು ಪಡೆದುಕೊಂಡರು. "ತೆಲಂಗಾಣ ಸರ್ಕಾರ ಕೈಗೊಂಡ ಕ್ರಮಗಳು ಸಿರ್ಸಿಲ್ಲಾದ ನೇಕಾರ ಸಮುದಾಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿವೆ. ನೇಕಾರರು ಈಗ ಸುಧಾರಿತ ನೇಯ್ಗೆ ತಂತ್ರಜ್ಞಾನಗಳು, ಮಗ್ಗಗಳು ಮತ್ತು ವಿಧಾನಗಳನ್ನು ಅನ್ವೇಷಿಸುತ್ತಿದ್ದಾರೆ" ಎಂದು ನಲ್ಲ ವಿಜಯ್ ಅವರು ಸಚಿವರಿಗೆ ತಿಳಿಸಿದರು.

click me!