ಇಂದಿನ ಕಾಲದಲ್ಲಿ ಎಲ್ಲರೂ ಫ್ಯಾಷನ್ (Fashion )ಇಷ್ಟಪಡ್ತಾರೆ. ಅದ್ರಲ್ಲೂ ವಿಶೇಷವಾಗಿ ಹುಡುಗಿ (Girl)ಯರು ಫ್ಯಾಷನ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ದುಬಾರಿ ಬ್ರಾಂಡ್ ನ ಡ್ರೆಸ್ (Dress), ಅಲಂಕಾರಿಕ ವಸ್ತುಗಳನ್ನು ಧರಿಸುತ್ತಾರೆ. ಆದ್ರೆ ಇನ್ನೂ ಒಂದು ಟ್ರಿಕ್ ಯೂಸ್ ಮಾಡ್ಬೇಕು. ಎಲ್ಲರಿಗಿಂತ ವಿಭಿನ್ನವಾಗಿ ಕಾಣ್ಬೇಕಂದ್ರೆ ಎಲ್ಲರಿಗಿಂತ ವಿಭಿನ್ನ ಸ್ಟೈಲ್ ಫಾಲೋ ಮಾಡ್ಬೇಕು.
ಸಂಬಂಧವಿಲ್ಲದ ಕಾಂಬಿನೇಶನ್ ನಿಮ್ಮ ಸೌಂದರ್ಯ(Beauty)ವನ್ನು ಹೆಚ್ಚಿಸುತ್ತದೆ. ನೀವು ಹೆಚ್ಚು ಆಕರ್ಷಕವಾಗಿ ಕಾಣಲು ನೆರವಾಗುತ್ತದೆ. ಸಾಂಪ್ರದಾಯಿಕ ಸೀರೆ (Saree)ಯನ್ನುಡುವ ಶೈಲಿ ಕೂಡ ಈಗ ಬದಲಾಗಿದೆ. ಸೀರೆ ಕೆಳಗೆ ಪ್ಯಾಂಟ್ ಹಾಕುವುದು ಈಗ ಫ್ಯಾಷನ್. ಹೀಗೆ ಕೆಲವು ಸರಳ ಫ್ಯಾಷನ್ ಮೂಲಕ ನಿಮ್ಮದೇ ಸ್ಟೈಲ್ ಮಾಡ್ಬಹುದು. ಇಂದು ಕೆಲ ಸರಳ ಸ್ಟೈಲ್ ಟಿಪ್ಸ್ ಗಳನ್ನು ನಾವಿಲ್ಲಿ ಹೇಳ್ತೀವಿ.
ನ್ಯೂ ಲುಕ್ ಗೆ ಹೊಸ ಬಟ್ಟೆ ಖರೀದಿ ಮಾಡಬೇಕಾಗಿಲ್ಲ. ವಾರ್ಡ್‌ರೋಬ್‌ನಲ್ಲಿರುವ ಹಳೆಯ ಬಟ್ಟೆಗೆ ಹೊಸ ರೂಪವನ್ನು ನೀಡಬಹುದು. ಮಿಕ್ಸ್ ಮತ್ತು ಮ್ಯಾಚ್ ಫ್ಯಾಷನ್ ಅದ್ಭುತವಾಗಿರುತ್ತದೆ.
undefined
ಪ್ರತಿಯೊಬ್ಬ ಹುಡುಗಿಯರಿಗೆ ಫ್ಯಾಷನ್ ಟಿಪ್ಸ್
- ಕಾಲೇಜು ಫಂಕ್ಷನ್ ಅಥವಾ ಪಾರ್ಟಿಯಲ್ಲಿ ಹುಡುಗಿಯರು ಅಮ್ಮನ ಸೀರೆ ಉಡಲು ಬಯಸ್ತಾರೆ. ಆದ್ರೆ ಬ್ಲೌಸ್ ದೊಡ್ಡ ಸಮಸ್ಯೆಯಾಗುತ್ತದೆ. ಹಳೆ ಶೈಲಿಯ ಬ್ಲೌಸ್ ಹಾಗೂ ಬ್ಲೌಸ್ ಗಾತ್ರದ ಬಗ್ಗೆ ಹುಡುಗಿಯರಿಗೆ ಚಿಂತೆ ಕಾಡುತ್ತದೆ. ಆಗ ಸೀರೆಯೊಂದಿಗೆ ಬ್ಲೌಸ್ ಬದಲಿಗೆ ವಿಭಿನ್ನವಾದದನ್ನು ಪ್ರಯತ್ನಿಸಬಹುದು. ಕ್ರಾಪ್ ಟಾಪ್ಸ್ ಅಥವಾ ಪೋಲ್ಕಾ ಡಾಟ್‌ನಂತಹ ಪ್ರಿಂಟೆಡ್ ಟಾಪ್‌ಗಳನ್ನು ಧರಿಸಬಹುದು.
- ಹೇರ್ ಸ್ಟೈಲ್ ಬಗ್ಗೆಯೂ ಅನೇಕರು ಗೊಂದಲಕ್ಕೀಡಾಗ್ತಾರೆ. ಕೆಲವರಿಗೆ ಕರ್ಲ್ ಲುಕ್ ಇಷ್ಟವಾಗುತ್ತದೆ. ಆದ್ರೆ ಅದಕ್ಕೆ ಬೇಕಾದ ಮಶಿನ್ ಇರುವುದಿಲ್ಲ. ಬ್ಯೂಟಿ ಪಾರ್ಲರ್ ಗೆ ಹೋಗಲು ಅವಕಾಶವಿರುವುದಿಲ್ಲ. ಅಂಥವರು ಮನೆಯಲ್ಲಯೇ ಕರ್ಲ್ ಲುಕ್ ಪಡೆಯಬಹುದು. ರಾತ್ರಿ ಮನೆಯಲ್ಲಿ ಸಣ್ಣ ಸಣ್ಣ ಜೆಡೆಯನ್ನು ಟೈಟಾಗಿ ಹೆಣೆದುಕೊಂಡು ಮಲಗಬೇಕು. ಬೆಳಿಗ್ಗೆ ಎದ್ದಾಗ ಕೂದಲು ಸುರಳಿಯಾಗಿ, ಕರ್ಲ್ ಆಗಿರುತ್ತದೆ.
ಪಿಂಕ್ ಜೊತೆ 40 ವರ್ಷಗಳ ಪ್ರೀತಿ... ಕೊನೆಗೂ ಮದುವೆಯಲ್ಲಿ ಸಮಾಪ್ತಿ
- ಪಾರ್ಟಿಯಲ್ಲಿ ಹೇರ್ ಸ್ಟೈಲಿಂಗ್ ಹೆಚ್ಚು ಕಾಲ ಉಳಿಯಲು ಕೆಲವೊಮ್ಮೆ ಹೇರ್ ಫಿಕ್ಸರ್ ಸ್ಪ್ರೇ ಅಗತ್ಯವಿರುತ್ತದೆ. ನಿಮ್ಮ ಬಳಿ ಇಲ್ಲದಿದ್ದರೆ, ನೀವು ಸಹೋದರ, ತಂದೆ ಅಥವಾ ಗಂಡನ ಹೇರ್ ಜೆಲ್ ಬಳಸಬಹುದು.
- ಡ್ರೆಸ್ ಗಿಡ್ಡವಾದ್ರೆ ನಾವು ಅದನ್ನು ಎಸೆಯಲು ಅಥವಾ ಬೇರೆಯವರಿಗೆ ನೀಡಲು ಮುಂದಾಗ್ತೇವೆ. ಆದ್ರೆ ಇನ್ಮುಂದೆ ಹಾಗೆ ಮಾಡ್ಬೇಕಾಗಿಲ್ಲ. ಡ್ರೆಸ್ ಕತ್ತರಿಸಿ ಟಾಪ್ ಆಗಿ ಧರಿಸಬಹುದು.
- ಒನ್ ಪೀಸ್ ಡ್ರೆಸ್ ಗೆ ಹೊಸ ಲುಕ್ ನೀಡಬೇಕೆಂದ್ರೆ ಅದನ್ನು ಮಡಚಿ ಧರಿಸಬಹುದು. ಅದನ್ನು ಮಡಚಿ, ಅದರ ಕೆಳಗೆ ಸ್ಕರ್ಟ್ ಧರಿಸಿ.
- ಇಂಡೋ ವೆಸ್ಟರ್ನ್ ಲುಕ್ ಪ್ರಯತ್ನಿಸಲು ಬಯಸಿದರೆ ಮಿಕ್ಸ್ ಅಂಡ್ ಮ್ಯಾಚ್ ಆಯ್ಕೆ ಮಾಡಬಹುದು. ಕ್ರಾಪ್ ಟಾಪ್ ಮತ್ತು ಪ್ಯಾಂಟ್‌ನೊಂದಿಗೆ ದುಪಟ್ಟಾ ಹಾಕಬಹುದು. ಇದರ ಜೊತೆ ಉದ್ದವಾದ ಕಿವಿಯೋಲೆಗಳನ್ನು ಧರಿಸಿ.
- ಸಿಂಪಲ್ ಡ್ರೆಸ್ ಅನ್ನು ಸ್ಟೈಲಿಶ್ ಮತ್ತು ಟ್ರೆಂಡಿ ಮಾಡಲು, ಡ್ರೆಸ್ ಮೇಲೆ ದುಪಟ್ಟಾ ಹಾಕಿ. ಅದನ್ನು ಗೌನ್ ಸ್ಟೈಲ್ ನಲ್ಲಿ ಧರಿಸಿ. ಸೊಂಟಕ್ಕೆ ಅಗಲವಾದ ಬೆಲ್ಟ್ ಹಾಕಿ. ಹೈ ಹೀಲ್ಡ್ ಧರಿಸಿದ್ರೆ ನೀವು ಎಲ್ಲರ ಗಮನ ಸೆಳೆಯುವುದ್ರಲ್ಲಿ ಎರಡು ಮಾತಿಲ್ಲ.
Loving Separately: ಒಟ್ಟಿಲ್ದೇನೂ ದಾಂಪತ್ಯ ಮುಂದುವರೆಸ್ಬೋದು! ಇದು ವೀಕೆಂಡ್ ದಾಂಪತ್ಯ..
- ಅನಾರ್ಕಲಿ ಕುರ್ತಾ ಎಲ್ಲರ ಬಳಿಯಿರುತ್ತದೆ. ಅದ್ರ ಕೆಳಗೆ ಅಂಕಲ್ ಲೆಂತ್ ಪ್ಯಾಂಟ್ ಧರಿಸಿ. ಕುರ್ತಾ ಮೇಲೆ ಬೆಲ್ಟ್ ಹಾಕಿ.
- ಸಿಂಪಲ್ ಟಾಪ್ ಅಥವಾ ಟಿ ಶರ್ಟ್ ಜೊತೆಗೆ ರಾಜಸ್ಥಾನಿ ಜಾಕೆಟ್ ಮತ್ತು ಜೀನ್ಸ್ ಧರಿಸಿ. ಇದು ನಿಮ್ಮ ಲುಕ್ ಬದಲಿಸುತ್ತದೆ.
- ಸ್ಕರ್ಟ್ ಗೆ ಡಿಫರೆಂಟ್ ಲುಕ್ ನೀಡಲು ಉದ್ದನೆಯ ಸ್ಕರ್ಟ್‌ಗಳ ಮೇಲೆ ಶಾರ್ಟ್ ಟಾಪ್ ಹಾಕಿ. ಅದರ ಮೇಲೆ ಹೆವಿ ನೆಕ್ಲೇಸ್ ಧರಿಸಿ.
- ಬಿಂದಿ ನಿಮ್ಮ ಸಂಪೂರ್ಣ ನೋಟವನ್ನು ಬದಲಾಯಿಸುತ್ತದೆ. ಹಾಗಾಗಿ ಬಿಂದಿ ಕಲೆಕ್ಷನ್ ಇರಲಿ. ಸಿಂಪಲ್ ಡ್ರೆಸ್ ಗೆ ಕಲರ್ ಫುಲ್ ಸ್ಟೈಲಿಶ್ ಬಿಂದಿ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ.