ಬಾಡಿ ಶೇವಿಂಗ್​ ಹೇಗೆ ಮಾಡ್ಬೇಕು? ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ ನಟಿ ಅದಿತಿ ಪ್ರಭುದೇವ

ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರು ಶೇವಿಂಗ್​ ಹೇಗೆ ಮಾಡಬೇಕು ಎನ್ನುವ ವಿಡಿಯೋ ಮಾಹಿತಿ ನೀಡಿದ್ದು, ಅದೀಗ ವೈರಲ್​ ಆಗಿದೆ.
 

Sandalwood actress Aditi Prabhudheva has shared a video on perfect shaving which has now gone viral suc

ದೇಹದಲ್ಲಿ ಇರುವ ಕೂದಲು ನಮ್ಮ ಚರ್ಮದ ರಕ್ಷಣೆಯಾಗಿ ಇದ್ದರೂ, ಅದರಿಂದ  ಕಿರಿಕಿರಿ ಅನುಭವಿಸುವುದೇ ಹೆಚ್ಚು. ಅದಕ್ಕಾಗಿಯೇ ತಲೆಗೂದಲು ಬಿಟ್ಟು ಕೈ-ಕಾಲಿನ ಕೂದಲು ಸೇರಿದಂತೆ ದೇಹದಲ್ಲಿ ಇರುವ ಕೂದಲುಗಳನ್ನು ಶೇವ್​ ಮಾಡಿಕೊಳ್ಳುವುದು ಮಾಮೂಲಾಗಿದೆ. ಮೊದಲೆಲ್ಲಾ ವ್ಯಾಕ್ಸಿಂಗ್​ ಮೂಲಕ ದೇಹದ ಕೂದಲುಗಳನ್ನು ತೆಗೆಯಲಾಗುತ್ತಿತ್ತು. ಇದು ತುಂಬಾ ನೋವು ತರುವ ಪ್ರಕ್ರಿಯೆ ಆಗಿದ್ದರೂ ಅಂದ ಚೆಂದಕ್ಕಾಗಿ ಈ ನೋವನ್ನು ತಡೆದುಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ಸರಿಯಾಗಿ ತರಬೇತಿ ಪಡೆಯದ ಬ್ಯೂಟಿಷಿಯನ್ಸ್​ ಈ ರೀತಿ ವ್ಯಾಕ್ಸಿಂಗ್​ ಮಾಡಲು ಹೋಗಿ ಚರ್ಮವನ್ನು ಕಿತ್ತದ್ದೂ ಇದೆ, ರಕ್ತವನ್ನು ಬರಿಸೋದೂ ಇದೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಶೇವಿಂಗ್​ ಬ್ಲೇಡ್​ಗಳು ಮಹಿಳೆಯರಿಗೂ ಲಭ್ಯವಿದೆ. ಆದರೆ ಇದರಿಂದ ಶೇವ್​ ಮಾಡುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. 

ಬೇಡದ ಕೂದಲುಗಳನ್ನು ಹೇಗೆ ತೆಗೆಯಬೇಕು ಎಂದು ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಹೇಳಿಕೊಟ್ಟಿದ್ದಾರೆ. ಅಸಲಿಗೆ ಬ್ಲೇಡ್​ ಕಂಪೆನಿಯೊಂದರ ಪೇಡ್​  ಪ್ರಮೋಷನ್​ ಅಂದರೆ, ಆ ಕಂಪೆನಿಯ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಟಿವಿಗಳಲ್ಲಿ ಬರುವ ಜಾಹೀರಾತುಗಳ ಬದಲಾಗಿದೆ ಸೆಲೆಬ್ರಿಟಿಗಳ ಯೂಟ್ಯೂಬ್​ ಚಾನೆಲ್​ಗಳಿಗಾಗಿಯೇ ಅವರಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಈ ರೀತಿಯ ಜಾಹೀರಾತುಗಳನ್ನು ಹಾಕಿಸಿಕೊಳ್ಳಲಾಗುತ್ತದೆ. ಯಾವುದೋ ವಿಷಯದ ವಿಡಿಯೋ ಮಾಡುವ ನಡುವೆ, ಈ ಜಾಹೀರಾತುಗಳನ್ನು ಕೂಡ ಅವರ ಫಾಲೋವರ್ಸ್​ ತಲೆಯಲ್ಲಿ ಬಿಡುವುದು ಇದರ ಟ್ರಿಕ್ಸ್​. ಇಲ್ಲಿ ಕೂಡ ಬ್ಲೇಡ್​ ಕಂಪೆನಿಯೊಂದರ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬ್ಲೇಡ್​ ಯಾವುದೇ ಇರಲಿ ಆದರೆ ಶೇವ್​ ಮಾಡುವ ಸರಿಯಾದ ವಿಧಾನ ಯಾವುದು ಎನ್ನುವುದನ್ನು ಅದಿತಿ ಇದರಲ್ಲಿ ಹೇಳಿಕೊಟ್ಟಿದ್ದಾರೆ.

Latest Videos

ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್​! ಒಂದು ಸಾವಿರ ರೂ. ಗೆದ್ದೋರು ಯಾರು?

ಬ್ಲೇಡ್​​ನಿಂದ ಕೂದಲನ್ನು ತೆಗೆಯುವಾಗ ಕೂದಲು ಯಾವ ರೀತಿ ಬೆಳೆದಿರುತ್ತದೆಯೋ ಅದೇ ರೀತಿ ತೆಗೆಯಬೇಕಾಗುತ್ತದೆ. ಉದಾಹರಣೆಗೆ ಕಾಲಿನ ಕೂದಲನ್ನು ತೆಗೆಯುವಾಗ ಮೇಲಿನಿಂದ ಕೆಳಕ್ಕೆ ಬ್ಲೇಡ್​ ಜಾರಿಸಬೇಕು, ಅದೇ ರೀತಿ ಕೈಕೂದಲು ಕೂಡ ಅದೇ ರೀತಿ ತೆಗೆಯಬೇಕು. ಕೈ ಮತ್ತು ಕಾಲಿನ ಕೂದಲನ್ನು ತೆಗೆದಬಳಿಕ ಡಯಾಗ್ನಲ್​ ಶೇಪ್​ನಲ್ಲಿ ಬ್ಲೇಡ್​ ಆಡಿಸಿದರೆ ಚಿಕ್ಕಪುಟ್ಟ ಕೂದಲು ಇದ್ದರೆ ಅದು ಕೂಡ ಹೊರಟುಹೋಗುತ್ತದೆ ಎಂದು ಈ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ. ಅದೇ ರೀತಿ ದೇಹದಲ್ಲಿನ ಯಾವ ಭಾಗದ ಕೂದಲನ್ನು ತೆಗೆಯಬೇಕು ಎಂದರೂ ಅದು ಬೆಳೆದ ಭಾಗದಂತೆಯೇ ತೆಗೆಯಬೇಕು, ಆಪಾಸಿಟ್​ ಡೈರೆಕ್ಷನ್​ನಲ್ಲಿ ತೆಗೆಯಬೇಡಿ ಎಂದು ನಟಿ ಹೇಳಿದ್ದಾರೆ. 
 
 ಇದೇ ವಿಡಿಯೋದಲ್ಲಿ ನಟಿ, ಬೆಳಗಿನ ಜಾವ ಬಾದಾಮಿ ಹಾಲನ್ನು ಮಾಡುವ ಬಗೆಯನ್ನು  ತಿಳಿಸಿದ್ದಾರೆ. ಕೆಲವೊಂದು ನೆನೆಸಿಟ್ಟ ಬಾದಾಮಿ ಬೀಜಗಳ ಸಿಪ್ಪೆ ತೆಗೆದು ಅಥವಾ ಸಿಪ್ಪೆ ಸಹಿತವಾಗಿ ನೀರು ಸೇರಿಸಿ ಮಿಕ್ಸಿ ಮಾಡಿಕೊಂಡು ಕುಡಿಯುವಂತೆ ಸಲಹೆ ನೀಡಿದ್ದಾರೆ. ಕೊನೆಯ ಪಕ್ಷ ವಾರಕ್ಕೊಮ್ಮೆಯಾದರೂ ಹೀಗೆ ಮಾಡಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.  ಇದಾಗಲೇ 10 ತಿಂಗಳ ಮಗುವಾಗಿರುವ ನಟಿ, ರಿಯಾಲಿಟಿ ಷೋ ಸೇರಿದಂತೆ ಮಗಳ ಲಾಲನೆ, ಪಾಲನೆ, ಫೋಟೋಶೂಟ್​ಗಳಲ್ಲಿ ಬಿಜಿಯಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಈ ವಿಡಿಯೋದಲ್ಲಿ ಮದುಮಗಳಾಗಿ ಹೇಗೆ ರೆಡಿ ಆಗಬೇಕು ಎನ್ನುವುದನ್ನೂ ತೋರಿಸಿದ್ದಾರೆ ಅದಿತಿ. 

ದೊಡ್ಡಪತ್ರೆಯಲ್ಲಿದೆ ನಟಿ ಅದಿತಿ ಪ್ರಭುದೇವ್ ಆರೋಗ್ಯದ ಗುಟ್ಟು: ಅಮ್ಮನಾದ ಮೇಲೆ ಮತ್ತಷ್ಟು ಹಾಟ್​ ಹೇಗೆ?

click me!