ಮಾರ್ಕೆಟ್‌ ಗೆ ಬಂದಿದೆ 8 ಲಕ್ಷದ ರಾಖಿ ! ಬೆಲೆ ಹೆಚ್ಚಿದ್ರೂ ಬೆಳ್ಳಿ ರಾಖಿಗೆ ಡಿಮ್ಯಾಂಡ್

Published : Aug 26, 2026, 06:57 PM IST
Rakhi

ಸಾರಾಂಶ

Raksha bandhan 2026 : ರಕ್ಷಾಬಂಧನಕ್ಕೆ ತಯಾರಿ ಜೋರಾಗಿದೆ. ಮಾರ್ಕೆಟ್‌ ನಲ್ಲಿ ರಾಖಿಗಳ ಅಬ್ಬರ ಜೋರಾಗಿದೆ. ಈ ಬಾರಿ ಯಾವ ರಾಖಿಗೆ ಬೇಡಿಕೆ ಹೆಚ್ಚು ಎಂಬ ಮಾಹಿತಿ ಇಲ್ಲಿದೆ.

ಸಹೋದರ – ಸಹೋದರಿಯರ ಬಾಂಧವ್ಯ ಸಾರುವ ರಕ್ಷಾಬಂಧನ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದೇ ಶುಕ್ರವಾರ ಅಂದ್ರೆ ಆಗಸ್ಟ್‌ 28 ರಂದು ರಕ್ಷಾಬಂಧನ ಆಚರಿಸಲಾಗ್ತಿದೆ. ಮಾರುಕಟ್ಟೆಯಲ್ಲಿ ರಾಖಿಗಳ ಅಬ್ಬರ ಜೋರಾಗಿದೆ. ಸಹೋದರಿಯರು ತಮ್ಮ ಸಹೋದರರಿಗಾಗಿ ರಾಖಿ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಸಾಮಾನ್ಯ ರೇಷ್ಮೆ ದಾರಗಳ ರಾಖಿಗಳ ಜೊತೆಗೆ ಚಿನ್ನ, ಬೆಳ್ಳಿ, ಡೈಮಂಡ್ ರಾಖಿಗಳು ಗಮನ ಸೆಳೆಯುತ್ತಿವೆ.

8 ಲಕ್ಷದ ರಾಖಿ !

ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ, ಚಿನ್ನದ ರಾಖಿಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಮಾರುಕಟ್ಟೆಯಲ್ಲಿ ಚಿನ್ನದ ರಾಖಿಗಳ ಬೆಲೆ ಸುಮಾರು 15 ಸಾವಿರ ರೂಪಾಯಿಯಿಂದ ಆರಂಭವಾಗ್ತಿದೆ. ವಿನ್ಯಾಸ ಮತ್ತು ತೂಕಕ್ಕೆ ಅನುಗುಣವಾಗಿ ಲಕ್ಷ ರೂಪಾಯಿಗಳವರೆಗೂ ರಾಖಿ ಇದೆ. ಮುಂಬೈ ಜ್ಯುವೆಲರಿ ಶಾಪ್‌ ನಲ್ಲಿ 8 ಲಕ್ಷದ ರಾಖಿಯನ್ನು ಮಾರಾಟಕ್ಕೆ ಇಡಲಾಗಿದೆ. ಚಿನ್ನದ ರಾಖಿಗಳಿಗೆ ಬೇಡಿಕೆ ಸ್ವಲ್ಪ ಕಡಿಮೆ. ಅದ್ರಲ್ಲೂ ಲಕ್ಷಾಂತರ ರೂಪಾಯಿ ಬೆಲೆಯ ರಾಖಿಗಳನ್ನು ಜನರು ಖರೀದಿ ಮಾಡೋದು ಅಪರೂಪ. ಆದ್ರೆ ಈ 8 ಲಕ್ಷದ ರಾಖಿ ವೀಕ್ಷಣೆ ಮಾಡಲು ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಬೆಲೆಯಲ್ಲಿ ಒಂದು ಕಾರು ಖರೀದಿ ಮಾಡ್ಬಹುದು. ಮಾರ್ಕೆಟ್‌ ನಲ್ಲಿ ಡೈಮಂಡ್ ರಾಖಿಗಳ ಅಬ್ಬರವೂ ಇದೆ. ಸುಮಾರು 90 ಸಾವಿರ ರೂಪಾಯಿಯಿಂದ ಆರಂಭವಾಗುವ ಇವು 2.5 ಲಕ್ಷ ರೂಪಾಯಿವರೆಗೂ ಲಭ್ಯವಿದೆ.

ಬೆಳ್ಳಿ ರಾಖಿಗೆ ಡಿಮ್ಯಾಂಡ್

ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಏರಿದೆ. ಆದ್ರೆ ಗ್ರಾಹಕರು ಬೆಳ್ಳಿ ರಾಖಿ ಖರೀದಿಗೆ ಮನಸ್ಸು ಮಾಡ್ತಿದ್ದಾರೆ. ಬೆಳ್ಳಿ ರಾಖಿ ಖರೀದಿದಾರರ ಸಂಖ್ಯೆ ಹೆಚ್ಚಿದೆ. ಸುಮಾರು 1200 ರೂಪಾಯಿಯಿಂದ ಬೆಳ್ಳಿ ರಾಖಿಗಳ ಬೆಲೆ ಶುರುವಾಗ್ತಿದೆ. ವಿನ್ಯಾಸಕ್ಕೆ ತಕ್ಕಂತೆ ಅದ್ರ ಬೆಲೆ ಏರುತ್ತದೆ. ಹತ್ತು ಸಾವಿರ ರೂಪಾಯಿವರೆಗೂ ಬೆಳ್ಳಿ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವ್ಯಾಪಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಅವರ ಅಂಗಡಿಯಲ್ಲಿ 300 ಕ್ಕೂ ಹೆಚ್ಚು ಬೆಳ್ಳಿ ರಾಖಿಗಳು ಮಾರಾಟವಾಗಿವೆ.

ರಾಖಿಯಲ್ಲೂ ಹೊಸ ಟ್ರೆಂಡ್

ಈ ಬಾರಿ ರಾಖಿಗಳ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಕಾಣಿಸುತ್ತಿದೆ. ಸ್ಟೋನ್ ಸ್ಟಡ್ಡ್ ರಾಖಿ, ಗೋಲ್ಡ್ ಬ್ರೇಸ್ಲೆಟ್, ಬಿಗ್-ಬಿ ಬ್ರೇಸ್ಲೆಟ್, ಇವಿಲ್ ಐ, ಡೈಮಂಡ್ ಪೆಂಡೆಂಟ್ ಸೇರಿದಂತೆ ಓಂ, ರುದ್ರಾಕ್ಷ, ಗಣೇಶ, ಸ್ವಸ್ತಿಕ ಮತ್ತು ತ್ರಿಶೂಲದಂತಹ ಶುಭ ಸಂಕೇತಗಳಿರುವ ರಾಖಿಗಳು ಜನರನ್ನು ಆಕರ್ಷಿಸುತ್ತಿವೆ. ತಮ್ಮ ಹೆಸರನ್ನು ಹಾಕಿಸಿಕೊಂಡು ಕಸ್ಟಮೈಸ್ ಮಾಡಿಸಿಕೊಳ್ಳುವ ರಾಖಿಗಳಿಗೂ ಬೇಡಿಕೆ ಇದೆ.

ವಿಶೇಷವೆಂದರೆ, ಹಬ್ಬ ಮುಗಿದ ನಂತರವೂ ಬಳಸಿಕೊಳ್ಳಬಹುದಾದ ಬ್ರೇಸ್ಲೆಟ್ ಮಾದರಿಯ ರಾಖಿಗಳು ಈಗ ಟ್ರೆಂಡ್ನಲ್ಲಿವೆ. ಬೆಳ್ಳಿ ಅಥವಾ ಚಿನ್ನದ ಬೇಸ್ಗೆ ಸ್ಟೋನ್ಗಳನ್ನು ಅಳವಡಿಸಿ, ಆಭರಣದಂತೆ ಇವುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಇದರ ಜೊತೆಗೆ ಕಾಶಿಯ ಗುಲಾಬಿ ಮೀನಾಕಾರಿ ರಾಖಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಸುಮಾರು 800 ರೂಪಾಯಿಯಿಂದ 12 ಸಾವಿರ ರೂಪಾಯಿವರೆಗಿನ ಈ ರಾಖಿಗಳು ದೇಶ ಮಾತ್ರವಲ್ಲದೆ ಅಮೆರಿಕ, ಕೆನಡಾ ಸೇರಿದಂತೆ ವಿದೇಶಗಳಿಂದಲೂ ಆರ್ಡರ್ ಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bangle Designs: ಕೈಗಳ ಅಂದ ಹೆಚ್ಚಿಸುವ ಬಗೆಬಗೆಯ ಬಳೆಗಳು, ಇಲ್ಲಿದೆ ನೋಡಿ!
Mangalsutra : ಟ್ರೆಂಡಿ ಲುಕ್‌ಗೆ ಇಲ್ಲಿವೆ ಲೈಟ್‌ವೇಟ್ ಮಂಗಳಸೂತ್ರ ಬ್ರೇಸ್ಲೆಟ್!