ಶರ್ಟ್‌ ಮೇಲೆ ಪೆನ್‌ ಇಂಕ್‌ ಕಲೆ ಬಿದ್ದಿದ್ಯಾ? ಉಜ್ಜದೇ ಈ ಸಿಂಪಲ್ ಟ್ರಿಕ್‌ ಬಳಸಿ, ಕಲೆ ಮಾಯ!

Published : Aug 21, 2026, 09:35 PM IST
Ink Stain Remover

ಸಾರಾಂಶ

Ink Stain Remover: ನಿಮ್ಮ ಹೊಸ ಶರ್ಟ್ ಮೇಲೆ ಅಥವಾ ಬಿಳಿ ಬಣ್ಣದ ಶರ್ಟ್ ಮೇಲೆ ಪೆನ್ ಇಂಕ್ ಬಿದ್ದಿದ್ಯಾ? ಅಥವಾ ಪೆನ್ ಮಾರ್ಕ್ ಕಲೆ ಉಳಿದಿದ್ಯಾ? ಹೇಗಪ್ಪಾ ಇದನ್ನ ತೆಗೆಯೋದು ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ಟ್ರಿಕ್ಸ್ ಟ್ರೈ ಮಾಡಿ. ಸುಲಭವಾಗಿ ಕಲೆ ತೆಗೆಯೋದು ಹೇಗೆ ನೋಡಿ.

ಶರ್ಟ್‌ ಮೇಲೆ ಪೆನ್‌ ಇಂಕ್‌ ಕಲೆ ಬಿದ್ದಿದ್ಯಾ?

ಬಟ್ಟೆಗಳಿಗೆ ಪೆನ್‌ನ ಇಂಕ್‌ ಕಲೆ ಬೀಳುವುದು ಸಾಮಾನ್ಯ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಶರ್ಟ್, ಟೀ-ಶರ್ಟ್ ಸೇರಿದಂತೆ ಬಟ್ಟೆಗಳ ಮೇಲೆ ಪೆನ್‌ ಕಲೆ ಬೀಳುವ ಸಾಧ್ಯತೆ ಹೆಚ್ಚು. ಆದರೆ ಇದೇ ಕಲೆ ನಿಮ್ಮ ದುಬಾರಿ ಅಥವಾ ಇಷ್ಟದ ಬಟ್ಟೆಗೆ ಬಿದ್ದರೆ ಮಾತ್ರ ದೊಡ್ಡ ತಲೆನೋವಾಗುತ್ತದೆ. ಪೆನ್‌ನ ಕಲೆಗಳನ್ನು ತೆಗೆಯಲು ಕೆಲವರು ಡಿಟರ್ಜೆಂಟ್ ಹಾಕಿ ಜೋರಾಗಿ ಉಜ್ಜುತ್ತಾರೆ. ಆದರೆ ಹೀಗೆ ಮಾಡುವುದರಿಂದ ಇಂಕ್‌ ಇನ್ನಷ್ಟು ಹರಡುವುದರ ಜೊತೆಗೆ ಬಟ್ಟೆಯ ಫ್ಯಾಬ್ರಿಕ್‌ ಕೂಡ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಪೆನ್‌ ಕಲೆ ಬಿದ್ದಾಗ ಏನು ಮಾಡಬೇಕು?

ಪೆನ್‌ ಕಲೆ ತೆಗೆಯಲು ಈ ಟ್ರಿಕ್‌ ಪ್ರಯತ್ನಿಸಿ

ಡಿಜಿಟಲ್ ಕ್ರಿಯೇಟರ್ ಒಬ್ಬರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಟ್ಟೆಯಿಂದ ಬಾಲ್‌ಪಾಯಿಂಟ್ ಪೆನ್‌ನ ಕಲೆ ತೆಗೆಯುವ ಸರಳ ವಿಧಾನವನ್ನು ತೋರಿಸಿದ್ದಾರೆ. ಮೊದಲಿಗೆ ಒಂದು ಕಾಟನ್ ಬಾಲ್ ತೆಗೆದುಕೊಳ್ಳಿ. ಅದನ್ನು ಆಲ್ಕೋಹಾಲ್ ಆಧಾರಿತ ಡಿಯೋಡರೆಂಟ್ ಅಥವಾ ಹ್ಯಾಂಡ್ ಸ್ಯಾನಿಟೈಸರ್‌ನಲ್ಲಿ ಚೆನ್ನಾಗಿ ನೆನೆಸಿಕೊಳ್ಳಿ. ನಂತರ ಇಂಕ್‌ ಕಲೆ ಇರುವ ಜಾಗದ ಮೇಲೆ ಕಾಟನ್ ಬಾಲ್‌ ಇಟ್ಟು ನಿಧಾನವಾಗಿ ಒತ್ತಿ. ಆದರೆ ಕಾಟನ್‌ನಿಂದ ಕಲೆ ಇರುವ ಜಾಗವನ್ನು ಉಜ್ಜಬಾರದು. ನಿಧಾನವಾಗಿ ಒತ್ತಬೇಕು. ಹೀಗೆ ಮಾಡುವುದರಿಂದ ಇಂಕ್‌ ಬಟ್ಟೆಯಿಂದ ಹೊರಬಂದು ಕಾಟನ್‌ಗೆ ಹೀರಿಕೊಳ್ಳಲು ಸಹಾಯವಾಗುತ್ತದೆ.

ಕಲೆ ಹೋಗದಿದ್ದರೆ ಮತ್ತೆ ಮಾಡಿ

ಮೊದಲ ಪ್ರಯತ್ನದಲ್ಲೇ ಕಲೆ ಸಂಪೂರ್ಣವಾಗಿ ಹೋಗದಿದ್ದರೆ ಇದೇ ಪ್ರಕ್ರಿಯೆಯನ್ನು ಇನ್ನೂ 2-3 ಬಾರಿ ಪುನರಾವರ್ತಿಸಬಹುದು. ಆದರೆ ಬಟ್ಟೆಯ ಬಣ್ಣ ಅಥವಾ ಫ್ಯಾಬ್ರಿಕ್‌ಗೆ ಹಾನಿಯಾಗದಂತೆ ಮೊದಲು ಕಾಣದ ಸಣ್ಣ ಭಾಗದಲ್ಲಿ ಪರೀಕ್ಷಿಸುವುದು ಉತ್ತಮ. ಕಲೆ ಬಹುತೇಕ ಮಾಯವಾದ ನಂತರ, ಬಟ್ಟೆಯ ಫ್ಯಾಬ್ರಿಕ್‌ಗೆ ಸೂಕ್ತವಾದ ರೀತಿಯಲ್ಲಿ ಸಾಮಾನ್ಯವಾಗಿ ತೊಳೆಯಬಹುದು.

ಬಿಳಿ ಶರ್ಟ್‌ಗೂ ಬಳಸಬಹುದೇ?

ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ವಿಧಾನವನ್ನು ಬಿಳಿ ಶರ್ಟ್ ಹಾಗೂ ಮೇಶ್‌ನಂತಹ ಕೆಲವು ಬಟ್ಟೆಗಳ ಮೇಲೂ ಬಳಸಬಹುದು. ಸುಮಾರು 8 ಗಂಟೆ ಹಳೆಯ ಇಂಕ್‌ ಕಲೆಗೂ ಈ ಟ್ರಿಕ್ ಕೆಲಸ ಮಾಡಬಹುದು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಆದರೆ ಎಲ್ಲಾ ಬಟ್ಟೆಗಳ ಫ್ಯಾಬ್ರಿಕ್ ಮತ್ತು ಬಣ್ಣ ಒಂದೇ ರೀತಿಯಾಗಿರುವುದಿಲ್ಲ. ವಿಶೇಷವಾಗಿ ರೇಷ್ಮೆ, ಸೂಕ್ಷ್ಮ ಬಟ್ಟೆ ಅಥವಾ ಬಣ್ಣ ಹೋಗುವ ಸಾಧ್ಯತೆ ಇರುವ ಬಟ್ಟೆಗಳ ಮೇಲೆ ಯಾವುದೇ ದ್ರಾವಣ ಬಳಸುವ ಮೊದಲು ಸಣ್ಣ, ಜಾಗದಲ್ಲಿ ಪರೀಕ್ಷಿಸುವುದು ಸುರಕ್ಷಿತ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇವಲ 5 ಗ್ರಾಂ ಚಿನ್ನದಲ್ಲಿ ಟ್ರೆಂಡಿ ಕರಿಮಣಿ ಸರ! ಇಲ್ಲಿದೆ ನೋಡಿ ಬೆಸ್ಟ್ ಡಿಸೈನ್‌
Nose Pin Designs: ಅರ್ಧ ಗ್ರಾಂ ಚಿನ್ನದಲ್ಲಿ ಅದ್ಭುತ ಮೂಗುತಿ: ಇಲ್ಲಿದೆ ನೋಡಿ ಸೂಪರ್ ಡಿಸೈನ್ಸ್