ಬಿಲಿಯನೇರ್ ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಗಳು ಇಟಲಿಯಲ್ಲಿ ಐಶಾರಾಮಿ ಕ್ರೂಸ್‌ನಲ್ಲಿ ನಡೆದಿದೆ. ಈ ಇವೆಂಟ್‌ನಲ್ಲಿ ರಾಧಿಕಾ ಮರ್ಚೆಂಟ್ ಧರಿಸಿದ ಪಿಂಕ್ ಮಿಡಿ ಡ್ರೆಸ್ ಬೆಲೆಯೆಷ್ಟು ಗೊತ್ತಿದ್ಯಾ?
ಬಿಲಿಯನೇರ್ ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ಜುಲೈ 12ರಂದು ಮುಂಬೈನ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದ್ದು, ಈಗಿನಿಂದಲೇ ತಯಾರಿ ನಡೆಯುತ್ತಿದೆ. ಇಟಲಿಯಲ್ಲಿ ಐಶಾರಾಮಿ ಕ್ರೂಸ್‌ನಲ್ಲಿ ಎರಡನೇ ವಿವಾಹಪೂರ್ವ ಪಾರ್ಟಿ ನಡೆಯುತ್ತಿದ್ದು, , ಹಲವಾರು ಬಾಲಿವುಡ್ ತಾರೆಯರು, ಉದ್ಯಮಿಗಳು, ಪ್ರಸಿದ್ಧ ಅಂತಾರಾಷ್ಟ್ರೀಯ ಬ್ಯಾಂಡ್‌ಗಳು ಮತ್ತು ಗಾಯಕರು ಪ್ರದರ್ಶನ ನೀಡಿದ್ದಾರೆ. ಅದ್ಧೂರಿ ಕ್ರೂಸ್ ಸಹಿತ ಮೋಜು ಮಸ್ತಿಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿವಾಹಪೂರ್ವದ ಸಮಾರಂಭಕ್ಕಾಗಿ ರಾಧಿಕಾ ಮರ್ಚೆಂಟ್ ಸುಂದರವಾದ ಪಿಂಕ್ ಮಿಡಿ ಡ್ರೆಸ್ ಧರಿಸಿದ್ದರು. ಅವರ ಈ ಸುಂದರವಾದ ಡ್ರೆಸ್ ಬರೋಬ್ಬರಿ 3.2 ಲಕ್ಷ ರೂ. ಬೆಲೆ ಬಾಳುತ್ತದೆ ಎನ್ನಲಾಗಿದೆ. ರಾಧಿಕಾ 1959ರ ಕ್ರಿಶ್ಚಿಯನ್ ಡಿಯರ್ ಹಾಟ್ ಕೌಚರ್ ಕಾಕ್ಟೈಲ್ ಡ್ರೆಸ್‌ನ್ನು ಧರಿಸಿದ್ದಾರೆ. ಹರಾಜು ಸೈಟ್ ಪ್ರಕಾರ, ಈ ಉಡುಪನ್ನು ಭಾರತೀಯ ರೂಪಾಯಿಯಲ್ಲಿ 3.2 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಇದರ ಜೊತೆಗೆ ರಾಧಿಕಾ ಸ್ಟೈಲಿಶ್ ಹರ್ಮ್ಸ್ ಬ್ಯಾಗ್ ಸಹ ಹಿಡಿದುಕೊಂಡಿದ್ದರು.
ಅನಂತ್-ರಾಧಿಕಾ ಮದುವೆಗೆ ಅಂಬಾನಿ ಕುಟುಂಬ ಜುಲೈ 12ನ್ನೇ ಅಯ್ಕೆ ಮಾಡಿಕೊಂಡಿದ್ದು ಯಾಕೆ?
ಪೀಚ್-ಹ್ಯೂಡ್ ಮೇಳದಲ್ಲಿ ಅಲಂಕರಿಸಲ್ಪಟ್ಟ ಇಶಾ ಅಂಬಾನಿ, ಗುಲಾಬಿ ಬಣ್ಣದ ಪ್ಯಾಂಟ್‌ಸೂಟ್‌ನಲ್ಲಿ ಆಕಾಶ್ ಅಂಬಾನಿ , ಗುಲಾಬಿ ಬಣ್ಣದ ಉಡುಪಿನಲ್ಲಿ ಶ್ಲೋಕಾ ಮೆಹ್ತಾ ಅದ್ಭುತವಾಗಿ ಕಾಣುತ್ತಿದ್ದರು. ಅಂಬಾನಿ ಅಪ್ಡೇಟ್ ಇನ್ಟಾ ಹ್ಯಾಂಡಲ್ ನಲ್ಲಿ, ಕ್ರೂಸ್ ಪ್ರಿ-ವೆಡ್ಡಿಂಗ್ ಪಾರ್ಟಿಯ ಕೊನೆ ದಿನದ ಕಾರ್ಯಕ್ರಮದ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದೆ. ಅನಂತ್ ಅಂಬಾನಿ ನೀಲಿ ಬಣ್ಣದ ಡಿಸೈನ್ ಜಾಕೆಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ನೀತಾ ಬಿಳಿ-ಟೋನ್ ಉಡುಗೆಯಲ್ಲಿ ಕಂಗೊಳಿಸಿದ್ದು, ಗುಲಾಬಿ ಮತ್ತು ಟುಲಿಪ್ ಅಲಂಕರಣಗಳೊಂದಿಗೆ ಈ ಉಡುಗೆ ನೀತಾಗೆ ಚೆನ್ನಾಗಿ ಒಪ್ಪುವಂತಿತ್ತು. ಹೂವಿನ ನೆಕ್‌ಪೀಸ್, ಕ್ಲಾಸಿ ಗ್ಲಾಸ್‌ಗಳು ಮತ್ತು ಮೃದುವಾದ ಮೇಕ್ಅಪ್‌ನೊಂದಿಗೆ ಚೆನ್ನಾಗಿ ಕಂಗೊಳಿಸುತ್ತಿದ್ದರು. ಮುಖೇಶ್ ಅಂಬಾನಿ ನೀಲಿ ಬಣ್ಣದ ಶರ್ಟ್ ಮತ್ತು ಬಿಳಿ ಪ್ಯಾಂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಅಬ್ಬಾ, ಅಂಬಾನಿ ಮಗನ ಮದುವೆ ನಡೆಯೋ ಹಾಲ್ ಬಾಡಿಗೆ ದಿನಕ್ಕೆ ಇಷ್ಟೊಂದಾ?
ಈ ಹಡಗಿನಲ್ಲಿ ಪೋರ್ಟೊಫಿನೊ ಅಲಂಕಾರವನ್ನು ಮಾಡಲಾಗಿತ್ತು. ಕೆಂಪು ಬಣ್ಣದ ಹೂವುಗಳಿಂದ ಆಕರ್ಷಣೆಯನ್ನು ಹೆಚ್ಚಿಸಿದ ಲೈಟ್-ಟೋನ್ ಕುರ್ಚಿಗಳು ಇದ್ದವು. ಇವೆಲ್ಲವೂ ಅದ್ದೂರಿಯಾಗಿತ್ತು. ಮತ್ತೆ ಕೆಲವು ಫೋಟೋದಲ್ಲಿ ಅತಿಥಿಗಳಿಗಾಗಿ ಇದ್ದ ರುಚಿಕರವಾದ ಕೇಕುಗಳಿದ್ದವು. ವೀಡಿಯೊವೊಂದರಲ್ಲಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅನಂತ್ ಮತ್ತು ರಾಧಿಕಾ ಅವರೊಂದಿಗೆ ಚಿಟ್‌ಚಾಟ್ ಮಾಡುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರು ಅನಂತ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.