ರಿಲಯನ್ಸ್ ಕುಟುಂಬದಲ್ಲಿ ನಡೆಯುತ್ತಿರುವ ವಿವಾಹಪೂರ್ವ ಕಾರ್ಯಕ್ರಮಗಳು ಇಡೀ ದೇಶದ ಗಮನ ಸೆಳೆದಿವೆ. ಇಲ್ಲಿ ನಡೆದ ಪಾರ್ಟಿಯೊಂದರಲ್ಲಿ ಮದುಮಗಳು ರಾಧಿಕಾ ಮರ್ಚೆಂಟ್ ಧರಿಸಿದ್ದ ಗ್ಲಾಮರಸ್ ಉಡುಪೊಂದು ಈಗ ಎಲ್ಲ ಮೆಚ್ಚುಗೆಗೆ ಪಾತ್ರವಾಗಿದೆ.
ದೇಶದ ಅತಿ ಸಿರಿವಂತ ಕುಟುಂಬಂದ ಮದುವೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಗುಜರಾತಿನ ಜಾಮ್ ನಗರದ ಮೇಲೆ ನೆಟ್ಟಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿರುವ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮಗಳು ಬಹಳ ಜೋರಾಗಿ ನಡೆಯುತ್ತಿವೆ. ಹಲವು ದಿನಗಳಿಂದ ನಡೆಯುತ್ತಿರುವ ಅನೇಕ ಕಾರ್ಯಕ್ರಮಗಳಲ್ಲಿ ಬಾಲಿವುಡ್ ತಾರೆಯರು, ಗಣ್ಯಾತಿಗಣ್ಯರು ಪಾಲ್ಗೊಂಡಿದ್ದಾರೆ. ಹೀಗಾಗಿ, ಫ್ಯಾಷನ್ ಪ್ರಿಯರ ಕಣ್ಣು ಅತ್ತ ನೆಟ್ಟಿದೆ. ಅಲ್ಲಿನ ಸಣ್ಣದೊಂದು ವಿದ್ಯಮಾನವನ್ನೂ ಬಹಳ ಕುತೂಹಲದಿಂದ ಗಮನಿಸುವ ಜನರಿದ್ದಾರೆ. ಮದುಮಗಳು ರಾಧಿಕಾ ಮರ್ಚೆಂಟ್ ಸೇರಿದಂತೆ ಅಂಬಾನಿ ಕುಟುಂಬದ ಸದಸ್ಯರು ಈ ಎಲ್ಲ ಸಮಾರಂಭಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು, ಪ್ರತಿಕ್ಷಣವನ್ನೂ ಆಸ್ವಾದಿಸುತ್ತಿದ್ದಾರೆ. ಇಂಥದ್ದೊಂರು “ಮೇಲಾ ರೋಗ್ ಪಾರ್ಟಿ’ ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಧಿಕಾ ಮರ್ಚೆಂಟ್ ಅವರ ಆಧುನಿಕ ದಿರಿಸು ಈಗ ಎಲ್ಲರ ಗಮನ ಸೆಳೆದಿದೆ.
ಮದುಮಗಳು (Bride to be) ರಾಧಿಕಾ ಮರ್ಚೆಂಟ್ (Radhika Merchant) ಧರಿಸಿದ್ದ ಬಣ್ಣಬಣ್ಣದ (Multi Color) ದಿರಿಸು ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಹವಾ ಸೃಷ್ಟಿಸಿದೆ. ಮೂರು ದಿನಗಳ ಕಾಲ ನಡೆದ “ಮೇಲಾ ರೋಗ್ ಪಾರ್ಟಿ (Mela Rogue Party)’ಯಲ್ಲಿ ಹಲವು ಕಾರ್ಯಕ್ರಮಗಳು ನಡೆದಿದ್ದು, ಅದರಲ್ಲಿ ರಾಧಿಕಾ ಸ್ಟೈಲ್ (Style) ಮತ್ತು ಸೊಫಿಸ್ಟಿಕೇಷನ್ (Sophisticated) ಎರಡನ್ನೂ ಬಿಂಬಿಸುವ ಮಲ್ಟಿಕಲರ್ ಡ್ರೆಸ್ ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಅನಂತ್ ಅಂಬಾನಿ ಬರೋಬ್ಬರಿ 108 ಕೆಜಿ ಇಳಿಸಲು ಫಿಟ್‌ನೆಸ್ ಕೋಚ್ ಕೊಟ್ಟಿರೋ ವೈಟ್ ಲಾಸ್ ಟಿಪ್ಸ್ ಏನು?
ಹೆಣೆದಂತೆ ರೂಪಿಸಲಾಗಿರುವ ಡ್ರೆಸ್ ರಾಧಿಕಾ ಅವರಿಗೆ ಬಹಳ ಚೆನ್ನಾಗಿ ಹೊಂದಾಣಿಕೆಯಾಗಿತ್ತು. ಪುಟ್ಟ ಮಕ್ಕಳಂತೆ ಅತ್ತಿಂದಿತ್ತ ಓಡಾಡುತ್ತಿರುವುದು ಎಲ್ಲರನ್ನೂ ಮುದಗೊಳಿಸಿತ್ತು. ಹಬ್ಬದ ಸಮಯದಲ್ಲಿ ಧರಿಸಬಹುದಾದ ಗ್ಲಾಮರಸ್ ಉಡುಗೆಗೆ ಈಗ ನೆಟ್ಟಿಗರು ಫಿದಾ ಆಗಿದ್ದಾರೆ. ರಾಧಿಕಾ ಅವರ ಅತ್ಯುತ್ತಮ ಆಯ್ಕೆಗೆ ಫ್ಯಾಷನ್ (Fashion) ಲೋಕ ಮೆಚ್ಚುಗೆ ಸೂಸಿದೆ.
ಬಹುವರ್ಣದಲ್ಲಿ ಮದುವಣಗಿತ್ತಿ
ಮಣಿಗಳಿಂದ ಕೂಡಿದ, ಬಹುವರ್ಣದ ಡ್ರೆಸ್ ಅನ್ನು ವಿನ್ಯಾಸ ಮಾಡಿದರು ಆಶಿಶ್ ಗುಪ್ತಾ. ಇದೊಂದು ಔಟ್ ಫಿಟ್ (Out Fit) ನಂತೆ ಭಾಸವಾಗದೇ ಸಂತೋಷದ ಅಭಿವ್ಯಕ್ತಿಯಂತೆ ಕಂಡುಬರುತ್ತಿದ್ದುದು ವಿಶೇಷ. ವಿವಾಹಪೂರ್ವ (Pre Wedding) ಕಾರ್ಯಕ್ರಮಗಳ ಜೋಶ್ ಅನ್ನು ಬಿಂಬಿಸುವಲ್ಲಿ ಈ ಡ್ರೆಸ್ ಸಫಲವಾಯಿತು. ಹಲವು ಪದರಗಳಲ್ಲಿದ್ದ ಬಹುವರ್ಣ ರಾಧಿಕಾ ಮರ್ಚೆಂಟ್ ಅವರ ಡೈನಮಿಕ್ ಗುಣವನ್ನು ಹಾಗೂ ಹೊಳಪಿನ ಚೆಲುವನ್ನು ಎತ್ತಿ ಹಿಡಿಯುವಲ್ಲಿ ಹಿಂದೆ ಬೀಳಲಿಲ್ಲ. ವಾತಾವರಣದ ಸಂಭ್ರಮಕ್ಕೆ ಮತ್ತಷ್ಟು ಚೆಲುವಿನ ಲುಕ್ ನೀಡುವಲ್ಲಿ ಯಶಸ್ವಿಯಾಯಿತು. ರಾಧಿಕಾ ಅವರ ಒಟ್ಟಾರೆ ಲುಕ್ (Look)ಗೆ ಮತ್ತಷ್ಟು ಸೊಗಸಾದ ಸ್ಪರ್ಶ ನೀಡಿತು. ಒಟ್ಟಿನಲ್ಲಿ ಈ ಡ್ರೆಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಥರಥರದ ಕಾಮೆಂಟ್ ಗಳು ಹರಿದು ಬರುತ್ತಿವೆ.
Anant Ambani Wedding: ಸಾಮಾನ್ಯರಿಗೂ ಆತಿಥ್ಯ ನೀಡಿದ ಕುಬೇರ..! ಜಾಮ್‌ನಗರದಲ್ಲಿ 145 ವಿಮಾನಗಳು ಲ್ಯಾಂಡ್..!
ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಇದನ್ನು ಶೇರ್ ಮಾಡಲಾಗಿದ್ದು, “ಲಿವ್ ಇಟ್ ಇನ್ ಕಲರ್’ ಎನ್ನುವ ಕ್ಯಾಪ್ಷನ್ ನೀಡಲಾಗಿದೆ. ಈ ಡ್ರೆಸ್ ನಲ್ಲಿ ರಾಧಿಕಾ ವಜ್ರಕ್ಕಿಂತ ಹೆಚ್ಚು ಹೊಳಪಿನಿಂದ ಕಂಗೊಳಿಸುತ್ತಿದ್ದಾರೆ. ಅವರ ಲುಕ್ ಗೆ ಕಾರ್ಟಿಯರ್ ಸನ್ ಗ್ಲಾಸ್ ಕೂಡ ವಿಶೇಷ ಲುಕ್ ನೀಡಿದೆ. ಇಂತಹ ವಿಶೇಷ ದಿರಿಸನ್ನು ರೂಪಿಸಲು ಒಬ್ಬಿಬ್ಬರಲ್ಲ, ಇಡೀ ಒಂದು ಸ್ಟೈಲ್ ತಂಡವೇ ಶ್ರಮಿಸಿದೆ ಎನ್ನುವುದು ವಿಶೇಷ. ರಿಯಾ ಕಪೂರ್ ಮತ್ತು ಶಿರೀನ್ ನೇತೃತ್ವದ ತಂಡ ಇದರ ಹಿಂದಿದೆ. ಹೀಗಾಗಿ, ಫ್ಯಾಷನ್ ಪ್ರಿಯರಿಗೆ ಇಲ್ಲೊಂದು ನಿರಾಸೆಯಿದೆ. ಇಂತಹ ಮಾದರಿಯ ಡ್ರೆಸ್ ಯಾವುದೇ ಆನ್ ಲೈನ್ ಶಾಪ್ ನಲ್ಲಿ ಖರೀದಿಸಲು ದೊರೆಯುವುದಿಲ್ಲ.
ಡೂಡಲ್ ಸ್ಫೂರ್ತಿ
ರಾಧಿಕಾ ಅವರ ಈ ಡ್ರೆಸ್ ಕುರಿತು ಅಚ್ಚರಿದಾಯಕ ಸಂಗತಿಯೊಂದನ್ನು ಹಂಚಿಕೊಳ್ಳಲಾಗಿದೆ. ಡಿಸೈನರ್ ಆಶಿಶ್ ಅವರಿಗೆ ಡೂಡಲಿಂಗ್ (Doodling) ಬಗ್ಗೆ ಭಾರೀ ಮೋಹವಿದೆ. ಇದನ್ನವರು 2022ನೇ ವಿಂಟರ್ ಕಲೆಕ್ಷನ್ ನಲ್ಲಿ ಡೂಡಲ್ ನಂತೆ ಚಿತ್ರಿಸಿದ್ದರು. ಇದೇ ಡ್ರೆಸ್ ತಯಾರಿಕೆಗೆ ಸ್ಫೂರ್ತಿಯಾಗಿದೆ.