ಭಾರತ ಮೂಲದ ಶ್ರೀ ಸೈನಿ ಈಗ ಮಿಸ್ ವರ್ಲ್ಡ್ ಅಮೆರಿಕ

By Suvarna NewsFirst Published Oct 6, 2021, 4:24 PM IST
Highlights
  • ಪಂಜಾಬಿ ಮೂಲಕದ ಶ್ರೀ ಸೈನಿ ಮಿಸ್ ವರ್ಲ್ಡ್ ಅಮೆರಿಕ
  • ಪೇಸ್‌ಮೇಕಪರ್ ಅಳವಡಿಸಿದ್ದ, ಅಪಘಾತದಲ್ಲಿ ಮುಖ ಸುಟ್ಟುಕೊಂಡರೂ ಮಿಸ್ ವರ್ಲ್ಡ್ ಅಮೆರಿಕ ಗೆದ್ದ ದಿಟ್ಟೆ

ಮಿಸ್ ವರ್ಲ್ಡ್ ಅಮೇರಿಕಾ 2021(Miss World America) ರ ಕಿರೀಟವನ್ನು ಗೆದ್ದ ಮೊದಲ ಭಾರತೀಯ-ಅಮೇರಿಕನ್, ವಾಷಿಂಗ್ಟನ್‌ನ ಶ್ರೀ ಸೈನಿ ಅತ್ಯಂತ ವಿಶಿಷ್ಟ ಸ್ಪರ್ಧಾ ವಿಜೇತರಲ್ಲಿ ಒಬ್ಬರು. ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸೋ ಶ್ರೀ ಸೈನಿ ಅವರು 12 ನೇ ವಯಸ್ಸಿನಿಂದಲೂ ಶಾಶ್ವತ ಪೇಸ್‌ಮೇಕರ್ ಹೊಂದಿದ್ದರು.

ಆಕೆಯ ಜೀವನದಲ್ಲಿ ನಡೆದ ಒಂದು ಅಪಘಾತದಿಂದ ಮುಖದಾದ್ಯಂತ ಸುಟ್ಟಗಾಯಗಳಾಗಿತ್ತು. ಶ್ರೀ ಸೈನಿ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದಿದ್ದಾರೆ.

ಪ್ರಶ್ನೆಗೆ ತಪ್ಪಾಗಿ ಉತ್ತರಿಸಿದರೂ ಮಿಸ್ ವರ್ಲ್ಡ್ ಗೆದ್ದ ಪ್ರಿಯಾಂಕಾ ಚೋಪ್ರಾ!

ಆಕೆಯ ವೆಬ್‌ಸೈಟ್‌ನ ಪ್ರಕಾರ, ಶ್ರೀ 3 ನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. 12 ನೇ ವಯಸ್ಸಿನಲ್ಲಿ ಪೇಸ್‌ಮೇಕರ್ ಪಡೆದ ನಂತರ ಸೈನಿ ಎಂದಿಗೂ ನೃತ್ಯ ಮಾಡಲಾರಳು ಎಂದು ಹೇಳಿದ ನಂತರವೂ ನೃತ್ಯವನ್ನು ಮುಂದುವರಿಸಿದಳು. ತನ್ನ ಶಕ್ತಿಯನ್ನು ಮರಳಿ ಪಡೆಯಲು, ಶ್ರೀ ಹೆಚ್ಚು ಡ್ಯಾನ್ಸ್ ಕ್ಲಾಸ್ ತರಬೇತಿ ಪಡೆದರು. 6 ಗಂಟೆಗಳವರೆಗೆ ನೃತ್ಯ ಮಾಡುತ್ತಿದ್ದರು ಸೈನಿ. ಶ್ರೀ ಜಾಝ್, ಕ್ಲಾಗಿಂಗ್‌ನಲ್ಲಿ ತರಬೇತಿ ಪಡೆದಿದ್ದಾರೆ. ತನ್ನ ಕಾಲೇಜಿನ ಹಿಪ್ ಹಾಪ್ ತಂಡದಲ್ಲಿ ಡ್ಯಾನ್ಸ್ ಮಾಡಿದ್ದರು.

ಲಾಸ್ ಏಂಜಲೀಸ್ ನಲ್ಲಿರುವ ಮಿಸ್ ವರ್ಲ್ಡ್ ಅಮೇರಿಕಾ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಯಾನಾ ಹೇಡನ್ ಶ್ರೀ ಸೈನಿಗೆ ಕಿರೀಟ ತೊಡಿಸಿದರು. ಇವರು ಜಾಗತಿಕ ವೇದಿಕೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ ಮೊದಲ ಭಾರತೀಯ ಮೂಲದ ಸ್ಪರ್ಧಿಯೂ ಹೌದು.

ಕಿರೀಟ ತೊಡಿಸಿದ ನಂತರ ಮಾತನಾಡಿ, ಶ್ರೀ ಸೈನಿ ನಾನು ಖುಷಿಯಾಗಿದ್ದೇನೆ ಹಾಗೆಯೇ ತುಂಬಾ ನರ್ವಸ್ ಆಗಿದ್ದೇನೆ. ನನ್ನ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಈ ಗೌರವಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಮಿಸ್ ವರ್ಲ್ಡ್ ಅಮೆರಿಕಾದ ಅಧಿಕೃತ Instagram ಖಾತೆ ಈ ಸುದ್ದಿಯನ್ನು ಹಂಚಿಕೊಂಡಿದೆ. ಶ್ರೀ, ಪ್ರಸ್ತುತ ಮಿಸ್ ವರ್ಲ್ಡ್ ಅಮೇರಿಕಾ ವಾಷಿಂಗ್ಟನ್ MWA ನ್ಯಾಷನಲ್ ಬ್ಯೂಟಿ ವಿತ್ ಎ ಪರ್ಪಸ್ ಅಂಬಾಸಿಡರ್ ಎಂಬ ಪ್ರತಿಷ್ಠಿತ ಗೌರವ ಪಡೆದಿದ್ದಾರೆ. ಅವರ ಅನೇಕ ಸಾಧನೆಗಳ ಪೈಕಿ, ಅವರ ಕೆಲಸವನ್ನು ಯುನಿಸೆಫ್, ಡಾಕ್ಟರ್ಸ್ ಬಾರ್ಡರ್ಸ್, ಸುಸಾನ್ ಜಿ ಕೋಮೆನ್ ಮತ್ತು ಇತರ ಅನೇಕರು ಗುರುತಿಸಿದ್ದಾರೆ ಎಂದಿದ್ದಾರೆ.

click me!