"ಅವಂತ್ರ ಬೈ ಟ್ರೆಂಡ್ಸ್" ಆರಂಭಿಸಿದ ರಿಲಯನ್ಸ್ ರಿಟೇಲ್!

By Suvarna NewsFirst Published Sep 10, 2021, 4:37 PM IST
Highlights

* ಭಾರತದ ಅತಿದೊಡ್ಡ ರೀಟೇಲರ್ ಆದ ರಿಲಯನ್ಸ್ ರಿಟೇಲ್

* ಮಹಿಳೆಯರಿಗಾಗಿ ವಿಶಿಷ್ಟವಾದ ಅನುಭವಾತ್ಮಕ ಮತ್ತು ಕೈಗೆಟುಕುವ ಬೆಲೆಯ ಎಥ್ನಿಕ್ ವೇರ್ ಡೆಸ್ಟಿನೇಶನ್ ಸ್ಟೋರ್

* "ಅವಂತ್ರ ಬೈ ಟ್ರೆಂಡ್ಸ್" ಆರಂಭಿಸಿದ ರಿಲಯನ್ಸ್ ರಿಟೇಲ್

ಬೆಂಗಳೂರು(ಸೆ.10) ಭಾರತದ ಅತಿದೊಡ್ಡ ರೀಟೇಲರ್ ಆದ ರಿಲಯನ್ಸ್ ರಿಟೇಲ್, ಮಹಿಳೆಯರಿಗಾಗಿ ವಿಶಿಷ್ಟವಾದ ಅನುಭವಾತ್ಮಕ ಮತ್ತು ಕೈಗೆಟುಕುವ ಬೆಲೆಯ ಎಥ್ನಿಕ್ ವೇರ್ ಡೆಸ್ಟಿನೇಶನ್ ಸ್ಟೋರ್, 'ಅವಂತ್ರ ಬೈ ಟ್ರೆಂಡ್ಸ್'ನ ಪ್ರಾರಂಭವನ್ನು ಘೋಷಿಸಿದೆ.

ಬೆಂಗಳೂರಿನ ಜಯನಗರದಲ್ಲಿರುವ ಅಶೋಕ ಪಿಲ್ಲರ್ ಸಮೀಪ ಇಂದು ಆರಂಭವಾದ "ಅವಂತ್ರ ಬೈ ಟ್ರೆಂಡ್ಸ್" ಫ್ಲ್ಯಾಗ್‌ಶಿಪ್ ಮಳಿಗೆಯು 9,500 ಚದರ ಮೀಟರ್‌ನಷ್ಟು ವಿಶಾಲವಾಗಿದೆ. ಹಾಗೂ ರಿಲಯನ್ಸ್ ಟ್ರೆಂಡ್ಸ್‌ನ ಮೂಲ ಮಳಿಗೆಯ ಪಕ್ಕದಲ್ಲೇ ಇದೆ. ಅತ್ಯುತ್ತಮ ಸ್ಟೋರ್ ವಾತಾವರಣ, ಪರಿಣತರ ನೆರವು ಅಥವಾ ಸ್ವಸಹಾಯಗಳ ನಡುವೆ ನವೀನ ರೀಟೇಲ್ ಅನುಭವ, ಸೀರೆಗಳ ಡ್ರೇಪ್ ಸ್ಟೈಲಿಂಗ್ ಸ್ಟೇಷನ್, ನಾನ್-ಶಾಪರ್ ಲೌಂಜ್, ಪೂರಕ ಉತ್ಪನ್ನ ವರ್ಗಗಳು ಹಾಗೂ ಬ್ಲೌಸ್ ಹೊಲಿಗೆ, ಸೀರೆ ಫಿನಿಶಿಂಗ್, ಟೈಲರಿಂಗ್ ಸೇವೆಗಳು ಮತ್ತು ಇನ್ನೂ ಅನೇಕ ಸೇವೆಗಳ ಸಮಗ್ರ ಕೊಡುಗೆಯೊಂದಿಗೆ ಇದು ಸಮಕಾಲೀನ ಭಾರತೀಯ ಮಹಿಳೆಯರ  ಶಾಪಿಂಗ್ ಅನುಭವವನ್ನು ಮರುವ್ಯಾಖ್ಯಾನಿಸುತ್ತಿದೆ.

'ಅವಂತ್ರ ಬೈ ಟ್ರೆಂಡ್ಸ್' ಎಂಬುದು ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಹಾಗೂ "ಭಾರತೀಯ" ಮತ್ತು "ಎಥ್ನಿಕ್" ಆದ ಎಲ್ಲವನ್ನೂ ಸಂಭ್ರಮಿಸುವ 25-40 ವರ್ಷ ವಯಸ್ಸಿನ ಸಮಕಾಲೀನ ಭಾರತೀಯ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ಒಂದು ಪರಿಕಲ್ಪನೆಯಾಗಿದೆ.

ಅತ್ಯುತ್ತಮ ಫ್ಯಾಷನ್, ಗುಣಮಟ್ಟ ಮತ್ತು ಬೆಲೆಯ ಪ್ರಾಮಾಣಿಕತೆಯ ಬದ್ಧತೆಯೊಂದಿಗೆ ವೈವಿಧ್ಯಮಯ ಜವಳಿ ಕರಕುಶಲ ಹಾಗೂ ಅತ್ಯುತ್ತಮ ಎಥ್ನಿಕ್ ಉಡುಗೆ ಬ್ರಾಂಡ್‌ಗಳ ನೆಲೆಯಾದ "ಅವಂತ್ರ ಬೈ ಟ್ರೆಂಡ್ಸ್" ಒಂದು ಸಮಗ್ರ ಅನುಭವಾತ್ಮಕ ಮಳಿಗೆಯಾಗಿದೆ. ದೇಶದೆಲ್ಲೆಡೆಯ ಸೀರೆಗಳು, ಬ್ಲೌಸ್, ಕುರ್ತಾಗಳು, ಆಭರಣಗಳು, ಪಾದರಕ್ಷೆಗಳು ಹಾಗೂ ಪರಿಕರಗಳಿರುವ ಇದು ಮಹಿಳೆಯರ ಎಥ್ನಿಕ್ ಉಡುಪುಗಳಿಗೆ ಒನ್-ಸ್ಟಾಪ್ ಗಮ್ಯಸ್ಥಾನವಾಗಿದ್ದು ಅಂಗಡಿಯಲ್ಲಿಯೇ ಅನುಕೂಲಕರವಾದ ಟೈಲರಿಂಗ್ ಸೇವೆಗಳನ್ನೂ ಒದಗಿಸುತ್ತದೆ.

ದೇಶದಲ್ಲಿ ಸೀರೆ ಶಾಪಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸುವ ಉದ್ದೇಶದಿಂದ ರೂಪಿಸಲಾದ ಈ ಮಳಿಗೆಯು ರಿಮಯ, ಅನಂತಿಕಾ, ವರ್ಜಾ, ಅನುಕ್ತ, ಕೃತ, ಅವಾಸ, ಸಿಯಾಹಿ, ಸ್ವದೇಶ್, ರಿಲಯನ್ಸ್ ಜ್ಯುವೆಲ್ಸ್, ಹೈ-ಆಟಿಟ್ಯೂಡ್‌, ಫಿಗ್, ಜ಼ಿವಾಮೆ ಮುಂತಾದ ರಿಲಯನ್ಸ್ ರೀಟೇಲ್‌ನ ಅತ್ಯುತ್ತಮ ಫ್ಯಾಶನ್ ಬ್ರ್ಯಾಂಡ್‌ಗಳ ಜೊತೆಗೆ ಪೋತೀಸ್, ರುದ್ರಕಾಶೀ ಫ್ರಮ್ ಮೈಸೂರು ಸ್ಯಾರಿ ಉದ್ಯೋಗ್, ಮಂದಸ್ಮಿತ, ಸ್ಪ್ಯಾನ್, ಸುಖಿ, ವಾವ್, ಎಫ್‌ಕಾಮ್ ಮತ್ತು ಇನ್ನೂ ಅನೇಕ ಪಾಲುದಾರ ಬ್ರ್ಯಾಂಡ್‌ಗಳ ಉತ್ಪನ್ನಗಳ ಸಾಟಿಯಿಲ್ಲದ ಆಯ್ಕೆಯನ್ನು ನೀಡುತ್ತದೆ.

ಉದ್ಘಾಟನೆಯ ಕುರಿತು ಮಾತನಾಡಿದ  ರಿಲಯನ್ಸ್ ರಿಟೇಲ್ ಲಿಮಿಟೆಡ್‍ನ ಅಧ್ಯಕ್ಷರು ಮತ್ತು ಸಿಇಒ - ಫ್ಯಾಷನ್ ಮತ್ತು ಜೀವನಶೈಲಿ, ಶ್ರೀ ಅಖಿಲೇಶ್ ಪ್ರಸಾದ್, "ರಿಲಯನ್ಸ್ ರಿಟೇಲ್ ನ ಎಫ್ ಆಂಡ್ ಎಲ್ ವಿಭಾಗದ ಈ ಉಪಕ್ರಮವು ಭಾರತೀಯ ಉಡುಗೆ ವಿಭಾಗದಲ್ಲಿ ನಮ್ಮ ಕೊಡುಗೆಯನ್ನು ಸಂಪೂರ್ಣಗೊಳಿಸುತ್ತದೆ. ಈ ಫಾರ್ಮ್ಯಾಟ್‌ನಲ್ಲಿನ ಮೌಲ್ಯಗಳು ನಮ್ಮ ಇತರ ಕೊಡುಗೆಗಳಲ್ಲಿ ಕಂಡುಬರುವ ಮೌಲ್ಯಗಳನ್ನು ಪುನರಾವರ್ತಿಸುತ್ತದೆ - ಆಶ್ಚರ್ಯಕರ ಬೆಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳ ನಂಬಲಾಗದ ಶ್ರೇಣಿ. ನಮ್ಮ ಗ್ರಾಹಕರು ದೇಶದ ಉದ್ದಗಲದಿಂದ ಆಯ್ದ ಸೀರೆಗಳು, ಎಥ್ನಿಕ್ ಉಡುಗೆಗಳು, ಆಭರಣಗಳು, ಪಾದರಕ್ಷೆಗಳು, ಒಳ ಉಡುಪುಗಳು ಮತ್ತು ಪರಿಕರಗಳ ಸಂಪೂರ್ಣ ಕೊಡುಗೆಯನ್ನು ಇಲ್ಲಿ ನೋಡಬಹುದು. ಇವೆಲ್ಲವನ್ನೂ ಅವರು ಸ್ನೇಹಪರ ಮತ್ತು ಆಧುನಿಕ ಮಳಿಗೆಯಲ್ಲಿ ಉತ್ತಮ ಸೇವಾ ಗುಣಮಟ್ಟದೊಂದಿಗೆ ಪಡೆಯಲಿದ್ದಾರೆ." ಎಂದು ಹೇಳಿದರು.

"ಅವಂತ್ರ ಬೈ ಟ್ರೆಂಡ್ಸ್" ಪ್ರಸ್ತುತ 25+ ಸೀರೆ ಕ್ರಾಫ್ಟ್ ಕ್ಲಸ್ಟರ್‌ಗಳು ಮತ್ತು 11 ರಾಜ್ಯಗಳ 80+ ನೇಕಾರರು, ವಿನ್ಯಾಸಕಾರರು, ಕುಶಲಕರ್ಮಿಗಳು ಮತ್ತು ತಯಾರಕರೊಂದಿಗೆ ಕೆಲಸಮಾಡುತ್ತಿದ್ದು, ಅವರಲ್ಲಿ 10 ಪ್ರಶಸ್ತಿ ವಿಜೇತ ಕುಶಲಕರ್ಮಿಗಳೂ ಇದ್ದಾರೆ.

ಸೀರೆಗಳ ಬೆಲೆ ದೈನಂದಿನ-ಉಡುಗೆ ಮತ್ತು ಸಾಂದರ್ಭಿಕ-ಉಡುಗೆಯ ಸೀರೆ ವಿಭಾಗಗಳಲ್ಲಿ ರೂ.399ರಿಂದ ರೂ.39,999ವರೆಗೂ ಇದ್ದು ಸಿಲ್ಕ್ ಸೀರೆಗಳು, ಕರಕುಶಲ ಸೀರೆಗಳು, ಕಾಟನ್ ಸೀರೆಗಳು, ಫ್ಯಾನ್ಸಿ ಸೀರೆಗಳು ಹಾಗೂ ಇನ್ನೂ ಬಹಳಷ್ಟರ ವ್ಯಾಪಕ ಶ್ರೇಣಿಯನ್ನು ಒಳಗೊಂಡಿದೆ. ಸೀರೆ ಅಲ್ಲದ ವರ್ಗಗಳಲ್ಲಿ ಕೊಡುಗೆಗಳ ಬೆಲೆಗಳು ರೂ. 99ರಿಂದ ರೂ. 1,999ರವೆರೆಗೂ ಇದೆ.

ಸೀರೆಗಳ ವಿಭಾಗವು ರೂ. 50,000 ಕೋಟಿಗೂ ಹೆಚ್ಚು ಮೌಲ್ಯದ ಮಾರುಕಟ್ಟೆಯಾಗಿದೆ ಮತ್ತು ಇಲ್ಲಿ "ಅವಂತ್ರ ಬೈ ಟ್ರೆಂಡ್ಸ್" ಮೊದಲ ಪ್ಯಾನ್-ಇಂಡಿಯಾ ಬ್ರಾಂಡ್ ಆಗಿ ಸ್ಥಾನ ಪಡೆದಿದೆ. ಇತರ ರಾಜ್ಯಗಳಿಗೆ ವಿಸ್ತರಿಸುವ ಮತ್ತು ದೇಶಾದ್ಯಂತ ಸೀರೆ ಶಾಪಿಂಗ್ ಅನುಭವವನ್ನು ಮರು-ವ್ಯಾಖ್ಯಾನಿಸುವ ಮೊದಲು  ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಇದು ದಕ್ಷಿಣದ ಎಲ್ಲ ರಾಜ್ಯಗಳ ಮೆಟ್ರೋ, 1, 2 ಹಾಗೂ 3ನೇ ಶ್ರೇಣಿಯ ಮಾರುಕಟ್ಟೆಗಳಲ್ಲಿ ಸುಮಾರು 30 ಮಳಿಗೆಗಳನ್ನು ಆರಂಭಿಸುವ ಯೋಜನೆ ಹೊಂದಿದೆ.

ಟ್ರೆಂಡ್ಸ್ ಬಗ್ಗೆ:

ಟ್ರೆಂಡ್ಸ್ ಭಾರತದ ಅತಿದೊಡ್ಡ ದೇಶವ್ಯಾಪಿ ಫ್ಯಾಶನ್ ರೀಟೇಲ್ ಚೈನ್ ಆಗಿದೆ. ಟ್ರೆಂಡ್ಸ್ ತನ್ನದೇ ಆದ ಫ್ಯಾಷನ್ ಬ್ರ್ಯಾಂಡ್‌ಗಳು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳ ವೈವಿಧ್ಯಮಯ ಪೋರ್ಟ್‌ಫೋಲಿಯೋ  ಮೂಲಕ ಮಹಿಳೆಯರ, ಪುರುಷರ, ಮಕ್ಕಳ ಉಡುಪುಗಳು ಹಾಗೂ ಫ್ಯಾಷನ್ ಪರಿಕರಗಳಾದ್ಯಂತ ಸೊಗಸಾದ, ಉತ್ತಮ-ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತದೆ. ಟ್ರೆಂಡ್ಸ್‌ನ ಪ್ರತಿ ಮಳಿಗೆಯನ್ನೂ ವಿಶಾಲವಾದ ಹಜಾರಗಳು, ಸಂಯೋಜಿತ ಪ್ರದರ್ಶನಗಳು ಮತ್ತು ಉತ್ತಮ ತರಬೇತಿ ಪಡೆದ ಫ್ಯಾಶನ್ ವೃತ್ತಿಪರರ ಮೂಲಕ ಇಡೀ ಕುಟುಂಬಕ್ಕೆ ಒಂದು ಅನನ್ಯ ಶಾಪಿಂಗ್ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ರಿಲಯನ್ಸ್ ರಿಟೇಲ್ ಬಗ್ಗೆ:

ರಿಲಯನ್ಸ್ ರಿಟೇಲ್ ಲಿಮಿಟೆಡ್, RIL ಸಮೂಹದ ಅಡಿಯಲ್ಲಿರುವ ಎಲ್ಲ ರಿಟೇಲ್ ಕಂಪನಿಗಳ ಹೋಲ್ಡಿಂಗ್  ಕಂಪನಿಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‍ನ (RRVL) ಅಂಗಸಂಸ್ಥೆಯಾಗಿದೆ. ಮಾರ್ಚ್ 31, 2021ಕ್ಕೆ ಕೊನೆಗೊಂಡ ವರ್ಷದಲ್ಲಿ RRVL 157,629 ಕೋಟಿ ರೂ.ಗಳ (21.6 ಬಿಲಿಯನ್ ಡಾಲರ್) ಒಟ್ಟಾರೆ ವಹಿವಾಟು ಹಾಗೂ 9,789 ಕೋಟಿ ರೂ.ಗಳ (1.3 ಬಿಲಿಯನ್ ಡಾಲರ್) EBITDA ಅನ್ನು ವರದಿಮಾಡಿದೆ.

ರಿಲಯನ್ಸ್ ರೀಟೇಲ್, ಅತ್ಯಂತ ದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಭಾರತದ ಅತಿದೊಡ್ಡ ಮತ್ತು ಅತಿಹೆಚ್ಚು ಲಾಭದಾಯಕ ರೀಟೇಲರ್ ಆಗಿದೆ. ಡೆಲಾಯ್ಟ್‌ನ ಗ್ಲೋಬಲ್ ಪವರ್ಸ್ ಆಫ್ ರಿಟೇಲಿಂಗ್ 2021 ಸೂಚ್ಯಂಕದಲ್ಲಿ ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರೀಟೇಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅಗ್ರ ಜಾಗತಿಕ ರೀಟೇಲರ್‌ಗಳ ಪಟ್ಟಿಯಲ್ಲಿ ಇದು 53 ನೇ  ಸ್ಥಾನದಲ್ಲಿದೆ ಮತ್ತು ಟಾಪ್ 100ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ರೀಟೇಲರ್‌ ಆಗಿದೆ.

click me!