
ಮನುಷ್ಯರ ಸ್ವಭಾವ, ವರ್ತನೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತೆ. ಯಾರ ವ್ಯಕ್ತಿತ್ವ ಹೇಗೆ ಎನ್ನುವುದು ಮೇಲ್ನೋಟಕ್ಕೆ ತಿಳಿಯೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ಮಾಡಿದವರು ಜಾತಕಗಳನ್ನು ನೋಡಿ ಯಾರ ಸ್ವಭಾವ ಹೇಗೆ ಎನ್ನುವುದನ್ನು ಹೇಳುತ್ತಾರೆ. ಹಾಗೆಯೇ ಕೆಲವರು ಕೈ ಮತ್ತು ಮುಖವನ್ನು ನೋಡಿ, ಕವಡೆ ಹಾಕಿ ಮುಂತಾದ ಕ್ರಮಗಳಿಂದ ಸಂಪೂರ್ಣ ಜಾತಕವನ್ನು ಹೇಳುತ್ತಾರೆ.
ನಮ್ಮ ಜಾತಕ, ಕೈ ಮತ್ತು ಮುಖಗಳು ಹೇಗೆ ನಮ್ಮ ಸ್ವಭಾವವನ್ನು ಸೂಚಿಸುತ್ತದೆಯೋ ಹಾಗೆಯೇ ಕೂದಲಿನಿಂದ ಕೂಡ ಯಾರು ಹೇಗೆ ಎನ್ನುವುದನ್ನು ಸುಲಭವಾಗಿ ತಿಳಿಯಬಹುದು. ಒಬ್ಬರಿಗೆ ಉದ್ದನೆಯ ಕೂದಲಿರುತ್ತೆ, ಇನ್ನೊಬ್ಬರು ಗಿಡ್ಡ ಕೂದಲ (Hair)ನ್ನು ಹೊಂದಿರುತ್ತಾರೆ. ಇನ್ಕೆಲವರು ಬಾಯ್ ಕಟ್ (Boy Cut) ಮಾಡಿಸಿಕೊಂಡಿರುತ್ತಾರೆ. ಹೀಗೆ ವಿಭಿನ್ನ ರೀತಿಯ ಕೂದಲನ್ನು ಹೊಂದಿದವರ ವ್ಯಕ್ತಿತ್ವವೂ ಭಿನ್ನವಾಗಿಯೇ ಇರುತ್ತದೆ. ಯಾರ ವ್ಯಕ್ತಿತ್ವ ಹೇಗೆ ಎನ್ನುವುದನ್ನು ಅವರ ಕೂದಲಿನಿಂದಲೇ ನಾವು ಸುಲಭವಾಗಿ ತಿಳಿದುಕೊಳ್ಳಬಹುದು.
ಇವರು ಸೆಲ್ವರಾಜ್ ಅಲ್ಲ ಸೆವೆನ್ ರಾಜ್: 7 ಎಂದರೆ ಇಂಪು : ಮನೆಯಲ್ಲಿರೋದೆಲ್ಲಾ ಬರೀ ಬಿಳಿ ಕೆಂಪು
ಬಾಯ್ ಕಟ್ ಹೇರ್ ಹೊಂದಿರುವವರ ವ್ಯಕ್ತಿತ್ವ ಹೀಗಿರುತ್ತೆ : ಹೆಣ್ಣುಮಕ್ಕಳು ತಮ್ಮ ಕೂದಲನ್ನು ಹೆಚ್ಚು ಇಷ್ಟಪಡುತ್ತಾರೆ. ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ಬಗೆಯ ಹೇರ್ ಕಟಿಂಗ್ ಮಾಡಿಕೊಳ್ಳುತ್ತಾರೆ. ಕೆಲವರು ಲಾಂಗ್ ಹೇರ್ ಇಷ್ಟಪಟ್ಟರೆ ಕೆಲವರು ಶಾರ್ಟ್ ಹೇರ್, ಬಾಯ್ ಕಟ್ ಅನ್ನು ಇಷ್ಟಪಡುತ್ತಾರೆ. ಬಾಯ್ ಕಟ್ ಎಲ್ಲರಿಗೂ ಸೂಟ್ ಆಗೋದಿಲ್ಲ. ಹಾಗೇ ಎಲ್ಲರೂ ಈ ಹೇರ್ ಸ್ಟೈಲ್ ಅನ್ನು ಇಷ್ಟಪಡೋದಿಲ್ಲ. ಬಾಯ್ ಕಟ್ ಹೇರ್ ಸ್ಟೈಲ್ ಹೊಂದಿದ ಮಹಿಳೆಯರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದವರಾಗಿರುತ್ತಾರೆ ಮತ್ತು ಇವರು ಹೆಚ್ಚು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ಹೀಗೆ ಚಿಕ್ಕ ಕೂದಲನ್ನು ಹೊಂದಿದ ಹೆಣ್ಣುಮಕ್ಕಳು ನಿರ್ಭಯ ಮತ್ತು ಧೈರ್ಯಶಾಲಿಗಳೂ ಆಗಿರುತ್ತಾರೆ. ಇಂತಹ ಮಹಿಳೆಯರು ಸಮಾಜದ ಕಟ್ಟುಪಾಡು, ನಿಯಮಗಳನ್ನು ಅನುಸರಿಸುವುದಿಲ್ಲ. ಇವರು ಜೀವನದಲ್ಲಿ ಎಂತಹ ಅಪಾಯ ಬಂದರೂ ಎದುರಿಸಲು ಸಿದ್ಧರಿರುತ್ತಾರೆ. ಬಾಯ್ ಕಟ್ ಹೇರ್ ಹೊಂದಿದವರ ಬುದ್ಧಿಯೂ ಚುರುಕಾಗಿರುತ್ತದೆ.
ಬಾಬ್ ಕಟ್ ಕೂದಲಿನವರು ಈ ರೀತಿಯ ಸ್ವಭಾವ ಹೊಂದಿರ್ತಾರೆ : ಬಾಬ್ ಕಟ್ ಹೇರ್ ಸ್ಟೈಲ್ ನಲ್ಲಿ ಕೂಡ ಅನೇಕ ವಿಧಗಳಿವೆ. ಎಲ್ಲರಿಗೂ ಒಂದೇ ರೀತಿಯ ಬಾಬ್ ಕಟ್ ಸರಿಹೊಂದುವುದಿಲ್ಲ. ಮುಖದ ಆಕಾರಕ್ಕೆ ಹೊಂದುವಂತ ಹೇರ್ ಸ್ಟೈಲ್ ಮಾಡಿಸಿಕೊಂಡರೆ ಅದರಿಂದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಇಂದು ಅನೇಕ ಯುವತಿಯರು ಹಾಗೂ ಮಹಿಳೆಯರು ಬಾಬ್ ಕಟ್ ಕೂದಲನ್ನು ಹೊಂದಿದ್ದಾರೆ. ಬಾಬ್ ಕಟ್ ಕೂದಲನ್ನು ಹೊಂದಿದವರು ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ. ಇಂತಹ ಕೂದಲನ್ನು ಹೊಂದಿರುವವರು ಎಲ್ಲ ರೀತಿಯ ಪರಿಸ್ಥಿತಿಗಳನ್ನೂ ಚೆನ್ನಾಗಿ ನಿಭಾಯಿಸುತ್ತಾರೆ. ಬಾಬ್ ಕಟ್ ಕೂದಲಿನ ಮಹಿಳೆಯರು ಶಾಂತ ಸ್ವಭಾವದವರಾಗಿರುತ್ತಾರೆ.
ಫ್ಯಾಷನ್ ಐಕಾನ್ ನೀತಾ ಅಂಬಾನಿ ಧರಿಸಿದ್ದ ಈ ವಾಚ್ ಬೆಲೆ ಎಷ್ಟು ಗೊತ್ತಾ?
ಭುಜದ ತನಕ ಕೂದಲನ್ನು ಹೊಂದಿರುವವರು ಹೀಗಿರ್ತಾರೆ : ತೀರ ಗಿಡ್ಡವೂ ಅಲ್ಲದ ಹಾಗೂ ಉದ್ದವೂ ಅಲ್ಲದ ಹೇರ್ ಸ್ಟೈಲ್ ಇದು. ಇತ್ತೀಚೆಗೆ ಅನೇಕ ಮಂದಿ ಮಹಿಳೆಯರ ಕೂದಲು ಭುಜದ ತನಕ ಇರುತ್ತೆ. ಹೆಚ್ಚಿನ ಮಹಿಳೆಯರು ಈ ರೀತಿಯ ಕೂದಲನ್ನೇ ಇಷ್ಟಪಡುತ್ತಾರೆ.ಭುಜದ ತನಕ ಕೂದಲನ್ನು ಹೊಂದಿರುವವರು ಸಕಾರಾತ್ಮಕ ವಿಚಾರ ಮಾಡುವ ಮಹಿಳೆಯರಾಗಿರುತ್ತಾರೆ. ಇಂತಹ ಮಹಿಳೆಯರು ಹೋದ ಕಡೆಯಲ್ಲೆಲ್ಲ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತಾರೆ. ಮುಕ್ತ ಮನಸ್ಸಿನಿಂದ ಮಾತನಾಡುವ ಇವರನ್ನು ಎಲ್ಲರೂ ಇಷ್ಟಪಡುತ್ತಾರೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಹೇಗೆ ಎದುರಿಸಬೇಕೆನ್ನುವುದು ಇವರಿಗೆ ಚೆನ್ನಾಗಿ ತಿಳಿದಿದೆ.
ಉದ್ದನೆಯ ಕೂದಲಿದ್ದವರ ವ್ಯಕ್ತಿತ್ವ ಹೀಗಿರುತ್ತದೆ : ಇತ್ತೀಚೆಗೆ ಉದ್ದನೆಯ ಕೂದಲು ಹೊಂದಿರುವವರು ತೀರ ಕಡಿಮೆ. ಉದ್ದನೆಯ ಕೂದಲನ್ನು ಹೊಂದಿದ ಮಹಿಳೆಯರು ಎಲ್ಲರ ಗಮನವನ್ನು ತಮ್ಮೆಡೆ ಸೆಳೆಯುತ್ತಾರೆ. ಉದ್ದನೆಯ ಕೂದಲು ಇರುವವರು ಸ್ವತಂತ್ರ ಹಾಗೂ ಸಾಹಸ ಸ್ವಭಾವದ ಮಹಿಳೆಯರಾಗಿರುತ್ತಾರೆ. ಇವರು ದೂರದೃಷ್ಟಿ ಮತ್ತು ದಯೆ ಉಳ್ಳವರಾಗಿರುತ್ತಾರೆ ಹಾಗೂ ಕಲೆ ಮತ್ತು ಪ್ರಕೃತಿ ಸೌಂದರ್ಯವನ್ನು ಆರಾಧಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.