ಉದ್ಯಮಿ ಮುಕೇಶ್ ಅಂಬಾನಿಯವರ ಬಳಿ ಇರುವ ವ್ಯಾನೆಟಿ ಬ್ಯಾಗ್ ದರ ಎಷ್ಟು ಗೊತ್ತಾ? ಇದರಲ್ಲಿ ಒಂದು ಬಂಗ್ಲೆ ಖರೀಸ್ಬೋದು
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ (Mukesh ambani) ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ನಿಜವಾದ ಫ್ಯಾಷನಿಸ್ಟ್ ಆಗಿದ್ದು, ತಮ್ಮ ಫ್ಯಾಷನ್ ವಿಹಾರಗಳಿಂದ ಜನರನ್ನು ಬೆರಗುಗೊಳಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಅದು ಅವರ ಉಡುಗೆ, ಪಾದರಕ್ಷೆಗಳು ಅಥವಾ ಬ್ಯಾಗ್‌ಗಳು... ಹೀಗೆ ನೀತಾ ಅಂಬಾನಿಯವರ ಸ್ಟೈಲ್ ಸದಾ ಸುದ್ದಿಯಲ್ಲಿ ಇರುತ್ತದೆ. ಅವರು ತಮ್ಮ ವಿಶಿಷ್ಟ ಸ್ಟೈಲ್ ಸ್ಟೇಟ್ಮೆಂಟ್ ಮೂಲಕ ಜನರ ಬಾಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಅವರು ತೊಡುವ ದುಬಾರಿ ಬಟ್ಟೆಗಳಿಂದ ಹಿಡಿದು ಆಭರಣಗಳವರೆಗೆ ಅವರ ಸ್ಟೈಲ್ ಸ್ಟೇಟ್ಮೆಂಟ್ ಫ್ಯಾಷನ್ ಪ್ರಿಯರನ್ನು ಬೆರಗಾಗಿಸುತ್ತದೆ. ಇತ್ತೀಚಿಗೆ ನೀತಾ ಅವರು ಹೈ ಪ್ರೊಫೈಲ್ ಮದುವೆಯೊಂದರಲ್ಲಿ ಧರಿಸಿದ್ದ ಪಚ್ಚೆ ರತ್ನಗಳ ಹೊದಿಕೆಯಿರುವ ಸೀರೆಯನ್ನು ವಿಶ್ವದ ಅತ್ಯಂತ ದುಬಾರಿ ಸೀರೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ದುಬಾರಿ ಬೆಲೆಯ ಡಿಸೈನರ್ (Designer) ಉಡುಪುಗಳನ್ನು ಧರಿಸಿದ್ದ ನೀತಾ ಅವರು, 2015ರಲ್ಲಿ ಮಾಜಿ ರಾಜ್ಯಸಭಾ ಸಂಸದ ಪರಿಮಳ ನಾಥ್ವಾಣಿ ಅವರ ಪುತ್ರನ ಮದುವೆಯಲ್ಲಿ ಪಚ್ಚೆ ರತ್ನಗಳು ಹಾಗೂ ಇತರ ಹರುಳುಗಳಿಂದ ಕೂಡಿದ ಗುಲಾಬಿ ಬಣ್ಣದ ವಿಶ್ವದ ಅತ್ಯಂತ ದುಬಾರಿ ಸೀರೆಯನ್ನು ಧರಿಸಿದ್ದರು. ಗುಲಾಬಿ ಬಣ್ಣದ ಸೀರೆಗೆ ನಿಜವಾದ ಮುತ್ತುಗಳು, ಪಚ್ಚೆಗಳು, ಮಾಣಿಕ್ಯ ಮತ್ತು ಇತರ ರತ್ನಗಳಿಂದ ಕೈಯಲ್ಲಿ ಕಸೂತಿ ಮಾಡಲಾಗಿದೆ. ಈ ಸೀರೆಯ ಗಮನ ಸೆಳೆಯುವ ವೈಶಿಷ್ಟ್ಯವೆಂದರೆ ಕುಪ್ಪಸ. ಇದರಲ್ಲಿ ನಾಥದ್ವಾರದ ಕೃಷ್ಣನ ಚಿತ್ರವನ್ನು ರೂಪಿಸಲಾಗಿತ್ತು. ಶಿವಲಿಂಗಂ ಅವರು ಡಿಸೈನ್ ಮಾಡಿದ ಈ ದುಬಾರಿ ಸೀರೆಯನ್ನು ಕಾಂಚೀಪುರಂನ 35 ಮಹಿಳಾ ಕುಶಲಕರ್ಮಿಗಳು ರಚಿಸಿದ್ದಾರೆ. ಇದರ ಬೆಲೆ 40 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿತ್ತು.
ಇದೀಗ ನೀತಾ ಮುಖೇಶ್ ಅಂಬಾನಿ (Nita Ambani) ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭ ಒಂದರಲ್ಲಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದ ಮೂರನೇ ದಿನ ನೀತಾ ಅಂಬಾನಿ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮಕ್ಕಾಗಿ, ನೀತಾ ಅಂಬಾನಿ ಹೂವಿನ ಬಿಳಿ ಪ್ಯಾಂಟ್ ಮತ್ತು ಪ್ರಸಿದ್ಧ ವಿನ್ಯಾಸಕಿ ಅನಾಮಿಕಾ ಖನ್ನಾ ಅವರ ಜಾಕೆಟ್ ಧರಿಸಿದ್ದರು. ನೀತಾ ಅಂಬಾನಿ ಅವರ ರೇಷ್ಮೆ ಆರ್ಗನ್ಜಾ ಉಡುಪಿನಲ್ಲಿ ಜಾಲಿ ಕೈ ಕಸೂತಿಯೊಂದಿಗೆ ಜರ್ದೋಜಿ ಹೂವಿನ ಕೆಲಸವಿರುವುದನ್ನು ನೋಡಬಹುದು. ಆದಾಗ್ಯೂ, ನೀತಾ ಅಂಬಾನಿ ಅವರಲ್ಲಿ ಎದ್ದು ಕಾಣುತ್ತಿದುದು ಅವರ ಸೂಪರ್ ದುಬಾರಿ ವ್ಯಾನಟಿ ಬ್ಯಾಗ್.
ಈ ಕಾರಣಕ್ಕೆ ಮಹಿಳೆಯರು ತೆಂಗಿನಕಾಯಿ ಒಡೀಬಾರ್ದು ಅನ್ನೋದು!
ಹೌದು. ನೀತಾ ಅವರು ಕೈಯಲ್ಲಿ ಇಟ್ಟುಕೊಂಡಿದ್ದ ವ್ಯಾನಟಿ ಬ್ಯಾಗ್‌ನ ಬೆಲೆ ಎಷ್ಟು ಗೊತ್ತಾ? ಇದರಲ್ಲಿ ಒಂದು ದೊಡ್ಡ ಬಂಗಲೆಯನ್ನೇ ಖರೀದಿ ಮಾಡಬಹುದು! ಹೌದು. ನೀತಾ ಅವರು ಕೈಯಲ್ಲಿ ಹಿಡಿದುಕೊಂಡಿದ್ದ ವ್ಯಾನಟಿ ಬ್ಯಾಗಿನ ಬೆಲೆ 3.2 ಕೋಟಿ ರೂಪಾಯಿಗಳು! ನೀತಾ ಅವರು ಅಪರೂಪದ ನೇಜ್ ಫೌಬರ್ಗ್ ಬಿರ್ಕಿನ್ 20 (Neige Faubourg Birkin 20) ವೈಟ್ ಮ್ಯಾಟ್ ಅಲಿಗೇಟರ್ ಹ್ಯಾಂಡ್‌ಬ್ಯಾಗ್ ತೆಗೆದುಕೊಂಡು ಹೋಗಿದ್ದರು. ಇದರ ಬೆಲೆ ಇದನ್ನು 4 ಲಕ್ಷ ಡಾಲರ್ ಎನ್ನಲಾಗಿದೆ ಅರ್ಥಾತ್ 3.2 ಕೋಟಿ ರೂಪಾಯಿಗಳು. ಇದನ್ನು ಅವರು ಕಳೆದ ವರ್ಷ ಖರೀದಿ ಮಾಡಿದ್ದು, ಇಂದಿನ ಭಾರತದ ಮಾರುಕಟ್ಟೆ ಬೆಲೆಯಲ್ಲಿ ಇನ್ನೂ ಹೆಚ್ಚಿಗೆ ಆಗುತ್ತದೆ!
ಅಂದಹಾಗೆ ಹರ್ಮೆಸ್ ಕಂಪೆನಿಯು 2019 ರಲ್ಲಿ ಮೊಟ್ಟಮೊದಲ ಫೌಬರ್ಗ್ ಬ್ರಿಕಿನ್ (Faubourg Brikin) ಅನ್ನು ಬಿಡುಗಡೆ ಮಾಡಿತು. ಇದರ ವಿನ್ಯಾಸವು ಪ್ಯಾರಿಸ್‌ನ 24 ರೂ ಡು ಫೌಬರ್ಗ್ ಸೇಂಟ್-ಹೋನರ್‌ನಲ್ಲಿರುವ ಬ್ರ್ಯಾಂಡ್‌ನ ಪ್ರಮುಖ ಮಳಿಗೆಯ ವಾಸ್ತುಶಿಲ್ಪದ ಭವ್ಯತೆಯನ್ನು ಸೆರೆಹಿಡಿದಿದೆ. 2021 ರಲ್ಲಿ, ಹರ್ಮೆಸ್ ಫೌಬರ್ಗ್ ಬ್ಯಾಗ್‌ನ ಇನ್ನೂ ಎರಡು ಆವೃತ್ತಿಗಳನ್ನು ಬಿಡುಗಡೆ ಮಾಡಿತು. ಮತ್ತು ನೀತಾ ಅಂಬಾನಿ ಅವುಗಳಲ್ಲಿ ಒಂದನ್ನು ಹೊಂದಿದ್ದಾರೆ.
ಹಲ ವರ್ಷಗಳ ನಂತ್ರ ಖುದ್ದು ಮೇಕಪ್ ಮಾಡ್ಕೊಂಡ ಆಲಿಯಾ: ಹೊಟೇಲ್‌ನ ಕ್ರೀಂ ಚೆನ್ನಾಗಿಲ್ಲವೆಂದ ನಟಿ!