ಸೌಂದರ್ಯ ಸ್ಪರ್ಧೆಗಳ ಕಿರೀಟ ಮಾರಾಟಕ್ಕಿದೆ ಎನ್ನುವ ಮೂಲಕ ಇಂಥ ಸ್ಪರ್ಧೆಗಳಲ್ಲಿ ನಡೆಯುತ್ತಿರುವ ಕಹಿ ಸತ್ಯವನ್ನು ತೆರೆದಿಟ್ಟಿದ್ದಾರೆ ಮಿಸಸ್ ವರ್ಲ್ಡ್ ಅದಿತಿ.
ಟಿವಿಗಳಲ್ಲಿ ಬರುವ ಹಲವು ರಿಯಲಾಟಿ ಷೋಗಳಲ್ಲಿ ಇಂಥವರೇ ವಿಜೇತರಾಗಬೇಕು ಎನ್ನುವುದು ಮೊದಲೇ ನಿಗದಿಯಾಗಿರುತ್ತದೆ, ಪರದೆಯ ಮೇಲಿನ ನಾಟಕಗಳೆಲ್ಲವೂ ಸುಳ್ಳು ಎನ್ನುವ ದೊಡ್ಡ ಆಪಾದನೆಯೇ ಇದೆ. ಇದೊಂದು ರೀತಿಯಲ್ಲಿ ಆಟದಲ್ಲಿ ಇರುವ ಮ್ಯಾಚ್ ಫಿಕ್ಸಿಂಗ್ ರೀತಿ. ಇದು ರಿಯಾಲಿಟಿ ಷೋಗಳು, ಸ್ಪರ್ಧೆಗಳಲ್ಲಿ ಮಾತ್ರವಲ್ಲದೇ ಸೌಂದರ್ಯ ಸ್ಪರ್ಧೆಗಳಲ್ಲಿಯೂ ಮ್ಯಾಚ್ ಫಿಕ್ಸಿಂಗ್ ಇರುವ ವಿಷಯವನ್ನು ಇದಾಗಲೇ ಹಲವಾರು ಸೆಲೆಬ್ರಿಟಿಗಳು ಹೇಳಿದ್ದಿದೆ. ಇಂಥ ದೇಶಗಳ ಸುಂದರಿಯರಿಗೆ ಈ ವರ್ಷದ ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಸೇರಿದಂತೆ ಇರುವ ಹಲವಾರು ಸೌಂದರ್ಯ ಕಿರೀಟಗಳು ಹೋಗಬೇಕು ಎನ್ನುವುದು ಮೊದಲೇ ನಿಗದಿಯಾಗಿರುತ್ತದೆ. ಅವೆಲ್ಲವೂ ಬೃಹತ್ ಜಾಹೀರಾತು ಕಂಪೆನಿಗಳ ಮೇಲೆ ಅವಲಂಬನವಾಗಿರುತ್ತದೆ ಎನ್ನುವುದು ಈಗೇನೂ ಗುಟ್ಟಾಗಿ ಉಳಿದದ್ದಲ್ಲ.
ಇದರ ನಡುವೆಯೂ ಜನರ ಕಣ್ಣಿಗೆ ಮಣ್ಣೆರೆಚುವಂತೆ ಇಂಥ ಸ್ಪರ್ಧೆಗಳು ನಡೆಯುತ್ತಲೇ ಇರುತ್ತವೆ. ಕೆಲವೇ ಕೆಲವು ಸ್ಪರ್ಧೆಗಳು ನಿಜವಾಗಿ ಇರಬಹುದಾದರೂ ಬಹುತೇಕ ಸೌಂದರ್ಯ ಸ್ಪರ್ಧೆಗಳ ಬಂಡವಾಳ ಇದೇ ಎನ್ನುವ ನಗ್ನ ಸತ್ಯವನ್ನು ಮತ್ತೊಮ್ಮೆ ತೆರೆದಿಟ್ಟಿದ್ದಾರೆ ಮಿಸೆಸ್ ವರ್ಲ್ಡ್ ಅದಿತಿ ಗೋವಿತ್ರಿಕರ್. ಕಿರೀಟಗಳನ್ನು ಮಾರುವ ಅನೇಕ ಸೌಂದರ್ಯ ಸ್ಪರ್ಧೆಗಳು ಇವೆ ಎಂದು ಅದಿತಿ ಗೋವಿತ್ರಿಕರ್ ಆಘಾತಕಾರಿ ಹೇಳಿಕೆ ನೀಡುವ ಮೂಲಕ, ಇದರ ಅರಿವಿರದವರಿಗೆ ಶಾಕ್ ನೀಡಿದ್ದಾರೆ.
ಮಾದಕ ನೋಟದಲ್ಲಿ ಅಮೃತಧಾರೆ ಪೆದ್ದಿ ಮಲ್ಲಿ: ಕಣ್ಣಲ್ಲೇ ಕೊಲ್ಲಬೇಡಮ್ಮಾ ಎಂದ ಪಡ್ಡೆ ಹುಡುಗರು
ಸಾಮಾನ್ಯವಾಗಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಬೇಕಾದರೆ ದೇಹದ ಎಲ್ಲಾ ಅಂಗಾಂಗಗಳು ಇಂತಿಷ್ಟೇ ಸೈಜ್ ಇರಬೇಕು, ಅವರು ಇಂಥದ್ದೇ ಕಲರ್ ಹೊಂದಿರಬೇಕು, ಇಂತಿಷ್ಟೇ ತೂಕವಿರಬೇಕು, ಇಂತಿಷ್ಟೇ ಎತ್ತರ ಇರಬೇಕು, ಇದರ ಜೊತೆಗೆ ಅಂತಿಮವಾಗಿ ಬುದ್ಧಿವಂತಿಕೆ ಇರಬೇಕು ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಇವೆಲ್ಲವೂ ಸುಳ್ಳು. ಕಿರೀಟಗಳು ಮಾರಾಟವಾಗುತ್ತಿವೆ ಎನ್ನುವ ಕುರಿತು ಅದಿತಿ ಗೋವಿತ್ರಿಕರ್ ತಿಳಿಸಿದ್ದಾರೆ. ಅದಿತಿಯವರು 2001 ರಲ್ಲಿ ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ.
"ಮಾರ್ವೆಲಸ್ ಮಿಸೆಸ್ ಇಂಡಿಯಾ ಎಂಬ ಸೌಂದರ್ಯ ಸ್ಪರ್ಧೆಯನ್ನು ಅದಿತಿ ನಡೆಸುತ್ತಿದ್ದಾರೆ. ಇದನ್ನು ಆರಂಭಿಸಿರುವುದು ಏಕೆ ಎಂಬ ಪ್ರಶ್ನೆ ಕೇಳಿದಾಗ ಸೌಂದರ್ಯ ಜಗತ್ತಿನ ಕಹಿಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಪ್ರಪಂಚದಾದ್ಯಂತದ ಭಾರತೀಯ ಮೂಲದ ಮಹಿಳೆಯರಿಗೆ ಸೌಂದರ್ಯ ಸ್ಪರ್ಧೆಯನ್ನು ಪ್ರಾರಂಭಿಸಲು ನಾನು ಉದ್ದೇಶಿಸಿದ್ದು ಇದೇ ಕಾರಣಕ್ಕೆ. ಸೌಂದರ್ಯದ ವಿಶಿಷ್ಟ ವ್ಯಾಖ್ಯಾನವನ್ನು ನಾನು ನಂಬುವುದಿಲ್ಲ. ಮಾರಾಟಕ್ಕಿರುವ ಕಿರೀಟದ ಕುರಿತು ತಿಳಿದು ಬಂದ ಹಿನ್ನೆಲೆಯಲ್ಲಿ ಇದನ್ನು ಪ್ರಾರಂಭಿಸಿದ್ದೇನೆ. ನಾನು ಪ್ರಾರಂಭಿಸುವುದು ವಿಶೇಷವಾಗಿ ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆ. ಸಮಚಿತ್ತತೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಲು ಇದರಿಂದ ನೆರವಾಗುತ್ತಿದೆ. ಫೇಕ್ ಸೌಂದರ್ಯ ಸ್ಪರ್ಧೆಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ.
ಮುಟ್ಟಾದಾಗ ಸ್ಪೆಷಲ್ ಪವರ್ ಬರ್ತಿತ್ತು, ಎರಡು ವರ್ಲ್ಡ್ ಚಾಂಪಿಯನ್‌ಶಿಪ್ ಗೆದ್ದೆ: ಮೇರಿ ಕೋಮ್