ಅವರನ್ನು ದರೋಡೆ ಮಾಡಲಾಯಿತು, ಅವರ ಕಾರು ತಂದ ದಿನವೇ ಕಳವಾಯಿತು. ಇಷ್ಟೆಲ್ಲ ಆದ್ರೂ ಅವರಿಂದು ಪ್ರಧಾನಿ ಮೋದಿಯವರಿಗೆ, ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ಸೂಟ್ ಹೊಲಿದುಕೊಡುವ ಬಹುಬೇಡಿಕೆಯ ಸ್ಟಾರ್ ಟೇಲರ್!
ಅವರ ಹೆಸರು ಸ್ಯಾಮಿ ಕೋಟ್ವಾನಿ (Sammy Kotwani). ಕಳೆದ ಮೂವತ್ತು ವರ್ಷಗಳಲ್ಲಿ ಅವರು ತಮ್ಮದೊಂದು ಟೇಲರಿಂಗ್ (Tailoring) ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಆ ಸಾಮ್ರಾಜ್ಯದೊಳಗೆ ನಮ್ಮ ಪ್ರಧಾನಿ ಮೋದಿ (Naredra Modi), ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಎಲ್ಲ ಬರುತ್ತಾರೆ. ಏಷ್ಯಾ ಹಾಗೂ ಆಫ್ರಿಕಾದ ಅನೇಕ ದೇಶಗಳ ಉನ್ನತ ರಾಜಕೀಯ ನಾಯಕರು, ಕಾರ್ಪೊರೇಟ್ ಕುಳಗಳ ವಿಶೇಷ ಸೂಟ್‌ಗಳನ್ನು ತಯಾರಿಸಿಕೊಡುವ ಕಂಪನಿ ಇವರದು- ಇಂಪೀರಿಯಲ್ ಟೇಲರಿಂಗ್ ಕಂಪನಿ. ವಿಶೇಷವೆಂದರೆ ಉಕ್ರೇನ್ (Ukraine) ಅಧ್ಯಕ್ಷ ಜೆಲೆನ್ಸ್ಕಿಗೂ ಇವರೇ ಸೂಟ್ ಹೊಲಿದು ಕೊಡುತ್ತಾ ಇದ್ದವರು. ಈಗ ಯುದ್ಧದ ಕಾರಣದಿಂದ, ಕೀವ್‌ನಲ್ಲಿದ್ದ ತಮ್ಮ ಕಂಪನಿಯ ಮಳಿಗೆಯನ್ನು ಮುಚ್ಚಿದ್ದಾರೆ.
ಸ್ಯಾಮಿ ಹುಟ್ಟಿ ಬೆಳೆದಿದ್ದು ಕಲಿತದ್ದೆಲ್ಲ ಮುಂಬಯಿಯಲ್ಲಿ. ಬಾಲ್ಯದಲ್ಲೇ ಫ್ಯಾಶನ್‌ನಲ್ಲಿ (Fashion) ತುಂಬಾ ಆಸಕ್ತಿ. ಆಗಲೇ ಅವರು ಟೇಲರಿಂಗ್ ಕಲಿತಿದ್ದು. ಹಾಗೆ ಇಲ್ಲಿ ತುಸು ಶ್ರೀಮಂತರಿಗೆ ಸೂಟ್ ಹೊಲಿದುಕೊಡುವ ಬ್ಯುಸಿನೆಸ್ ಮಾಡುತ್ತಿದ್ದಾಗಲೇ ಯಾರೋ ಒಬ್ಬ ಗಿರಾಕಿ ಹೇಳಿದರು- ನೀವೇಕೆ ರಷ್ಯಾಗೆ ಹೋಗಬಾರದು? ಅಲ್ಲಿ ಡಿಪ್ಲೊಮ್ಯಾಟ್‌ಗಳ ಸಂಖ್ಯೆ ಬಹಳ. ಮತ್ತು ಅವರು ವರ್ಷದ ಮುನ್ನೂರ ಅರುವತ್ತೈದು ದಿನವೂ ಸೂಟ್ ಧರಿಸಿಕೊಂಡೇ ಇರಬೇಕು. ಈ ಸಲಹೆ ಆಸಕ್ತಿದಾಯಕವಾಗಿ ಸ್ಯಾಮಿಗೆ ಕಂಡಿತು. ರಷ್ಯಾಗೆ ವೀಸಾ ಪಡೆದುಕೊಳ್ಳುವುದು ಸುಲಭವಿರಲಿಲ್ಲ. ಅವರು ರಾಯಭಾರ ಕಚೇರಿಯ ಒಬ್ಬ ಅಧಿಕಾರಿಗೆ ಸೂಟ್ ಹೊಲಿದುಕೊಟ್ಟರು. ಅವರಿಗೆ ಅದು ತುಂಬಾ ಇಷ್ಟವಾಯಿತು. ಸ್ಯಾಮಿಗೆ ವೀಸಾ ದೊರೆಯಿತು. ಹೀಗೆ ಸ್ಯಾಮಿಯ ಕೇಂದ್ರ ಮುಂಬಯಿಯಿಂದ ರಷ್ಯಾಗೆ ಶಿಫ್ಟ್ ಆಯಿತು. ಅಲ್ಲಿ ತಮ್ಮ ಟೇಲರಿಂಗ್ ಕಂಪನಿ ಆರಂಭಿಸಿದರು.
undefined
ಸೂಪರ್ ಸ್ಟಾರ್ ಪ್ರಭಾಸ್ ಫ್ಯಾಮಿಲಿ ಬ್ಯಾಕ್‌ಗ್ರ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು?
1991ರಲ್ಲಿ ಇವರ ಮನೆಯ ಮುಂದೆಯೇ ಇವರಿಗೆ ಬಂದೂಕು ತೋರಿಸಿ ಇವರಲ್ಲಿದ್ದ ಹಣವನ್ನೆಲ್ಲ ದರೋಡೆ ಮಾಡಲಾಯಿತು. 1993ರಲ್ಲಿ ಇವರ ಕಾರನ್ನು ಯಾರೋ ಕದ್ದೊಯ್ದರು. 1998ರಲ್ಲಿ ರಷ್ಯಾದ ಇಡೀ ಸಾಮಾಜಿಕ- ರಾಜಕೀಯ- ಆರ್ಥಿಕ ವ್ಯವಸ್ಥೆ ಕುಸಿಯಿತು. ಸೋವಿಯತ್ ರಷ್ಯಾ (Soviet Russia) ಚೂರುಚೂರಾಗಿ ಹಲವು ದೇಶಗಳಾಗಿ ಒಡೆಯಿತು. ಅಷ್ಟರವರೆಗೂ ದೊಡ್ಡ ದೊಡ್ಡ ಶ್ರೀಮಂತ ಗಿರಾಕಿಗಳನ್ನು ಸ್ಯಾಮಿ ಸಂಗ್ರಹಿಸಿದ್ದರೂ, ಒಮ್ಮೆಗೇ ಬ್ಯುಸಿನೆಸ್‌ನಲ್ಲಿ ಹೊಡೆತ ಉಂಟಾಯಿತು. ಆದರೆ ಸ್ಯಾಮಿ ಎದೆಗುಂದಲಿಲ್ಲ. ಹಲ್ಲುಕಚ್ಚಿ ನಿಂತು ಹೋರಾಡಿದರು. ಕ್ರಮೇಣ ಪರಿಸ್ಥಿತಿ ಸುಧಾರಿಸಿತು. ದೊಡ್ಡ ದೊಡ್ಡ ಕುಳಗಳು ಇವರ ಬಳಿಗೆ ಬರಲಾರಂಭಿಸಿದರು.
Miss World 2021 ಭಾರತದ ಸ್ಪರ್ಧಿ Manasa Varanasi ಬಗ್ಗೆ ನಿಮೆಗೆಷ್ಟು ಗೊತ್ತು
ಇಂದು ಸ್ಯಾಮಿ ಅವರ ಕಂಪನಿ ಇಡೀ ಏಷ್ಯಾದಲ್ಲೇ ಡಿಸೈನರ್ ಸೂಟ್‌ಗಳನ್ನು ಡಿಪ್ಲೊಮ್ಯಾಟ್‌ಗಳಿಗೆ, ದೇಶವಿದೇಶಗಳ ನಾಯರಿಗೆ ಹೊಲಿದುಕೊಡುವ ಸಂಸ್ಥೆ. ಇವರ ಗಿರಾಕಿಗಳ ಪಟ್ಟಿಯಲ್ಲಿ ಮೈಖೆಲ್ ಗೊರ್ಬಚೆಫ್ ಫ್ಯಾಮಿಲಿ ಸೇರಿದಂತೆ ರಷ್ಯಾದ ಹಲವು ಗಣ್ಯರು ಇದ್ದಾರೆ. ಭಾರತದಲ್ಲೂ ಇದು ಗಣ್ಯರ ಬಹು ಬೇಡಿಕೆಯ ಸಂಸ್ಥೆ. ವಿಶೇಷ ವಿವಿಐಪಿ ಗಣ್ಯರಿಗೆ ಹೊಲಿದುಕೊಡುವ ಸೂಟ್‌ಗಳನ್ನು ಖುದ್ದು ಸ್ಯಾಮಿ ಮೇಲುಸ್ತುವಾರಿ ನಡೆಸುತ್ತಾರೆ. ಅವರು ಮಾಸ್ಟರ್ ಕಟ್ಟರ್. ಲಂಡನ್‌ನಲ್ಲಿ ಈ ಬಗ್ಗೆ ವಿಶೇಷ ತರಬೇತಿ ಪಡೆದ ಪರಿಣತ. ಹೀಗಾಗಿ ಇವರ ಕಂಪನಿ ಹೊಲಿದುಕೊಡುವ ಸೂಟ್‌ಗಳಿಗೆ ವಿಶೇಷ ಮಾನ್ಯತೆ, ಬ್ರಾಂಡ್ ಸ್ಥಾನಮಾನ.
Wedding Albumನಲ್ಲಿ ನಿಮ್ಮ ಲುಕ್ ಸಖತ್ತಾಗಿರ್ಬೇಕು ಅಂದ್ರೆ ಹೀಗ್ಮಾಡಿ..
ರಷ್ಯಾದಲ್ಲಿ ಭಾರತದ ಹಬ್ಬಗಳನ್ನು ಆಚರಿಸುತ್ತಾರೆ. ರಷ್ಯಾ ಮತ್ತು ಭಾರತ (India) ವ್ಯಾಪಾರ ವಹಿವಾಟು ಇನ್ನಷ್ಟು ಸುಧಾರಿಸಬೇಕು ಎಂಬುದು ಅವರ ಆಸೆ. ಭಾರತದ ಗಣೇಶ ಹಬ್ಬವನ್ನು ಭಾರಿ ರೀತಿಯಲ್ಲಿ ಮಾಸ್ಕೋದಲ್ಲಿ ಆಚರಿಸಿ, ರಷ್ಯಾದ ಗಣ್ಯರನ್ನೂ ಕರೆಸುತ್ತಾರೆ. ಅವರು ಅಲ್ಲಿ ಎಷ್ಟು ಪ್ರಭಾವಿ ಎಂದರೆ, ರಷ್ಯಾದ ಅಧ್ಯಕ್ಷ ಸ್ಥಾನದ ಚುನಾವಣೆಗೂ ಅವರ ಹೆಸರು ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಪುಟಿನ್ ಅವರು ಸರ್ವಾಧಿಕಾರಿ ಆಗಿರುವುದರಿಂದ, ತಮ್ಮ ಅಭಿಲಾಷೆಯಿಂದ ಹಿಂದೆ ಸರಿದಿದ್ದಾರೆ.