ಅಬ್ಬಬ್ಬಾ..ಮೆಟ್‌ಗಾಲಾದಲ್ಲಿ ಈ ನಟನ ಕೈಯಲ್ಲಿದ್ದ ಚಿಪ್ಸ್ ಪ್ಯಾಕೆಟ್ ಬೆಲೆ ಬರೋಬ್ಬರಿ 1.5 ಲಕ್ಷ ರೂ.!

By Vinutha Perla  |  First Published May 14, 2024, 12:32 PM IST

ಮೆಟ್‌ಗಾಲಾ ತನ್ನ ವಿಭಿನ್ನ ಫ್ಯಾಷನ್ ಸೆನ್ಸ್‌ನಿಂದ ಎಲ್ಲರ ಗಮನ ಸೆಳೆಯುತ್ತದೆ. ವಿಭಿನ್ನ ರೀತಿಯ ಬಟ್ಟೆ, ಕಾಸ್ಟ್ಲೀ ವಸ್ತುಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತದೆ.  ಆದರೆ ಇದೆಲ್ಲಕ್ಕಿಂತ ಎಲ್ಲರ ಗಮನ ಸೆಳೆದಿದ್ದು ನಟನೊಬ್ಬನ ಕೈಯಲ್ಲಿದ್ದ ಕಾಸ್ಟ್ಲೀ ಚಿಪ್ಸ್ ಪ್ಯಾಕೆಟ್‌.


ಐಷಾರಾಮಿ ಜೀವನವನ್ನು ನಡೆಸಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ಕೇವಲ ಬಿಲಿಯನೇರ್‌ಗಳು, ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಮಾತ್ರ ಇಂಥಾ ಲಕ್ಸುರಿ ಲೈಫ್ ಲೀಡ್ ಮಾಡಲು ಸಾಧ್ಯವಾಗುತ್ತದೆ. ಕಾಸ್ಟ್ಲೀ ಬಟ್ಟೆಗಳು, ಬ್ರ್ಯಾಂಡೆಡ್ ವಾಚ್‌, ಶೂಗಳು, ಅಲ್ಟ್ರಾ ಲಕ್ಸುರಿಯಸ್ ಆಹಾರವನ್ನು ಸವಿಯುತ್ತಾರೆ. ಇದರಲ್ಲಿ ಕೆಲವೊಂದು ಎಲ್ಲರೂ ನಿಬ್ಬೆರಗಾಗುವಂತೆ ಮಾಡುತ್ತದೆ. ಹಾಗೆಯೇ ಇತ್ತೀಚಿಗೆ ಮೆಟ್‌ಗಾಲಾದಲ್ಲಿ ನಟ ಮೈಕೆಲ್‌ ಶಾನನ್‌ ಐಷಾರಾಮಿ ಉಡುಪು ಎಲ್ಲರ ಗಮನ ಸೆಳೆದಿದೆ. ಆದರೆ ಇದಕ್ಕಿಂತ ಎಲ್ಲರ ಗಮನ ಸೆಳೆದಿದ್ದು ಶಾನನ್ ಕೈಯಲ್ಲಿದ್ದ ವೆರಿ ಕಾಸ್ಟ್ಲೀ ಚಿಪ್ಸ್ ಪ್ಯಾಕೆಟ್‌.

ರೆಡ್ ಕಾರ್ಪೆಟ್ ಮೇಲೆ ಈ ಬ್ಲ್ಯಾಕ್ ಬ್ಲೇಜರ್‌ನ ದುಬಾರಿ ಬ್ರ್ಯಾಂಡ್‌ನ ಬಟ್ಟೆ ಧರಿಸಿದ್ದರು. ನಟ ತುಂಬಾ ಸ್ಟೈಲಿಶ್ ಆಗಿ ಕಂಡರೂ, ಎಲ್ಲರ ಗಮನ ಸೆಳೆದಿದ್ದು ನಟನ ಕೈಯಲ್ಲಿದ್ದ ಹಳದಿ ಚಿಪ್ ಬ್ಯಾಗ್. ಬ್ರ್ಯಾಂಡ್‌ನ ವೆಬ್‌ಸೈಟ್‌ನ ಪ್ರಕಾರ, ಚೀಲವು ಕಾಸ್ಟ್ಲೀ ಚರ್ಮದಿಂದ ಮಾಡಲ್ಪಟ್ಟಿದೆ. ಮೂರು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ. ಪ್ಯಾಕೆಟ್ ಮೇಲೆ ಚೀಸ್, ಈರುಳ್ಳಿ, ಮೆಣಸಿನಕಾಯಿ ಫೋಟೋವನ್ನು ನೋಡಬಹುದು.

Latest Videos

undefined

ಮೆಟ್‌ ಗಾಲಾಗೆ ಐಸ್‌ನಿಂದ ಮಾಡಿದ ಪರ್ಸ್ ಹಿಡಿದುಕೊಂಡ ಬಂದ ಖ್ಯಾತ ಸೆಲೆಬ್ರಿಟಿ

ಬ್ಯಾಗ್‌ಗಳ ಸುವಾಸನೆಯು ನಿಜವಾದ ಚಿಪ್‌ಗಳಂತೆಯೇ ಇದೆ. ಆದರೆ ಇದರ ವೆಚ್ಚವು ತುಂಬಾ ಹೆಚ್ಚು. ಒಂದು ಬಾಲೆನ್ಸಿಯಾಗ ಚಿಪ್ ಬ್ಯಾಗ್ ಬೆಲೆ 1.5 ಲಕ್ಷ ರೂ. ಗಿಂತಲೂ ಹೆಚ್ಚು. ಹೀಗಾಗಿಯೇ ಈ ಚಿಪ್ಸ್ ಪ್ಯಾಕೆಟ್ ಆಗಾಗ ಎಲ್ಲೆಡೆ ಸುದ್ದಿಯಾಗುತ್ತಲೇ ಇರುತ್ತದೆ.

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ 2024ರ ಅರೆಪಾರದರ್ಶಕ ಚಿಪ್ಸ್ ಎಲ್ಲರ ಹುಬ್ಬೇರುವಂತೆ ಮಾಡಿತು. ಹಲವಾರು ಫ್ಯಾಶನ್ ಪ್ರಭಾವಿಗಳು ಇದು 3 ಲಕ್ಷಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗಬಹುದು ಎಂದು ಅಂದಾಜಿಸಿದ್ದಾರೆ. ಬಾಲೆನ್ಸಿಯಾಗ ಇಂಥಾ ಉತ್ಪನ್ನವನ್ನು ಬಿಡುಗಡೆ ಮಾಡಿರುವುದು ಮೊದಲ ಬಾರಿಯಲ್ಲ. ಈ ಹಿಂದೆಯೂ ಇಂಥಾ ವಿಶಿಷ್ಟ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು.

ಕಳೆದ ವರ್ಷ, ಕಂಪೆನಿಯು ಸೊಂಟದ ಸುತ್ತಲೂ ಸ್ನಾನದ ಟವೆಲ್‌ನ್ನು ಹೋಲುವ ಸ್ಕರ್ಟ್‌ನ್ನು ವಿನ್ಯಾಸಗೊಳಿಸಿತ್ತು. ಪ್ಯಾರಿಸ್ ಸ್ಪ್ರಿಂಗ್ 2024ರ ಫ್ಯಾಶನ್ ಶೋನಲ್ಲಿ ಈ ಅಸಾಮಾನ್ಯ ಡ್ರೆಸ್ ಫ್ಯಾಷನ್ ಪ್ರಿಯರನ್ನು ಚಕಿತಗೊಳಿಸಿತ್ತು. ಟವೆಲ್ ಸ್ಕರ್ಟ್‌ನ ಬೆಲೆ ಸುಮಾರು 77,000 ರೂ. ಆಗಿತ್ತು. ಉಡುಗೆ ಮೊಣಕಾಲಿನ ವರೆಗೆ ಉದ್ದವಿದ್ದು, ಟೆರ್ರಿ-ಕಾಟನ್ ಟವೆಲ್‌ನಿಂದ ಮಾಡಲ್ಪಟ್ಟಿತ್ತು. ಮುಂಭಾಗದಲ್ಲಿ ಕಸೂತಿ ಬಾಲೆನ್ಸಿಯಾಗ ಚಿಹ್ನೆಯನ್ನು ಹೊಂದಿತ್ತು.

ಫ್ಯಾಷನ್ ಓಕೆ, ಸೊಂಟ ಮಾತ್ರ ಹೀಗಿದೆ ಯಾಕೆ; ಕಿಮ್ ಕಾರ್ಡಶಿಯಾನ್ ಮೆಟ್‌ ಗಾಲಾ ಲುಕ್‌ಗೆ ನೆಟ್ಟಿಗರ ಕಳವಳ!

ಈ ರೀತಿ ಸಾಧಾರಣವಾಗಿ ಕಾಣುವ ವಸ್ತುವನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವುದು ಬಾಲೆನ್ಸಿಯಾಗಾದ ಪ್ರಸಿದ್ಧ ತಂತ್ರವಾಗಿದೆ. ಈಗಾಗಲೇ ಹಾಳಾದ ಸ್ನೀಕರ್.  ಚರ್ಮದ ಕಸದ ಚೀಲ. ಎತ್ತರದ ಹಿಮ್ಮಡಿಯ ಮೊಸಳೆ ಶೂಗಳು ಬಾಲೆನ್ಸಿಯಾಗದ ವಿಭಿನ್ನ ಉತ್ಪನ್ನಗಳಾಗಿವೆ. 

click me!