14 ನಿಮಿಷದಲ್ಲಿ ಸರಿಪಡಿಸಿ ಮುರಿದ Zip, ವಿಡಿಯೋ ನೋಡಲು ಮುಗಿಬಿದ್ದ ಜನ!

Published : Feb 13, 2020, 04:28 PM IST
14 ನಿಮಿಷದಲ್ಲಿ ಸರಿಪಡಿಸಿ ಮುರಿದ Zip, ವಿಡಿಯೋ ನೋಡಲು ಮುಗಿಬಿದ್ದ ಜನ!

ಸಾರಾಂಶ

14 ನಿಮಿಷದಲ್ಲಿ Zip ಸರಿಪಡಿಸುವುದು ಹೇಗೆ?| ಇಲ್ಲಿದೆ ಸುಲಭ ಉಪಾಯ| ಹಾಲಿವುಡ್ ನಟ ರಯಾನ್ ರೆನಾಲ್ಡ್ಸ್ ಕೂಡಾ ಈ ಟೆಕ್ನಿಕ್‌ಗೆ ಫಿದಾ

ನೀವಿಷ್ಟಪಡುವ ಜಾಕೆಟ್‌ ಧರಿಸಲು ಸಜ್ಜಾದಾಗ ಅದರ Zip ಮುರಿದು ಹೋಗಿರುವುದು, ಅಥವಾ ಕೆಲಸಕ್ಕೆಂದು ಹೊರಟಾಗ ಬಟ್ಟೆಯ Zip ಸ್ಲೈಡರ್ ಕೆಲಸ ಮಾಡದಿರುವುದರಿಂದ ಸಮಸ್ಯೆ ಆಗಿದೆಯೇ? ಅದನ್ನು ಸರಿಪಡಿಸಲು ಹೋಗಿ ನಿರಾಶರಾಗಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ. 

ಹೌದು ಹೀಗೆ Zip ಮುರಿದು ಹೋಗುವುದು ಅಥವಾ ಸ್ಲೈಡರ್ ಕೆಲಸ ಮಾಡದಿರುವುದು ಸಾಮಾನ್ಯ. ಆದರೆ ಇದನ್ನು ಸರಿಪಡಿಸಲಾಗದೆ ಹಲವರು ಒದ್ದಾಡುತ್ತಾರೆ. ಹೀಗಿರುವಾಗ ಕೇಲವ 14 ಸೆಕೆಂಡ್‌ನಲ್ಲಿ Zip ಸರಿಪಡಿಸುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈವರೆಗೂ ಈ ವಿಡಿಯೋವನ್ನು ಸುಮಾರು 13 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಾಲಿವುಡ್ ನಟ ರಯಾನ್ ರೆನಾಲ್ಡ್ಸ್ ಕೂಡಾ ಈ ಐಡಿಯಾಗೆ ಫಿದಾ ಆಗಿದ್ದಾರೆ. 

ಮಂಗಳವಾರದಂದು ರಯಾನ್ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾ ’ನನ್ನ ಜೀವಮಾನವಿಡೀ ನಾನು ಇದಕ್ಕಾಗಿ ಕಾಯುತ್ತಿದ್ದೆ’ ಎಂದು ಬರೆದಿದ್ದಾರೆ.

14 ಸೆಕೆಂಡ್‌ಗಳ ಈ ವಿಡಿಯೋನಲ್ಲಿ ಈ ಮುರಿದ Zipನ್ನು ಕ್ಷಣ ಮಾತ್ರದಲ್ಲಿ ಹೇಗೆ ಸರಿಪಡಿಸುವುದೆಂದು ತೋರಿಸಲಾಗಿದೆ. ನೀವೂ ಈ ಸುಲಭ ವಿಧಾನ ಬಳಸಿ ತಲೆನೋವು ದೂರ ಮಾಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೈಗೆಟುಕುವ ದರದಲ್ಲಿ ನಿಮ್ಮ ಮಗಳಿಗೆ ಫ್ಯಾನ್ಸಿ ಸಿಲ್ವರ್ ಬ್ರೇಸ್ಲೆಟ್ ಗಿಫ್ಟ್
ಗೃಹಿಣಿಯರಿಗಾಗಿ ಸೊಗಸಾದ 6 ಸಿಲ್ವರ್ ಸಿಲ್ಕ್ ಕಾಲುಂಗುರ ಡಿಸೈನ್ಸ್ ಇಲ್ಲಿವೆ ನೋಡಿ!