ಫ್ಯಾಷನ್ (Fashion) ಜಗತ್ತು ಹಾಗೇನೆ. ಆಗಾಗ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ಡ್ರೆಸ್, ಶೂನಿಂದ ತೊಡಗಿ ಹೇರ್‌ಸ್ಟೈಲ್ (Hairstyle) ಕೂಡಾ ಆಗಾಗ ಬದಲಾಗುತ್ತಿರುತ್ತದೆ. ಎಲ್ಲರ ಗಮನ ತಮ್ಮತ್ತ ಸೆಳೆಯಬೇಕು ಎಂದು ಅಂದುಕೊಳ್ಳೋ ಜನರು ವಿಚಿತ್ರವಾಗಿರೋ ಫ್ಯಾಷನ್ ಟ್ರೆಂಡ್‌ಗಳನ್ನು ಹುಟ್ಟುಹಾಕ್ತಾರೆ. ಇಲ್ಲೊಬ್ಬ ಫ್ಯಾಷನ್ ಪ್ರಿಯ ಮಾಡಿದ್ದು ಅದನ್ನೇ. ಅಷ್ಟಕ್ಕೂ ಆತ ಮಾಡಿದ್ದೇನು ?
ಫ್ಯಾಷನ್ (Fashion) ಜಗತ್ತಿನಲ್ಲಿ ಟ್ರೆಂಡೀ ಡ್ರೆಸ್‌ಗಳು ಲಗ್ಗೆಯಿಡುವ ಹಾಗೆಯೇ, ಚಿತ್ರ ವಿಚಿತ್ರಗಳು ಹೇರ್‌ಸ್ಟೈಲ್ಸ್ (Hairstyle) ಆಗಾಗ ಬರುತ್ತಿರುತ್ತವೆ. ಕೆಲವೊಮ್ಮೆ ಹಿಟ್ ಆದ ಸಿನಿಮಾದಲ್ಲಿದ್ದ ಹೀರೋ ಹೇರ್‌ಸ್ಟೈಲ್ ಆಧರಿಸಿ ಜನರು ಟ್ರೆಂಡ್‌ನ್ನು ಫಾಲೋ ಮಾಡುತ್ತಾರೆ. ಇನ್ನು ಕೆಲವೊಮ್ಮೆ ತಾವೇ ಹೊಸ ಟ್ರೆಂಡ್‌ಗಳನ್ನು ಟ್ರೈ ಮಾಡಿದ್ದಾರೆ. ಇಲ್ಲೊಬ್ಬ ವ್ಯಕ್ತಿಯೂ ಹಾಗೇ ಮಾಡಿದ್ದಾನೆ ತಾನೇ ಹೊಸ ಹೇರ್‌ಸ್ಟೈಲ್ ಶುರು ಮಾಡಿದ್ದಾನೆ. ಇದರಿಂದಾಗಿ ಹೋದಲ್ಲಿ ಬಂದಲ್ಲಿ ಎಲ್ಲರೂ ವಿಚಿತ್ರವಾಗಿ ಈತನನ್ನೇ ನೋಡ್ತಿದ್ದಾರೆ. ಈ ಹೇರ್‌ಸ್ಟೈಲ್ ಟ್ರೆಂಡಿಯಾಗಿದೆಯಾ, ವಿಚಿತ್ರವಾಗಿದೆಯಾ ನೀವೇ ಹೇಳ್ಬೇಕು.
ಕೂದಲ ವಿನ್ಯಾಸ ಎಲ್ಲರಿಗೂ ಒಂದು ಕ್ರೇಜ್ (Craze). ಹುಡುಗರಂತೂ ಹೊಸಹೊಸ ಮಾದರಿಯಲ್ಲಿ ಹೇರ್‌ಸ್ಟೈಲ್ ಮಾಡಿಕೊಂಡು ಹುಡುಗಿಯರನ್ನು ಅಟ್ರ್ಯಾಕ್ಟ್ ಮಾಡ್ಬೇಕು ಅಂತ ಪ್ರಯತ್ನಿಸುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಫ್ಯಾಷನ್ ಪ್ರಿಯ, ಬಹುಶಃ ಆಹಾರಪ್ರಿಯನು ಆಗಿರ್ಬೇಕು. ಟ್ರೆಂಡ್ ಅಂತ ಫ್ಯಾಷನ್ ಹಾಗೂ ಫುಡ್ (Food)ನ್ನು ಮರ್ಜ್ ಮಾಡಿದ್ದಾನೆ. ಟ್ರೆಂಡೀ ಅಂತ ಈತ ಮಾಡ್ಕೊಂಡಿರೋ ಹೇರ್‌ಸ್ಟೈಲ್ ಮತ್ತೇನಲ್ಲ. ನಾವು ತಿನ್ನೋ ಆಹಾರಗಳನ್ನೇ ವಿಭಿನ್ನವಾಗಿ ತಲೆ ಮೇಲೆ ಡಿಸೈನ್ ಮಾಡಿಸಿದ್ದಾನೆ. ಒಂದರಲ್ಲಿ ನ್ಯೂಡಲ್ಸ್, ಇನ್ನೊಂದರಲ್ಲಿ ಪೋರ್ಕ್ ಮತ್ತು ಬೀನ್ಸ್ ಹೀಗೆ ವಿವಿಧ ಆಹಾರಗಳನ್ನು ಪೌಲ್ ತಲೆಗೆ ಹಾಕಿ ವಿನ್ಯಾಸ ಮಾಡಲಾಗಿದೆ. ಬಿಎಂಆರ್ ಟ್ವಿನ್ಸ್ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ಫೋಟೋಗಳನ್ನು ಶೇರ್ ಮಾಡಲಾಗಿದೆ.
ಬಿಟ್ಟಿ ತಿನ್ಬೋದು ಅಂತಾನೇ 16 ಸಾರಿ ಡೇಟಿಂಗ್‌ಗೆ ಹೋದ ಹುಡುಗಿ..!
ವಿವಿಧ ಆಹಾರಗಳನ್ನೇ ಹೇರ್‌ಸ್ಟೈಲ್ ಮಾಡಿಕೊಂಡವನ ಫೋಟೋ, ವಿಡಿಯೋಗಳು ಸಿಕ್ಕಾಪಟೆ ವೈರಲ್ (Viral) ಆಗುತ್ತಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ. ನೀವು ಬಿಎಂಆರ್ ಟ್ವಿನ್ಸ್ ಎಂಬ ಇನ್ಸ್ಟಾಗ್ರಾಂ ಅಕೌಂಟ್ (Instagram Account) ನೋಡಿದರೆ ವಿಡಿಯೋಗಳನ್ನೆಲ್ಲಾ ನೋಡಬಹುದು. ಅದರಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯ ಹೆಸರು ಪೌಲ್ ಜೋನ್ಸ್ ಎಂದಾಗಿದ್ದು, ಆತ ಸ್ವತಃ ಕ್ಷೌರಿಕ. ತಲೆಗೆ ನ್ಯೂಡಲ್ಸ್ ಅಂಟಿಸಿಕೊಂಡು, ಇಬ್ಬರು ಹೆಣ್ಣುಮಕ್ಕಳು ಅದನ್ನು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಸ್ವತಃ ಕ್ಷೌರಿಕನಾಗಿರುವ ಪೌಲ್ಗೆ ಇನ್ನೊಬ್ಬ ಕೇಶವಿನ್ಯಾಸಕಾರ ಹೇರ್‌ಸ್ಟೈಲ್ ಮಾಡಿದ್ದಾನೆ. ರಾಮೆನ್ ನ್ಯೂಡಲ್ಸ್ನ್ನು ಪೌಲ್ ತಲೆಗೆ ಪ್ಯಾಕ್ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹದು. ನಿಜ ಹೇಳಬೇಕೆಂದರೆ ಪೌಲ್ ತಲೆಯಲ್ಲಿ ಕೂದಲು ಇಲ್ಲ. ಬೋಳಾಗಿರುವ ಅವರ ತಲೆಗೆ ನ್ಯೂಡಲ್ಸ್ ಸೇರಿ ಇನ್ನೂ ವಿವಿಧ ಆಹಾರಗಳನ್ನು ಪ್ಯಾಕ್ ಮಾಡುವುದು, ಆ ವಿಡಿಯೋ ವೈರಲ್ ಮಾಡುವುದು ಇವರ ಕಾಯಕವಾಗಿದೆ. ಇದನ್ನು ನೋಡಿ ನೆಟ್ಟಿಗರು ನಗುವ ಎಮೋಜಿಗಳನ್ನು ಶೇರ್ ಮಾಡಿದ್ದಾರೆ.
BMR ಟ್ವಿನ್ಸ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಈ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದು. ಅವರ ಇತ್ತೀಚಿನ ಕೆಲವು ವೀಡಿಯೋಗಳಲ್ಲಿ 'ಆಹಾರ ಹೇರ್‌ಸ್ಟೈಲ್' ಗೀಳು ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ವೀಡಿಯೊದಲ್ಲಿ, ಅವರು ಬೇಯಿಸಿದ ನೂಡಲ್ಸ್‌ನಿಂದ ಮಾಡಲ್ಪಟ್ಟ ಉದ್ದನೆಯ ಅಲೆಅಲೆಯಾದ ಡಿಸೈನ್ ಮಾಡಿದ್ದಾರೆ. ಈ ವೀಡಿಯೋಗೆ ಅವರು ಅತ್ಯುತ್ತಮ ರಾಮನ್ ನೂಡಲ್ ಫ್ಲೇವರ್ ಯಾವುದು ಎಂದು ಶೀರ್ಷಿಕೆ ನೀಡಿದ್ದಾರೆ/ ಅವರ ಮುಂದಿನ ವೀಡಿಯೊದಲ್ಲಿ, ಅವರು ಚೀಟೋಸ್ ಪಫ್‌ಗಳೊಂದಿಗೆ ಟ್ರೆಂಡಿ ಕೊರಿಯನ್ ಶೈಲಿಯ ಕಟ್ ಅನ್ನುಮಾಡಿದ್ದಾರೆ. ಶೀರ್ಷಿಕೆಯಾಗಿ ಹಾಟ್ ಚೀಟೋಸ್ ಅಥವಾ ರೆಗ್ಯುಲರ್ ಎಂದು ಪ್ರಶ್ನಿಸಿದ್ದಾರೆ.
ಮಕ್ಕಳ ಲಂಚ್‌ಬಾಕ್ಸ್‌ಗೆ ಅಪ್ಪಿತಪ್ಪಿಯೂ ಇದನ್ನು ಹಾಕಿಕೊಡಬೇಡಿ !
ಹೀಗೆ ಎರಡು ಮೂರು ವಿಡಿಯೋಗಳನ್ನು ನೀವು ನೋಡಬಹುದು. ಒಂದರಲ್ಲಿ ನ್ಯೂಡಲ್ಸ್, ಇನ್ನೊಂದರಲ್ಲಿ ಪೋರ್ಕ್ ಮತ್ತು ಬೀನ್ಸ್ ಹೀಗೆ ವಿವಿಧ ಆಹಾರಗಳನ್ನು ಪೌಲ್ ತಲೆಗೆ ಹಾಕಿ ವಿನ್ಯಾಸ ಮಾಡಲಾಗುತ್ತದೆ. ಅದೇನೆ ಇರ್ಲಿ ಟ್ರೆಂಡ್ ಅಂತ ಏನೇನೋ ಮಾಡ್ತಿದ್ದಾರೆ. ಇದೇನು ಫ್ಯಾಷನ್ನಾ ಇಲ್ಲ ವಿಚಿತ್ರಾನ ನೀವೇ ಹೇಳ್ಬೇಕಪ್ಪಾ.