ಖಡಕ್‌ ಪೊಲೀಸ್‌ ಕಂ ಸೂಪರ್ ಮಾಡೆಲ್‌, ಲ್ಯಾಕ್‌ಮಿ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಐಎಎಸ್ ಅಧಿಕಾರಿ

By Suvarna News  |  First Published Apr 2, 2022, 6:13 PM IST

ಪೊಲೀಸ್ ಆಫೀಸರ್ (Police Officer) ಅಂದ್ರೆ ಸಾಮಾನ್ಯವಾಗಿ ಖಡಕ್ ಆಗಿ ಸ್ಟ್ರಿಕ್ಟ್‌ ಆಗಿರ್ತಾರೆ. ಆದ್ರೆ ಇವ್ರು ಹ್ಯಾಂಡ್‌ಸಮ್‌ (Handsome) ಮತ್ತು ಸ್ಮಾರ್ಟ್‌ ಆಫೀಸರ್‌.  ಲ್ಯಾಕ್‌ಮಿ ಫ್ಯಾಷನ್ ವೀಕ್‌ 2022 (Lakmé Fashion Week 2022)ರಲ್ಲಿ ಇವರೇ ಶೋ ಸ್ಟಾಪರ್ ಆಗಿದ್ರು. ಅರೆ ಪೊಲೀಸ್‌ ಅಂತೀರಾ, ಫ್ಯಾಷನ್ ಶೋ (Fashion Week) ಅಂತೀರಾ. ಇದೇನಪ್ಪಾ ಕನ್‌ಫ್ಯೂಷನ್ ಅನ್ಬೇಡಿ. ಫುಲ್ ಸ್ಟೋರಿ ಓದಿ.


ಎರಡು ವರ್ಷಗಳ ನಂತರ ಹೊಸದಿಲ್ಲಿಯಲ್ಲಿ ನಡೆದ FDCI X ಲ್ಯಾಕ್‌ಮಿ ಫ್ಯಾಷನ್ ವೀಕ್‌ 2022 ((Lakmé Fashion Week 2022) ಈ ಬಾರಿ ಹೆಚ್ಚು ಅತ್ಯಾಕರ್ಷಕವಾಗಿತ್ತು. ಪ್ರಸಿದ್ಧ ಡಿಸೈನರ್‌ಗಳು, ಮಾಡೆಲ್‌ಗಳು, ಸ್ಟೈಲಿಸ್ಟ್‌ಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳ ಒಂದೇ ಸೂರಿನಡಿ ಕಂಡು ಬಂದರು. ವೈವಿಧ್ಯಮಯ ಡಿಸೈನ್‌ನ ಬಟ್ಟೆಗಳನ್ನು ಧರಿಸಿ ಸೂಪರ್‌ ಮಾಡೆಲ್ಸ್ ರ್ಯಾಂಪ್ ಮೇಲೆ ಹೆಜ್ಜೆ ಹಾಕ್ತಾ ಇದ್ರೆ ಪ್ರೇಕ್ಷಕರು ಬೆರಗುಗಣ್ಣಿನಿಂದ ನೊಡಿದ್ರು. ಆದ್ರೆ ಫ್ಯಾಷನ್ ಶೋನಲ್ಲಿ ಮಾಡೆಲ್‌ (Model)ಗಳಿಗಿಂತ ಹೆಚ್ಚು ಸುದ್ದಿ ಮಾಡಿದ್ದು ಐಎಎಸ್ ಅಧಿಕಾರಿ.

ಪೊಲೀಸರು ಅಂದ್ರೆ ಸಾಮಾನ್ಯವಾಗಿ ಖಾಕಿ ತೊಟ್ಟು, ಲಾಠಿ ಹಿಡಿದು ಡ್ಯೂಟಿಯಲ್ಲಿರೋದು ನೋಡಿರ್ತೀರಾ. ಖಡಕ್ ಆಗಿ ಸ್ಟ್ರಿಕ್ಟ್ ಕೂಡಾ ಆಗಿರ್ತಾರೆ. ಆದ್ರೆ ಈ ಪೊಲೀಸ್ ಆಫೀಸರ್ ಹಾಗಲ್ಲ. ಖಾಕಿಗೂ ಸೈ ಫ್ಯಾಷನ್ ಶೋ (Fashion Show)ಗೆ ಸೈ ಅಂತಿದ್ದಾರೆ. ಲ್ಯಾಕ್‌ಮಿ ಫ್ಯಾಷನ್ ವೀಕ್‌ 2022ರ ಶೋ ಸ್ಟಾಪರ್‌ ಯಾರಾಗಿರಬಹುದು ಎಂಬ ಊಹೆ ನಿಮಗಿದೆಯೇ. ನೀವಿದನ್ನು ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಏಕೆಂದರೆ ಈ ಬಾರಿಯ ಲ್ಯಾಕ್‌ಮಿ ಶೋ ಸ್ಟಾಪರ್ ಆದವರು ಯಾವುದೋ ಸಿನಿಮಾ ತಾರೆಯೋ, ರೂಪದರ್ಶಿಯೋ ಅಲ್ಲ ಅವರೊಬ್ಬರು ಐಎಎಸ್ ಅಧಿಕಾರಿ. 

Tap to resize

Latest Videos

undefined

FDCI x Lakme Fashion Weekನಲ್ಲಿ ಖಾದಿ ದಿರಿಸಿನ ಝಲಕ್‌

ದೆಹಲಿ ಕೇಡರ್‌ನ ಐಎಎಸ್ ಅಧಿಕಾರಿ (IAS officer) ಅಭಿಷೇಕ್ ಸಿಂಗ್. ಸಾಮಾಜಿಕ ಉದ್ಯಮಿಯಾಗಿ ನಟನಾಗಿ ಈಗಾಗಲೇ ಗುರುತಿಸಿಕೊಂಡಿದ್ದು, ಫ್ಯಾಶನ್ ಶೋನಲ್ಲಿ ಎಲ್ಲರ ಗಮನ ಸೆಳೆದರು. ಪ್ರಮುಖ ಗಾಯಕರಾದ ಬಾದ್‌ಶಾ, ಜುಬಿನ್ ನೌಟಿಯಾಲ್ ಮತ್ತು ಬಿ ಪ್ರಾಕ್ ಸೇರಿದಂತೆ ಅನೇಕ ಸಂಗೀತ ವೀಡಿಯೊಗಳಲ್ಲಿ ಉದಯೋನ್ಮುಖ ನಟ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಕಾಣಿಸಿಕೊಂಡಿದ್ದರು. ಲ್ಯಾಕ್‌ಮಿ ಫ್ಯಾಷನ್ ವೀಕ್‌ 2022ರಲ್ಲೂ ಗ್ರ್ಯಾಂಡ್ ಎಂಟ್ರಿ ನೀಡಿದರು. ಐಎಎಸ್ ಅಧಿಕಾರಿ ಫ್ಯಾಷನ್ ಶೋನಲ್ಲಿ ಭಾಗವಹಿಸಿದ  ಕೆಲವೇ ಸಮಯದಲ್ಲಿ ಅವರ ವೀಡಿಯೋ ವೈರಲ್ (Video Viral) ಆಯಿತು.

ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವ ಅಭಿಷೇಕ್ ಬಹುಮುಖ ಪ್ರತಿಭೆಯೂ ಹೌದು. ಐಎಎಸ್ ಅಧಿಕಾರಿಯ ಮಟ್ಟಕ್ಕೆ ಏರುವ ಮೂಲಕ ಅಸಾಧಾರಣ ಛಾಪು ಮೂಡಿಸಿದ್ದಾರೆ. ಇಂದಿನ ಯುವಕರಿಗೆ ಮಾನದಂಡವನ್ನು ಹೊಂದಿಸುವ ಅಭಿಷೇಕ್ ಅಧಿಕಾರಿ ಮಾತ್ರವಲ್ಲದೆ ತನ್ನ ಇತರ ಸೃಜನಶೀಲ ಆಸಕ್ತಿಗಳನ್ನು ಏಕಕಾಲದಲ್ಲಿ ಅನುಸರಿಸುತ್ತಿದ್ದಾರೆ. ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದು ವೈರಲ್ ಆಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್: ಹೀಗಿತ್ತು ರ‍್ಯಾಂಪ್‌ ಮೇಲೆ ಮಕ್ಕಳ ಝಲಕ್!

ಅಭಿಷೇಕ್ ಸಿಂಗ್ ಅವರು ತಮ್ಮ ಸ್ನೇಹಿತ ಮತ್ತು ಏಸ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರನ್ನು ಭೇಟಿ ಮಾಡಲು ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಕಾಣಿಸಿಕೊಂಡರು. ಅಭಿಷೇಕ್ ಇತರ ನಟರಾದ ಪುಲ್ಕಿತ್ ಸಾಮ್ರಾಟ್, ವರುಣ್ ಶರ್ಮಾ ಮತ್ತು ಹೆಚ್ಚಿನವರೊಂದಿಗೆ ಬೆರೆಯುತ್ತಿದ್ದರು.

ಅಭಿಷೇಕ್ ಯುನೈಟೆಡ್ ಬೈ ಬ್ಲಡ್ ಅನ್ನು ಸಹ ನಡೆಸುತ್ತಿದ್ದಾರೆ, ಇದು ಸಮುದಾಯದ ಪರಿಹಾರ ಉಪಕ್ರಮವಾಗಿದೆ, ಇದು ರೋಗಿಗಳಿಗೆ ಆಮ್ಲಜನಕ ಮತ್ತು ರಕ್ತವನ್ನು ಒದಗಿಸಲು ಸಹಾಯ ಮಾಡಿತು ಮತ್ತು ಕೋವಿಡ್ ಕಾಲಘಟ್ಟದಲ್ಲಿ ವಿಶಿಷ್ಟವಾದ 'ಡ್ರೈವ್ ಥ್ರೂ ವ್ಯಾಕ್ಸಿನೇಷನ್' ಉಪಕ್ರಮದೊಂದಿಗೆ ಜನರಿಗೆ ಸಹಾಯ ಮಾಡಿದೆ. ಅದೇನೆ ಇರ್ಲಿ ಯಾವಾಗ್ಲೂ ಖಾಕಿಯಲ್ಲಿ ಕಾಣಿಸಿಕೊಳ್ಳೋ ಆಫೀಸರ್‌ನ್ನು ಕಲರ್ ಫುಲ್‌ ಡ್ರೆಸ್‌ನಲ್ಲಿ ಕಂಡು ಫ್ಯಾಷನ್‌ ಪ್ರಿಯರಂತೂ ಫುಲ್ ಫಿದಾ ಆಗಿದ್ದಾರೆ.

click me!