ಬಡವರ ಬದುಕು, ಶ್ರೀಮಂತರ ಫ್ಯಾಶನ್; ಲೂಯಿಸ್ ವಿಟಾನ್ ಆಟೋ ಬ್ಯಾಗ್ ಬೆಲೆಗೆ 14 ರಿಕ್ಷಾ ಬರುತ್ತೆ

Published : Jul 06, 2025, 04:03 PM ISTUpdated : Jul 06, 2025, 04:06 PM IST
louis vuitton

ಸಾರಾಂಶ

ಜನಪ್ರಿಯ ಹಾಗೂ ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ ಇದೀಗ ಭಾರತ ಹಾಗೂ ಏಷ್ಯಾದಲ್ಲಿ ಆಟೋ ರಿಕ್ಷಾ ಹ್ಯಾಂಡ್ ಬ್ಯಾಗ್ ಬಿಡುಡೆ ಮಾಡುತ್ತಿದೆ. ಬಡವರ ಬದುಕಾಗಿರುವ ಆಟೋ ಇದೀಗ ಶ್ರೀಮಂತರ ಫ್ಯಾಶನ್‌ ಆಗಿದೆ. ವಿಶೇಷ ಅಂದರೆ ಒಂದು ಆಟೋ ಬ್ಯಾಗ್ ಬೆಲೆಯಲ್ಲಿ ಅಸಲಿ 14 ರಿಕ್ಷಾ ಖರೀದಿಸಬಹುದು.

ನವದೆಹಲಿ (ಜು.06) ಸೆಲೆಬ್ರೆಟಿಗಳು, ಶ್ರೀಮಂತರು ಹೆಚ್ಚಾಗಿ ಬಳಸುವ ಬ್ರ್ಯಾಂಡ್ ಲೂಯಿಸ್ ವಿಟಾನ್. ಅತ್ಯಂತ ಜನಪ್ರಿಯ ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ ಹೊಸ ಹೊಸ ಫ್ಯಾಶನ್ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತದೆ. ಇದೀಗ ಭಾರತ ಹಾಗೂ ಏಷ್ಯಾ ಮಾರುಕಟ್ಟೆಯನ್ನು ಪ್ರಮುಖವಾಗಿಟ್ಟುಕೊಂಡು ಆಟೋ ರಿಕ್ಷಾ ಹ್ಯಾಂಡ್ ಬ್ಯಾಗ್ ಬಿಡುಗಡೆ ಮಾಡುತ್ತಿದೆ. ಇದರ ಫೋಟೋ ಹಾಗೂ ವಿಡಿಯೋಗಳು ಹೊರಬೀಳುತ್ತಿದ್ದಂತೆ ಭಾರಿ ಚರ್ಚೆಯಾಗುತ್ತಿದೆ. ಬಡವರ ಬದುಕನ್ನೇ ಶ್ರೀಮಂತರ ಫ್ಯಾಶನ್ ಮಾಡುತ್ತಾರ ಅನ್ನೋ ಮಾತುಗಳು ಕೇಳಿಬಂದಿದೆ. ವಿಶೇಷ ಅಂದರೆ ಈ ಆಟೋ ಹ್ಯಾಂಡ್ ಬ್ಯಾಗ್ ಬೆಲೆಗೆ ಬರೋಬ್ಬರಿ 14 ಅಸಲಿ ಆಟೋ ರಿಕ್ಷಾ ಖರೀದಿಸಬಹುದು.

ಭಾರತದ ಹಲವು ಉತ್ಪನ್ನಗಳನ್ನು, ಬದುಕಿನ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯ ಬ್ರ್ಯಾಂಡ್ ಕಾಪಿ ಮಾಡಿ ತಮ್ಮ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದೆ. ಈಗಾಗಲೇ ಕೊಲ್ಹಾಪುರಿ ಚಪ್ಪಲ್‌ನ್ನು ಪ್ರದಾ ಬ್ರ್ಯಾಂಡ್ ಮೂಲಕ ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿದೆ. ಇದೀಗ ಭಾರತದ ಆಟೋ ರಿಕ್ಷಾ ರೂಪದ ಹ್ಯಾಂಡ್ ಬ್ಯಾಗ್‌ನ್ನು ಲೂಯಿಸ್ ವಿಟಾನ್ ನಿರ್ಮಾಣ ಮಾಡಿದೆ. ಇದೀಗ ಮಾರುಕಟ್ಟೆ ಬಿಡುಗಡೆ ಮಾಡಲು ಸಜ್ಜಾಗಿದೆ.

 

 

ಲೂಯಿಸ್ ವಿಟಾನ್ ಆಟೋ ಹ್ಯಾಂಡ್ ಬ್ಯಾಗ್ ಬೆಲೆ ಎಷ್ಟು?

ಆಟೋ ರಿಕ್ಷಾ ಹೋಲುವ ಹ್ಯಾಂಡ್ ಬ್ಯಾಗ್‌ನ್ನು ಲೂಯಿಸ್ ವಿಟಾನ್ ನಿರ್ಮಿಸಿದೆ. ಪಕ್ಕಾ ಆಟೋ ರಿಕ್ಷಾ ರೀತಿಯಲ್ಲೇ ಈ ಬ್ಯಾಗ್ ತಯಾರಿಸಲಾಗಿದೆ. ಆಟೋದ ಪ್ರಮುಖ ಹಳದಿ ಬಣ್ಣ, ಚಕ್ರ ಸೇರಿದಂತೆ ಎಲ್ಲವನ್ನೂ ಅಷ್ಟು ನಾಜೂಕಾಗಿ ತಯಾರಿಸಲಾಗಿದೆ. ಈ ಹ್ಯಾಂಡ್ ಬ್ಯಾಕ್ ಲೂಯಿಸ್ ವಿಟಾನ್ ಬ್ರ್ಯಾಂಡ್‌ನ ಕ್ಲಾಸಿಕ್ ಲೆಥರ್‌ನಿಂದ ತಯಾರಿಸಿದೆ. ಗುಣಮಟ್ಟದಲ್ಲಿ ಲೂಯಿಸ್ ವಿಟಾನ್ ಕುರಿತು ಎರಡು ಮಾತಿಲ್ಲ. ಆದರೆ ಆ ಆಟೋ ರಿಕ್ಷಾ ಹ್ಯಾಂಡ್ ಬ್ಯಾಗ್ ಬೆಲೆ ಬರೋಬ್ಬರಿ 35 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.

ಒಂದು ಆಟೋ ಹ್ಯಾಂಡ್ ಬ್ಯಾಗ್ ಬೆಲೆಗೆ ಅಸಲಿ 14 ಆಟೋ ರಿಕ್ಷಾ ಖರೀದಿಸಬಹುದು

ಲೂಯಿಸ್ ವಿಟಾನ್ ಒಂದು ಆಟೋ ರಿಕ್ಷಾ ಹ್ಯಾಂಡ್ ಬ್ಯಾಗ್ ಬೆಲೆ 35 ಲಕ್ಷ ರೂಪಾಯಿ. ಈ ಬೆಲೆಯಲ್ಲಿ ಅಸಲಿ 14 ಆಟೋ ರಿಕ್ಷಾ ಖರೀದಿಹುದು. ಹೌದು, ಭಾರತದ ಮಾರುಕಟ್ಟೆಯಲ್ಿ ಆಟೋ ರಿಕ್ಷಾ ಬೆಲೆ 2.34 ಲಕ್ಷ ರೂಪಾಯಿಯಿಂದ 2.36 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಹೀಗಾಗಿ 35 ಲಕ್ಷ ರೂಪಾಯಿಯಲ್ಲಿ ಸರಿಸುಮಾರು 14 ಅಸಲಿ ಆಟೋ ರಿಕ್ಷಾ ಬರಲಿದೆ.

ಬಡವರ ಬದುಕು, ಶ್ರೀಮಂತರ ಫ್ಯಾಶನ್

ಲೂಯಿಸ್ ವಿಟಾನ್ ಆಟೋ ರಿಕ್ಷಾ ಹ್ಯಾಂಡ್ ಬ್ಯಾಗ್ ಕುರಿತು ಫೋಟೋ, ವಿಡಿಯೋ ಹೊರಬೀಳುತ್ತಿದ್ದಂತೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಆಟೋ ರಿಕ್ಷಾ ಬಡವರ ಬದುಕು, ಆದರೆ ಶ್ರೀಮಂತರಿಗೆ ಫ್ಯಾಶನ್ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ವಿದೇಶಿ ಬ್ರ್ಯಾಂಡ್‌ಗಳು ಭಾರತೀಯ ಉತ್ಪನ್ನ, ಭಾರತದ ಜೀವನ ಪದ್ಧತಿ ಮೇಲೆ ಯಾಕೆ ಕಣ್ಣು ಹಾಕಿದೆ? ಪ್ರದಾ ಇತ್ತೀಚೆಗೆ ಕೊಲ್ಹಾಪುರಿ ಚಪ್ಪಲ್ ಕಾಪಿ ಮಾಡಿತ್ತು, ಇದೀಗ ಆಟೋ ರಿಕ್ಷಾವನ್ನೇ ಲೂಯಿಸ್ ವಿಟಾನ್ ಹ್ಯಾಂಡ್ ಬ್ಯಾಗ್ ಆಗಿ ಬಿಡುಗಡೆ ಮಾಡುತ್ತಿದೆ. ಕಾರಣವೇನು ಎಂದು ಹಲವರು ಪ್ರಶ್ನಿಸಿದ್ದಾರೆ.

ಲೂಯಿಸ್ ವಿಟಾನ್ ಈ ರೀತಿ ಭಿನ್ನವಾಗಿ ಬ್ಯಾಗ್ ತಯಾರಿಸಿ ಬಿಡುಗಡೆ ಮಾಡುತ್ತಿರುವುದು ಮೊದಲೇನಲ್ಲ. ಈಗಾಗಲೇ ವಿಮಾನ, ಮೀನು, ಬರ್ಗರ್ ಸೇರಿದಂತೆ ಹಲವು ರೀತಿಯ ಬ್ಯಾಗ್ ಬಿಡುಗಡೆ ಮಾಡಿದೆ. ಇನ್ನು ಹಲೇ ಕಾಲದ ಸೂಟ್ ಕೇಸ್ ರೀತಿಯ ಬ್ಯಾಗ್ ಸೇರಿದಂತೆ ವಿಂಟೇಜ್ ಶೈಲಿಯಲ್ಲೂ ಲೂಯಿಸ್ ವಿಟಾನ್ ಬ್ಯಾಗ್ ಬಿಡುಗಡೆ ಮಾಡಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!