ಸಾವಿರ ವರ್ಷಗಳ ಹಿಂದೆಯೂ ಹೀಗೆ ನಡೆಯುತ್ತಿತ್ತು ಕಾಸ್ಮೆಟಿಕ್ ಸರ್ಜರಿ!

By Suvarna NewsFirst Published Apr 19, 2024, 1:52 PM IST
Highlights

ಕಾಸ್ಮೆಟಿಕ್ ಸರ್ಜರಿ ಹೆಸರು ಈಗ ಎಲ್ಲರಿಗೂ ತಿಳಿದಿದೆ. ಅನೇಕರು ತಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು ಈ ಶಸ್ತ್ರಚಿಕಿತ್ಸೆಗೆ ಒಳಗಾಗ್ತಾರೆ. ಆದ್ರೆ ಹಳೆ ಕಾಲದ ಜನರೂ ಇಂಥ ಪ್ರಯೋಗ ಮಾಡ್ತಿದ್ದರು ಅಂದ್ರೆ ನಂಬೋದು ಕಷ್ಟ. ಅದಕ್ಕೀಗ ಸಾಕ್ಷ್ಯ ಸಿಕ್ಕಿದೆ.
 

ನಾವು ಹಿಂದಿನವರಿಗಿಂತ ಬುದ್ಧಿವಂತರು.. ನಮ್ಮಲ್ಲಿ ಸಾಕಷ್ಟು ಸಂಶೋಧನೆಯಾಗಿದೆ. ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಿದೆ, ನಾನಾ ರೋಗಕ್ಕೆ ಚಿಕಿತ್ಸೆ ಕಂಡು ಹಿಡಿದಿದ್ದೇವೆ ಎಂದು ಎಲ್ಲರೂ ಮಾತನಾಡ್ತಾರೆ. ಅದು ಸತ್ಯ ಕೂಡ ಹೌದು. ಆದ್ರೆ ಹಿಂದಿನ ಜನರು ಅಂದ್ರೆ 500 - ಸಾವಿರ ವರ್ಷದ ಹಿಂದಿನ ಜನರು ಹೇಗಿದ್ದರು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಹಳೆ ಅವಶೇಷಗಳು ಪತ್ತೆಯಾದಾಗ ಅದ್ರ ಬಗ್ಗೆ ಸಂಶೋಧನೆ ನಡೆಯುತ್ತದೆ. ಆಗ ಅವರು ಹೇಗಿದ್ದರು, ಏನು ಮಾಡ್ತಿದ್ದರು ಎಂಬ ವಿಷ್ಯ ಬಹಿರಂಗವಾಗುತ್ತದೆ. ಈಗಾಗಲೇ ಹಿಂದಿನ ಕಾಲದ ಜನರು ಮಾಡ್ತಿದ್ದ ಕೆಲ ಕೆಲಸಗಳು ನಮ್ಮ ಹುಬ್ಬೇರಿಸುವಂತೆ ಮಾಡಿವೆ. ಈಗ ಅಂಥಹದ್ದೇ ಒಂದು ವಿಷ್ಯ ಹೊರಬಿದ್ದಿದೆ.

ದೇಹದ ಸೌಂದರ್ಯ (Beauty) ಕ್ಕೆ ಹೆಚ್ಚಿನ ಮಹತ್ವ ನೀಡುವ ಜನರು ನಾನಾ ರೀತಿಯ ಪ್ರಯೋಗ ಮಾಡ್ತಾರೆ. ಅದ್ರಲ್ಲಿ ಕಾಸ್ಮೆಟಿಕ್ (Cosmetic) ಸರ್ಜರಿ ಅಥವಾ ಪ್ಲಾಸ್ಟಿಕ್ ಸರ್ಜರಿ (Surgery) ಕೂಡ ಸೇರಿದೆ. ಕಾಸ್ಮೆಟಿಕ್ ಸರ್ಜರಿ ಶುರುವಾಗಿದ್ದು ಯಾವಾಗ ಅಂತ ನಮ್ಮನ್ನು ಪ್ರಶ್ನೆ ಮಾಡಿದ್ರೆ ನಾವು ಕಳೆದ ಕೆಲವು ವರ್ಷಗಳ ಹಿಂದೆ ಅಂತಾ ಉತ್ತರ ನೀಡ್ತೇವೆ. ಆದ್ರೆ ನಾವಂದುಕೊಂಡಿದ್ದು ಸುಳ್ಳು ಎಂಬುದಕ್ಕೆ ಈಗ ಸಾಕ್ಷ್ಯ ಸಿಕ್ಕಿದೆ.

ಇಂಡಿಗೋ ವಿಮಾನದಲ್ಲಿ ನೀಡೋ ಉಪ್ಪಿಟ್ಟಲ್ಲಿ ಮ್ಯಾಗಿಗಿಂತ ಹೆಚ್ಚು ಸೋಡಿಯಂ ಇದೆಯೆಂಂದ ಹೆಲ್ತ್ ಇನ್‌ಫ್ಲುಯೆನ್ಸರ್!

ಸ್ವೀಡನ್ ನಲ್ಲಿ ಸಿಕ್ಕ ಅಸ್ಥಿಪಂಜರಗಳು ಹಿಂದಿನ ಕಾಲದಲ್ಲಿಯೇ ಕಾಸ್ಮಿಟಿಕ್ ಸರ್ಜರಿ ಇತ್ತು ಎಂಬುದನ್ನು ಹೇಳಿವೆ. ಅದರ ಪ್ರಕಾರ ಸುಮಾರು 1000 ವರ್ಷಗಳ ಹಿಂದೆ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಆಗಿನ ಜನರು ಮಾಡ್ತಿದ್ದರು. 

ಜರ್ಮನ್ ವಿಜ್ಞಾನಿಗಳ ತಂಡ, ಸ್ವೀಡನ್‌ನ ಪುರಾತತ್ತ್ವ ಇಲಾಖೆಯಲ್ಲಿ ಮೂರು ಉದ್ದನೆಯ ತಲೆಬುರುಡೆ ಪತ್ತೆ ಮಾಡಿದೆ. ಅದು ಸಾವಿರ ವರ್ಷಗಳ ಹಿಂದಿನ ತಲೆಬುರುಡೆ. ಇದು ಮಹಿಳೆಯರದ್ದು ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ವಿಜ್ಞಾನಿಗಳ ಪ್ರಕಾರ, ವೈಕಿಂಗ್ ಮಹಿಳೆಯರು ಆಗ್ಲೇ ಕಾಸ್ಮೆಟಿಕ್ ಕಾರ್ಯವಿಧಾನಕ್ಕೆ ಒಳಗಾಗ್ತಿದ್ದರು ಎಂದು ಅಸ್ಥಿಪಂಜರ ನೋಡಿ ವಿಜ್ಞಾನಿಗಳು ದಂಗಾಗಿದ್ದಾರೆ. ತಲೆಬುರುಡೆ ಮೃದುವಾಗಿದೆ. ಹಾಗಾಗಿ ಅದನ್ನು ಮಹಿಳೆಯರದ್ದು ಎಂದಿರುವ ವಿಜ್ಞಾನಿಗಳು, ಆಗಿನ ಕಾಲದಲ್ಲಿ ಮಹಿಳೆಯರು ಸೌಂದರ್ಯ ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ಕಾರ್ಯವಿಧಾನಕ್ಕೆ ಒಳಗಾಗ್ತಿರಬಹುದು, ಹಾಗಾಗಿಯೇ ಅವರ ತಲೆಬುರುಡೆ ಉದ್ದವಾಗ್ತಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. 

ಈ ಹಿಂದೆಯೇ ಶಸ್ತ್ರಚಿಕಿತ್ಸೆ ಬಗ್ಗೆ ಅನೇಕ ಪುರಾವೆ ಸಿಕ್ಕಿದೆ. ಆದರೆ ಕಾಸ್ಮೆಟಿಕ್ ಸರ್ಜರಿ ಬಗ್ಗೆ ಸ್ಪಷ್ಟವಾದ ಪುರಾವೆ ಇದಾಗಿದೆ. ಮಹಿಳೆಯರ ಸೌಂದರ್ಯ ವೃದ್ಧಿಸಲು ಬಾಲ್ಯದಲ್ಲಿಯೇ ಈ ಚಿಕಿತ್ಸೆ ನಡೆಸುತ್ತಿತ್ತು. ಅಂದ್ರೆ ಆಗಿನ ಕಾಲದ ವಿಜ್ಞಾನಿಗಳು ಎಷ್ಟು ಮುಂದುವರೆದಿದ್ದರು ಎಂಬುದನ್ನು ನೀವು ಅರಿಯಬಹುದು. ತಲೆ ಬುರುಡೆ ಸಿಕ್ಕ ಈ ಮಹಿಳೆಯರು ಎಲ್ಲಿಯವರು ಎಂಬುದು ಗೊತ್ತಿಲ್ಲ. ಅವರು ಎಲ್ಲಿಂದ ಬಂದವರು, ಅವರಿಗೆ ಈ ಚಿಕಿತ್ಸೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ. ಆದ್ರೆ ಅವರು ಕಾಸ್ಮೆಟಿಕ್ ಕಾರ್ಯವಿಧಾನಕ್ಕೆ ಒಳಗಾಗಿದ್ದರು ಎಂಬುದು ನೂರಕ್ಕೆ ನೂರು ಸತ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಮಹಿಳೆಯರ ತಲೆಬುರುಡೆಗಳನ್ನು ಬಾಲ್ಯದಲ್ಲಿಯೇ ಬದಲಾಯಿಸಲಾಯಿತು ಎಂಬುದನ್ನು ಅಸ್ಥಿಪಂಜರಗಳು ಸ್ಪಷ್ಟವಾಗಿ ತೋರಿಸುತ್ತವೆ. ಅವರ ತಲೆಯ ಮೂಳೆಗಳು ಸಾಕಷ್ಟು ಮೃದುವಾಗಿವೆ. ತಲೆಯನ್ನು ಉದ್ದವಾಗಿಸಲು, ಮಗುವಿನ ತಲೆಯ ಸುತ್ತಲೂ ಬ್ಯಾಂಡೇಜ್ ಗಳನ್ನು ಸುತ್ತಿಡಲಾಗುತ್ತಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಭಾರತದ ಮಹಿಳೆಯರು ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡ್ತಾರೆ?

ಉದ್ದನೆ ತಲೆ ಹೊಂದಿರುವವರು ಸುಂದರ: ಉದ್ದ ತಲೆ ಹೊಂದಿರುವವರು ಸುಂದರವೆಂದು ಆಗಿನ ಜನರು ಬಯಸಿದ್ದರು. ಹಾಗಾಗಿಯೇ ಅವರು ಈ ಚಿಕಿತ್ಸೆಗೆ ಒಳಗಾಗ್ತಿದ್ದರು. ಉದ್ದನೆ ತಲೆ ಹೊಂದಿರುವವರು ಜ್ಞಾನಿಗಳು ಎಂಬ ನಂಬಿಕೆಯೂ ಅವರಲ್ಲಿತ್ತು. ಆದ್ರೆ ಈ ರೀತಿ ತಲೆಯನ್ನು ಉದ್ದ ಮಾಡುವುದು ಅಪಾಯಕಾರಿ. ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಈಗಿನ ವಿಜ್ಞಾನಿಗಳು ಹೇಳಿದ್ದಾರೆ. 

click me!