ಶೇವಿಂಗ್ ಮಾಡಿದ್ರೆ ಉರಿ ಎನ್ನುವ ಕಾರಣಕ್ಕೆ ಕೆಲವರು ಫುಲ್ ಶೇವ್ ಮಾಡೋ ಸಹವಾಸಕ್ಕೆ ಹೋಗೋದಿಲ್ಲ. ಮತ್ತೆ ಕೆಲವರು ಕಷ್ಟಪಟ್ಟು ಶೇವಿಂಗ್ ಮಾಡಿಕೊಳ್ತಾರೆ. ಶೇವಿಂಗ್ ನಂತ್ರ ಉರಿ, ಅಲರ್ಜಿ ಎನ್ನುವ ಭಯ ಇನ್ಮುಂದೆ ಬೇಡ. ಈ ಮನೆ ಮದ್ದನ್ನು ಪ್ರಯೋಗಿಸಿ.
ಸೌಂದರ್ಯದ ವಿಷ್ಯ ಬಂದಾಗ ಮಹಿಳೆಯರು ಮುಂದಿದ್ರೂ, ಪುರುಷರು ಹಿಂದೆ ಬಿದ್ದಿಲ್ಲ. ಮುಖದ ಸೌಂದರ್ಯಕ್ಕೆ ಹುಡುಗ್ರು ಕೂಡ ಮಹತ್ವ ನೀಡ್ತಾರೆ. ಹಾಗಾಗಿಯೇ ಗಡ್ಡವನ್ನು ಪ್ರೀತಿಯಿಂದ ಬೆಳೆಸುವ ಕೆಲ ಹುಡುಗರಿದ್ದಾರೆ. ಮತ್ತೆ ಕೆಲವರು ಫುಲ್ ಶೇವ್ ಇಷ್ಟಪಡ್ತಾರೆ. ಶೇವಿಂಗ್ ಮಾಡೋವಾಗ ಎಚ್ಚರಿಕೆ ವಹಿಸ್ಬೇಕಾಗುತ್ತದೆ. ಶೇವಿಂಗ್ ಮಾಡುವಾಗ ಸ್ವಲ್ಪ ಗಮನ ಬೇರೆ ಕಡೆ ಹೋದ್ರೂ ಚರ್ಮ ಕತ್ತರಿಸುವ ಸಾಧ್ಯತೆಯಿರುತ್ತದೆ. ಹಾಗೆಯೇ ಎಲ್ಲರಿಗೂ ಶೇವಿಂಗ್ ಕ್ರೀಮ್ ಹೊಂದಾಣಿಕೆಯಾಗೋದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಶೇವಿಂಗ್ ಕ್ರೀಮ್ ಕೆಮಿಕಲ್ ಮಿಕ್ಸ್ ಆಗಿರುವ ಕಾರಣ ಚರ್ಮದ ಅಲರ್ಜಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲರ್ಜಿಯಿಂದ ಕೆಲವರಿಗೆ ಚರ್ಮದ ಮೇಲೆ ದುದ್ದುಗಳಾಗುತ್ತವೆ. ಶೇವಿಂಗ್ ಮಾಡಿದ ನಂತರ ಉರಿ ಕಾಣಿಸಿಕೊಳ್ಳುವುದು ಸಾಮಾನ್ಯ. ತುಂಬಾ ದಿನಗಳ ನಂತ್ರ ಶೇವಿಂಗ್ ಮಾಡಿದಾಗ ಉರಿ ಜೊತೆ ಚರ್ಮ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಶೇವಿಂಗ್ ನಂತ್ರ ಕಿರಿಕಿರಿ ಆಗ್ಬಾರದು ಅಂದ್ರೆ ನೀವು ಮನೆ ಮದ್ದಿನ ಪ್ರಯೋಗ ಮಾಡಬಹುದು. ಇದ್ರಿಂದ ಸೆಪ್ಟಿಕ್ ಸಮಸ್ಯೆ ಕೂಡ ದೂರವಾಗುತ್ತದೆ. ಉರಿ ಕೂಡ ಇರೋದಿಲ್ಲ. ಇಂದು ನಾವು ಶೇವಿಂಗ್ ನಂತ್ರ ಮಾಡ್ಬೇಕಾದ ಮನೆ ಮದ್ದುಗಳು ಯಾವುವು ಎಂಬುದನ್ನು ಹೇಳ್ತೇವೆ.
ಆಲಂ (Alum) ನೀರು ( ಪಟಿಕ ) : ಶೇವಿಂಗ್ (Shaving) ಮಾಡುವಾಗ ಮುಖ (Face) ದ ಚರ್ಮ (Skin) ಕ್ಕೆ ಬ್ಲೇಡ್ ತಾಗಿದ್ರೆ ರಕ್ತ ಬರುತ್ತದೆ. ಸಣ್ಣ ಗಾಯವಾದ್ರೂ ನೋವು ವಿಪರೀತ. ನೀವು ಈ ನೋವು ಹಾಗೂ ಉರಿಯಿಂದ ಪರಿಹಾರ ಕಂಡುಕೊಳ್ಳಬೇಕೆಂದ್ರೆ ಆಲಂ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಆಲಂ ನೀರು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಆಲಂ ನೀರು ರಕ್ತ ಸೋರುವುದನ್ನು ನಿಲ್ಲಿಸುತ್ತದೆ. ಹಾಗೆಯೇ ಇದ್ರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
ಸ್ಟೈಲಿಶ್ ಆಗಿ ಕಾಣಲು Color Lense ಬಳಸ್ತೀರಾ? ಸ್ವಲ್ಪ ಹುಷಾರು
ಅಲೋವೆರಾ ಜೆಲ್ (aloe vera gel) ನಲ್ಲಿದೆ ಪರಿಹಾರ : ಅಲೋವೆರಾ ಅನೇಕ ರೋಗಕ್ಕೆ ಮದ್ದು. ಹಾಗೆಯೇ ಚರ್ಮದ ಆರೋಗ್ಯಕ್ಕೆ ಅದು ಬಹಳ ಪ್ರಯೋಜನಕಾರಿ. ಅಲೋವೆರಾ ತಂಪಿನ ಅನುಭವವನ್ನು ನೀಡುತ್ತದೆ. ಅಲೋವೆರಾ ಜೆಲ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಶೇವಿಂಗ್ ನಂತ್ರ ಆಗುವ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ನೀವು ಅಲೋವೆರಾ ಜೆಲ್ ಬಳಸಬಹುದು. ಅಲೋವೆರಾ ಎಲೆ ತೆಗೆದು ಅದರ ಸಿಪ್ಪೆ ತೆಗೆದು ಒಳಗಿರುವ ಜೆಲನ್ನು ನೀವು ಹಚ್ಚಬಹುದು. ಇಲ್ಲವೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಜೆಲ್ ಕೂಡ ನೀವು ಬಳಸಬಹುದು. ಶೇವಿಂಗ್ ನಂತ್ರ ಆಗುವ ಕೆಂಪು ದುದ್ದು ಮತ್ತು ಅಲರ್ಜಿಯನ್ನು ಇದು ತೆಗೆಯುತ್ತದೆ.
ಅರಿಶಿನದ ನೀರು (Turmeric Water) ಬಹಳ ಒಳ್ಳೆಯದು : ಶೇವಿಂಗ್ (Shaving) ವೇಳೆ ನಿಮ್ಮ ಮುಖ ಕೆಂಪಾಗಿದ್ದು ಕಿರಿಕಿರಿಯಾಗ್ತಿದ್ದರೆ ನೀವು ಅರಿಶಿನದ ನೀರನ್ನು ಕೂಡ ಬಳಸಬಹುದು. ಅರಿಶಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇದು ಚರ್ಮದ ಸೋಂಕನ್ನು (Infection) ತೆಗೆಯಲು ಸಹಾಯ ಮಾಡುತ್ತದೆ. ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಶೇವಿಂಗ್ ನಿಂದ ಮುಖ ಕೆಂಪಾಗಿದ್ದರೆ ಅರಿಶಿನವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ. ಒಂದ್ವೇಳೆ ಶೇವಿಂಗ್ ನಂತ್ರ ಚರ್ಮಕ್ಕೆ ಹಾನಿಯಾಗಿದ್ದು, ರಕ್ತ (Bleed) ಬರ್ತಿದ್ದರೂ ನೀವು ಅರಿಶಿನ ಬಳಸಬಹುದು. ಸ್ವಲ್ಪ ಅರಿಶಿನವನ್ನು ನೀವು ಗಾಯದ ಮೇಲೆ ಇಡಬೇಕು. ಇದ್ರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ. ಯಾವುದೇ ಸೆಪ್ಟಿಕ್ ಆಗದಂತೆ ಅರಿಶಿನ ಚರ್ಮವನ್ನು ರಕ್ಷಿಸುತ್ತದೆ.
ಬೊಟೊಕ್ಸ್ ಟ್ರೀಟ್‌ಮೆಂಟ್ ಪಡ್ಕೊಂಡ್ರೆ ಮುಖ ಪ್ಲಾಸ್ಟಿಕ್‌ನಂತಾಗುತ್ತಾ ?
ಐಸ್ (Ice) ಬಳಕೆ : ಶೇವಿಂಗ್ ಮಾಡುವಾಗ ಉರಿ, ತುರಿಕೆ ಮತ್ತು ಅಲರ್ಜಿ ನಿಮ್ಮನ್ನು ಕಾಡಿದ್ರೆ ನೀವು ಐಸ್ ಬಳಸಬಹುದು. ಇದಕ್ಕಾಗಿ ಐಸ್ ಕ್ಯೂಬ್ ತೆಗೆದುಕೊಂಡು ಶೇವಿಂಗ್ ಮಾಡಿದ ನಂತರ ಮುಖಕ್ಕೆ ಮಸಾಜ್ ಮಾಡಿ. ಇದು ತ್ವಚೆಯನ್ನು ಬಹುಬೇಗ ತಂಪಾಗಿಸುತ್ತದೆ. ಅಲ್ಲದೆ ಚರ್ಮಕ್ಕೆ ವಿಶೇಷ ಹೊಳಪು ಬರುತ್ತದೆ.