ಅನಂತ್‌ ಅಂಬಾನಿ ಕುರ್ತಾದಲ್ಲಿ ಕಾರ್ಟಿಯರ್‌ ಪ್ಯಾಂಥರ್‌ ಪದಕ: ಏನಿದರ ಇತಿಹಾಸ? ವಿಶೇಷತೆ?

By Suvarna News  |  First Published Jan 25, 2023, 4:21 PM IST

ಮುಖೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದೆ. ಶ್ರೀಮಂತ ಕುಟುಂಬದ ಕುಡಿಯ ದಿರಿಸಿನಲ್ಲಿ ಕಾರ್ಟಿಯರ್‌ ಪ್ಯಾಂಥರ್‌ ಪದಕ ಗೋಚರಿಸಿದೆ. ಅಚ್ಚರಿಯೇನಿಲ್ಲ, ಏಕೆಂದರೆ, ಇದು ಸಿರಿವಂತರಿಗೇ ಮೀಸಲಾದ ಅಪೂರ್ವ ಆಭರಣ.
 


ಎರಡು ಸಮಾರಂಭಗಳು ಇತ್ತೀಚೆಗೆ ಇಡೀ ದೇಶದ ಗಮನ ಸೆಳೆದವು. ಕ್ರಿಕೆಟಿಗ ಕೆ.ಎಲ್. ರಾಹುಲ್‌ ಜತೆಗೆ ಬಾಲಿವುಡ್‌ ನಟಿ ಹಾಗೂ ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ವಿವಾಹ ಮತ್ತು ದೇಶದ ಸಿರಿವಂತ ಮುಖೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ಎಂಗೇಜ್‌ ಮೆಂಟ್‌ ಕಾರ್ಯಕ್ರಮದ ಸುದ್ದಿಗಳಿಗೆ ಕಿವಿಗೊಡದವರು ಇರಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಈ ಎರಡೂ ಸಮಾರಂಭಗಳು ಸುದ್ದಿಪ್ರಿಯರ ಮನತಣಿಸಿದವು. ಅನಂತ್‌ ಅಂಬಾನಿಯ ದೊಡ್ಡ ದೇಹಕ್ಕೆ ಕಾಮೆಂಟ್‌ ಗಳೂ ಬಂದವು. ಮುಂಬೈನಲ್ಲಿ ಅಂಬಾನಿ ನಿವಾಸದಲ್ಲಿ ನಡೆದ ಈ ನಿಶ್ಚಿತಾರ್ಥ ಇದೀಗ ಮತ್ತೊಂದು ಬಗೆಯಲ್ಲಿ ಸುದ್ದಿ ಮಾಡುತ್ತಿದೆ. ಅದೆಂದರೆ, ಅನಂತ್‌ ಅಂಬಾನಿ ಧರಿಸಿದ್ದ ಪದಕವೊಂದು ಇದೀಗ ಎಲ್ಲರ ಗಮನ ಸೆಳೆದಿದೆ.

ನಿಶ್ಚಿತಾರ್ಥ ಸಮಾರಂಭದಲ್ಲಿ ಅನಂತ್‌ ಅಂಬಾನಿ ತುಸು ಸಾಮಾನ್ಯ ಎನಿಸುವಂತಹ ಬಣ್ಣದ ದಿರಿಸು ಧರಿಸಿದ್ದರು. ದಟ್ಟ ನೀಲಿ ಬಣ್ಣದ ಶೆರ್ವಾನಿ ಹಾಗೂ ಕುರ್ತಾ ಧರಿಸಿ ಮಿಂಚಿದ್ದರು. ಆದರೆ, ಅವರೆದುರು ರಾಧಿಕಾ ಮರ್ಚೆಂಟ್‌ ಇನ್ನಷ್ಟು ಸುಂದರವಾಗಿ ಕಂಗೊಳಿಸಿದ್ದರು. ಸಾಂಪ್ರದಾಯಿಕವಾಗಿ ನಡೆದ ಈ ಸಮಾರಂಭದಲ್ಲಿ ಅನಂತ್‌ ಅಂಬಾನಿ ಅತಿ ವಿಶಿಷ್ಟ ಎನ್ನಿಸುವಂತಹ ಕಾರ್ಟಿಯರ್‌ ಪ್ಯಾಂಥರ್‌ ಪದಕ ಧರಿಸಿದ್ದರು ಎನ್ನುವುದು ಇದೀಗ ಭಾರೀ ಸುದ್ದಿಯಲ್ಲಿದೆ. ಏಕೆಂದರೆ, ಇದರ ಇತಿಹಾಸವೇ ಕುತೂಹಲಕಾರಿಯಾಗಿದೆ.

Latest Videos

undefined

ಅನಂತ್‌ ಅಂಬಾನಿ (Anant Ambani)… ದೇಶದ ಅತಿದೊಡ್ಡ ಬ್ಯುಸಿನೆಸ್‌ ಕುಳ (Business Tycoon) ಎನಿಸಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ (Mukhesh Ambani) ವಂಶದ ಕಿರಿಯ ಕುಡಿ. 2014ರವರೆಗೂ ಇವರ ತೂಕ ಬರೋಬ್ಬರಿ 175 ಕೆಜಿ. 2016ರ ಹೊತ್ತಿಗೆ ಕೇವಲ 8 ತಿಂಗಳಲ್ಲಿ ಬರೋಬ್ಬರಿ 108 ಕೆಜಿ ತೂಕ ಇಳಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದರು. ಅಸ್ತಮಾಕ್ಕೆ ತೆಗೆದುಕೊಳ್ಳುತ್ತಿದ್ದ ಔಷಧಿಯ (Medicine) ಪರಿಣಾಮವಾಗಿ ಇವರ ತೂಕ ಯದ್ವಾತದ್ವಾ ಏರಿಕೆಯಾಗಿತ್ತು. ಬಳಿಕ, ಸೂಕ್ತ ದಿನಚರಿ ಅಳವಡಿಸಿಕೊಂಡು ತೂಕ ಇಳಿಸಿಕೊಂಡಿದ್ದರು. ಈಗಲೂ ಇವರದ್ದು ತುಸು ದಢೂತಿ (Obese) ದೇಹವೇ. ಇತ್ತೀಚೆಗೆ ಜನವರಿ 19ರಂದು ಇವರ ನಿಶ್ಚಿತಾರ್ಥ (Engagement) ನೆರವೇರಿದೆ. 

ಇವರ ಸಂಗಾತಿಯಾಗುವ ರಾಧಿಕಾ ಮರ್ಚೆಂಟ್‌ (Radhika Merchant) ಚಿನ್ನದ (Gold) ಬಣ್ಣದ ರೇಷಿಮೆ (Silk) ಲೆಹೆಂಗಾದಲ್ಲಿ ಮಿಂಚಿದ್ದರೆ, ಅನಂತ್‌ ಅಂಬಾನಿ ನೀಲಿ (Blue) ಬಣ್ಣದ ಕುರ್ತಾ (Kurta) ಮೇಲೊಂದು ಜಾಕೆಟ್‌ ಧರಿಸಿದ್ದರು. ಇದಕ್ಕೆ ಅದ್ಭುತವಾದದ್ದೊಂದು ಪದಕದ ಕೊಂಡಿಯನ್ನು (Brooch) ಅಳವಡಿಸಲಾಗಿತ್ತು. ಸಮಾರಂಭದಲ್ಲಿ ಭಾಗಿಯಾದವರು ಈ ಪದಕದ ಮೇಲಿಂದ ಕಣ್ಣು ಕೀಳಲು ಸಾಧ್ಯವಾಗದಷ್ಟು ಆಕರ್ಷಕವಾಗಿತ್ತು. ಪ್ರಿಂಟೆಡ್‌ ಕೋಟ್‌ ಮೇಲೆ ಕಾರ್ಟಿಯರ್‌ ಪ್ಯಾಂಥರ್‌ ಪದಕವಿತ್ತು.  ಇದಕ್ಕೊಂದು ಭವ್ಯವಾದ ಇತಿಹಾಸವೇ (History) ಇದೆ ಎನ್ನುವುದು ಹಲವರಿಗೆ ತಿಳಿದಿರಲಿಕ್ಕಿಲ್ಲ. 

ನೈಜ ಶುದ್ಧ ವಜ್ರ, ಗೋಮೇಧಕ: ಈ ಕಾರ್ಟಿಯರ್‌ ಪ್ಯಾಂಥರ್‌ (Cartier Panther) ಪದಕವನ್ನು ಸಾಮಾನ್ಯವಾಗಿ ಪ್ಲಾಟಿನಂ (Platinum) ಅಥವಾ ಚಿನ್ನದಿಂದ ತಯಾರಿಸಲಾಗುತ್ತದೆ. ಅನಂತ್‌ ಧರಿಸಿದ್ದ ಪದಕಕ್ಕೆ ನೈಜವಾದ ಶುದ್ಧವಾದ ವಜ್ರಗಳನ್ನು (Diamonds) ಬಳಸಲಾಗಿದೆ. ಗೋಮೇಧಕದ (Onyx) ಹರಳುಗಳೂ ಇದ್ದು, ಕಪ್ಪನೆಯ ಗೋಮೇಧಕದ ಮುಂಭಾಗ ಹಾಗೂ ಪಿಯರ್‌ ಆಕಾರದ (Pear Shape) ಪಚ್ಚೆಯನ್ನು (Emerald) ಒಳಗೊಂಡಿದೆ. ಇದು ನಿಶ್ಚಿತವಾಗಿ ಸಂಪತ್ತಿನ ಪುರಾವೆಯಂತಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಇನ್ನು, ರೂಬಿ ಹಾಗೂ ಕೇವಲ ವಜ್ರಗಳಿಂದಲೂ ಇಂತಹ ಪದಕಗಳನ್ನು ತಯಾರಿಸಲಾಗುತ್ತದೆ. ಇವುಗಳನ್ನು ಸಂಗ್ರಹಿಸುವುದು ಅತಿ ಶ್ರೀಮಂತರ ಖಯಾಲಿ. 

1914ರಲ್ಲಿ ವಿನ್ಯಾಸ: ಕಾರ್ಟಿಯರ್‌ ಪ್ಯಾಂಥರ್‌ ಪದಕ ಕೊಂಡಿಗಳನ್ನು 1914ರಲ್ಲಿ ಜಾಕಸ್‌ ಕಾರ್ಟಿಯರ್‌ ಎಂಬ ವಿನ್ಯಾಸಕಾರರೊಬ್ಬರು ವಿನ್ಯಾಸ ಮಾಡಿದ್ದಾರೆ ಎನ್ನುತ್ತಾರೆ ಇತಿಹಾಸ ತಜ್ಞರು. ಇಂತಹ ಪದಕವನ್ನು ರಷ್ಯಾದ (Russia) ರಾಜಕುಮಾರ (Duke) ಜಾರ್ಜ್‌ ಮಿಖಾಯಿಲೊವಿಚ್‌ ಅವರ ಪತ್ನಿಗಾಗಿ ವಿನ್ಯಾಸ ಮಾಡಲಾಗಿತ್ತು. ಪ್ಯಾಂಥರ್‌ ಪ್ರಭಾವ ಫ್ರೆಂಚ್‌ ಸಾಹಿತ್ಯದಲ್ಲೂ ಕಂಡುಬರುತ್ತದೆ. ಪ್ಯಾಂಥರ್‌ ಅನ್ನು ಸಾಮರ್ಥ್ಯ (Power) ಮತ್ತು ಶಕ್ತಿಯ (Strength) ಸಂಕೇತವನ್ನಾಗಿ ಬಳಕೆ ಮಾಡಲಾಗುತ್ತದೆ. ಇವುಗಳನ್ನು ಪ್ರತಿನಿಧಿಸುವುದಕ್ಕಾಗಿ ಪ್ಯಾಂಥರ್‌ ಕಾರ್ಟಿಯರ್‌ ಪದಕಗಳನ್ನು ವಿನ್ಯಾಸಗೊಳಿಸಲಾಗಿದೆ.

ಹಲವು ಖ್ಯಾತನಾಮರು ಪ್ಯಾಂಥರ್‌ ಪದಕ ಕೊಂಡಿಗಳನ್ನು ಭಾರೀ ಇಷ್ಟಪಡುತ್ತಾರೆ. ಏಂಜೆಲೀನಾ ಜೋಲಿ (Angelina Jolie), ಸಾರಾ ಜೆಸ್ಸಿಕಾ ಪಾರ್ಕರ್‌ (Sarah Jessika Parker), ಕೇಟ್‌ ಬ್ಲಾಂಚೆಟ್‌ ಅವರು ಇದರ ಜಾಹೀರಾತುಗಳಲ್ಲೂ ಇದ್ದಾರೆ. ಇದು, ಅದ್ದೂರಿ ಮದುಮಕ್ಕಳಿಗೆ (Brides) ಹೇಳಿಮಾಡಿಸಿದ ಆಭರಣವಾಗಿದೆ. 

&

 

click me!