ಮುಖ ಪಳ ಪಳ ಹೊಳೆಯಬೇಕೆ? ಕೆಮಿಕಲ್ ಬಿಟ್ಟು ಮನೆಯಲ್ಲಿಯೇ ತಯಾರಿಸಿ ಶಂಖಪುಷ್ಪದ ಫೇಸ್ ಸೀರಮ್

Published : Nov 23, 2026, 03:33 PM IST
Blue Butterfly Pea Flowers

ಸಾರಾಂಶ

ಶಂಖಪುಷ್ಪದ ನೀಲಿ ಹೂವುಗಳನ್ನು ಬಳಸಿ ಮನೆಯಲ್ಲಿಯೇ ಸುಲಭವಾಗಿ ಫೇಸ್ ಸೀರಮ್ ತಯಾರಿಸಬಹುದು. ಇದನ್ನು ಬಳಸೋದ್ರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಸುಕ್ಕುಗಳನ್ನು ನಿವಾರಿಸುತ್ತೆ. ನಿಮ್ಮ ಮುಖವು ನ್ಯಾಚುರಲ್ ಆಗಿ ಲಕ ಲಕ ಎಂದು ಹೊಳೆಯೋದಕ್ಕೆ ಶುರುವಾಗುತ್ತೆ.

ಶಂಖಪುಷ್ಪದಿಂದ ಮುಖದ ಕಾಂತಿ ಹೆಚ್ಚಿಸಿ

ಮುಖದ ಮೇಲೆ ಕಪ್ಪು ಕಲೆಗಳು, ಮೊಡವೆಗಳ ಗುರುತುಗಳು ಮತ್ತು ಸುಕ್ಕುಗಳು ಕಾಣಿಸಿಕೊಳ್ಳಲು ಆರಂಭಿಸಿದಾಗ ಅನೇಕರು ದುಬಾರಿ ಸ್ಕಿನ್ ಕೇರ್ ಉತ್ಪನ್ನಗಳಿಗಾಗಿ ಹಣ ಖರ್ಚು ಮಾಡುತ್ತಾರೆ. ಇನ್ನು ಕೆಲವರು ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಚರ್ಮದ ಆರೈಕೆ ಮಾಡಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶಂಖಪುಷ್ಪದ ನೀಲಿ ಹೂವುಗಳಿಂದ ತಯಾರಿಸಿದ ಫೇಸ್ ಸೀರಮ್ ಸಾಕಷ್ಟು ಚರ್ಚೆಯಲ್ಲಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿ ಕಾಂತಿ ಹೆಚ್ಚುತ್ತದೆ ಮತ್ತು ಕಪ್ಪು ಕಲೆಗಳು ಹಾಗೂ ಸುಕ್ಕುಗಳು ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ? ಇದನ್ನು ತಯಾರಿಸುವ ಸುಲಭ ವಿಧಾನ ಮತ್ತು ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಯೋಣ.

ಶಂಖಪುಷ್ಪ ಫೇಸ್ ಸೀರಮ್ ತಯಾರಿಸಲು ಏನೆಲ್ಲಾ ಬೇಕು?

  • 6ರಿಂದ 8 ತಾಜಾ ಅಥವಾ ಒಣಗಿದ ಶಂಖಪುಷ್ಪ ಹೂವುಗಳು
  • ಒಂದೂವರೆ ಕಪ್ ನೀರು
  • 2 ದೊಡ್ಡ ಚಮಚ ಅಗಸೆ ಬೀಜಗಳು
  • 1 ಸಣ್ಣ ಚಮಚ ಅಲೋವೆರಾ ಜೆಲ್
  • ಕೆಲವು ಹನಿ ಬಾದಾಮಿ ಎಣ್ಣೆ (ಬೇಕಾದರೆ ಮಾತ್ರ)

ಮನೆಯಲ್ಲಿಯೇ ಶಂಖಪುಷ್ಪ ಫೇಸ್ ಸೀರಮ್ ತಯಾರಿಸುವುದು ಹೇಗೆ?

  • ಮೊದಲು ಶಂಖಪುಷ್ಪ ಹೂವುಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ಈಗ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದಕ್ಕೆ ಹೂವುಗಳನ್ನು ಹಾಕಿ ಸುಮಾರು 10 ನಿಮಿಷಗಳ ಕಾಲ ಮುಚ್ಚಿಡಿ. ಇದರಿಂದ ಹೂವುಗಳ ನೀಲಿ ಬಣ್ಣ ನೀರಿನಲ್ಲಿ ಬೆರೆಯುತ್ತದೆ. ನಂತರ ಈ ನೀರನ್ನು ತಣ್ಣಗಾಗಲು ಬಿಡಿ ಮತ್ತು ಸೋಸಿಕೊಳ್ಳಿ.
  • ಈಗ ಅಗಸೆ ಬೀಜಗಳನ್ನು ಸ್ವಲ್ಪ ನೀರಿನಲ್ಲಿ ಹಾಕಿ ಕುದಿಸಿ. ನೀರು ಸ್ವಲ್ಪ ಗಟ್ಟಿಯಾಗಲು ಆರಂಭಿಸಿದಾಗ ಅದನ್ನು ಸೋಸಿ ತಣ್ಣಗಾಗಲು ಬಿಡಿ.
  • ಈಗ ಸಿದ್ಧಪಡಿಸಿಕೊಂಡ ಅಗಸೆ ಬೀಜಗಳ ಜೆಲ್‌ಗೆ ಶಂಖಪುಷ್ಪ ಹೂವಿನ ನೀರು ಮತ್ತು ಅಲೋವೆರಾ ಜೆಲ್ ಸೇರಿಸಿ. ಬೇಕಿದ್ದರೆ ಕೆಲವು ಹನಿ ಬಾದಾಮಿ ಎಣ್ಣೆಯನ್ನೂ ಸೇರಿಸಬಹುದು.
  • ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಸ್ವಚ್ಛವಾದ ಡಬ್ಬಿಯಲ್ಲಿ ಸಂಗ್ರಹಿಸಿಡಿ. ಬೇಕಿದ್ದಲ್ಲಿ ವಿಟಾಮಿನ್ ಇ ಕ್ಯಾಪ್ಸುಲ್ ಸೇರಿಸಬಹುದು

ಶಂಖಪುಷ್ಪ ಸೀರಮ್‌ನಿಂದ ಮುಖದ ಕಲೆ ಮತ್ತು ಸುಕ್ಕುಗಳು ಮಾಯವಾಗುತ್ತವೆಯೇ?

ಶಂಖಪುಷ್ಪ ಹೂವುಗಳಲ್ಲಿ ಆಂಥೋಸಯಾನಿನ್‌ನಂತಹ ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಆದರೆ ಇವುಗಳಿಂದ ತಯಾರಿಸಿದ ಮನೆಯ ಸೀರಮ್ ಮುಖದ ಮೇಲಿನ ಕಪ್ಪು ಕಲೆಗಳು, ಪಿಗ್ಮೆಂಟೇಶನ್ ಅಥವಾ ಸುಕ್ಕುಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಸ್ವಲ್ಪ ಮಟ್ಟಿಗೆ ಇದು ಕಲೆಗಳನ್ನು ನಿವಾರಿಸಿ, ಮುಖ ಹೊಳೆಯುವಂತೆ ಮಾಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Baby Earrings: ಚಿಕ್ಕ ಮಕ್ಕಳಿಗೆ ಕ್ಯೂಟ್ ಲುಕ್ ನೀಡುವ ಇಯರ್‌ರಿಂಗ್ ಡಿಸೈನ್ಸ್..!
Pearl Earrings: ಎಥ್ನಿಕ್ ಉಡುಪುಗಳಿಗೆ ಹೇಳಿ ಮಾಡಿಸಿದ ಪರ್ಲ್ ಇಯರಿಂಗ್ಸ್ ವಿನ್ಯಾಸಗಳಿವು!