ಗುಂಗುರು ಸುಂದರಿಯ ಗೋಳು ನಿಮಗೇನು ಗೊತ್ತು?

By Web DeskFirst Published Mar 2, 2019, 12:20 PM IST
Highlights

ರೇಷ್ಮೆಯಂಥ ಕೂದಲಿದ್ದರೆ ಗುಂಗುರು ಕೂದಲಿನ ಮೇಲೆ ವ್ಯಾಮೋಹ. ಗುಂಗುರು ಕೂದಲಿದ್ದವರಿಗೆ ಅವರದ್ದೇ ಗೋಳು. ನಿರ್ವಹಣೆಯೇ ಕಷ್ವವೆಂಬ ಗೊಣಗಾಟ. ಆದರೆ, ಅದಕ್ಕೂ ಇಲ್ಲಿದೆ ಪರಿಹಾರ....

ಗುಂಗುರು ಕೂದಲಿನ ಬೆಡಗಿಯರಲ್ಲಿ ಏನೋ ಒಂಥರಾ ವಿಶೇಷ ಲುಕ್ ಇರುತ್ತದೆ. ಎಲ್ಲೆರೆದುರು ಅವರು ಎದ್ದು ಕಾಣುತ್ತಾರೆ. ಅಲ್ಲದೇ ಸ್ಟೈಲಿಶ್ ಆಗಿಯೂ ಕಾಣುತ್ತಾರೆ. ಆದರೆ ಇದನ್ನು ನೋಡಿಕೊಳ್ಳುವುದು ಮಾತ್ರ ತುಂಬಾ ಕಷ್ಟ. ಇದನ್ನು ಚೆನ್ನಾಗಿ ಪೋಷಿಸಲು ಇಲ್ಲಿವೆ ಸರಳ ವಿಧಾನಗಳು...

ನೀರೆಯರ ಬ್ಯೂಟಿ ಹೆಚ್ಚಿಸಲು ಬಂದಿದೆ ಟ್ರೆಂಡಿಂಗ್ ಜುಮ್ಕಾ

  • ಕೂದಲು ಗುಂಗುರಾಗಿದ್ದರೆ ಹೆಚ್ಚು ಶ್ಯಾಂಪೂ ಬಳಸಬೇಡಿ. ವಾರದಲ್ಲಿ ಎರಡು ಬಾರಿ ಮಾತ್ರ ಶ್ಯಾಂಪೂ ಮಾಡಿದರೆ ಸಾಕು.
  • ಎಷ್ಟು ಸಲ ಕೂದಲಿಗೆ ಶ್ಯಾಂಪೂ ಮಾಡುತ್ತೀರಿ, ಕಂಡೀಷನರ್ ಹಾಕಲೇಬೇಕು.
  • ಗುಂಗುರು ಕೂದಲಿಗೆ ಬೇಕಾದ ಶ್ಯಾಂಪೂ ಮತ್ತು ಕಂಡೀಷನರ್ ಸಿಗುತ್ತದೆ. ಅದನ್ನೇ ಬಳಸಿ.
  • ಗುಂಗುರು ಕೂದಲಿಗಾಗಿ ಯಾವಾಗಲೂ ದೊಡ್ಡ ಹಲ್ಲಿನ ಬಾಚಣಿಗೆ ಬಳಸಿ. ಸಣ್ಣ ಹಲ್ಲಿನ ಬಾಚಣಿಗೆ ಅಥವಾ ಬ್ರಷ್‌ನಲ್ಲಿ ತಲೆ ಬಾಚಬೇಡಿ. ಹೀಗ್ ಮಾಡಿದರೆ ಕೂದಲು ಹೆಚ್ಚು ಉದುರುತ್ತದೆ.
  • ಒದ್ದೆ ಕೂದಲನ್ನು ಟವೆಲ್‌ನಿಂದ ಜೋರಾಗಿ ಒರೆಸಬೇಡಿ. ಬದಲಾಗಿ ಕೈಗಳಿಂದಲೇ ನಯವಾಗಿ ಮಸಾಜ್ ಮಾಡಿ.
  • ಸೂರ್ಯನ ಬಿಸಿಲಿಗೆ ಒಣಗಲು ಬಿಡಿ. ಹೇರ್ ಡ್ರಯರ್ ಬಳಸಬೇಡಿ. ಇದರಿಂದ ಕೂದಲಿಗೆ ಎಫೆಕ್ಟ್ ಆಗುತ್ತದೆ.
  • ಗುಂಗುರು ಕೂದಲು ಹೆಚ್ಚಾಗಿ ಉದುರದಿರಲು ಸಿಲ್ಕ್ ಅಥವಾ ಸ್ಯಾಟಿನ್ ಕವರ್‌ವುಳ್ಳ ದಿಂಬಿನಲ್ಲಿ ನಿದ್ರಿಸಿ.
click me!