
ಈಗ ಮಾರುಕಟ್ಟೆ (Market) ಯಲ್ಲಿ ಬಗೆ ಬಗೆಯ ಸೆಂಟ್ (Perfume) ಲಗ್ಗೆಯಿಟ್ಟಿದೆ. ಜನರು ತಮಗಿಷ್ಟವಾಗುವ ಸೆಂಟ್ ಖರೀದಿ (Purchase) ಮಾಡ್ತಾರೆ. ಹಿಂದೆ ದೇಹದಿಂದ ಗಬ್ಬು ವಾಸನೆ ಬರಬಾರದು ಎಂಬ ಕಾರಣಕ್ಕೆ ಹಾಗೂ ಮೈ ಬೆವರು ವಾಸನೆ ಬರಬಾರದು ಎನ್ನುವ ಕಾರಣಕ್ಕೆ ಸೆಂಟ್ ಬಳಸ್ತಿದ್ದರು. ಈಗ ಸೆಂಟ್ ಬಳಕೆ ಒಂದು ಫ್ಯಾಷನ್. ದಿನಕ್ಕೊಂದು ಸೆಂಟ್ ಬಳಸುವ ಜನರನ್ನು ನಾವು ನೋಡ್ಬಹುದು. ದೇಶಿ ಸೆಂಟ್, ವಿದೇಶಿ ಸೆಂಟ್ ಹೀಗೆ ಬಗೆ ಬಗೆಯ ಸೆಂಟ್ ಮನೆಯಲ್ಲಿರುತ್ತದೆ. ಇಡೀ ದೇಹಕ್ಕೆ ಸೆಂಟ್ ಹೊಯ್ದುಕೊಳ್ಳುವವರಿದ್ದಾರೆ. ಆದ್ರೂ ಅದ್ರ ಸುವಾಸನೆ ಬಹಳ ಕಾಲ ಇರುವುದಿಲ್ಲ. ಇದೇ ಕಾರಣಕ್ಕೆ ಅನೇಕರು ದಿನದಲ್ಲಿ ನಾಲ್ಕೈದು ಬಾರಿ ಸುಗಂಧ ದ್ರವ್ಯ ಬಳಸ್ತಾರೆ. ದೀರ್ಘ ಕಾಲ ಸೆಂಟ್ ಪರಿಮಳ ಇರಬೇಕೆಂದ್ರೆ ಅದನ್ನು ಸರಿಯಾಗಿ ಬಳಕೆ ಮಾಡ್ಬೇಕು. ಬಗೆ ಬಗೆಯ ಸೆಂಟ್ ಖರೀದಿ ಮಾಡಿದ್ರೆ ಸಾಲದು. ಅದನ್ನು ಹೇಗೆ ಬಳಕೆ ಮಾಡಬೇಕು ಎಂಬುದು ಕೂಡ ತಿಳಿದಿರಬೇಕು. ಇಂದು ನಾವು ಸುಗಂಧ ದ್ರವ್ಯವನ್ನು ಹೇಗೆ ಬಳಕೆ ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಸುಗಂಧ ದ್ರವ್ಯ ಬಳಕೆ ಹೀಗಿರಲಿ ? :
ಪಲ್ಸ್ ಪಾಯಿಂಟ್ : ಅನೇಕ ಜನರು ದೇಹದಾದ್ಯಂತ ಸುಗಂಧ ದ್ರವ್ಯವನ್ನು ಸಿಂಪಡಿಸುತ್ತಾರೆ. ಈ ಕಾರಣದಿಂದಾಗಿ, ಇದು ತ್ವರಿತವಾಗಿ ಹಾರುತ್ತದೆ ಮತ್ತು ಸುಗಂಧ ದ್ರವ್ಯವು ಹೆಚ್ಚು ವ್ಯರ್ಥವಾಗುತ್ತದೆ. ಹಾಗಾಗಿ ಮಣಿಕಟ್ಟುಗಳು, ಮೊಣಕೈಗಳು, ಮೊಣಕಾಲುಗಳ ಹಿಂದೆ, ಕುತ್ತಿಗೆಯಂತಹ ರಕ್ತನಾಳಗಳ ಮೇಲೆ ನಿಮ್ಮ ಸುಗಂಧ ದ್ರವ್ಯವನ್ನು ಹಚ್ಚಬೇಕು.
HAIR HEALTH : ಕೂದಲು ಉದುರಲು ಅತಿಯಾದ ಹಸ್ತಮೈಥುನವೂ ಒಂದು ಕಾರಣ
ಸುಗಂಧ ದ್ರವ್ಯವನ್ನು ಉಜ್ಜಬೇಡಿ : ಸುಗಂಧ ದ್ರವ್ಯವನ್ನು ಸಿಂಪಡಿಸುವಾಗ ಜಾಗರೂಕರಾಗಿರಿ. ಅನೇಕ ಬಾರಿ ಸೆಂಟ್ ಹಚ್ಚಿದ ನಂತ್ರ ಅದನ್ನು ಕೈನಲ್ಲಿ ಉಜ್ಜುತ್ತಾರೆ. ಹೀಗೆ ಮಾಡಿದ್ರೆ ಎರಡು ಸಮಸ್ಯೆಯಾಗುತ್ತದೆ. ಸೆಂಟ್ ಉಜ್ಜಿದ್ರೆ ಅದ್ರಲ್ಲಿರುವ ಕೆಮಿಕಲ್ ನಲ್ಲಿ ಬದಲಾವಣೆಯಾಗುತ್ತದೆ. ಹಾಗೆ ಸೆಂಟ್ ಸುವಾಸನೆ ಬೇಗ ಹೋಗುತ್ತದೆ. ಅಲ್ಲದೆ ಸೂಕ್ಷ್ಮವಾದ ತ್ವಚೆ ಮೇಲೆ ಪರಿಣಾಮ ಬೀರುತ್ತದೆ. ಚರ್ಮದಲ್ಲಿ ತುರಿಕೆ, ದುದ್ದು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಡ್ರೈ ಸ್ಕಿನ್ ಮೇಲೆ ಸುಗಂಧ ದ್ರವ್ಯ ಬಳಕೆ ಬೇಡ : ಒಣ ಚರ್ಮದ ಮೇಲೆ ಸುಗಂಧ ದ್ರವ್ಯವನ್ನು ಎಂದಿಗೂ ಬಳಸಬೇಡಿ. ಡ್ರೈ ಸ್ಕಿನ್ ನ ಮೇಲೆ ಸೆಂಟ್ ಸಿಂಪಡಿಸಿದ್ರೆ ಅದರ ಅದರ ಪರಿಣಾಮ ಬೇಗ ಕಡಿಮೆಯಾಗುತ್ತದೆ. ಪರ್ಫ್ಯೂಮ್ ಹಚ್ಚುವ ಮುನ್ನ ಆ ಜಾಗವನ್ನು ಖಂಡಿತವಾಗಿ ತೇವಗೊಳಿಸಿ. ಚರ್ಮ ತೇವಗೊಂಡ ನಂತ್ರ ಸೆಂಟ್ ಹಚ್ಚಿ. ಆಗ ದೀರ್ಘಕಾಲದವರೆಗೆ ಸೆಂಟ್ ಉಳಿಯುತ್ತದೆ.
ಬಟ್ಟೆ ಮೇಲೆ ಸೆಂಟ್ : ಅನೇಕರು ಬಟ್ಟೆಗಳ ಮೇಲೆ ಯಾವಾಗಲೂ ಸುಗಂಧ ದ್ರವ್ಯವನ್ನು ಅನ್ವಯಿಸುತ್ತಾರೆ. ಬಟ್ಟೆ ಮೇಲೆ ಸೆಂಟ್ ಹಾಕಿದ್ರೆ ಅದರ ಸುಗಂಧವು ದೀರ್ಘಕಾಲ ಉಳಿಯುವುದಿಲ್ಲ. ಪದೇ ಪದೇ ಬಟ್ಟೆ ಮೇಲೆ ಸೆಂಟ್ ಹಾಕಿದರೆ ಬಟ್ಟೆ ಮೇಲೆ ಕಲೆಯಾಗುತ್ತದೆ. ಬೆವರಿನ ಕಾರಣಕ್ಕೆ ಬಟ್ಟೆ ಮೇಲೆ ಹಾಕಿದ ಸೆಂಟ್ ಬೇಗ ಹಾರಿ ಹೋಗುತ್ತದೆ. ಇದರಿಂದ ಬಟ್ಟೆಗಳು ಹಾಳಾಗುವ ಸಾಧ್ಯತೆಗಳೂ ಇವೆ ಎಂಬುದನ್ನು ನೆನಪಿನಲ್ಲಿಡಿ.
ಜಿಮ್‌ನಲ್ಲಿ ತಿಂಗಳೆಲ್ಲಾ ಕಸರತ್ತು ಮಾಡಿದ್ರೂ ಬರದ ಸಿಕ್ಸ್ ಪ್ಯಾಕ್ ಒಂದೇ ಗಂಟೆಯಲ್ಲಿ ಬಂದಿದ್ದು ಹೇಗೆ?
ಸುಗಂಧ ದ್ರವ್ಯದ ಲೇಯರಿಂಗ್ : ಸುಗಂಧ ದ್ರವ್ಯದ ಲೇಯರಿಂಗ್ ಬಳಸುವುದು ಅಂದ್ರೆ ಒಂದೇ ಪರಿಮಳದ ಸೌಂದರ್ಯವರ್ಧಕ ಉತ್ಪನ್ನವನ್ನು ಬಳಸಿ. ಒಂದೇ ಪರಿಮಳದ ಬಾಡಿ ಲೋಷನ್, ಮಾಯಿಶ್ಚರೈಸರ್, ಬಾಡಿ ಮಿಸ್ಟ್, ಶವರ್ ಜೆಲ್ ಅಥವಾ ಡಿಯೋಡರೆಂಟ್ ಸ್ಪ್ರೇ ಬಳಸಿ. ಇದರಲ್ಲಿ ಬದಲಾವಣೆ ಮಾಡಬೇಡಿ.
ಬೇರೆಯವರ ಇಷ್ಟಕ್ಕಿಂತ ನಿಮ್ಮ ಇಷ್ಟಕ್ಕೆ ಮಹತ್ವ ನೀಡಿ : ಅನೇಕರು ಬೇರೆಯವರ ಸೆಂಟ್ ಇಷ್ಟವಾಗಿದೆ ಎಂಬ ಕಾರಣಕ್ಕೆ ತಾವೂ ಅದೇ ಸೆಂಟ್ ಖರೀದಿ ಮಾಡ್ತಾರೆ. ಆದ್ರೆ ಇದು ತಪ್ಪು. ನಿಮ್ಮಿಷ್ಟದಂತೆ ಸೆಂಟ್ ಖರೀದಿ ಮಾಡಿ. ಒಳ್ಳೆ ಬ್ರ್ಯಾಂಡ್ ನ ಸೆಂಟ್ ಖರೀದಿ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.