ಈ ಕಿತ್ತೋಗಿರೋ ಶೂಗಳ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

By Anusha Kb  |  First Published May 12, 2022, 10:27 AM IST
  • ಹೊಸ ಶೂ ಲಾಂಚ್‌ ಮಾಡಿದ ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಬಾಲೆನ್ಸಿಯಾಗ
  • ಚಿಂದಿಗಿಂತಲೂ ಕೆಟ್ಟದಾಗಿರುವ ಈ ಶೂಗಳ ಬೆಲೆ ಲಕ್ಷ ಲಕ್ಷ
  • ಬಾಲೆನ್ಸಿಯಾಗವನ್ನು ಟ್ರೋಲ್ ಮಾಡಿದ ನೆಟ್ಟಿಗರು

ನಿಮಗೆ ಖ್ಯಾತ ಬ್ರಾಂಡ್‌ಗಳ ಶೂ ಧರಿಸುವ ಹುಚ್ಚಿದರೆ ಅಥವಾ ನೀವು ಶೂಪ್ರಿಯರಾದರೆ ಬಹುಶಃ ನಿಮಗೆ ಈ ಶೂಗಳ ಬಗ್ಗೆ ತಿಳಿದಿರಬಹುದೇನೋ. ಖ್ಯಾತ ಐಷಾರಾಮಿ ಫ್ಯಾಷನ್ ಬ್ರಾಂಡ್ ಆಗಿರುವಂತಹ ಬಾಲೆನ್ಸಿಯಾಗ ಸಾಮಾಜಿಕ ಜಾಲತಾಣಗಳಲ್ಲಿ  ಹಾನಿಗೀಡಾದ ಶೂಗಳನ್ನು ಬಿಡುಗಡೆ ಮಾಡಿದ್ದು ಅದರ ಬೆಲೆ ರೂ 1.42 ಲಕ್ಷ ರೂ. ಆಗಿದೆ. ಆದರೆ ಕಿತ್ತೊಗಿರುವ ಶೂಗಳಿಗಿಂತಲೂ ಅಸಹ್ಯವಾಗಿ ಕಾಣುವ ಈ ಶೂಗಳ ಫೋಟೋಗಳನ್ನು ನೋಡಿ ನೆಟ್ಟಿಗರು ಬಾಲೆನ್ಸಿಯಾಗವನ್ನು ಫುಲ್ ಟ್ರೋಲ್ ಮಾಡ್ತಿದ್ದಾರೆ. 

ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ Balenciaga  (ಬಾಲೆನ್ಸಿಯಾಗ) ತನ್ನ ಹೊಸ ಸೂಪರ್-ಡಿಸ್ಟ್ರೆಸ್ಡ್ ಶೂಗಳು ಅಥವಾ 'ಪ್ಯಾರಿಸ್ ಸ್ನೀಕರ್' ಸಂಗ್ರಹಕ್ಕಾಗಿ ಆನ್‌ಲೈನ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿದೆ. ಕೇವಲ ನೂರು ಜೋಡಿ ಸೀಮಿತ ಆವೃತ್ತಿಯ ಸಂಪೂರ್ಣವಾಗಿ ಚಿಂದಿ ಆಗಿರುವ ಶೂಗಳನ್ನು ಹೊಂದಿರುವುದು ಈ ಬಾರಿಯ ವೈಶಿಷ್ಟ್ಯವಾಗಿದೆ. ಈ ಬಾಲೆನ್ಸಿಯಾಗ ಶೂಗಳ ಬೆಲೆ $1,850 (ರೂ. 1,42,962). ಅಲ್ಲದೇ ಈ ಶೂಗಳು ಪ್ರಸ್ತುತ ಪ್ರಪಂಚದಾದ್ಯಂತ ಮುಂಗಡವೇ ಬುಕ್ಕಿಂಗ್‌ಗೆ ಲಭ್ಯವಿವೆ. 

honestly why would anybody buy these new balenciaga shoes? might as well do it yourself pic.twitter.com/WH8BAdV9qQ

— alejandra (@wrkhs)

Tap to resize

Latest Videos

 

Did Balenciaga literally just take Converse shoes and throw them in a fire?! https://t.co/scZVbqfze8

— 🐱 Illegal Pink Cat 🐱 (@Pinkcatpol1)

Balenciaga is back at it with the poverty-chic pieces. They're selling these sneakers that look like they belonged to someone who could only afford one pair of shoes their entire adulthood for *625 DOLLARS.* Unchecked capitalism is mind-boggling. pic.twitter.com/TgBd1gWVUh

— ~NEENA ROE~ (@neenaroe)

 

ಬಾಲೆನ್ಸಿಯಾಗ ಸಂಸ್ಥೆಯವರು ಈ ಹೊಸ ಕಲೆಕ್ಷನ್‌ನ ಹಿಂದಿನ ಕಲ್ಪನೆಯನ್ನು ತಿಳಿಸುವ ನೋಟ್‌ನೊಂದಿಗೆ ಈ ಹೊಸ ಕಲೆಕ್ಷನ್‌ ಅನ್ನು ಘೋಷಿಸಿದ್ದಾರೆ. ಈ ಐಷಾರಾಮಿ ಬ್ರಾಂಡ್ ಪ್ರಕಾರ, ಉದ್ದೇಶಪೂರ್ವಕವಾಗಿ ಈ ಶೂಗಳನ್ನು ಕೊಳಕು ಮಾಡಲಾಗಿದೆ. ಈ ಕಿತ್ತೋಗಿರುವಂತಿರುವ ಶೂಗಳನ್ನು ಮಧ್ಯ-ಶತಮಾನದ ಅಥ್ಲೆಟಿಸಮ್,  ಕಪ್ಪು ಹಾಗೂ ಬಿಳಿ ಅಥವಾ ಕೆಂಪು ಬಣ್ಣಗಳ  ಟೈಮ್‌ಲೆಸ್ ಕ್ಯಾಶುಯಲ್ ಉಡುಗೆಗಳು ಹಾಗೂ ಬಿಳಿ ಬಣ್ಣದ ರಬ್ಬರ್ ಅಡಿಭಾಗದಿಂದ ರೂಪಿಸಿದ ಒಂದು ಮರುಪರಿಶೀಲಿಸಿದ ಕ್ಲಾಸಿಕ್ ವಿನ್ಯಾಸವಾಗಿದೆ. ಇದು ಹಾಳಾದ ಕ್ಯಾನ್ವಾಸ್ ಮತ್ತು ಒರಟು ಅಂಚುಗಳನ್ನು ಹೊಂದಿದೆ. ಈ ಸಂಗ್ರಹವು ಲೇಸ್-ಅಪ್ ಶೈಲಿಯಲ್ಲಿ ಬರುತ್ತದೆ.

ಒಲಿಂಪಿಕ್ಸ್‌ಗೆ ತಯಾರಾಗಲು ಆಥ್ಲೀಟ್‌ಗೆ ಶೂ ಕೊಡಿಸಿದ ಸೋನು ಸೂದ್

Balenciaga ದ ಅಧಿಕೃತ ಸೈಟ್‌ನಲ್ಲಿನ ವಿವರಣೆಯ ಪ್ರಕಾರ ಈ ಶೂಗಳನ್ನು  ಸಂಪೂರ್ಣವಾಗಿ ಚಿಂದಿಯಾದ ಹತ್ತಿ ಮತ್ತು ರಬ್ಬರ್ ಬಳಸಿ ತಯಾರಿಸಲಾಗುತ್ತದೆ. ಬಾಲೆನ್ಸಿಯಾಗ ಲೋಗೋದೊಂದಿಗೆ ಈ ಚಿಂದಿ ಶೂಗಳು ಆನ್‌ಲೈನ್‌ನಲ್ಲಿ ವಿಶ್ವಾದ್ಯಂತ ಲಭ್ಯವಿದೆ. ಇದು ಈಗಾಗಲೇ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಮಧ್ಯಪ್ರಾಚ್ಯ ಮಳಿಗೆಗಳಲ್ಲಿ ಮೇ 16 ರಂದು ಮತ್ತು ಜಪಾನ್‌ನಲ್ಲಿ ಮೇ 23 ರಂದು ಈ ಚಿಂದಿ ಶೂಗಳು ಸಿಗಲಿವೆ. ಈ ಶೂಗಳನ್ನು ನೋಡಿದರೆ, ನಿಜವಾಗಿಯೂ ಜೀವಿತಾವಧಿಯವರೆಗೂ ಇವು ಉಳಿಯಬಹುದೇ ಎಂಬ ಬಗ್ಗೆ ಶಂಕೆ ಮೂಡುವುದು. ಅದಕ್ಕಿಂತಲೂ ಹೆಚ್ಚು ವಿಪರ್ಯಾಸವೆಂದರೆ ಅವುಗಳಿಗೆ ಲಗತ್ತಿಸಲಾದ ಬೆಲೆ. 

ಮಕ್ಕಳ ಶೂನಲ್ಲಿ ರಾಜಕೀಯ ಎಂಟ್ರಿ: ಇಕ್ಕಟ್ಟಿಗೆ ಸಿಲುಕಿದ ಮುಖ್ಯೋಪಾಧ್ಯಾಯರು

ಈ ಶೂಗಳು ಹಾಗೂ ಅದರ ಬೆಲೆ ನೋಡಿದ ನೆಟ್ಟಿಗರು ಸಖತ್ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇವುಗಳನ್ನು ಗುಜರಿ ಸಾಮಾನುಗಳ ರಾಶಿಯಿಂದ ಉತ್ಖನನ ಮಾಡಿದಂತೆ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
 

click me!