
ಇಂದು ನಡೆದ ವಿಶ್ವ ಸುಂದರಿ (Miss Universe) ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ (Jennifer Barreto from Puerto Rico) ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದಿದ್ದಾರೆ. ಆದರೆ, ಈ ಗೆಲುವಿನ ಮೂಲಕ ಅವರು 74 ವರ್ಷಗಳ ಮಿಸ್ ಯೂನಿವರ್ಸ್ ದಾಖಲೆಯನ್ನು ಮುರಿದಿದ್ದಾರೆ. ಈ ಸ್ಪರ್ಧೆ ಆರಂಭವಾಗಿದ್ದು, 1952 ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಈ ಸ್ಪರ್ಧೆಯಲ್ಲಿ ಅವಕಾಶ ಇದ್ದುದು ಅವಿವಾಹಿತರಿಗೆ ಮಾತ್ರ. ಅದಕ್ಕಾಗಿಯೇ ಮಿಸ್ ಎಂದು ಹೆಸರು ಇಟ್ಟಿರುವುದು. ಏಕೆಂದರೆ ಮಿಸಸ್ ಅರ್ಥಾತ್ ವಿವಾಹಿತ ಸುಂದರಿಯರಿಗೆ ಬೇರೆಯದ್ದೇ ಸ್ಪರ್ಧೆಗಳಿವೆ. ಆದರೆ, ಈ ಬಾರಿ 74 ವರ್ಷಗಳ ಇತಿಹಾಸವನ್ನು ಜೆನ್ನಿಫರ್ ಬ್ಯಾರೆಟೊ ಮುರಿದಿದ್ದಾರೆ. ಏಕೆಂದರೆ, ಇವರು ಮಿಸ್ ಅಲ್ಲ, ಬದಲಿಗೆ ಏಳು ವರ್ಷದ ಮಗುವಿನ ಅಮ್ಮ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೂ ಕಾರಣವಾಗಿದೆ. ಮಿಸ್ ಯೂನಿವರ್ಸ್ ಎಂದು ಇರುವಾಗ ವಿವಾಹಿತೆಗೆ ಹೇಗೆ ಇದನ್ನು ಕೊಡಲು ಸಾಧ್ಯ ಎನ್ನುವ ಚರ್ಚೆ ಇದಾಗಿದೆ.
ಅಂದಹಾಗೆ, ಹಲವಾರು ದಶಕಗಳಿಂದ, ಪ್ರಪಂಚದಾದ್ಯಂತದ ಸೌಂದರ್ಯ ಸ್ಪರ್ಧೆಗಳು ಹೆಚ್ಚಾಗಿ ಅವಿವಾಹಿತ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದವು. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಆಯೋಜಕರು ವಿವಾಹಿತ ಮಹಿಳೆಯರು ಮತ್ತು ತಾಯಂದಿರಿಗೂ ಬಾಗಿಲು ತೆರೆಯುವುದರೊಂದಿಗೆ ವಿಷಯಗಳು ಬದಲಾಗಿವೆ. ವಿವಾಹಿತೆಯರಿಗೂ ಸೌಂದರ್ಯ ಸ್ಪರ್ಧೆಏರ್ಪಡಿಸಲಾಗುತ್ತದೆ. ಆದರೆ ಇದೀಗ, ಮೊಟ್ಟ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಕಿರೀಟ ಮಿಸಸ್ಗೆ ಹೋಗಿರುವುದು ಕುತೂಹಲವಾಗಿದೆ.
100 ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಿದ್ದರು. ಅದರಲ್ಲಿ ವಿವಾಹಿತೆಯಾಗಿರುವ ಜೆನ್ನಿಫರ್ ಕಿರೀಟ ಗೆದ್ದಿದ್ದಾರೆ. ಕುತೂಹಲಕಾರಿಯಾಗಿ, ಜೆನ್ನಿಫರ್ ಈ ವರ್ಷ ಮಾತ್ರ ಸೌಂದರ್ಯ ಸ್ಪರ್ಧೆಗಳ ಜಗತ್ತನ್ನು ಪ್ರವೇಶಿಸಿದರು. ಅವರು ಉನ್ನತ ಶಿಕ್ಷಣ ಪಡೆದಿದ್ದಾರೆ ಮತ್ತು ಮನೋವಿಜ್ಞಾನ ಮತ್ತು ಕ್ಲಿನಿಕಲ್ ಸಾಮಾಜಿಕ ಕಾರ್ಯದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ತಾಯಿಯಾಗುವುದರಿಂದ ಪ್ರತಿಷ್ಠಿತ ಕಿರೀಟವನ್ನು ಗೆಲ್ಲುವವರೆಗಿನ ಅವರ ಪ್ರಯಾಣವು ಪ್ರಮುಖ ಚರ್ಚಾಸ್ಪದ ವಿಷಯವಾಗಿದೆ.
ಭಾರತಕ್ಕೆ ಬಂದರೆ, ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಟಾಪ್ 30 ರಲ್ಲಿ ಸ್ಥಾನ ಪಡೆದರು ಆದರೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ. 2021 ರಲ್ಲಿ ಹರ್ನಾಜ್ ಸಂಧು ಕಿರೀಟವನ್ನು ಗೆದ್ದಾಗಿನಿಂದ ಭಾರತ ಮತ್ತೊಂದು ಮಿಸ್ ಯೂನಿವರ್ಸ್ ಪ್ರಶಸ್ತಿಗಾಗಿ ಕಾಯುತ್ತಿದೆ. ಸಾಮಾನ್ಯವಾಗಿ, ಮದುವೆ ಮತ್ತು ತಾಯ್ತನದ ನಂತರ ಮಹಿಳೆಯರು ಕೆಲವು ಕನಸುಗಳನ್ನು ತ್ಯಜಿಸಬೇಕು ಎಂಬ ಗ್ರಹಿಕೆ ಇದೆ. ಜೆನ್ನಿಫರ್ ಅವರ ಸಾಧನೆಯು ವಿಷಯಗಳು ಹೇಗೆ ಬದಲಾಗುತ್ತಿವೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಅವರ ಗೆಲುವು ಅವರ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಇನ್ನೂ ಅನೇಕ ಮಹಿಳೆಯರು ತಮ್ಮ ಕನಸುಗಳನ್ನು ಮುಂದುವರಿಸಲು ಪ್ರೋತ್ಸಾಹಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.