Video: ಸಲೂನ್‌ನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡೋದ್ಯಾಕೆ, ಮನೆಯಲ್ಲಿಯೇ ಮಾಡಿ ಹೇರ್ ಸ್ಪಾ

Published : Jul 20, 2025, 06:15 PM IST
hair spa

ಸಾರಾಂಶ

ನೀವು ಹಣ ಖರ್ಚು ಮಾಡದೆ ಮನೆಯಲ್ಲಿ ಸಲೂನ್‌ನಂತಹ ಹೇರ್ ಸ್ಪಾ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?. ಹೌದು, ಈ ಹೇರ್ ಸ್ಪಾ ಮಾಡಲು ಹೆಚ್ಚು ಖರ್ಚು ಮಾಡಬೇಕಾಗಿಲ್ಲ

Hair Spa at Home: ಧೂಳು, ಮಣ್ಣು, ಮಾಲಿನ್ಯದಂತಹ ಹಾನಿಕಾರಕ ಅಂಶಗಳು ಅನೇಕ ಸಂದರ್ಭಗಳಲ್ಲಿ ಕೂದಲನ್ನು ಹಾನಿಗೊಳಿಸುತ್ತವೆ. ಅಂತಹ ಸಮಯದಲ್ಲಿ ಕಾಲಕಾಲಕ್ಕೆ ಕೂದಲಿನ ಆರೈಕೆ ಮಾಡುವುದು ಅಗತ್ಯವಾಗುತ್ತದೆ. ಹೇರ್ ಸ್ಪಾ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಹೇರ್ ಸ್ಪಾ ಎಂದರೇನು ಮತ್ತು ಅದರ ಪ್ರಯೋಜನಗಳು ಮತ್ತು ಅದನ್ನು ಮನೆಯಲ್ಲಿಯೇ ಹೇಗೆ ಮಾಡುವುದು ಎಂಬುದನ್ನು ನೋಡೋಣ.

ಯಾವ ಹುಡುಗಿಗೆ ತಾನೆ ಮೃದುವಾದ ರೇಷ್ಮೆಯಂತಹ ಕೂದಲು ಇಷ್ಟವಾಗುವುದಿಲ್ಲ? ಆದರೆ ಕೂದಲು ಸುಂದರವಾಗಿ ಕಾಣಬೇಕೆಂದರೆ ಸ್ವಲ್ಪ ಕಷ್ಟಪಡಬೇಕು. ಆಗಾಗ್ಗೆ ಹುಡುಗಿಯರು ಡ್ರೈ ಕೂದಲಿನಿಂದ ಬೇಸತ್ತರೆ ಸಲೂನ್‌ಗೆ ಹೋಗುವ ಬಗ್ಗೆ ಯೋಚಿಸುತ್ತಾರೆ. ಆದರೆ, ಸಲೂನ್‌ನ ವೆಚ್ಚದ ಬಗ್ಗೆ ಯೋಚಿಸಿ ಕೊನೆಗೆ ಅಲ್ಲಿಗೆ ಹೋಗುವುದನ್ನು ಮುಂದೂಡುತ್ತಾರೆ. ಹಾಗೆ ನೋಡಿದರೆ ಸಲೂನ್‌ನಲ್ಲಿ ಮಾಡುವ ಹೇರ್ ಸ್ಪಾ 1000-1200 ರಿಂದ 3000 ವರೆಗೆ ಇರುತ್ತದೆ. ಎಲ್ಲರಿಗೂ ಅಷ್ಟು ಹಣ ಖರ್ಚು ಮಾಡಲು ಆಗುವುದಿಲ್ಲ. ಆದರೆ ನೀವು ಹಣ ಖರ್ಚು ಮಾಡದೆ ಮನೆಯಲ್ಲಿ ಸಲೂನ್‌ನಂತಹ ಹೇರ್ ಸ್ಪಾ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?. ಹೌದು, ಈ ಹೇರ್ ಸ್ಪಾ ಮಾಡಲು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಆದರೆ ಒಣ ಖರ್ಜೂರ ಮತ್ತು ಮೊಸರು ಬೇಕಾಗುತ್ತದೆ. ಹಾಗಾದರೆ ಬನ್ನಿ, ಈ ಎರಡನ್ನೂ ಬಳಸಿ ಮನೆಯಲ್ಲಿ ಈ ಹೇರ್ ಸ್ಪಾ ಕ್ರೀಮ್ ತಯಾರಿಸಬೇಕೆಂದು ನೋಡೋಣ..

ಹೇರ್ ಸ್ಪಾ ಕ್ರೀಮ್ ಮಾಡುವ ವಿಧಾನ
ಡಾ. ಮನೋಜ್ ದಾಸ್ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಹೇರ್ ಸ್ಪಾ ಕ್ರೀಮ್ ತಯಾರಿಸುವುದು ಹೇಗೆಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೇರ್ ಸ್ಪಾ ಕ್ರೀಮ್ ಮಾಡಲು ಒಣ ಖರ್ಜೂರದ ಬೀಜಗಳನ್ನು ತೆಗೆದು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮೊಸರು ಸೇರಿಸಿ (ಒಣ ಖರ್ಜೂರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರಬೇಕು) ರಾತ್ರಿಯಿಡೀ ನೆನೆಸಿ. ಮರುದಿನ ಬೆಳಿಗ್ಗೆ ಈ ಮಿಶ್ರಣವನ್ನು ಪೇಸ್ಟ್ ಮಾಡಿ ಇದಕ್ಕೆ ಸಮಾನ ಪ್ರಮಾಣದ ಅಲೋವೆರಾ ಜೆಲ್ ಸೇರಿಸಿದರೆ ಹೇರ್ ಸ್ಪಾ ಕ್ರೀಮ್ ಸಿದ್ಧವಾಗಿದೆ.

ಒಣ ಖರ್ಜೂರ ಮತ್ತು ಮೊಸರಿನ ಈ ಹೇರ್ ಸ್ಪಾ ಕ್ರೀಮ್ ಅನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ನಂತರ ತೊಳೆಯಿರಿ. ವಾರಕ್ಕೊಮ್ಮೆ ಈ ಪೇಸ್ಟ್ ಹಚ್ಚುವುದರಿಂದ ಕೂದಲಿನ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ, ನೀವು ಮತ್ತೆ ಹೇರ್ ಸ್ಪಾಗಾಗಿ ಸಲೂನ್‌ಗೆ ಹೋಗಬೇಕಾಗಿಲ್ಲ.

ಒಣ ಖರ್ಜೂರವು ಕೂದಲಿಗೆ ಹೊಳಪು ನೀಡುವ ಏಜೆಂಟ್ ಆಗಿದೆ. ಕೂದಲಿಗೆ ಹಾನಿಯಾಗದಂತೆ ಮತ್ತು ಕೂದಲು ಸೀಳುವುದನ್ನು ತಡೆಯುತ್ತದೆ. ಮತ್ತೊಂದೆಡೆ, ಮೊಸರಿನಲ್ಲಿ ಉತ್ತಮ ಕೊಬ್ಬುಗಳಿವೆ. ಇದು ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಲೋವೆರಾ calming ಮತ್ತು soothing ಗುಣಗಳಿಂದ ಸಮೃದ್ಧವಾಗಿದ್ದು, ಕೂದಲಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಕೂದಲು ಮೃದುವಾಗಿ ಕಾಣಲು…
ನಿಮ್ಮ ಕೂದಲು ಮೃದುವಾಗಿ ಕಾಣಲು ಬೇಕಾದರೆ ನೀವು ಹಾಲಿನಲ್ಲಿ ಜೇನುತುಪ್ಪವನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಬಹುದು. ನೀವು ಇದನ್ನ ನಂಬುವುದಿಲ್ಲ. ಆದರೆ ನಿಮ್ಮ ಕೂದಲು ರೇಷ್ಮೆಗಿಂತ ಮೃದುವಾಗುತ್ತದೆ.
ಮೃದುವಾದ ಕೂದಲಿಗಾಗಿ ಬಾಳೆಹಣ್ಣಿನ ಹೇರ್ ಮಾಸ್ಕ್ ಅನ್ನು ತಲೆಗೆ ಹಚ್ಚಬಹುದು. ಇದಕ್ಕಾಗಿ ಬಾಳೆಹಣ್ಣಿನಲ್ಲಿ ತೆಂಗಿನ ಎಣ್ಣೆ ಮತ್ತು ಸ್ವಲ್ಪ ಮೊಸರು ಬೆರೆಸಿ ಕೂದಲಿಗೆ ಹಚ್ಚಬಹುದು.
ಮೊಟ್ಟೆಯ ಹೇರ್ ಮಾಸ್ಕ್ ಅನ್ನು ತಲೆಗೆ ಹಚ್ಚುವುದರಿಂದ ಕೂದಲು ಮೃದುವಾಗಿ ಕಾಣುತ್ತದೆ. ಮೊಟ್ಟೆಯನ್ನು ಮೊಸರಿನೊಂದಿಗೆ ಬೆರೆಸಿ ತಲೆಗೆ ಹಚ್ಚಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!