ಬಾತ್‌ರೂಂನಿಂದ ಟವಲ್ ಸುತ್ತಿಕೊಂಡು ರಸ್ತೆಗಿಳಿದ ಯುವತಿ, ರೀಲ್ಸ್‌ ನಡುವೆ ಜಾರಿತು ಬಟ್ಟೆ!

By Chethan Kumar  |  First Published Aug 3, 2024, 12:28 PM IST

ಬಾತ್‌ರೂಂನಿಂದ ನೇರವಾಗಿ ರಸ್ತೆಗಿಳಿದ ಯುವತಿ ಟವಲ್ ಕಟ್ಟಿಕೊಂಡು ರಸ್ತೆಯಲ್ಲಿ ಓಡಾಡಿದ್ದಾಳೆ. ರೀಲ್ಸ್ ನಡುವೆ ಟವಲ್ ಜಾರಿಸಿದ ಯುವತಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾಳೆ.
 


ಮುಂಬೈ(ಆ.03) ಯುವತಿಯರು ಸ್ಕರ್ಟ್, ಶಾರ್ಟ್ ಡ್ರೆಸ್ ತೊಟ್ಟು ರಸ್ತೆಗಿಳಿದು ಮೋಡಿ ಮಾಡಿದ ಹಲವು ಘಟನೆಗಳಿವೆ. ರಸ್ತೆಯಲ್ಲಿ ಬಿಕಿನಿ ತೊಟ್ಟು ನಡೆದ ಉದಾಹರಣೆಗಳು ಕಡಿಮೆ. ಆದರೆ ಇಲ್ಲೊಬ್ಬ ಯುವತಿ ಸ್ನಾನದ ಟವೆಲ್ ಕಟ್ಟಿಕೊಂಡು ನಡು ರಸ್ತೆಯಲ್ಲಿ ಸಾಗಿದ್ದಾಳೆ. ಬಾತ್ ಟವೆಲ್‌ನಲ್ಲಿ ಕಾಣಿಸಿಕೊಂಡ ಈಕೆಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಇದರ ನಡುವೆ ಚಮಕ್ ನೀಡಿದ ಈ ಯುವತಿ, ಟವೆಲ್ ಬಿಚ್ಚಿ ಅಚ್ಚರಿ ನೀಡಿದ್ದಾಳೆ. ಈ ಕೆಯ ಟವಲ್ ವಾಕ್ ವಿಡಿಯೋ ಇದೀಗ ವೈರಲ್ ಆಗಿದೆ.

ಮುಂಬೈನ ಮಾಡೆಲ್ ತನುಮಿತಾ ಘೋಷ್ ಈ ಸಾಹಸ ಮಾಡಿದ್ದಾರೆ. ಖಾಸಗಿ ಫ್ಯಾಶನ್ ಸೂಪರ್‌ಸ್ಟಾರ್ ವಿನ್ನರ್ ಆಗಿರುವ ಈಕೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾಳೆ. ಇದೀಗ ಮುಂಬೈನ ರಸ್ತೆಯಲ್ಲಿ ಬಾತ್‌ರೂಂನಿಂದ ಸ್ನಾನ ಮಾಡಿಕೊಂಡು ನೇರವಾಗಿ ರಸ್ತೆಗಳಿದ ರೀತಿಯಲ್ಲಿ ಬಂದಿದ್ದಾಳೆ. ತುಂತುರ ಮಳೆ ನಡುವೆ ಈಕೆ ವಯ್ಯಾರಿಂದ ನಡೆದು ಸಾಗಿದ್ದಾಳೆ. 

Tap to resize

Latest Videos

ನಡು ರಸ್ತೆಯಲ್ಲಿ ಜೋಡಿಯ ರೊಮ್ಯಾನ್ಸ್, ಸಿನ್ಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಪಜೀತಿ ದೃಶ್ಯ ಸೆರೆ!

ಮುಂಬೈನ ಬಸ್ ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್, ರೆಸಿಡೆನ್ಶಿಯಲ್ ವಲಯದಲ್ಲಿ ಈಕೆ ಬಾತ್ ಟವೆಲ್ ಸುತ್ತಿಕೊಂಡು ರಸ್ತೆಯಲ್ಲಿ ನಡೆದಿದ್ದಾಳೆ. ಇದೇ ವೇಳೆ ಉದ್ದೇಶಪೂರ್ವಕವಾಗಿ ಈಕೆ ಟವೆಲ್ ಬಿಚ್ಚಿದ್ದಾಳೆ. ಟವೆಲ್ ಜಾರಿದಂತೆ ನಟಿಸಿದ್ದಾಳೆ. ಟವೆಲ್ ಜಾರುತ್ತಿದ್ದಂತೆ ನೆರೆದಿತ್ತ ಜನ ಅಚ್ಚರಿಗೊಂಡಿದ್ದಾರೆ. ಟವೆಲ್ ಒಳಗೆ ಮಿನಿ ಸ್ಕರ್ಟ್ ಧರಿಸಿದ್ದ ತುನುಮಿತಾ ಘೋಷ್ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.ತನುಮಿತಾ ಘೋಷ್ ಇದೆಲ್ಲಾ ರೀಲ್ಸ್‌ಗಾಗಿ ಮಾಡಿದ್ದಾಳೆ. ವಿಕ್ಕಿ ಕೌಶಾಲ್ ಅಭಿನಯದ ಬ್ಯಾಡ್ ನ್ಯೂಜ್ ಚಿತ್ರದ ತೌಬಾ ತೌಬಾ ಹಾಡಿಗೆ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ಈ ಮೂಲಕ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. 

ಈಕೆಯ  ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಸಭ್ಯತೆ ಇರಬೇಕು. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಮಾಡಿದರೆ, ಮಕ್ಕಳು ಹಾಗೂ ಯುವ ಸಮೂಹ ತಪ್ಪು ದಾರಿ ಹಿಡಿಯುವಂತೆ ಪ್ರೇರಪಿಸುವಂತಿದೆ. ಹೀಗಾಗಿ ತನುಮಿತಾ ಘೋಷ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇದು ಪ್ರಾಯೋಜಿತ ಇರಬಹುದು, ಅಥವಾ ರೀಲ್ಸ್‌ಗಾಗಿ ಮಾಡಿರಬಹುದು. ಸಾರ್ವಜನಿಕ ಪ್ರದೇಶದಲ್ಲಿ ಸಭ್ಯತೆ ಮೀರಬಾರದು ಎಂದು ಹಲವರು ಸೂಚಿಸಿದ್ದಾರೆ. ಮತ್ತೆ ಕೆಲವರು ಈಕೆಯ ಫ್ಯಾಶನ್ ಹಾಗೂ ಟವಲ್ ನಡೆಯನ್ನು ಪ್ರಶಂಸಿಸಿದ್ದಾರೆ. 

ರಸ್ತೆಯಲ್ಲಿ ಬೆತ್ತಲಾಗಿ ಜೋಡಿಯ ವಾಗ್ವಾದ, ವಾಹನ ಸವಾರರು ಚಿತ್ರಿಕರಿಸಿದ ಮಧ್ಯ ರಾತ್ರಿ ಘಟನೆ!

click me!