Beauty Tips: ಫೇಶಿಯಲ್ ಸ್ಟೀಮ್ ನೀರಿಗೆ ಗಿಡಮೂಲಿಕೆ ಹಾಕಿ ಮ್ಯಾಜಿಕ್ ನೋಡಿ

By Suvarna News  |  First Published Feb 7, 2024, 4:27 PM IST

ಸ್ಪೇಷನ್ ಡೇಗಾಗಿ ಸಿದ್ಧವಾಗುವ ಮೊದಲು ಮುಖದ ಸೌಂದರ್ಯಕ್ಕೆ ಮಹಿಳೆಯರು ಮಹತ್ವ ನೀಡ್ತಾರೆ. ಫೇಶಿಯಲ್ ಸ್ಟೀಮ್ ತೆಗೆದುಕೊಳ್ಳೋರ ಸಂಖ್ಯೆ ಹೆಚ್ಚಿದೆ. ನಿಮ್ಮ ಸೌಂದರ್ಯ ಡಬಲ್ ಆಗ್ಬೇಕು ಅಂದ್ರೆ ಈ ಕೆಳಗಿನ ಸಿಂಪಲ್ ಟಿಪ್ಸ್ ಫಾಲೋ ಮಾಡಿ. 


ಚಳಿಗಾಲ ಬಂತೆಂದರೆ ಅನೇಕ ಬಗೆಯ ಚರ್ಮದ ತೊಂದರೆಗಳು ಆರಂಭವಾಗುತ್ತದೆ. ಚರ್ಮ ಒರಟಾಗುವುದು, ಸುಕ್ಕುಗಟ್ಟುವುದು, ಶುಷ್ಕವಾಗುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಚಳಿಗಾಲದ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ಮುಖದ ಮೇಲಿನ ಮೊಡವೆ, ಕಲೆಗಳನ್ನು ಹೋಗಲಾಡಿಸಲು ಫೇಶಿಯಲ್ ಸ್ಟೀಮ್ ಬಹಳ ಉಪಯುಕ್ತವಾಗಿದೆ. ಮುಖ (Face) ದ ಮೇಲಿರುವ ಚಿಕ್ಕ ಚಿಕ್ಕ ರಂದ್ರಗಳಲ್ಲಿ ಸೇರಿಕೊಳ್ಳುವ ಧೂಳು, ಮೊಡವೆಗಳಿಗೆ ಕಾರಣವಾಗುತ್ತದೆ. ಮೊಡವೆಗಳಿಂದ ಮುಖದ ಮೇಲೆ ಕಲೆಗಳು ಉಂಟಾಗುತ್ತವೆ. ಮುಖಕ್ಕೆ ಸ್ಟೀಮ್ (Steam) ತೆಗೆದುಕೊಳ್ಳುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಮತ್ತು ಅದರ ಜೊತೆ ಕೆಲವು ನೈಸರ್ಗಿಕ ಗಿಡಮೂಲಿಕೆ (Herbal) ಗಳನ್ನು ಸೇರಿಸುವುದರಿಂದ ಮುಖದ ಸೌಂದರ್ಯ ಹಾಗೂ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು.

ಚರ್ಮ ಪೂರ್ತಿಯಾಗಿ ಹೈಡ್ರೇಟ್ ಆಗಿರುತ್ತದೆ :  ತ್ವಚೆ ಹೈಡ್ರೇಟ್ ಆಗಿದ್ದಾಗ ಚರ್ಮದಲ್ಲಿ ಇಲಾಸ್ಟಿಸಿಟಿ ನಿರ್ವಹಣೆ ಸರಿಯಾಗಿ ಇರುತ್ತೆ. ನಾವು ಮುಖಕ್ಕೆ ಹಚ್ಚಿಕೊಳ್ಳುವ ಎಣ್ಣೆ ಮುಂತಾದವುಗಳು ಮುಖವನ್ನು ತೇವಗೊಳಿಸುತ್ತದೆ. ಆದರೆ ತ್ವಚೆ ಹೈಡ್ರೇಟ್ ಆಗಿರಲು ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಫೇಶಿಯಲ್ ಸ್ಟೀಮ್ ಚರ್ಮ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.

Latest Videos

undefined

ಅಬ್ಬರೆ! ಸೋನಂ ಕಪೂರ್‌ಳ 173 ಕೋಟಿ ರೂ. ಬೆಲೆಯ ದೆಹಲಿ ಬಂಗಲೆ ಎಂಥ ಅದ್ಭುತವಾಗಿದೆ ನೋಡಿ

ಸ್ಟೀಮ್ ನಿಂದ ಚರ್ಮಕ್ಕೆ ಹೆಚ್ಚಿನ ಪೋಷಣೆ ಸಿಗುತ್ತೆ : ಫೇಶಿಯಲ್ ಸ್ಟೀಮ್ ನಿಂದ ನಾವು ಮುಖಕ್ಕೆ ಆರೈಕೆ ಮಾಡಿಕೊಳ್ಳುವ ಟೋನರ್, ಸೀರಮ್ ಮುಂತಾದ ಉತ್ಪನ್ನಗಳು ಚರ್ಮದ ಆಳಕ್ಕೆ ಹೋಗಿ ಚರ್ಮಕ್ಕೆ ಸರಿಯಾದ ಪೋಷಣೆಯನ್ನು ಒದಗಿಸುತ್ತವೆ.

ರಕ್ತ ಸಂಚಾರ ಹೆಚ್ಚುತ್ತದೆ : ಸ್ಟೀಮ್ ನಿಂದ ರಕ್ತದ ಹರಿವು ಹೆಚ್ಚಾಗಿ ಚರ್ಮಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಸಿಗುತ್ತದೆ. ರಕ್ತ ಸಂಚಾರ ಚರ್ಮದಲ್ಲಿ ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಉತ್ತೇಜಿಸುತ್ತವೆ. ಎಲಾಸ್ಟಿನ್ ಫೈಬರ್ ಗಳು ಚರ್ಮದ ಸುಕ್ಕನ್ನು ಕಡಿಮೆ ಮಾಡುತ್ತದೆ. 

ಮೊಡವೆ ನಿವಾರಣೆ :  ಚರ್ಮದ ಕೋಶಗಳಲ್ಲಿ ಮೇದೋಗ್ರಂಥಿಗಳ ಸ್ರಾವವು ಸಿಕ್ಕಿಕೊಂಡಾಗ ಮೊಡವೆ ಉಂಟಾಗುತ್ತದೆ. ನಾವು ಹಬೆ ತೆಗೆದುಕೊಂಡಾಗ ಮೇದೋಗ್ರಂಥಿಗಳ ಸ್ರಾವವು ಹೊರಹೋಗಿ ಮೊಡವೆಗಳು ನಿವಾರಣೆಯಾಗುತ್ತವೆ.

ಫೇಶಿಯಲ್ ಸ್ಟೀಮ್ ಗೆ ಈ ಗಿಡಮೂಲಿಕೆ ಸೇರಿಸಿ : 
ಡ್ರೈ ಸ್ಕಿನ್ ಇರುವವರು ಹೀಗೆ ಮಾಡಿ : 2 ರಿಂದ 3 ಬೇ ಎಲೆ ಹಾಗೂ 1 ಚಮಚ ಸೋಂಪಿನ ಕಾಳುಗಳನ್ನು ನುಣ್ಣಗೆ ರುಬ್ಬಿ ಅದನ್ನು ಬಿಸಿ ನೀರಿಗೆ ಹಾಕಿ ಇದರ ಜೊತೆ ಗುಲಾಬಿ ಎಸಳು ಅಥವಾ ರೋಸ್ ವಾಟರ್ ಹಾಕಿ ನಂತರ ಸ್ಟೀಮ್ ತೆಗೆದುಕೊಳ್ಳಿ. ಇದರಿಂದ ನಿರ್ಜೀವ ಕೋಶಗಳು ಮಾಯವಾಗಿ ಮುಖದ ಹೊಳಪು ಹೆಚ್ಚುತ್ತದೆ.

ವೈಟ್ ಸ್ಯಾರಿಯಲ್ಲಿ ಬಿಗ್‌ಬಾಸ್ ನಟಿ, ನಿಮ್ ಸೌಂದರ್ಯ ನೋಡಿ ಚಂದ್ರನೂ ನಾಚಿಕೊಳ್ತಾನೆ ಎಂದ ನೆಟ್ಟಿಗರು!

ಎಣ್ಣೆಯುಕ್ತ ಚರ್ಮ ಹೊಂದಿದವರು ಹೀಗೆ ಮಾಡಿ : ಬಿಸಿ ನೀರಿಗೆ 2-3 ಬೇ ಎಲೆ ಹಾಗೂ 5-7 ಬೇವಿನ ಎಲೆಗಳನ್ನು ಹಾಗೂ ಅದರ ಜೊತೆ ಒಂದು ಗ್ರೀನ್ ಟೀ ಬ್ಯಾಗ್, ತುಳಸಿ ಎಲೆ ಮತ್ತು ಚಿಕ್ಕ ನಿಂಬು ಚೂರನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಸ್ಟೀಮ್ ತೆಗೆದುಕೊಳ್ಳಿ. ಇದರಿಂದ ಆಯ್ಲಿ ಸ್ಕಿನ್ ಸಮಸ್ಯೆ ದೂರವಾಗುತ್ತದೆ.

ಚರ್ಮದ ಆರೋಗ್ಯಕ್ಕೆ ಹೀಗೆ ಮಾಡಿ : ಸವತೆಕಾಯಿಯ 5 ಚೂರು, ಗ್ರೀನ್ ಟೀ ಬ್ಯಾಗ್ ಹಾಗೂ 5 ಹನಿ ಲ್ಯಾವೆಂಡರ್ ಎಣ್ಣೆಯನ್ನು ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಿ. ಇದರಿಂದ ಚರ್ಮದಲ್ಲಿ ಉಂಟಾಗುವ ಕಿರಿಕಿರಿಯನ್ನು ದೂರಮಾಡಬಹುದು.

ಸ್ಕಿನ್ ಡಿಟಾಕ್ಸ್ ಗಾಗಿ ಹೀಗೆ ಮಾಡಿ :  ಕುದಿಯುವ ನೀರಿಗೆ ನಿಂಬೆ ಹೋಳು, ಗ್ರೀನ್ ಟೀ ಬ್ಯಾಗ್ ಹಾಗೂ ಪುದೀನ ತೈಲವನ್ನು ಸೇರಿಸಿ ಸ್ಟೀಮ್ ತೆಗೆದುಕೊಳ್ಳಿ. ಇದು ತ್ವಚೆಯನ್ನು ಡಿಟಾಕ್ಸ್ ಮಾಡಿ ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

click me!