ಮಹಿಳೆಯರಿಗೆ ಸೀರೆ ಮೇಲೆ ಸಿಕ್ಕಾಪಟ್ಟೆ ಲವ್..ಹೀಗಾಗಿ ಹೋದಲ್ಲಿ ಬಂದಲ್ಲಿ ಸೀರೆ ಖರೀದಿಸಿ ತಂದು ಮನೆಯಲ್ಲಿ ರಾಶಿ ಹಾಕಿರ್ತಾರೆ. ಆದ್ರೆ ಅಷ್ಟೂ ಸೀರೆಯನ್ನು ಉಡೋದು ಕಡಿಮೆ. ಹಾಗಿದ್ರೆ ಆ ಸೀರೆಯನ್ನು ಬೇರ್ಯಾವ ರೀತಿ ಬಳಸಿಕೊಳ್ಬೋದು.
ಮಹಿಳೆಯರು ಅಂದ್ಮೇಲೆ ಅವರಲ್ಲಿ ಬಂಡಲ್ ಗಟ್ಟಲೆ ಸೀರೆಯಂತೂ ಇದ್ದೇ ಇರುತ್ತದೆ. ಆದರೂ ಮತ್ತೆ ಮತ್ತೆ ಹೊಸ ಸೀರೆ ಖರೀದಿಸುತ್ತಲೇ ಇರುತ್ತಾರೆ. ಮಹಿಳೆಯರು ಬಟ್ಟೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಎಷ್ಟೇ ಸೀರೆ ಕೊಂಡರೂ ತಮಗೆ ಇಷ್ಟವಾದ ಸೀರೆ ಕಂಡರೆ ತಕ್ಷಣ ಖರೀದಿಸಿ ಇಟ್ಟುಕೊಳ್ಳುತ್ತಾರೆ. ತಿಂಗಳಿಗೆ ಎರಡು ಮೂರು ಸೀರೆ ಖರೀದಿಸುವವರೂ ಇದ್ದಾರೆ. ಹೀಗಾಗಿ ಪ್ರತಿಯೊಬ್ಬ ಭಾರತೀಯ ಮಹಿಳೆಯ ವಾರ್ಡ್ರೋಬ್ ಸೀರೆಗಳಿಂದ ತುಂಬಿರುತ್ತದೆ. ಇವುಗಳಲ್ಲಿ ಕೆಲವು ಸೀರೆಗಳು ನಿಯಮಿತವಾಗಿ ಬಳಸುವಂತಿರುತ್ತದೆ. ಇನ್ನು ಕೆಲವು ಹಬ್ಬಗಳು ಮತ್ತು ಸಮಾರಂಭಗಳಿಗೆ ಮಾತ್ರ ಸೂಕ್ತವಾಗಿರುತ್ತದೆ.
ಆದರೆ ಕೆಲವು ಸೀರೆಗಳನ್ನು ಕೊಂಡರೂ ಉಪಯೋಗಿಸುವ ಸಂದರ್ಭವೇ ಬರುವುದಿಲ್ಲ. ಮತ್ತೆ ಕೆಲವು ಬಳಸಿ ಕೆಲ ವರ್ಷಗಳಲ್ಲಿ ಔಟ್ ಆಫ್ ಫ್ಯಾಷನ್ ಆಗುವ ಕಾರಣ ಮತ್ತೆ ಬಳಸುವ ಪ್ರಮೇಯವೇ ಬರುವುದಿಲ್ಲ. ಹೀಗಾದಾಗ ಇಂಥಾ ಸೀರೆಗಳು ಸುಮ್ಮನೆ ಮನೆಯ ಮೂಲೆ ಸೇರಿಬಿಡುತ್ತದೆ. ಆದರೆ ನಿಮ್ಮ ಬಳಿಯೂ ಇದೇ ರೀತಿಯ ಸೀರೆಗಳಿದ್ದರೆ ಇದನ್ನು ಮತ್ತೆ ಬಳಸಿಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ. ಹೌದು ಹಳೆಯ ಸೀರೆಗಳನ್ನು ತುಂಬಾ ವಿಭಿನ್ನ ರೀತಿಯಲ್ಲಿ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಬಹುದು. ಅದು ಹೇಗೆ ತಿಳಿಯೋಣ.
undefined
ಸಮಂತಾ ಹಾಕಿರೋ ಸೀರೆ ಎಷ್ಟು ಕಡಿಮೆ ಬೆಲೆಗೆ ಸಿಗ್ತಿದೆ ನೋಡಿ; ಫೋಟೋ ವೈರಲ್
ಡ್ರೆಸ್‌ಗಳು: ನಿಮ್ಮ ಬಳಿ ಸಾಕಷ್ಟು ಹಳೆಯ ಸೀರೆಗಳಿದ್ದರೆ, ಅವುಗಳನ್ನು ಡ್ರೆಸ್ ಮಾಡಲು ಬಳಸಬಹುದು. ಅನಾರ್ಕಲಿ ಡ್ರೆಸ್, ಸಲ್ವಾರ್, ಅಲೈನ್ ಅಥವಾ ಸ್ಟ್ರೈಟ್ ಕುರ್ತಾವನ್ನು ಹೊಲಿಯಬಹುದು. ಕಾಂಚೀಪುರಂ, ಸಿಲ್ಕ್ ಅಥವಾ ಬನಾರಸಿ ಸೀರೆಯಿಂದ ಮಾಡಿದ ಯಾವುದೇ ಡ್ರೆಸ್ ಎಲ್ಲಾ ಸಂದರ್ಭಗಳಿಗೂ ಒಪ್ಪುತ್ತದೆ ಮತ್ತು ಕ್ಲಾಸೀ ಲುಕ್ ನೀಡುತ್ತದೆ.
ದುಪ್ಪಟ್ಟಾ: ಶಿಫಾನ್ ಅಥವಾ ಜಾರ್ಜೆಟ್ ಸೀರೆಗಳನ್ನು ದುಪ್ಪಟ್ಟಾ ಮಾಡಲು ಬಳಸಿಕೊಳ್ಳಬಹುದು. ಇದನ್ನು ಪ್ಲೈನ್ ಸಲ್ವಾರ್ ಅಥವಾ ಪ್ರಿಂಟೆಂಡ್ ಸಲ್ವಾರ್‌ಗೆ ಸುಂದರವಾದ ದುಪ್ಪಟ್ಟಾವಾಗಿ ಯೂಸ್ ಮಾಡಬಹುದು.
ಕುಶನ್ ಕವರ್: ಸುಂದರವಾದ ಬನಾರಸಿ ಸೀರೆಗಳು ಕುಶನ್ ಕವರ್ ಮಾಡಲು ಅತ್ಯುತ್ತಮವಾಗಿದೆ. ಈ ಸೀರೆಯ ಬಾರ್ಡರ್‌ನ್ನು ಕತ್ತರಿಸಿ ಬೇರೆ ಯಾವುದಕ್ಕಾದರೂ ಉಪಯೋಗಿಸಬಹುದು. ಉಳಿದ ಸೀರೆಯನ್ನು ಸ್ಕಾರ್ಫ್ ಮತ್ತು ಬಟ್ಟೆಯ ಚೀಲಗಳಾಗಿ ಮಾಡಬಹುದು. ಬನಾರಸಿಯ ಸೀರೆಯ ಕುಶನ್ ಕವರ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.
ವಿಶ್ವದ ಅತ್ಯಂತ ದುಬಾರಿ ಸೀರೆಯ ಒಡತಿ ನೀತಾ ಅಂಬಾನಿ; 8 ಕೆಜಿಗೂ ಹೆಚ್ಚು ತೂಕದ ಸೀರೆ ಬೆಲೆಯೆಷ್ಟು ಗೊತ್ತಾ?
ಫ್ಲೇರ್ಡ್ ಸ್ಕರ್ಟ್: ನಿಮ್ಮ ಬಳಿ ಚಂದೇರಿ ಸಿಲ್ಕ್ ಅಥವಾ ಬ್ರೊಕೇಡ್ ಸೀರೆ ಇದೆಯೇ. ಆದರೆ ಇವುಗಳೊಂದಿಗೆ ನೀವು ಫ್ಲೇರ್ಡ್ ಸ್ಕರ್ಟ್ ಅನ್ನು ವಿನ್ಯಾಸಗೊಳಿಸಬಹುದು. ಇದು ನಿಮಗೆ ಇಂಡೋ-ವೆಸ್ಟರ್ನ್ ಲುಕ್ ನೀಡುತ್ತದೆ. ನೀವು ಔಪಚಾರಿಕ ಶರ್ಟ್ ಅಥವಾ ಸರಳವಾದ ಮೇಲ್ಭಾಗವನ್ನು ಧರಿಸಬಹುದು. ಇದರಲ್ಲೂ ನೀವು ಸುಂದರವಾಗಿ ಕಾಣುತ್ತೀರಿ.
ಟ್ಯೂನಿಕ್ ಮತ್ತು ಟಾಪ್: ಉದ್ದನೆಯ ಸೀರೆ ಅಂದರೆ 6 ಮೀಟರ್ ಸೀರೆಯೊಂದಿಗೆ ಟ್ಯೂನಿಕ್ ಅಥವಾ ಟಾಪ್ ಅನ್ನು ತುಂಬಾ ಸುಲಭವಾಗಿ ವಿನ್ಯಾಸಗೊಳಿಸಬಹುದು. ಇದು ಜೀನ್ಸ್ ಅಥವಾ ಲೆಗ್ಗಿಂಗ್ಸ್ ಯಾವುದರ ಜೊತೆ ಬೇರೆ ಮಾಡಿದರೂ ತುಂಬಾ ಸುಂದರವಾಗಿ ಕಾಣುತ್ತದೆ.