ಮಾಡ್ರನ್‌ ಡ್ರೆಸ್‌ ಹಿಂದಿಕ್ಕಿದ ಪಾರಂಪರಿಕ ಸೀರೆಗಳ ಟ್ರೆಂಡ್‌!

By Suvarna NewsFirst Published Jan 30, 2020, 9:15 AM IST
Highlights

ನನ್‌ ಸೀರೆ ಹಳತಾಯ್ತು ಅನ್ನುವ ಮಾತು ಇತ್ತೀಚೆಗೆಲ್ಲಾದರೂ ಕೇಳಿದ್ದೀರಾ.. ಸೀರೆ ಉಡೋರೆ ಕಡಿಮೆ, ಇನ್ನು ಹೊಸತು, ಹಳತು ಅನ್ನೋರಾರ‍ಯರು ಅನ್ನಬಹುದೇನೋ..ಈಗ ವಿಷ್ಯ ಅದಲ್ಲ. ಪಾರಂಪರಿಕ ಸೀರೆಗಳ ಟ್ರೆಂಡ್‌ ಈ ವರ್ಷಾರಂಭದಲ್ಲೇ ಶುರುವಾಗಿದೆ. ಸೀರೆಯ ವಿನ್ಯಾಸ ಹಳತಾದಷ್ಟೂಅದಕ್ಕೆ ಸೊಗಸು ಹೆಚ್ಚು, ಅದು ಆ್ಯಂಟಿಕ್‌ ಅನ್ನೋ ಲೇಬಲ್‌ ಹಚ್ಚಿಕೊಂಡು ರೇಟು ಹೆಚ್ಚಿಸಿಕೊಂಡು ಮಾರಾಟವಾಗುತ್ತದೆ. ಹಾಗಂತ ಇದು ಬಳಸಿ ಹಳತಾದ ಸೀರೆಗಳಿಗೆ ಅನ್ವಯಿಸೋದಿಲ್ಲ. ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಕ್ಲಾಸಿಕ್‌ ಸೀರೆಗಳಿಗೆ ಮಾತ್ರ ಅನ್ವಯವಾಗೋ ಮಾತಿದು.

ಅಸ್ಸಾಂ ನೆಲದ ಘಮ ಹೊತ್ತ ಸೀರೆಗಳು

ಮುಗಾ ಸಿಲ್ಕ್ ಸೀರೆಗಳಲ್ಲಿ ಅಸ್ಸಾ ನೆಲದ ಗಂಧವಿದೆ. ಇದು ಅಸ್ಸಾಂನ ಕಾಡುಗಳಲ್ಲಿ ಉತ್ಪತ್ತಿಯಾಗುವ ರೇಷ್ಮೆ. ಕಾಡು ಮರಗಳ ಮೇಲೆ ರೇಷ್ಮೆ ಹುಳುಗಳು ಕಟ್ಟುವ ರೇಷ್ಮೆ ಗೂಡಿನಿಂದ ಸಿದ್ದವಾದವು. ಮಾಮೂಲಿ ರೇಷ್ಮೆಗಿಂತ ತುಸು ಒರಟು. ಸೂಕ್ಷ್ಮ ಕಲೆಗಾರಿಕೆ ಇದರಲ್ಲಿದೆ. ಮುಗಾ ಸಿಲ್ಕ್‌ ಜೊತೆಗೆ ಪಾಟ್‌ ಸಿಲ್ಕ್‌, ಎರಿ ಸಿಲ್‌್ಕ ವೆರೈಟಿಯೂ ಇದೆ. ವೈಲ್ಡ್‌ ಸಿಲ್ಕ್‌ ಅಥವಾ ವನ್ಯ ರೇಷ್ಮೆ ಅಂತಾರೆ ಈ ರೇಷ್ಮೆಗೆ. ಅಸ್ಸಾಂನಲ್ಲಿ ಈ ಸೀರೆಯನ್ನೇ ಎರಡು ಭಾಗಗಳಾಗಿ ವಿಂಗಡಿಸಿ ಉಡುತ್ತಾರೆ. ಬಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಮತ್ತಿತರರು ಅಸ್ಸಾಂ ಸಿಲ್ಕ್‌ ಸೀರೆಗೆ ಫಿದಾ ಆಗಿದ್ದಾರೆ.

2020 ಗೆ ಈ ಸೀರೆಗಳು ನಿಮ್ಮ ವಾರ್ಡ್‌ರೋಬ್‌ ತುಂಬಲಿ!

ತಮಿಳುನಾಡಿನ ಕಾಂಜೀವರಂ ಸೀರೆ

ಈ ಸೀರೆಯ ಬಗ್ಗೆ ಒಂದು ಸಿನಿಮಾವೂ ಬಂದಿದೆ. ತಮಿಳುನಾಡಿನ ಕಾಜೀವರಂ ಎಂಬ ಊರಲ್ಲಿ ತಯಾರಾಗೋ ಸೀರೆ ಮದುಮಗಳ ಉಡುಗೆಯಾಗಿ ಫೇಮಸ್ಸು. ಈ ಸೀರೆಗಳು ಇದರ ಜರಿ ವರ್ಕ್ನಿಂದಲೂ ಜನಪ್ರಿಯ. ಈ ಸೀರೆಯ ಮೆಟೀರಿಯಲ್‌ನಲ್ಲಿ, ಅದರ ಜರಿ ವರ್ಕ್ನಲ್ಲಿ ಒಂದು ಅನನ್ಯತೆ ಕಾಣಬಹುದು. ಡಿಸೈನರ್‌ಗಳಿಗೆಲ್ಲ ಅಚ್ಚುಮೆಚ್ಚಿನ ಸೀರೆಯಿದು. ದೀಪಿಕಾ ಪಡುಕೋಣೆ ಮದುವೆ ರಿಸೆಪ್ಶನ್‌ ಟೈಮ್‌ನಲ್ಲಿ ಉಟ್ಟಬಂಗಾರ ಬಣ್ಣದ ಸೀರೆ ನೆನಪಿರಬಹುದು. ಅದು ಸಭ್ಯಸಾಚಿ ಡಿಸೈನ್‌ ಮಾಡಿರೋ ಕಾಂಜೀವರಂ ಸೀರೆ.

ಸೀರೆಗೂ ಬಂತು ಬ್ಲೌಸ್ ನಲ್ಲೇ ಬೆಲ್ಟ್ : ಏನಿದು ಹೊಸ ಸ್ಟೈಲ್.?

ಮೈಸೂರು ಸಿಲ್ಕ್‌ನ ಚಂದವೇ ಬೇರೆ

ಕನ್ನಡಿಗರಿಗೆ ಚಿರಪರಿಚಿತ ಸೀರೆ. ಮೈಸೂರಿನಲ್ಲಿ ಇಲ್ಲಿಯ ಸ್ಥಳೀಯ ರೇಷ್ಮೆ ಬಳಸಿ ತಯಾರಿಸುವ ಈ ಸೀರೆಗಳು ವೈಬ್ರೆಂಟ್‌ ಕಲರ್‌ನ ಜೊತೆಗೆ ನಯವಾದ ಮೇಲ್ಮೈಗೆ ಫೇಮಸ್ಸು. ಅನೇಕ ಬ್ರೈಟ್‌ ಕಲರ್‌ಗಳ ಆಯ್ಕೆ ಇಲ್ಲಿ ಸಿಗುತ್ತದೆ. ಡಿಸೈನ್‌ಗಳಲ್ಲೂ ವೈವಿಧ್ಯತೆ ಇದೆ. ರಾಯಲ್‌ ಲುಕ್‌ನಲ್ಲಿ ಸೀರೆ ಉಟ್ಟುಕೊಳ್ಳೋದೇ ಪ್ರತಿಷ್ಠೆಯ ವಿಷಯ. ಬರೀ ತೆಳುವಾದ ಜರಿ, ಹೊಳೆಯುವ ಮೇಲ್ಮೈಯಿಂದ ಹಿಡಿದು ಮೈತುಂಬ ಜರಿ ವರ್ಕ್ ಇರುವ ಸೀರೆಗಳಿವೆ. ಈ ಸೀರೆ ಉಡೋದು ಸುಲಭ. ಮೈಗಂಟಿ ನಿಲ್ಲುವ ಬಟ್ಟೆಮೈಗೂ ಹಿತವಾಗಿರುತ್ತೆ. ಶ್ರೀದೇವಿ ಈ ಸೀರೆಯುಟ್ಟು ನಲಿದಿದ್ದರು. ಯಾಮಿ ಗೌತಮ್‌ ಇದನ್ನುಟ್ಟು ಆ ಫೀಲ್‌ಗೆ ‘ವ್ಹಾ..’ ಅಂದಿದ್ದಾರೆ.

click me!