300 ಕೋಟಿ ರೂ ಜೆಟ್, 40 ಕೋಟಿ ಮನೆ; ದಿಗ್ಗಜರಿಂದ ಅನಂತ್ ರಾಧಿಕಾಗೆ ಸಿಕ್ಕಿದೆ ಭರ್ಜರಿ ಗಿಫ್ಟ್!

By Chethan KumarFirst Published Jul 21, 2024, 7:06 PM IST
Highlights

ಮೆಟಾ ಮಾಲೀಕ ಜುಕರ್‌ಬರ್ಗ್‌ನಿಂದ 300 ಕೋಟಿ ರೂ ಖಾಸಗಿ ಜೆಟ್, ಶಾರುಖ್ ಖಾನ್‌ನಿಂದ ಪ್ಯಾರಿಸ್‌ನಲ್ಲಿ 40 ಕೋಟಿ ರೂ ಮನೆ, ಅಮಿತಾಬ್ ಬಚ್ಚನ್ 30 ಕೋಟಿ ನೆಕ್‌ಪೀಸ್ ಆಭರಣ. ಇವೆಲ್ಲಾ ದಿಗ್ಗಜರು ಮದುವೆಯಲ್ಲಿ ಅನಂತ್ ಅಂಬಾನಿ ರಾಧಿಕಾಗೆ ನೀಡಿದ ಗಿಫ್ಟ್. ಮದುವೆಗೆ ಆಗಮಿಸಿದ ದಿಗ್ಗಜರು ನೀಡಿದ ಗಿಫ್ಟ್ ವಿವರ ಇಲ್ಲಿದೆ.
 

ಮುಂಬೈ(ಜು.21) ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅದ್ಧೂರಿ ಮದುವೆ ಇದೀಗ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. ಬರೋಬ್ಬರಿ 5,000 ಕೋಟಿ ರೂಪಾಯಿ ಖರ್ಚು ವೆಚ್ಚದಲ್ಲಿ ಈ ಮದುವೆ ನಡೆದಿದೆ. ಮದುವೆಗೆ ಆಗಮಿಸಿದ ಗಣ್ಯರಿಗೆ 2 ಕೋಟಿ ರೂಪಾಯಿ ವಾಚ್ ಸೇರಿದಂತೆ ಹಲವು ಉಡುಗೊರೆಗಳನ್ನು ಅಂಬಾನಿ ಕುಟುಂಬ ನೀಡಿದೆ. ಇದರ ಜೊತೆಗೆ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್‌ಗೆ ಗಣ್ಯರು ಕೋಟಿ ಕೋಟಿ ರೂಪಾಯಿ ಗಿಫ್ಟ್ ನೀಡಿದ್ದಾರೆ. ಈ ಪೈಕಿ ಅತೀ ದುಬಾರಿ ಗಿಫ್ಟ್ ನೀಡಿದ ಹೆಗ್ಗಳಿಕೆಗೆ ಮೆಟಾ ಸಿಇಒ ಮಾರ್ಕ್ ಜುಗರ್‌ಬರ್ಗ್ ಪಾತ್ರರಾಗಿದ್ದಾರೆ. ಜುಗರ್‌ಬರ್ಗ್ ಬರೋಬ್ಬರಿ 300 ಕೋಟಿ ರೂಪಾಯಿ ಖಾಸಗಿ ಜೆಟ್‌ನ್ನು ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ದಂಪತಿಗೆ ಪೋಷಕರಾದ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪಾಲ್ಮ್ ಜುಮೆರಾದಲ್ಲಿ 3,000 ಚದರ ಅಡಿಯ ಮನೆ ಉಡುಗೊರೆಯಾಗಿ ನೀಡಿದ್ದರೆ. ಇದರ ಮೌಲ್ಯ 60 ಕೋಟಿ ರೂಪಾಯಿ. ಇನ್ನು 130 ಕೋಟಿ ರೂಪಾಯಿ ಆಭರಣ, 5.42 ಕೋಟಿ ರೂಪಾಯಿ ಬೆಂಟ್ಲಿ ಕಾರು ಉಡುಗೊರೆಯಾಗಿ ನೀಡಿದ್ದಾರೆ.

Latest Videos

ಅನಂತ್ ಅಂಬಾನಿ ಮದುವೆ ಬೆನ್ನಲ್ಲೇ ಜಿಯೋಗೆ 5,445 ಕೋಟಿ ರೂ ತ್ರೈಮಾಸಿಕ ಲಾಭ!

ಮಾರ್ಕ್ ಜುಕರ್‌ಬರ್ಗ್ ಪ್ರೈವೇಟ್ ಜೆಟ್ ನೀಡಿದ್ದರೆ, ಬಾಲಿವುಡ್ ನಟ ಶಾರುಖ್ ಖಾನ್ ಪ್ಯಾರಿಸ್‌ನಲ್ಲಿ 40 ಕೋಟಿ ರೂಪಾಯಿ ಮನೆ ಉಡುಗೊರೆಯಾಗಿ ನೀಡಿದ್ದಾರೆ. ಅಮಿತಾಬ್ ಬಚ್ಚನ್ 30 ಕೋಟಿ ರೂಪಾಯಿ ಮೌಲ್ಯದ ನೆಕ್‌ಪೀಸ್ ಆಬರಣ ಉಡುಗೊರೆಯಾಗಿ ನೀಡಿದ್ದಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 20 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಉದ್ಯಮಿ ಬಿಲ್ ಗೇಟ್ಸ್ 9 ಕೋಟಿ ರೂಪಾಯಿ ಮೌಲ್ಯದ ಡೈಮೆಂಡ್ ಗಿಫ್ಟ್ ನೀಡಿದ್ದಾರೆ. ಇದರ ಜೊತೆಗೆ 180 ಕೋಟಿ ರೂಪಾಯಿ ಯಾಚ್ ನೀಡಿದ್ದಾರೆ ಅನ್ನೋ ಮಾಹಿತಿಗಳಿವೆ. ಆದರೆ ಖಚಿತ ಮಾಹಿತಿ ಲಭ್ಯವಿಲ್ಲ. ರಸ್ಲರ್ ಜಾನ್ ಸೀನಾ 3 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಅಮೆಜಾನ್ ಸಿಇಒ ಜೆಫ್ ಬೆಜೋಸ್ 11.50 ಕೋಟಿ ರೂಪಾಯಿ ಮೌಲ್ಯದ ಬುಗಾಟಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ನಟ ಸಲ್ಮಾನ್ ಖಾನ್ 15 ಕೋಟಿ ರೂಪಾಯಿ ಮೌಲ್ಯದ ಸ್ಪೋರ್ಟ್ಸೈ ಬೈಕ್ ಉಡುಗೊರೆ ನೀಡಿದ್ದಾರೆ. ಇನ್ನು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ 9 ಕೋಟಿ ರೂಪಾಯಿ ಮೌಲ್ಯದ ಮರ್ಸಡೀಸ್ ಬೆಂಜ್ ಕಾರು ಉಡುಗೊರೆ ನೀಡಿದ್ದಾರೆ.

ನಟ ಅಕ್ಷಯ್ ಕುಮಾರ್ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೆನ್ ಉಡುಗೊರೆಯಾಗಿ ನೀಡಿದ್ದಾರೆ. ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಜೋಡಿ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಗಿಫ್ಟ್ ನೀಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಕಿಯಾರ ಅಡ್ವಾಣಿ ಜೋಡಿ 25 ಲಕ್ಷ ರೂಪಾಯಿ ಮೌಲ್ಯದ ಕರಕುಶಲ ಶಾಲು ಗಿಫ್ಟ್ ನೀಡಿದ್ದಾರೆ.

ಕೊರಳಲ್ಲಿ ಮಂಗಳಸೂತ್ರ ಮಾತ್ರ, ಅಂಬಾನಿ ಮದ್ವೆಯಲ್ಲಿ ಸುಧಾಮೂರ್ತಿ ಸರಳತೆಗೆ ಭಾರಿ ಮೆಚ್ಚುಗೆ!
 

click me!