Latest Videos

Home Hacks: ಹೀಗೆ ತೊಳೆದ್ರೆ ಚಿನ್ನ ಫಳಫಳ ಹೊಳೆಯುತ್ತೆ

By Suvarna NewsFirst Published Feb 7, 2022, 6:52 PM IST
Highlights

ಗಂಡ ಅದೆಷ್ಟು ಬಾರಿ ಚಿನ್ನ (Gold), ಬಂಗಾರ ಅಂತ ಕರೆದ್ರೂ ಹೆಂಗಳೆಯರಿಗೆ ಚಿನ್ನಾಭರಣಗಳ ಮೇಲೆ ಪ್ರತ್ಯೇಕ ಪ್ರೀತಿ. ಜರತಾರಿ ಸೀರೆಯುಟ್ಟು ಚಿನ್ನಾಭರಣಗಳನ್ನು ಹಾಕಿಕೊಂಡು ಹೋಗೋದೇನೋ ಚಂದ. ಆದ್ರೆ ಅದನ್ನು ಕ್ಲೀನ್ (Clean) ಮಾಡೋಕೆ ತೆಗೆದುಕೊಂಡು ಹೋಗೋದು ಇದ್ಯಲ್ಲಾ ಅದೇ ತಲೆನೋವು. ಏನೇನು ಕೆಮಿಕಲ್ (Chemical) ಹಾಕಿ ತೊಳಿತಾರೇನೋ ಅನ್ನೋ ಭಯ ಬೇರೆ. ಆದ್ರೆ ಇನ್ನು ಆ ಚಿಂತೆಯಿಲ್ಲ ಬಿಡಿ. ಮನೆಯಲ್ಲೇ ಚಿನ್ನ ತೊಳೆಯೋದು ಹೇಗೆ. ನಾವ್ ಹೇಳ್ತೀವಿ.

ಚಿನ್ನಾಭರಣಗಳಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಂಗಸರಿಗಂತೂ ಬಂಗಾರ (Gold)ದ ಮೇಲೆ ಮುಗಿಯದಷ್ಟು ಪ್ರೀತಿ. ಹೊಸ ಕಿವಿಯೋಲೆ, ನೆಕ್ಲೇಸ್, ಬಳೆ ಅಂತ ಏನೇನೋ ತೆಗೀತಾನೆ ಇರ್ತಾರೆ. ಆದ್ರೆ, ಚಿನ್ನಾಭರಣಗಳು ದೀರ್ಘಕಾಲ ಬಾಳಿಕೆ ಬರುತ್ತವೆಯಾದರೂ, ಸವೆತ ಮತ್ತು ಹರಿದ ಕಾರಣ ತನ್ನ ಹೊಳಪನ್ನು ಕಳೆದುಕೊಳ್ಳುತ್ತವೆ. ಅದಕ್ಕಾಗಿಯೇ ಆಗಿಂದಾಗೆ ಅದನ್ನು ಸ್ವಚ್ಛಗೊಳಿಸುವುದು ಮುಖ್ಯವಾಗಿದೆ. ಜ್ಯುವೆಲ್ಲರಿಯಲ್ಲಿ ಚಿನ್ನದ ಆಭರಣಗಳನ್ನು ಕ್ಲೀನ್ (Clean)ಮಾಡುತ್ತಾರಾದರೂ ಅದಕ್ಕಾಗಿಯೇ ಆಗಾಗ ಅಲ್ಲಿಗೆ ಹೋಗಲು ಸಮಯವಿರುವುದಿಲ್ಲ. ಸಾಲದ್ದಕ್ಕೆ ಅವ್ರೇನೋ ಕೆಮಿಕಲ್ ಹಾಕಿ ಕ್ಲೀನ್ ಮಾಡ್ತಾರೋ ಚಿನ್ನ ಹೊಳಪನ್ನು ಕಳೆದುಕೊಳ್ಳುತ್ತೆ ಅನ್ನೋ ಭಯ ಬೇರೆ.

ಹಾಗಿದ್ರೆ ಮನೆಯಲ್ಲಿದ್ದುಕೊಂಡೇ ಚಿನ್ನಾಭರಣಗಳನ್ನು ಸುಲಭವಾಗಿ ಕ್ಲೀನ್ ಮಾಡೋದು ಹೇಗೆ. ಇಲ್ಲಿದೆ ಕೆಲವೊಂದು ಟಿಪ್ಸ್.

ಸೋಪ್ ಮತ್ತು ನೀರನ್ನು ಬಳಸಿ
ಒಂದು ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸೋಪಿನ (Soap) ದ್ರವವನ್ನು ಸೇರಿಸಿ ಮಿಕ್ಸ್ ಮಾಡಿ. ಇದರಲ್ಲಿ ಸುಮಾರು 15 ನಿಮಿಷಗಳ ಕಾಲ ಚಿನ್ನಾಭರಣವನ್ನು ನೆನೆಸಿಡಿ. ನಂತರ ಮೃದುವಾಗ ಬ್ರಷ್ (Brush) ಬಳಸಿ ಆಭರಣವನ್ನು ತೊಳೆಯಿರಿ. ಬಳಿಕ ಮೃದುವಾದ ಬಟ್ಟೆಯನ್ನು ಬಳಸಿ ಆಭರಣಗಳ ಒದ್ದೆ ತೆಗೆದು ಎತ್ತಿಡಿ.

ಚಿನ್ನ ಮತ್ತು ವಜ್ರದಿಂದ ಮಾಡಿರುವ ಒಡುಪಿನಲ್ಲಿ ಕನ್ನಡದ ನಟಿ; ಬೆಲೆ ಎಷ್ಟು?

ಬಿಸಿನೀರನ್ನು ಬಳಸುವುದು
ಚಿನ್ನದ ಆಭರಣಗಳನ್ನು ದೊಡ್ಡ ಬಟ್ಟಲಿನಲ್ಲಿ ಇರಿಸಿ ಮತ್ತು ಅದರ ಮೇಲೆ ನಿಧಾನವಾಗಿ ಬಿಸಿ ನೀರನ್ನು ಸುರಿಯಿರಿ. ಆಭರಣಗಳು ನೀರಿನಲ್ಲಿ ಮುಳುಗುವ ವರೆಗೂ ನೀರನ್ನು ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ಆಭರಣದಲ್ಲಿ ಸೇರಿಕೊಂಡ ಎಣ್ಣೆ, ಕೊಳಕು ಮತ್ತು ಜಿಡ್ಡಿನಂಶ ನಿವಾರಣೆಯಾಗುತ್ತದೆ. ನಂತರ ಆಭರಣಗಳನ್ನು ಹತ್ತಿ ಬಟ್ಟೆಯಿಂದ ನಿಧಾನವಾಗಿ ಸ್ಕ್ರಬ್ ಮಾಡಿ, ತೆಗೆದಿಟ್ಟುಕೊಳ್ಳಿ.

ಟೂತ್‌ಪೇಸ್ಟ್ ಬಳಸುವುದು
ಮೃದುವಾದ ಬ್ರಷ್‌ನಲ್ಲಿ ಟೂತ್ ಪೇಸ್ಟ್ (Toothpaste) ತೆಗೆದುಕೊಂಡು ಚಿನ್ನಾಭರಣಗಳನ್ನು ನಿಧಾನವಾಗಿ ತೊಳೆಯಿರಿ. ಇದರಿಂದ ಆಭರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಕೊಳಕಿನ ಅಂಶ ಇಲ್ಲದಾಗುತ್ತದೆ. ಪರ್ಯಾಯವಾಗಿ, ನೀವು ಮೃದುವಾದ ಬಟ್ಟೆಯನ್ನು ಸಹ ಬಳಸಬಹುದು.

ಚಿನ್ನ ಧರಿಸೋದು ತರುತ್ತಾ ಲಕ್? ಕೆಲ ರಾಶಿಯವರಿಗಿದು ಅಶುಭ!

ಚಿನ್ನಾಭರಣ ಅಲ್ಕೋಹಾಲ್‌ನಿಂದ ಸ್ವಚ್ಛಗೊಳಿಸುವುದು ಸೂಕ್ತವೇ ?
ತಜ್ಞರ ಪ್ರಕಾರ, ಅಲ್ಕೋಹಾಲ್‌ (Alcohol)ನಿಂದಲೂ ಆಭರಣಗಳನ್ನು ಸ್ವಚ್ಛಗೊಳಿಸಬಹುದಾಗಿದೆ. ನೀವು ಇದನ್ನು ಸಾಬೂನು ಮತ್ತು ನೀರಿನ ವಿಧಾನದಂತೆ ಬಳಸಬಹುದು. ಇದಕ್ಕಾಗಿ ಚಿನ್ನದ ಆಭರಣವನ್ನು ಅಲ್ಕೋಹಾಲ್ ದ್ರಾವಣದಲ್ಲಿ ಕೆಲವು ನಿಮಿಷಗಳ ಕಾಲ ನೆನೆಸಲು ಬಿಡಿ. ಇದು ಬ್ಯಾಕ್ಟೀರಿಯಾ ಮತ್ತು ಧೂಳನ್ನು ಇಲ್ಲವಾಗಿಸುತ್ತದೆ. ನಂತರ ಮೃದುವಾದ ಬಟ್ಟೆಯಿಂದ ಒರೆಸಿ ಚಿನ್ನವನ್ನು ತೆಗೆದಿಡಬಹುದು.

ಚಿನ್ನಾಭರಣ ತೊಳೆಯುವಾಗ ಹೀಗೆ ಮಾಡಬೇಡಿ
ಆಭರಣಗಳನ್ನು ಸ್ವಚ್ಛಗೊಳಿಸುವಾಗ ಯಾವಾಗಲೂ ಮೃದುವಾದ ಬ್ರಷ್‌ನ್ನೇ ಬಳಸಿ. ಮತ್ತು ಆಭರಣವನ್ನು ನಿಧಾನವಾಗಿ ತಿಕ್ಕಿ. ಇಲ್ಲದಿದ್ದರೆ ಆಭರಣಗಳಿಗೆ ಗೀರು ಬಿದ್ದು ಹಾಳಾಗುವ ಸಾಧ್ಯತೆಯಿದೆ. ಹವಳ, ಮುತ್ತು ಸೇರಿದಂತೆ ಇತರ ರತ್ನಗಳನ್ನು ಬಳಸಿರುವ ಚಿನ್ನಾಭರಣಗಳನ್ನು ತೊಳೆಯುವಾಗ ಹೆಚ್ಚಿನ ಜಾಗರೂಕತೆಯಿರಲಿ. ಇದರಿಂದ ಕಲ್ಲಿನ ಸೆಟ್ಟಿಂಗ್‌ಗೆ ಹಾನಿಯಾಗುವುದನ್ನು ತಪ್ಪಿಸಬಹುದು.

ಬಾತ್ರೂಮ್, ಕತ್ತಲಿನ ಕೋಣೆಯಲ್ಲಿ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಬೇಡಿ. ಸಣ್ಣಪುಟ್ಟ ಚಿನ್ನದ ಆಭರಣಗಳು ಕಳೆದುಹೋಗುವ ಸಾಧ್ಯತೆಯೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಆಗಾಗ ಚಿನ್ನಾಭರಣಗಳನ್ನು ತೊಳೆಯುವುದನ್ನು ಮರೆಯಬೇಡಿ. ಇಲ್ಲದಿದ್ದರೆ ಬೆವರು, ಎಣ್ಣೆಯಂಶ, ಕೊಳೆ ಸೇರಿ ಆಭರಣಗಳು ಬೇಗನೇ ಹಾಳಾಗುತ್ತವೆ.

click me!