
ಮನೆ (Home )ಕೆಲಸ ಮಹಿಳೆಯರಿಗೆ ಅನಿವಾರ್ಯ. ಬಟ್ಟೆ(Clothes )ಹಾಗೂ ಪಾತ್ರೆ(Vessel) ತೊಳೆಯಲು ಮಷಿನ್ (Machine) ಬಂದಿರಬಹುದು. ಆದ್ರೆ ಅನೇಕ ಮಹಿಳೆಯರು ಪಾತ್ರೆಗಳು ಮತ್ತು ಬಟ್ಟೆಗಳನ್ನು ಕೈನಲ್ಲಿ ತೊಳೆಯಲು ಇಷ್ಟಪಡ್ತಾರೆ. ಆದ್ರೆ ಪಾತ್ರೆ ಹಾಗೂ ಬಟ್ಟೆಯನ್ನು ತೊಳೆಯುವುದ್ರಿಂದ ಕೈಗಳು ತುಂಬಾ ಒಣಗುತ್ತವೆ. ಕೆಲವೊಮ್ಮೆ ಕೈ ಚರ್ಮ ಬಿರುಕು ಬಿಡುತ್ತದೆ. ಚಳಿಗಾಲವಿರಲಿ ಇಲ್ಲ ಬೇಸಿಗೆಯಿರಲಿ,ಕೆಲ ಮಹಿಳೆಯರಿಗೆ ಇದು ಸಾಮಾನ್ಯ. ಕೆಲಸಗಳಿಂದಾಗಿ ಕೈಗಳು ಸದಾ ಒದ್ದೆಯಾಗಿರುವುದರಿಂದ ಹೀಗಾಗುತ್ತದೆ. ಕೆಲ ಮಹಿಳೆಯರ ಬೆರಳುಗಳ ಸುತ್ತ ಚರ್ಮ ಒಡೆದು ಊದಿಕೊಂಡಿರುತ್ತದೆ. ಮುಖದಂತೆಯೇ ಕೈಗಳ ಚರ್ಮದ ಆರೈಕೆ ಬಹಳ ಮುಖ್ಯ. ಒಣ ತ್ವಚೆಯಿಂದಾಗಿ ಅಡುಗೆ ಕೆಲಸ ಮಾಡುವಾಗ ಕೈಗಳು ಬಿರುಕು ಬಿಡುತ್ತವೆ. ಈ ರೀತಿಯ ಸಮಸ್ಯೆ ಮುಂದುವರಿದರೆ ನೋವುಣ್ಣಬೇಕಾಗುತ್ತದೆ. ಕೆಲ ಆರೈಕೆ ಮೂಲಕ ಇದ್ರಿಂದ ಹೊರ ಬರಬಹುದು.
ಒಣಗುವ ಕೈಗಳ ಆರೈಕೆ ಹೀಗಿರಲಿ :
ಎಣ್ಣೆ ಮಸಾಜ್ : ಪಾತ್ರೆಗಳನ್ನು ಹಾಗೂ ಬಟ್ಟೆಯನ್ನು ಕೈನಲ್ಲಿ ಸ್ವಚ್ಛಗೊಳಿಸಿತ್ತಿರಲಿ ಇಲ್ಲ ಮೆಷಿನ್ ಬಳಸಲಿ ನಿಮ್ಮ ಕೈ ಆರೈಕೆ ಬಹಳ ಮುಖ್ಯ. ಬೆಳಿಗ್ಗೆ ಮತ್ತು ಮಲಗುವ ಮೊದಲು ಕೈಗಳನ್ನು ಎಣ್ಣೆಯಿಂದ ಮಸಾಜ್ ಮಾಡಿ. ಇದಕ್ಕಾಗಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಉಗುರುಬೆಚ್ಚಗೆ ಮಾಡಿ ನಂತರ ಕೈಗಳನ್ನು, ಬೆರಳುಗಳನ್ನು ಚೆನ್ನಾಗಿ ಮಸಾಜ್ ಮಾಡಿ.
Fashion Tips : ಕುಳ್ಳಗಿದ್ದೀರಾ? ಡ್ರೆಸ್ಸಿಂಗ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡ್ಕೊಂಡ್ರೆ ಹೈಟ್ ಕಾಣುತ್ತೆ
ಪಾತ್ರೆ ತೊಳೆದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ : ಪಾತ್ರೆ ತೊಳೆಯುವ ಕೆಲಸವನ್ನು ದಿನದಲ್ಲಿ ಎರಡರಿಂದ ನಾಲ್ಕು ಬಾರಿ ಮಾಡಬೇಕು. ಪಾತ್ರೆ ತೊಳೆಯುವಾಗ ಪಾತ್ರೆ ತೊಳೆಯುವ ಸೋಪ್ ಮುಟ್ಟುತ್ತೇವೆ. ಇದು ನಮ್ಮ ಕೈಗಳ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಪಾತ್ರೆ ತೊಳೆದ ನಂತ್ರ ಕೈಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ ಮತ್ತು ನಂತರ ಕೈಗಳನ್ನು ಟವೆಲ್ ಸಹಾಯದಿಂದ ಒಣಗಿಸಿ. ಕೈಗಳು ಸದಾ ಒದ್ದೆಯಾಗಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ಮನೆಯಲ್ಲಿ ಆಗಾಗ್ಗೆ ಪಾತ್ರೆಗಳನ್ನು ತೊಳೆಯಬೇಕಾದರೆ, ನೀವು ಹ್ಯಾಂಡ್ ಗ್ಲೌಸ್ ಬಳಸಬೇಕು. ಇದು ನಿಮ್ಮ ಕೈಗಳನ್ನು ನೀರಿನಿಂದ ಮಾತ್ರವಲ್ಲದೆ ಕಠಿಣ ಸಾಬೂನಿನಿಂದ ರಕ್ಷಿಸುತ್ತದೆ.
ಬಿಸಿನೀರಿನ ಬಳಕೆ ನಿಲ್ಲಿಸಿ : ಚಳಿಗಾಲದಲ್ಲಿ ಹೆಚ್ಚಿನ ಮಹಿಳೆಯರು ಬಿಸಿ ನೀರನ್ನು ಬಳಸುತ್ತಾರೆ. ನಿಮ್ಮ ಚರ್ಮವು ಈಗಾಗಲೇ ಬಿರುಕು ಬಿಟ್ಟಿದ್ದರೆ ಮತ್ತು ಒಣಗಿದ್ದರೆ, ಈ ತಪ್ಪನ್ನು ಮಾಡಬೇಡಿ. ಬೇಸಿಗೆ ಸಮಯದಲ್ಲಿಯೂ ಅನೇಕ ಮಹಿಳೆಯರು ಪಾತ್ರೆಯ ಜಿಡ್ಡು ತೆಗೆಯಲು ಬಿಸಿ ನೀರಿನ ಬಳಕೆ ಮಾಡ್ತಾರೆ. ಇದರ ಬದಲು ಉಗುರು ಬೆಚ್ಚಗಿನ ನೀರಿನ ಬಳಕೆ ಯೋಗ್ಯ. ಕೈಗಳ ಆರೈಕೆಗೆ ನೀವು ಹ್ಯಾಂಡ್ ಕ್ರೀಮ್ ಬಳಸಬಹುದು. ಕೈಗಳನ್ನು ತೊಳೆದ ತಕ್ಷಣ ಕ್ರೀಮ್ ಹಚ್ಚಬೇಕು. ಪ್ರತಿ ಬಾರಿ ಪಾತ್ರೆ ಅಥವಾ ಬಟ್ಟೆಗಳನ್ನು ತೊಳೆದ ತಕ್ಷಣ ಈ ಕ್ರೀಮ್ ಕೈಗಳಿಗೆ ಹಚ್ಚಿ. ಕ್ರೀಮ್ ಹಚ್ಚುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ಒಣಗಿಸಿಕೊಳ್ಳಲು ಮರೆಯಬೇಡಿ.
ಕೈ ಮತ್ತು ಬೆರಳುಗಳನ್ನು ಚೆನ್ನಾಗಿ ಸ್ಕ್ರಬ್ ಮಾಡಿ : ಸತ್ತ ಜೀವಕೋಶಗಳ ಪದರವು ಕೈಗಳ ಚರ್ಮದ ಮೇಲೆ ಸಂಗ್ರಹಗೊಳ್ಳುತ್ತದೆ. ಇದು ಒಣಗಿ ಬಿಳಿಯಾಗುತ್ತದೆ. ಆಗ ನಿಯಮಿತವಾಗಿ ಕೈಗಳಿಗೆ ಸ್ಕ್ರಬ್ ಮಾಡಬೇಕು. ಉಗುರಿನ ಸುತ್ತಲಿನ ಚರ್ಮವು ಸಿಪ್ಪೆ ಸುಲಿಯಲು ಪ್ರಾರಂಭಿಸುತ್ತದೆ. ಸ್ಕ್ರಬ್ಬಿಂಗ್ ಮಾಡಿದರೆ ಸತ್ತ ಚರ್ಮ ಹೋಗುವದಲ್ಲದೆ ತುರಿಕೆ ಕಡಿಮೆಯಾಗುತ್ತದೆ.
Viral Video: ನಿಂಬೆ ಹಣ್ಣಿನ ನೇಲ್ ಆರ್ಟ್ ಹುಡ್ಗಿ ಬಂದ್ಲು ನೋಡಿ..!
ಚರ್ಮದ ಅಲರ್ಜಿಯನ್ನು ನಿರ್ಲಕ್ಷಿಸಬೇಡಿ : ಅನೇಕ ಬಾರಿ ನೀವು ಬಳಸುವ ಪಾತ್ರೆ ಅಥವಾ ಬಟ್ಟೆ ಸೋಪಿನಿಂದ ಚರ್ಮದ ಅಲರ್ಜಿ ಕಾಡುತ್ತದೆ. ನಿಮಗೆ ಸೋಪ್ ನಿಂದಲೇ ಸಮಸ್ಯೆಯಾಗ್ತಿದೆ ಎಂದಾದ್ರೆ ಉತ್ಪನ್ನವನ್ನು ಬದಲಾಯಿಸಿ. ಹರ್ಬಲ್ ಸೋಪ್ ಬಳಸಲು ಪ್ರಯತ್ನಿಸಿ.ರಾತ್ರಿ ಅಲೋವೆರಾ ಜೆಲನ್ನು ಕೈಗಳಿಗೆ ಹಚ್ಚಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.