ತಿರುಪತಿ ಯಾತ್ರೆ : ಆ.15ರವರೆಗೆ ಬುಕ್ ಮಾಡಿದವರಿಗೆ ಮಾತ್ರ ತಿಮ್ಮಪ್ಪನ ಭೇಟಿಗೆ ಅವಕಾಶ

By Suvarna News  |  First Published Aug 10, 2022, 11:10 AM IST

ಹಿಂದೂ ಪವಿತ್ರ ಕ್ಷೇತ್ರ ತಿರುಪತಿಗೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಕೋಟ್ಯಾಂತರ ರೂಪಾಯಿ ಆದಾಯವಾಗುತ್ತದೆ. ಪ್ರತಿದಿನವೂ ಅಲ್ಲಿ ಭಕ್ತರ ಜಾತ್ರೆ ತಿಮ್ಮಪ್ಪನ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿರುತ್ತದೆ.


ತಿರುಪತಿ: ಹಿಂದೂ ಪವಿತ್ರ ಕ್ಷೇತ್ರ ತಿರುಪತಿಗೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಕೋಟ್ಯಾಂತರ ರೂಪಾಯಿ ಆದಾಯವಾಗುತ್ತದೆ. ಪ್ರತಿದಿನವೂ ಅಲ್ಲಿ ಭಕ್ತರ ಜಾತ್ರೆ ತಿಮ್ಮಪ್ಪನ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿರುತ್ತದೆ. ಆದರೆ ಹೀಗೆ ನೀವೇನಾದರೂ ತಿರುಪತಿ ತಿಮ್ಮಪ್ಪನ ಭೇಟಿಗೆ ಹೋಗುವ ಪ್ಲಾನ್ ಮಾಡಿದ್ದಲ್ಲಿ ಈ ವಿಚಾರವನ್ನು ಗಮನಿಸಲೇಬೇಕು. ಆಗಸ್ಟ್‌ 15ರವರೆಗೆ ತಿರುಪತಿ ಭೇಟಿಗೆ ಬುಕ್ ಮಾಡಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಬುಕ್ ಮಾಡಿದವರ ಸಂಖ್ಯೆ ಮಿತಿ ಮೀರಿರುವುದರಿಂದ ಈ ನಿಯಮ ರೂಪಿಸಲಾಗಿದೆ.

ಏಳು ಕೊಂಡಲ ವಾಡಾನ ದರ್ಶನಕ್ಕೆ ಹಲವು ರೀತಿಯಲ್ಲಿ ಭಕ್ತರು ತೆರಳುತ್ತಾರೆ. ಸಾಮಾನ್ಯ ದರ್ಶನ, ವಿಶೇಷ ದರ್ಶನ ವಿಐಪಿ ದರ್ಶನ ಹೀಗೆ ಹಲವು ವಿಧಾನಗಳಲ್ಲಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಶ್ರೀಮಂತರು ವಿಶೇಷ ದರ್ಶನ ಪಡೆದರೆ ಪಡೆದರೆ, ಪ್ರತಿಷ್ಠಿತರು, ಸಾಮಾಜದ ಗಣ್ಯರು, ಸಿನಿಮಾ ತಾರೆಯರು ವಿಐಪಿ ಕೋಟಾ ಮೂಲಕ ಜಗದೊಡೆಯನ ದರ್ಶನ ಪಡೆಯುತ್ತಾರೆ. ಆದರೆ ನಮ್ಮ ನಿಮ್ಮಂತ ಜನ ಸಾಮಾನ್ಯರು ಕಾಲ್ನಡಿಗೆಯ ಮೂಲಕ ಸಾಗಿ ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಏರಿ ತಿಮ್ಮಪ್ಪನ ದರ್ಶನಕ್ಕೆ ಸರದಿ ಸಾಲಿನಲ್ಲಿ ಗಂಟೆಗಳ ಕಾಲ ದಿನಗಳ ಕಾಲ ಕಾದು ಕುಳಿತು ನಿಂತು ವೆಂಕಟೇಶನ ದರ್ಶನ ಪಡೆಯುತ್ತಾರೆ. 

Tap to resize

Latest Videos

ತಿರುಪತಿ: ಕರ್ನಾಟಕದ ಯಾತ್ರಾರ್ಥಿಗಳಿಗೆ ವಸತಿ ಸೌಲಭ್ಯ, ಎಸ್‌.ಅರ್‌. ವಿಶ್ವನಾಥ್

ಆದರೆ ಹೀಗೇ ಯಾವುದೇ ಬುಕ್ಕಿಂಗ್ ಮಾಡದೇ ಸರದಿ ಸಾಲಿನಲ್ಲಿ ನಿಂತು ಕಾದು ತಿಮ್ಮಪ್ಪನ ದರ್ಶನಕ್ಕೆ ಬರುವವರು, ದರ್ಶನ ಪಡೆಯಲು ಇಚ್ಚಿಸುವವರು ಆಗಸ್ಟ್‌ 15ರವರೆಗೆ ತಮ್ಮ ಈ ತೀರ್ಥಯಾತ್ರೆಯನ್ನು ಮುಂದೂಡುವುದು ಒಳಿತು. ಏಕೆಂದರೆ ಆಗಸ್ಟ್‌ 15ರವರೆಗೆ ಸಾಲು ಸಾಲು ರಜೆಗಳಿರುವುದರಿಂದ ಶ್ರಾವಣಮಾಸವೂ ಆಗಿರುವುದರಿಂದ ತಿರುಪತಿ ತಿರುಮಲಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇದೆ. ಹೀಗಾಗಿ ಭಕ್ತರ ನಿರ್ವಹಣೆಯೂ ಕಷ್ಟದ ಕೆಲಸ ಹೀಗಾಗಿ ಈ ಐದು ದಿನಗಳ ಕಾಲ ಬುಕ್ ಮಾಡದೇ ಹಾಗೂ ಯಾವುದೇ ಮುಂಜಾಗರೂಕತೆ ವಹಿಸದೇ ಬಂದು ಸಂಕಷ್ಟಕ್ಕೆ ಒಳಗಾಗದಿರಿ ಎಂದು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಟಿಟಿಡಿ ಭಕ್ತರಲ್ಲಿ ಮನವಿ ಮಾಡಿದೆ. 

ತಿರುಮಲ ತಿರುಪತಿ ದೇವಸ್ಥಾನಕ್ಕೆ 42 ಲಕ್ಷ ವೆಚ್ಚದ ಧರ್ಮ ರಥ ನೀಡಿದ ಸುಧಾಮೂರ್ತಿ

ಮೊದಲೇ ತಿಮ್ಮಪ್ಪನ ದರ್ಶನಕ್ಕೆ ಬುಕ್ ಮಾಡಿದ್ದಲ್ಲಿ, ವಾಸ್ತವ್ಯಕ್ಕೆ ವಸತಿ ಸೌಲಭ್ಯವನ್ನು ಖಚಿತಪಡಿಸಿಕೊಂಡಿದ್ದಲ್ಲಿ ಮಾತ್ರ ಬನ್ನಿ ಎಂದು ಟಿಟಿಡಿ ಹೇಳಿದೆ. ಇದ್ಯಾವುದೇ ಸೌಲಭ್ಯ ಮಾಡಿಕೊಳ್ಳದೇ ಇದ್ದಲ್ಲಿ ವೃದ್ಧರು, ಮಕ್ಕಳು, ವಿಶೇಷ ಚೇತನರು, ತಿರುಮಲ ಯಾತ್ರೆಯನ್ನು ಮುಂದೂಡಿ ಎಂದು ಟಿಟಿಡಿ ಹೇಳಿದೆ. ತಿರುಪತಿಯಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ಕೆಲವೊಮ್ಮೆ ದಿನಗಟ್ಟಲೇ ಕಾಯಬೇಕಾಗುತ್ತದೆ. ಇದರಿಂದ ವಯಸ್ಸಾದ ಭಕ್ತರಿಗೆ ಮಕ್ಕಳಿಗೆ ಕಷ್ಟವಾಗುವುದು.

click me!