ಹುಡುಗಿಯರು ಮಾತ್ರವಲ್ಲ ಹುಡುಗ್ರೂ ಪರ್ಫೆಕ್ಟ್ ಲುಕ್ ಬಯಸ್ತಾರೆ. ನಾಲ್ಕು ಜನರ ಮುಂದೆ ಮಿಂಚಬೇಕೆಂದುಕೊಳ್ತಾರೆ. ಚೆಂದದ ಬಟ್ಟೆ ಧರಿಸಿ, ಒಂದಿಷ್ಟು ಸೆಂಟ್ ಹೊಯ್ದುಕೊಂಡು ಬರ್ತಾರೆ. ಆದ್ರೆ ತಪ್ಪಾದ ಬೆಲ್ಟ್ ಆಯ್ಕೆ ಅವರ ಲುಕ್ ಹಾಳು ಮಾಡಿರುತ್ತೆ.
ಫ್ಯಾಷನ್ (Fashion) ನಲ್ಲಿ ಪುರುಷ (Male) ರೂ ಹಿಂದೆ ಬಿದ್ದಿಲ್ಲ. ಹುಡುಗಿಯರಷ್ಟು ಅಲಂಕಾರಿಕ ವಸ್ತುಗಳು ಅವರಿಗೆ ಲಭ್ಯವಿಲ್ಲದೆ ಹೋದ್ರೂ ಇರೋ ಬಟ್ಟೆ (Clothes), ಟೈ, ಶರ್ಟ್, ಶೂ, ಸಾಕ್ಸ್ ನಲ್ಲಿಯೇ ಅವರು ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಹುಡುಗರ ಸೌಂದರ್ಯ (Beauty) ಸೆಳೆಯುವ ವಸ್ತುಗಳಲ್ಲಿ ಬೆಲ್ಟ್ ಕೂಡ ಸೇರಿದೆ. ಬಹುತೇಕ ಎಲ್ಲ ಪುರುಷರೂ ಬೆಲ್ಟ್ (Belt) ಧರಿಸುತ್ತಾರೆ. ಇನ್ ಶರ್ಟ್ ಮಾಡುವ ಸಂದರ್ಭದಲ್ಲಿ ಬೆಲ್ಟ್ ಅತ್ಯಗತ್ಯ. ಹಾಗೆಯೇ ಬೆಲ್ಟ್ ಎಲ್ಲರ ಗಮನ ಸೆಳೆಯುತ್ತದೆ. ಹಾಗಾಗಿ ಯಾವ್ದೋ ಬೆಲ್ಟ್ ಧರಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಬೆಲ್ಟ್ ನ ತಪ್ಪು ಆಯ್ಕೆಯು ಸಂಪೂರ್ಣ ನೋಟವನ್ನು ಹಾಳು ಮಾಡುತ್ತದೆ. ಸರಿಯಾದ ಬೆಲ್ಟ್ ಉಡುಪನ್ನು ಪರಿಪೂರ್ಣವಾಗಿಸುತ್ತದೆ. ಹಾಗಾಗಿ ಬೆಲ್ಟ್ ಧರಿಸುವಾಗ ಯಾವ ರೀತಿಯ ತಪ್ಪುಗಳನ್ನು ಮಾಡ್ಬಾರದು. ಬೆಲ್ಟ್ ಖರೀದಿ ವೇಳೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಬೆಲ್ಟ್ ಧರಿಸುವ ವೇಳೆ ಇರಲಿ ಗಮನ :
undefined
ಬೆಲ್ಟ್ ಮತ್ತು ಶೂ ಬಣ್ಣದಲ್ಲಿ ಮ್ಯಾಚಿಂಗ್ : ಬಹಳಷ್ಟು ಪುರುಷರು ಈ ತಪ್ಪನ್ನು ಮಾಡ್ತಾರೆ. ಬೆಲ್ಟ್ ಕಲರ್ ಗೆ ತಕ್ಕ ಶೂ ಧರಿಸುವುದಿಲ್ಲ. ಔಪಚಾರಿಕ ನೋಟ ಅಥವಾ ಕಚೇರಿಗೆ ಸಿದ್ಧರಾಗಿದ್ದರೆ ಕಂದು ಬಣ್ಣದ ಬೆಲ್ಟ್ ಧರಿಸಿದ್ದಾಗ ಕಪ್ಪು ಬಣ್ಣದ ಬೂಟುಗಳನ್ನು ಆಯ್ಕೆ ಮಾಡಬೇಡಿ. ಇದು ದೊಡ್ಡ ಫ್ಯಾಷನ್ ಪ್ರಮಾದ. ಶೂಗಳು ಮತ್ತು ಬೆಲ್ಟ್ ಬಣ್ಣವು ಯಾವಾಗಲೂ ಹೊಂದಿಕೆಯಾಗಬೇಕು. ಅಷ್ಟೇ ಅಲ್ಲ, ಬಣ್ಣದ ಜೊತೆಗೆ ಬೆಲ್ಟ್ ಮತ್ತು ಶೂಗಳ ಮೆಟೀರಿಯಲ್ ಕೂಡ ಒಂದೇ ಆಗಿರಬೇಕು. ಉದಾಹರಣೆಗೆ, ಚರ್ಮದ ಬೆಲ್ಟ್ ಧರಿಸಿದ್ದರೆ ಚರ್ಮದ ಬೂಟುಗಳನ್ನೇ ಧರಿಸಿ. ಹಾಗೆ ಕ್ಯಾನ್ವಾಸ್ ಬೂಟುಗಳೊಂದಿಗೆ ಕ್ಯಾನ್ವಾಸ್ ಬೆಲ್ಟ್ ಹಾಕೋದನ್ನು ಮರೆಯಬೇಡಿ.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್ ಯಾರು ಧರಿಸೋಲ್ಲ ಹೇಳಿ? ಅದಕ್ಕೆ ಈ ವಿಷ್ಯ ಗೊತ್ತಿರಲಿ
ಉಡುಪಿನೊಂದಿಗೆ ಸರಿಯಾದ ಬೆಲ್ಟ್ ಆಯ್ಕೆ : ಅನೇಕರು ಒಂದು ಬೆಲ್ಟ್ ಮಾತ್ರ ಇಟ್ಟುಕೊಂಡಿರ್ತಾರೆ. ಎಲ್ಲ ಡ್ರೆಸ್ ಗೂ ಅದೇ ಬೆಲ್ಟ್ ಧರಿಸುತ್ತಾರೆ. ಇದು ತಪ್ಪು. ಉಡುಪಿಗೆ ತಕ್ಕಂತೆ ನೀವು ಬೆಲ್ಟ್ ಬದಲಿಸಬೇಕಾಗುತ್ತದೆ. ಉದಾಹರಣೆಗೆ, ನೀವು ಔಪಚಾರಿಕ ಅಥವಾ ಕಚೇರಿ ಉಡುಗೆ ಧರಿಸಿದ್ದರೆ ಯಾವಾಗಲೂ ತೆಳುವಾದ ಬೆಲ್ಟ್ ಧರಿಸಬೇಕು. ಅದು 3.4 ಸೆಂಟಿ ಮೀಟರ ಆಗಿರಬೇಕು. ಇದು ಪ್ಯಾಂಟ್, ಚಿನೋಸ್ ಮತ್ತು ಡಾರ್ಕ್ ಡೆನಿಮ್ ಅನ್ನು ಒಳಗೊಂಡಿದೆ. ಮತ್ತೊಂದೆಡೆ, ಕ್ಯಾಶುಯಲ್ ಉಡುಗೆಗಳಾದ ಡೆನಿಮ್, ಕಾರ್ಗೋ ಪ್ಯಾಂಟ್ ಮತ್ತು ಶಾರ್ಟ್ಸ್ ಅನ್ನು ಸುಮಾರು 3.9 ಸೆಂ.ಮೀ ಅಗಲದ ಬೆಲ್ಟ್ ನೊಂದಿಗೆ ಧರಿಸಬೇಕು.
ಹಳೆಯ ಬೆಲ್ಟ್ : ಅಲ್ಲಲ್ಲಿ ಬಣ್ಣ ಮಾಸಿದ, ಹಳೆಯ ಬೆಲ್ಟ್ ಅನ್ನು ಎಂದಿಗೂ ಬಳಸಬೇಡಿ. ಬೆಲ್ಟ್ ಖರೀದಿ ವಿಷ್ಯದಲ್ಲಿ ಜಿಪುಣತನ ತೋರಬೇಡಿ. ಉತ್ತಮ ಗುಣಮಟ್ಟದ, ಒಳ್ಳೆ ಕಂಪನಿಯ, ಹೆಚ್ಚು ಬಾಳಿಕೆ ಬರುವು ಬೆಲ್ಟ್ ಖರೀದಿ ಮಾಡಿದ್ರೆ ಉತ್ತಮ. ಅನೇಕ ಪುರುಷರು ಬೆಲ್ಟ್ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಹರಿದ ಅಥವಾ ಬಕಲ್ ಹಾಳಾದ ಬೆಲ್ಟ್ ಧರಿಸುತ್ತಾರೆ. ಇದು ಸಂಪೂರ್ಣ ನೋಟವನ್ನು ಹಾಳುಮಾಡುತ್ತದೆ. ಅದಕ್ಕಾಗಿಯೇ ಯಾವಾಗಲೂ ಬೆಲ್ಟ್ ಧರಿಸುವ ವೇಳೆ ಗಮನ ಹರಿಸಬೇಕು.
ಇದನ್ನೂ ಓದಿ: ಕೆಮಿಕಲ್ ಬದಲು ಈ ನ್ಯಾಚುರಲ್ ಹೇರ್ ಕಲರ್ ಟ್ರೈ ಮಾಡಿ ನೋಡಿ
ತಪ್ಪು ಗಾತ್ರದ ಬೆಲ್ಟ್ : ತುಂಬಾ ಉದ್ದವಾದ ಅಥವಾ ತುಂಬಾ ಚಿಕ್ಕದಾದ ಬೆಲ್ಟ್ ಕೂಡ ಒಂದು ತಪ್ಪು. ಬೆಲ್ಟ್ ಎರಡನೇ ಲೂಪ್ ಅನ್ನು ಮೀರುವಷ್ಟು ಉದ್ದವಾಗಿರಬಾರದು ಅಥವಾ ಬಕಲ್ ನಂತರ ಮೊದಲ ಲೂಪ್ ಅನ್ನು ಪ್ರವೇಶಿಸಲು ಕಷ್ಟವಾಗುವಷ್ಟು ಚಿಕ್ಕದಾಗಿರಬಾರದು. ಸರಿಯಾದ ಗಾತ್ರದ ಬೆಲ್ಟ್ ಧರಿಸಿದ್ರೆ ಮಾತ್ರ ಡ್ರೆಸ್ ಗೆ ಫರ್ಪೆಕ್ಟ್ ಲುಕ್ ಸಿಗುತ್ತದೆ. ತಪ್ಪಾದ ಬೆಲ್ಟ್ ನೀವು ಎಷ್ಟೇ ಸುಂದರ ಡ್ರೆಸ್ ಧರಿಸಿದ್ದರೂ ಅದ್ರ ಸೌಂದರ್ಯ ಹಾಳು ಮಾಡುತ್ತದೆ.