ನೀವೂ Skinny Jeans ಧರಿಸ್ತೀರಾ? ಈಗ್ಲೇ ಎಚ್ಚೆತ್ತುಕೊಳ್ಳಿ

By Suvarna NewsFirst Published May 19, 2022, 4:12 PM IST
Highlights

ಟೀ ಶರ್ಟ್ ನಿಂದ ಹಿಡಿದು ಲೆಹಂಗಾವರೆಗೆ ಎಲ್ಲ ಡ್ರೆಸ್ ಟೈಟ್ ಫಿಟ್ಟಿಂಗ್ ಇರ್ಬೇಕೆಂದು ನಾವೆಲ್ಲ ಬಯಸ್ತೇವೆ. ಟೈಟ್ ಡ್ರೆಸ್ ಸೌಂದರ್ಯ ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕೆ ನಾವು ಇದಕ್ಕೆ ಹೆಚ್ಚು ಆದ್ಯತೆ ನೀಡ್ತೇವೆ. ಆದ್ರೆ ಚೆಂದ ಕಾಣುವ ಗುಂಗಿನಲ್ಲಿ ಆರೋಗ್ಯ ಹಾಳಾಗ್ತಿದೆ ಎಂಬುದನ್ನೇ ಮರೆತು ಬಿಡ್ತೇವೆ. 
 

ಇತ್ತೀಚಿನ ದಿನಗಳಲ್ಲಿ ಸ್ಕಿನ್ನಿ ಜೀನ್ಸ್ (Skinny Jeans) ಫ್ಯಾಷನ್ (Fashion ) ಆಗಿದೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು  ಸ್ಕಿನ್ನಿ ಜೀನ್ಸ್ ಧರಿಸಲು ಹೆಚ್ಚು ಇಷ್ಟಪಡ್ತಾರೆ. ಸ್ಕಿನ್ನಿ ಜೀನ್ಸ್ ನಲ್ಲಿ ಹುಡುಗಿಯರು ಸ್ಲಿಮ್ (Slim) ಆಗಿ ಕಾಣುವುದು ಮಾತ್ರವಲ್ಲ ಈ ಜೀನ್ಸ್ ಹುಡುಗಿಯರಿಗೆ ಸ್ಮಾರ್ಟ್ ಲುಕ್ ನೀಡುತ್ತದೆ. ಇದೇ ಕಾರಣಕ್ಕೆ ಹುಡುಗಿಯರು ಹೆಚ್ಚಾಗಿ ಇದನ್ನು ಇಷ್ಟಪಡ್ತಾರೆ. ಅನೇಕ ಬಾರಿ ಜನರು ಫ್ಯಾಷನ್ ಗುಂಗಿನಲ್ಲಿ ತಮ್ಮ ಆರೋಗ್ಯವನ್ನು ಮರೆಯುತ್ತಾರೆ. ಸ್ಕಿನ್ನಿ ಜೀನ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಸ್ಕಿನ್ನಿ ಜೀನ್ಸ್ ಧರಿಸುವುದ್ರಿಂದ ಹೊಟ್ಟೆನೋವು, ತಲೆಸುತ್ತು, ಬೆನ್ನುನೋವು ಮೊದಲಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸ್ಕಿನ್ನಿ ಜೀನ್ಸ್ ಧರಿಸುವ ಮೊದಲು ಅದನ್ನು ಧರಿಸುವುದ್ರಿಂದ ಯಾವ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿದುಕೊಂಡಿರಬೇಕು. ಇಂದು ಸ್ಕಿನ್ನಿ ಜೀನ್ಸ್ ಧರಿಸುವುದ್ರಿಂದ ಏನೆಲ್ಲ ಸಮಸ್ಯೆಯಾಗುತ್ತದೆ ತಿಳಿಯಿರಿ.

ಸ್ಕಿನ್ನಿ ಫಿಟ್ ಜೀನ್ಸ್ ಧರಿಸುವುದರಿಂದ ಆಗುವ ಅನಾನುಕೂಲಗಳು 

ರಕ್ತ ಪರಿಚಲನೆ : ಸ್ಕಿನ್ನಿ ಜೀನ್ಸ್ ದೇಹಕ್ಕೆ ಟೈಟ್ ಆಗಿ ಅಂಟಿಕೊಂಡಿರುತ್ತದೆ. ಸ್ಕಿನ್ನಿ ಫಿಟ್ ಜೀನ್ಸ್ ಧರಿಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಿಲ್ಲ. ಇದರಿಂದ ದೇಹದಲ್ಲಿ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ. ರಕ್ತ ಸಂಚಾರ ಸರಾಗವಾಗಿ ಆಗದ ಕಾರಣ ಮೈ – ಕೈ ನೋವು, ದೇಹದಲ್ಲಿ ಊತ, ದೇಹದಲ್ಲಿ ಗಡ್ಡೆ ಇತ್ಯಾದಿ ಸಮಸ್ಯೆ ಉಂಟಾಗುತ್ತದೆ.   

ಬೆನ್ನು ನೋವು : ಸಡಿಲವಾದ ಬಟ್ಟೆಯನ್ನು ಧರಿಸುವಂತೆ ವೈದ್ಯರು ಸಲಹೆ ನೀಡುತ್ತಿರುತ್ತಾರೆ. ಆದ್ರೆ ಫ್ಯಾಷನ್ ಹೆಸರಿನಲ್ಲಿ ಜನರು ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಾರೆ. ಬಿಗಿಯಾದ ಜೀನ್ಸ್ ಧರಿಸುವುದರಿಂದ ಬೆನ್ನು ನೋವು ಉಂಟಾಗುತ್ತದೆ. ಇದು ಬೆನ್ನು ಮತ್ತು ಬೆನ್ನುಮೂಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ರಕ್ತನಾಳಗಳಲ್ಲಿ ಗಂಟುಗಳು ಉಂಟಾಗುತ್ತವೆ. ಪಾದದಿಂದ ಹೃದಯಕ್ಕೆ ಹೋಗುವ ರಕ್ತನಾಳವು ತೊಂದರೆ ಅನುಭವಿಸಲು ಪ್ರಾರಂಭಿಸುತ್ತದೆ. ಇದರಿಂದ ನೋವು ಕಾಡಲು ಶುರುವಾಗುತ್ತದೆ.

ಪ್ಲಾಸ್ಟಿಕ್ ಸರ್ಜರಿಯಿಂದ ಶುರುವಾಗೋ ಆರೋಗ್ಯ ಸಮಸ್ಯೆಗಳು ಮಾರಣಾಂತಿಕ !

ವಂಶಾಭಿವೃದ್ಧಿ : ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದ್ರಿಂದ ಮೂತ್ರದ ಉರಿಯೂತಕ್ಕೆ ಕಾರಣವಾಗಬಹುದು. ಇದರಿಂದಾಗಿ ವೀರ್ಯದ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಶಿಲೀಂಧ್ರಗಳ ಸೋಂಕಿಗೆ ಒಳಗಾಗುವ ಸಾಧ್ಯತೆಗಳೂ ಇವೆ. ವೀರ್ಯದ ಪ್ರಮಾಣ ಕಡಿಮೆಯಾದ್ರೆ ಫಲವತ್ತತೆ ಸಮಸ್ಯೆ ಶುರುವಾಗುತ್ತದೆ. 

ಹೊಟ್ಟೆ ನೋವು : ಸ್ಕಿನ್ನಿ ಟೈಟ್ ಜೀನ್ಸ್ ಧರಿಸುವುದರಿಂದ ನಿಮಗೆ ಹೊಟ್ಟೆ ನೋವಿನ ಸಮಸ್ಯೆಯೂ ಶುರುವಾಗುತ್ತದೆ. ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಹೊಟ್ಟೆಯ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈಗಾಗಲೇ ಹೊಟ್ಟೆ ನೋವಿನ ಸಮಸ್ಯೆಯಿರುವವರು ಅಪ್ಪಿತಪ್ಪಿಯೂ ಸ್ಕಿನ್ನಿ ಟೈಟ್ ಜೀನ್ಸ್ ಧರಿಸಬೇಡಿ. ಇದು ನಿಮ್ಮ ನೋವನ್ನು ಹೆಚ್ಚು ಮಾಡಬಹುದು. 

ಕೇವಲ ಒಂದು ಚಿಟಿಕೆ ಸುಣ್ಣದಿಂದ, ದೇಹವು ಸೂಪರ್ ಆಕ್ಟಿವ್ ಆಗಿರುತ್ತೆ!

ತಲೆ ತಿರುಗುವಿಕೆ : ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಶ್ವಾಸಕೋಶಕ್ಕೆ ಒತ್ತಡ ಹೆಚ್ಚಾಗುತ್ತದೆ. ಸರಿಯಾಗಿ ಉಸಿರಾಡಲು ಕಷ್ಟವಾಗುತ್ತದೆ. ಬಿಗಿಯಾದ ಬಟ್ಟೆ ಧರಿಸಿದ್ರೆ ಉಸಿರುಗಟ್ಟಿದ ಅನುಭವವಾಗುತ್ತದೆ. ಉಸಿರಾಟ ಸರಿಯಾಗಿ ಆಗದೆ ಹೋದ್ರೆ ಅನೇಕ ಸಮಸ್ಯೆ ಕಾಡುತ್ತದೆ. ಅದ್ರಲ್ಲಿ ತಲೆತಿರುಗುವಿಕೆಯೂ ಒಂದು. ಬಿಗಿಯಾದ ಬಟ್ಟೆ ಧರಿಸಿದ ನಂತ್ರ ನಿಮಗೆ ತಲೆ ಸುತ್ತಿನ ಅನುಭವವಾದ್ರೆ ತಕ್ಷಣ ಬಟ್ಟೆಯನ್ನು ಬದಲಿಸುವುದು ಒಳ್ಳೆಯದು. ಇಲ್ಲವಾದ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುತ್ತದೆ. 
ಫ್ಯಾಷನ್ ಹೆಸರಿನಲ್ಲಿ ಹಾಗೂ ಸುಂದರವಾಗಿ ಕಾಣಲಿ ಎನ್ನುವ ಕಾರಣಕ್ಕೆ ಬಿಗಿಯಾದ ಬಟ್ಟೆಗೆ ಹೆಚ್ಚು ಆದ್ಯತೆ ನೀಡ್ಬೇಡಿ. ಬಿಗಿಯಾದ ಬಟ್ಟೆ ಧರಿಸುವ ಸಂದರ್ಭ ಬಂದ್ರೆ ಕೆಲವೇ ಕೆಲವು ಗಂಟೆ ಈ ಬಟ್ಟೆಯಲ್ಲಿರಿ. ದಿನವಿಡಿ ಬಿಗಿಯಾದ ಬಟ್ಟೆ ಧರಿಸುವುದನ್ನು ತಪ್ಪಿಸಿ. ರಾತ್ರಿ ಅಪ್ಪಿತಪ್ಪಿಯೂ ಸ್ಕಿನ್ ಟೈಟ್ ಡ್ರೆಸ್ ಧರಿಸಬೇಡಿ. ರಾತ್ರಿ ಸಡಿಲವಾದ ಬಟ್ಟೆಯನ್ನು ಧರಿಸಿ.

click me!