
ಚಿಕ್ಕ ಸ್ತನಗಳಿಗೆ ಬ್ಲೌಸ್ ಡಿಸೈನ್: ಸೀರೆಯ ಸೌಂದರ್ಯ ಹೆಚ್ಚಿಸೋದು ಬ್ಲೌಸ್. ಸ್ತನಗಳು ಚಿಕ್ಕದಿದ್ರೆ ಬ್ಲೌಸ್ ಡಿಸೈನ್ ಆಯ್ಕೆ ಮಾಡೋಾಗ ಜಾಗ್ರತೆ ಇರಲಿ. ಸರಿಯಾದ ಫಿಟ್ ಮತ್ತು ಡಿಸೈನ್ ನಿಮ್ಮ ಫಿಗರ್‌ಗೆ ಬ್ಯಾಲೆನ್ಸ್ ಕೊಡುತ್ತೆ, ಜೊತೆಗೆ ಎಲಿಗಂಟ್ ಮತ್ತು ಗ್ರೇಸ್‌ಫುಲ್ ಲುಕ್ ಕೊಡುತ್ತೆ. ನಿಮ್ಮ ಸ್ತನಗಳು ಚಿಕ್ಕದಿದ್ರೆ, ಕರ್ವಿ ಮತ್ತು ಸ್ಟೈಲಿಶ್ ಲುಕ್ ಕೊಡೋ ಬ್ಲೌಸ್ ಡಿಸೈನ್ ಆಯ್ಕೆ ಮಾಡ್ಕೊಳ್ಳಿ. ಈಗ ಕೆಲವು ಚೆಂದದ ಡಿಸೈನ್‌ಗಳ ಬಗ್ಗೆ ತಿಳ್ಕೊಳ್ಳೋಣ.
ಚಿಕ್ಕ ಸ್ತನಗಳು ಇರೋರಿಗೆ ಪ್ಯಾಡೆಡ್ ಬ್ಲೌಸ್ ಡಿಸೈನ್ ಚೆನ್ನಾಗಿರುತ್ತೆ. ಇದು ನಿಮ್ಮ ಸೈಜ್ ಹೆಚ್ಚಿಸಿ ಪರ್ಫೆಕ್ಟ್ ಶೇಪ್ ಕೊಡುತ್ತೆ. ಇದ್ರಿಂದ ಲುಕ್ ಬ್ಯಾಲೆನ್ಸ್‌ಡ್ ಆಗಿ ಕಾಣುತ್ತೆ. ಡೀಪ್ ನೆಕ್, ಸ್ವೀಟ್‌ಹಾರ್ಟ್ ನೆಕ್‌ಲೈನ್ ಅಥವಾ ಲೈಟ್ ಎಂಬ್ರಾಯ್ಡರಿ ಇರೋ ಪ್ಯಾಡೆಡ್ ಬ್ಲೌಸ್ ಚೆನ್ನಾಗಿರುತ್ತೆ.
ಹೈ ನೆಕ್ ಮತ್ತು ಕಾಲರ್ ಬ್ಲೌಸ್ ಚಿಕ್ಕ ಸ್ತನಗಳು ಇರೋರಿಗೆ ತುಂಬಾ ಚೆನ್ನಾಗಿ ಕಾಣುತ್ತೆ. ಇದು ಮೇಲ್ಭಾಗ ಫುಲ್ ಆಗಿ ಕಾಣೋ ಹಾಗೆ ಮಾಡಿ ರಾಯಲ್ ಲುಕ್ ಕೊಡುತ್ತೆ. ಕಾಟನ್, ಸಿಲ್ಕ್ ಅಥವಾ ಜಾರ್ಜೆಟ್ ಫ್ಯಾಬ್ರಿಕ್ ಬ್ಲೌಸ್ ಆಯ್ಕೆ ಮಾಡ್ಕೊಳ್ಳಿ. ಸೀರೆ ಮತ್ತು ಲೆಹೆಂಗಾ ಜೊತೆ ಇದು ಎಲಿಗಂಟ್ ಲುಕ್ ಕೊಡುತ್ತೆ.
ರಫಲ್ಸ್ ಮತ್ತು ಫ್ರಿಲ್ಸ್ ಇರೋ ಬ್ಲೌಸ್ ಡಿಸೈನ್ ಕೂಡ ಚಿಕ್ಕ ಸ್ತನಗಳು ಇರೋರಿಗೆ ಚೆನ್ನಾಗಿ ಕಾಣುತ್ತೆ. ಈ ಬ್ಲೌಸ್ ಮುಂಭಾಗಕ್ಕೆ ವಾಲ್ಯೂಮ್ ಕೊಟ್ಟು ಕರ್ವಿ ಲುಕ್ ಕೊಡುತ್ತೆ. ಶಿಫಾನ್, ಆರ್ಗನ್ಜಾ ಅಥವಾ ನೆಟ್ ಫ್ಯಾಬ್ರಿಕ್‌ನಲ್ಲಿ ಪ್ಯಾಸ್ಟೆಲ್ ಶೇಡ್ಸ್‌ನ ರಫಲ್ ಬ್ಲೌಸ್ ಟ್ರೈ ಮಾಡಿ.
ನಿಮ್ಮ ಸ್ತನಗಳು ಚಿಕ್ಕದಿದ್ರೆ, ಡೀಪ್ಬ್ಯಾಕ್ ಬ್ಲೌಸ್ ಡಿಸೈನ್ ಒಳ್ಳೆ ಆಯ್ಕೆ. ಇದು ಪೂರ್ತಿ ಲುಕ್‌ಗೆ ಬ್ಯಾಲೆನ್ಸ್ ಮತ್ತು ಗ್ಲಾಮರ್ ಕೊಡುತ್ತೆ. ಮುಂಭಾಗದಲ್ಲಿ ಪ್ಯಾಡ್ ಹಾಕಿಸಿಕೊಳ್ಳಿ.
ಚಿಕ್ಕ ಸ್ಥನಗಳು ಇರೋರು ವಾಲ್ಯೂಮ್ ಮತ್ತು ಟೆಕ್ಸ್‌ಚರ್ ಹೆಚ್ಚಿಸೋ ಬ್ಲೌಸ್ ಡಿಸೈನ್ ಆಯ್ಕೆ ಮಾಡ್ಕೊಳ್ಳಿ. ಈ ರೀತಿಯ ಬ್ಲೌಸ್ ಹೊಲಿಸಿ ಸೀರೆ ಮತ್ತು ಲೆಹೆಂಗಾ ಜೊತೆ ಟ್ರೈ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.