700 ರೂ ಲಿಪ್ ಸ್ಟಡ್ ಖರೀದಿದಿಗೆ 1.2 ಕೋಟಿ ರೂ ಕೈಚೆಲ್ಲಿದ ಪುತ್ರಿ, ಪ್ರಜ್ಞೆ ತಪ್ಪಿ ಬಿದ್ದ ತಾಯಿ

Published : Feb 06, 2025, 04:11 PM ISTUpdated : Feb 06, 2025, 04:12 PM IST
700 ರೂ ಲಿಪ್ ಸ್ಟಡ್ ಖರೀದಿದಿಗೆ 1.2 ಕೋಟಿ ರೂ ಕೈಚೆಲ್ಲಿದ ಪುತ್ರಿ, ಪ್ರಜ್ಞೆ ತಪ್ಪಿ ಬಿದ್ದ ತಾಯಿ

ಸಾರಾಂಶ

ಲಿಪ್ ಸ್ಟಡ್ ಹಾಗೂ ಕಿವಿಯೋಲೆ ಖರೀದಿಸಲು ಮಗಳು ಮಾಡಿದ ಕೆಲಸಕ್ಕೆ ತಾಯಿ ಪ್ರಜ್ಞೆ ತಪ್ಪಿದ್ದಾರೆ. ಕೇವಲ 700 ರೂಪಾಯಿ ಮೌಲ್ಯದ ಲಿಪ್ ಸ್ಟಡ್ ಹಾಗೂ ಕಿವಿಯೋಲೆಗೆ ಮಗಳು ಬರೋಬ್ಬರಿ 1.2 ಕೋಟಿ ರೂಪಾಯಿ ಹಣ ನೀಡಿದ್ದಾಳೆ. 

ಶಾಂಘೈ(ಫೆ.06) ಬ್ರ್ಯಾಂಡೆಡ್ ವಸ್ತುಗಳಿಗೆ ದುಬಾರಿ ಮೊತ್ತ ಖರ್ಚು ಮಾಡುವುದು ಇದೀಗ ಹೊಸ ವಿಚಾರವಲ್ಲ. ಡ್ರೆಸ್, ಶೂ, ಫ್ಯಾಶನ್ ಹಾಗೂ ಲೈಫ್‌ಸ್ಟೈಲ್ ವಸ್ತುಗಳಿಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಕಾರಣ ಬ್ರ್ಯಾಂಡೆಡ್ ವಸ್ತುಗಳಿಗಾಗಿ. ಆದರೆ ಇಲ್ಲೊಬ್ಬಳು ಲಿಪ್ ಸ್ಟಡ್ ಹಾಗೂ ಕಿವಿಯೋಲೆ ಖರೀದಿಗೆ ಬರೋಬ್ಬರಿ 1.2 ಕೋಟಿ ರೂಪಾಯಿ ಖರ್ಚು ಮಾಡಿದ್ದಾಳೆ. ಆದರೆ ಈಕೆ ಖರೀದಿಸಿದ್ದು ಕೇವಲ 700 ರೂಪಾಯಿಯ ಲಿಪ್ ಸ್ಟಡ್ ಹಾಗೂ ಕಿವಿಯೋಲೆ. ಪುತ್ರಿಯ ನಡೆ ಕಂಡ ತಾಯಿ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ.  ಚೀನಾದ ಶಾಂಘೈನ ವಾನ್ಲಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಏನಿದು ಘಟನೆ?
ಪುತ್ರಿಗೆ ತುಟಿಗಳಿಗೆ ಹಾಕುವ ಸ್ಟಡ್ ಅಥವಾ ರಿಂಗ್ ಬೇಕಿತ್ತು. ಜೊತೆಗೆ ಅದೇ ಫ್ಯಾಶನ್‌ನ ಕಿವಿಯೋಲೆ. ಇದು ಆಕೆಯ ಅತೀ ದೊಡ್ಡ ಬಯಕೆಯಾಗಿತ್ತು. ಒಂದು ರೀತಿಯಲ್ಲಿ ಯೋ ಯೋ ಸ್ಟೈಲ್ ಇದಾಗಿತ್ತು. ಇದಕ್ಕೆ ತಾಯಿ ಒಪ್ಪಿಲ್ಲ. ಈ ರೀತಿ ತುಟಿಗೆ ಸ್ಟಡ್ ಹಾಕಿ ತಿರುಗಾಡುವುದು ಬೇಡ. ಇದು ಶೋಭೆ ತರುವುದಿಲ್ಲ. ಇಷ್ಟೇ ಅಲ್ಲ ಒಳ್ಳೇದಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಆದರೆ ಈ ಮಾತನ್ನು ಪುತ್ರಿ ಕಿವಿಗೆ ಹಾಕಿಕೊಂಡಿಲ್ಲ. ಪದೇ ಪದೇ ತಾಯಿ ಬಳಿಕ ದುಡ್ಡು ಕೇಳಿದ್ದಾಳೆ. ಇದಕ್ಕೆ ತಾಯಿ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಇವರಿಬ್ಬರ ನಡುವೆ  ಈ ವಿಚಾರದಲ್ಲಿ ಮೈಮನಸ್ಸು,ವಾಗ್ವಾದ ನಡೆಯುತ್ತಲೇ ಇತ್ತು. 

ಇಲ್ಲಿದೆ ಪಾದಗಳಿಗೆ ಅಂದ ತರುವ ಚೌಡಾ ಪಟ್ಟಿ ಕಾಲ್ಗೆಜ್ಜೆಗಳ ಅದ್ಭುತ ಸಂಗ್ರಹ

ಇತ್ತ ಲಿಪ್ ಸ್ಟಡ್ ಖರೀದಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದ ಮಗಳು, ತಾಯಿ ಜೋಪಾನವಾಗಿಟ್ಟಿದ್ದ ಆಭರಣಗಳನ್ನು ಕದ್ದಿದ್ದಾಳೆ. ನೆಕ್ಲೆಸ್, ಬ್ರಾಸ್‌ಲೆಟ್, ಚೈನ್ ಸೇರಿದಂತೆ ಹಲವು ಚಿನ್ನಾಭರಣಗಳನ್ನು ಮಗಳು ಕದ್ದಿದ್ದಾಳೆ. ಅಪ್ರಾಪ್ತ ಮಗಳಾಗಿರುವ ಕಾರಣ ಈ ಚಿನ್ನಾಭರಣಗಳನ್ನು ಎಲ್ಲಿ ಮಾರಾಟ ಮಾಡಬೇಕು ಅನ್ನೋದು ಆಕೆಗೆ ತಿಳಿಯದಾಗಿದೆ. ಇನ್ನು ತಾನು ಕದ್ದಿರುವುದು ಅಸಲಿ ಚಿನ್ನಾಭರಣ ಅನ್ನೋದು ಆಕೆಗೆ ಗೊತ್ತಿಲ್ಲ. ಇದು ರೋಲ್ಡ್ ಗೋಲ್ಡ್ ಎಂದು ತಿಳಿದು ರಿಸೈಕ್ಲಿಂಗ್ ಶಾಪ್‌ಗೆ ಮಾರಾಟ ಮಾಡಿದ್ದಾಳೆ.

ಪ್ರಮುಖವಾಗಿ ಈಗೆ ಮಾರುಕಟ್ಟೆಗೆ ಹೋದಾಗ ಲಿಪ್ ಸ್ಟಡ್ ಹಾಕಿದ ಯುವತಿಯನ್ನು ನೋಡಿದ್ದಳು. ಇದು ಈಕೆಯನ್ನು ಆಕರ್ಷಿಸಿತ್ತು. ಹೀಗಾಗಿ ತನಗೂ ಈ ಸ್ಟಡ್ ಬೇಕು ಎಂದು ಹಠ ಹಿಡಿದಿದ್ದಳು. ಕೊನೆಗೆ ಸ್ಟಡ್ ಬೆಲೆ ಕೇಳಿದಾಗ 30 ಯುವನ್(ಚೀನಾ ಕರೆನ್ಸಿ) ಎಂದಿದ್ದಾರೆ. ಇದೇ ವೇಳೆ ಕಿವಿಯೋಲೆಯೊಂದು ಕಿವಿಗೆ ಬಿದ್ದಿದೆ. ಇದರ ಬೆಲೆ 30 ಯುವನ್. ಹೀಗಾಗಿ ಒಟ್ಟು 60 ಯುವನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 700 ರೂಪಾಯಿ ಬೇಕಿತ್ತು. ಹೀಗಾಗಿ ಕದ್ದ ಚಿನ್ನಾಭರಣಗಳನ್ನು ರಿಸೈಕ್ಲಿಂಗ್ ಶಾಪ್‌ನಲ್ಲಿ ಕೊಟ್ಟು 60 ಯುವನ್ ಬೇಕು ಎಂದಿದ್ದಾಳೆ. ಶಾಪ್ ಸಿಬ್ಬಂದಿಗಳು ಮರು ಮಾತಿಲ್ಲದೆ 60 ಯುವನ್ ನೀಡಿದ್ದಾರೆ. ಇದರಲ್ಲಿ ಲಿಪ್ ಸ್ಟಡ್ ಹಾಗೂ ಕಿವಿಯೋಲೆ ಖರೀದಿಸಿದ್ದಾಳೆ. 

ತಾಯಿ ಚಿನ್ನಾಭರಣಧ ಒಟ್ಟು ಮೌಲ್ಯ ಬರೋಬ್ಬರಿ 1.2 ಕೋಟಿ ರೂಪಾಯಿ. ಈಕೆ 700 ರೂಪಾಯಿ ಪಡೆದು ತನ್ನ ಬಯಕೆ ತೀರಿಸಿಕೊಂಡಿದ್ದಾಳೆ. ಇತ್ತ ತಾಯಿ ಚಿನ್ನಾಭರಣ ಕಾಣದಾಗ ಎಲ್ಲಾ ವಿಚಾರಿಸಿದ್ದಾರೆ. ಈ ವೇಳೆ ಮೌನವಾಗಿ ಕುಳಿತ ಪುತ್ರಿಗೆ ಒಳಗೊಳಗೆ ಭಯ ಶುರುವಾಗಿದೆ. ಆದರೆ ತಾನು ಈ ರೀತಿ ಮಾಡಿರುವುದಾಗಿ ಹೇಳಿಲ್ಲ. ಇತ್ತ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ಪುತ್ರಿ ನಡೆದ ಘಟನೆ ಬಾಯ್ಬಿಟ್ಟಿದ್ದಾಳೆ. ಇತ್ತ ತಾಯಿ ಮಾತ್ರ ಇನ್ನು ಶಾಕ್‌ನಿಂದ ಹೊರಬಂದಿಲ್ಲ.

ಇಲ್ಲಿವೆ ಮುಖದ ಕಳೆ ಹೆಚ್ಚಿಸುವ ಲೇಟೆಸ್ಟ್ ಡಿಸೈನ್‌ನ ಚಿನ್ನದ ಝಮ್ಕಿಗಳು
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?