ಉದ್ದದ ಗಡ್ಡ ಬಿಡೋದು ಈಗ ಟ್ರೆಂಡ್. ಮಾರುಕಟ್ಟೆಯಲ್ಲಿ ಅದಕ್ಕೆ ಅಂತಾನೆ ಸಿಗೋ ಉತ್ಪನ್ನಗಳನ್ನು ಬಳಸಿ ಸುಂದರ ಗಡ್ಡ ಬಿಡುವ ಗಂಡಸರು ನೀವಾಗಿದ್ದರೆ ಸ್ವಲ್ಪ ನಿಮ್ಮವಳ ಬಗ್ಗೆಯೂ ಆಲೋಚನೆ ಮಾಡಿ.
ಪುರುಷರು ಗಡ್ಡ ಬಿಡೋದು ಸ್ಟೈಲ್ ಆಗಿದೆ. ಫ್ಯಾಷನ್ ಹೆಸರಿನಲ್ಲಿ ಅನೇಕರು ಗಡ್ಡ ಬಿಡ್ತಾರೆ. ಮತ್ತೆ ಕೆಲವರು ಚಳಿಗಾಲ ಬರ್ತಿದ್ದಂತೆ ಶೇವ್ ಮಾಡುವ ಕೆಲಸಕ್ಕೆ ಹೋಗೋದಿಲ್ಲ. ಚಳಿಯಿಂದ ರಕ್ಷಣೆ ಪಡೆಯಲು ಶೇವ್ ಮಾಡೋದಿಲ್ಲ. ಪುರುಷರ ಈ ಸ್ಟೈಲ್ ಅಥವಾ ಸೋಮಾರಿತನ ಅವರ ಅಂದವನ್ನು ಹೆಚ್ಚಿಸಬಹುದು. ಆದ್ರೆ ಅವರ ಹತ್ತಿರ ಬರುವ ಸಂಗಾತಿಗೆ ಒಳ್ಳೆಯದಲ್ಲ. ನೀವು ಶೇವ್ ಮಾಡದೆ ಸಂಗಾತಿ ಬಳಿ ಹೋದ್ರೆ ಆಕೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆಕೆಗೆ ಕೆಲ ಆರೋಗ್ಯ ಸಮಸ್ಯೆ ಕಾಡುತ್ತದೆ ಅಂದ್ರೆ ನೀವು ನಂಬ್ಲೇಬೇಕು.
ಪುರುಷರ ಗಡ್ಡ (beard) ಮಹಿಳೆಯರಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳ್ತಾರೆ. ಗಡ್ಡದಲ್ಲಿ ಹಲವು ಅಪಾಯಕಾರಿ ಬ್ಯಾಕ್ಟೀರಿಯಾ (Bacteria) ಗಳು ಅಡಗಿರುತ್ತವೆ. ನೀವು ಮಹಿಳೆ ಸಂಪರ್ಕಕ್ಕೆ ಬಂದಾಗ, ಮಹಿಳೆಯ ಮುಖವನ್ನು ನಿಮ್ಮ ಮುಖದಿಂದ ಸ್ಪರ್ಶಿಸಿದಾಗ ಅವರ ಮುಖದ ಮೇಲೆ ಗಾಯ (Injury) ಉಂಟಾಗುವ ಸಾಧ್ಯತೆ ಇರುತ್ತದೆ. ಚರ್ಮದ ಸಿಪ್ಪೆ ಸುಲಿಯಬಹುದು, ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
undefined
ಮಹಾರಾಷ್ಟ್ರ ಸ್ಟೈಲ್ ಸೀರೆಯುಟ್ಟು ಕಣ್ಣಲ್ಲೇ ಕಿಚ್ಚು ಹಚ್ಚಿದ ಭೂಮಿ ಶೆಟ್ಟಿ
ದಟ್ಟವಾದ ಗಡ್ಡವನ್ನು ಹೊಂದಿರುವ ಪುರುಷನನ್ನು ಮಹಿಳೆ ಚುಂಬಿಸಿದಾಗ ಇಂಪೆಟಿಗೊ ಎಂಬ ಕಾಯಿಲೆಗೆ ಆಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ರೋಗವು ಸಾಂಕ್ರಾಮಿಕವಾಗಿರುತ್ತದೆ. ಇದ್ರಲ್ಲಿ ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದು ಗಂಭೀರ ಸಮಸ್ಯೆ ಏನಲ್ಲ. ಆದ್ರೂ ಮಹಿಳೆ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಎಂಟಿಬಯೋಟಿಕ್ ಕ್ರೀಮ್ ಹಚ್ಚುವುದು ಅಥವಾ ಮಾತ್ರೆಗಳನ್ನು ಸೇವನೆ ಮಾಡುವ ಮೂಲಕ ಇಂಪೆಟಿಗೊ ಕಾಯಿಲೆಯಿಂದ ಗುಣಮುಖರಾಗಬಹುದು. ಕೆಲವೊಮ್ಮೆ ಇದು ನಿಮ್ಮ ಕೈಮೀರಿ, ಗಂಭೀರ ಸ್ವರೂಪವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ಗಡ್ಡ ಮತ್ತು ಮೀಸೆ ಮಹಿಳೆಯರಿಗೆ ಕಚಗುಳಿ ಇಡುತ್ತದೆ. ಇದು ಅವರಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಗಡ್ಡ ಚುಚ್ಚಿದಾಗ ಮಹಿಳೆಯರ ಮೂಡ್ ಆಫ್ ಆಗುತ್ತದೆ.
ಅದ್ಧೂರಿ ಡ್ರೆಸ್, ಡೈಮಂಡ್ ನೆಕ್ಲೇಸ್ ಧರಿಸಿ ಮಿಂಚಿದ ಅಂಬಾನಿ ಸೊಸೆ; ಅಂಗೈಯಗಲದ ಪರ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ!
ಬೇಸಿಗೆಯಲ್ಲಿ ಗಡ್ಡವನ್ನು ಟ್ರಿಮ್ ಮಾಡಿದಂತೆ ಚಳಿಗಾಲದಲ್ಲೂ ಮಾಡಿ ಎಂದು ತಜ್ಞರು ಹೇಳ್ತಾರೆ. ಗಡ್ಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನ ಕೂಡ ನಡೆದಿದೆ. ಅಧ್ಯಯನವೊಂದರಲ್ಲಿ ಗಡ್ಡಬಿಟ್ಟ ಹುಡುಗ್ರು ಗಡ್ಡವಿಲ್ಲದ ಹುಡುಗರಿಗಿಂತ ಹೆಚ್ಚು ಸ್ವಚ್ಛವಾಗಿರ್ತಾರೆ ಎಂಬ ವಿಷ್ಯ ಗೊತ್ತಾಗಿದೆ. ಯಾಕೆಂದ್ರೆ ಗಡ್ಡವಿದ್ದಾಗ ಮುಖದ ಚರ್ಮವನ್ನು ನೇರವಾಗಿ ಸ್ಪರ್ಶಿಸಲು ಸಾಧ್ಯವಾಗೋದಿಲ್ಲ. ಗಡ್ಡ ಚೆನ್ನಾಗಿ ಕಾಣಲಿ ಎನ್ನುವ ಕಾರಣಕ್ಕೆ ಪುರುಷರು ಅದಕ್ಕೆ ಒಂದಿಷ್ಟು ಕ್ರೀಮ್ ಬಳಸೋದಲ್ಲದೆ, ಅದನ್ನು ಸ್ವಚ್ಛವಾಗಿಡಲು ಹೆಚ್ಚು ಗಮನ ಹರಿಸ್ತಾರೆ. ಆದ್ರೆ ಇನ್ನೊಂದು ಅಧ್ಯಯನದಲ್ಲಿ ಗಡ್ಡಬಿಟ್ಟ ಹುಡುಗ್ರನ್ನು ಕಂಡ್ರೆ ಹುಡುಗಿಯರು ದೂರ ಓಡ್ತಾರೆ ಎಂಬ ಮಾಹಿತಿ ಇದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಹಿಳೆಯರು ಗಡ್ಡಬಿಟ್ಟ ವ್ಯಕ್ತಿ ಕೋಪಿಸ್ಟ, ಅಹಂಕಾರಿಯಂತೆ ಕಾಣ್ತಾನೆ ಎಂದಿದ್ದಾರೆ.
ಮತ್ತೆ ಕೆಲ ಮಹಿಳೆಯರು ವಿಶೇಷ ಸಂದರ್ಭದಲ್ಲಿ ಈ ಗಡ್ಡ ಅಡ್ಡಿಯುಂಟುಮಾಡುತ್ತದೆ ಎಂದಿದ್ದಾರೆ. ಸಂಗಾತಿಗೆ ಸರಿಯಾಗಿ ಮುತ್ತಿಡಲು ಸಾಧ್ಯವಾಗೋದಿಲ್ಲ ಎಂದಿದ್ದಾರೆ. ಕ್ಲೀನ್ ಶೇವ್ ಮಾಡಿದ ಹುಡುಗ ಮಿಸ್ಟರ್ ಕ್ಲೀನ್ ಎಂದು ಕೆಲ ಹುಡುಗಿಯರು ನಂಬುತ್ತಾರೆ.
ಗಡ್ಡ ಕ್ಲೀನ್ ಮಾಡೋದು ಹೇಗೆ? : ಗಡ್ಡವನ್ನು ಇಷ್ಟಪಡುವ ಪುರುಷರು ಕ್ಲೀನ್ ಶೇವ್ ಇಷ್ಟಪಡೋದಿಲ್ಲ. ಚಳಿಗಾಲವಿರಲಿ, ಮಳೆಗಾಲವಿರಲಿ ಯಾವಾಗ್ಲೂ ಗಡ್ಡ ಇರ್ಬೇಕು ಎನ್ನುವವರು ಅದನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಗಡ್ಡಕ್ಕೊಂದು ಸುಂದರ ಶೇಪ್ ನೀಡಿ. ಶಾಂಪೂ ಬಳಸಿ ಅದನ್ನು ಕ್ಲೀನ್ ಮಾಡಿ. ಕಂಡಿಷನರ್ ಕೂಡ ನೀವು ಬಳಸಬಹುದು. ಮಾರುಕಟ್ಟೆಯಲ್ಲಿ ಗಡ್ಡಕ್ಕೆ ಸಂಬಂಧಿಸಿದ ಅನೇಕ ಉತ್ಪನ್ನಗಳು ಲಭ್ಯವಿದೆ. ಅವುಗಳನ್ನು ಬಳಸಿ ನೀವು ನಿಮ್ಮ ಗಡ್ಡ ಸದಾ ಕ್ಲೀನ್ ಆಗಿರುವಂತೆ ನೋಡಿಕೊಂಡ್ರೆ ನಿಮ್ಮ ಸಂಗಾತಿಗೆ ಸಮಸ್ಯೆ ಆಗೋದಿಲ್ಲ.