ಫ್ಯಾಷನ್ ಜಗತ್ತು ಪ್ರತಿ ಕ್ಷಣಕ್ಕೂ ಅಪ್ಡೇಟ್ ಆಗ್ತಿರುತ್ತದೆ. ಕೆಲವೊಮ್ಮೆ ನಮ್ಮ ಕಲ್ಪನೆಗೆ ಮೀರಿದ ವಸ್ತುಗಳು ಟ್ರೆಂಡ್ ಆಗುತ್ವೆ. ಅಮೆರಿಕಾದಲ್ಲಿ ಈಗ ಬ್ಯಾಗ್ ಒಂದು ಎಲ್ಲರ ಗಮನ ಸೆಳೆದಿದೆ.
ಐಷಾರಾಮಿ ಬ್ಯಾಗ್ (Luxury bag) ಗಳಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿ ದಿನ ಈ ಹ್ಯಾಂಡ್ ಬ್ಯಾಗ್ ಟ್ರೆಂಡ್ (hand bag trend) ಬದಲಾಗ್ತಾನೆ ಇರುತ್ತೆ. ಡ್ರೆಸ್ (dress) ಗೆ ಸೂಟ್ ಆಗುವಂತಹ ಬ್ಯಾಗ್ ಹಿಡಿದುಕೊಂಡ್ರೆ ಲುಕ್ ಚೆನ್ನಾಗಿರುತ್ತೆ ಎನ್ನುವ ಕಾರಣಕ್ಕೆ ಹುಡುಗಿಯರು ದುಬಾರಿ ಬೆಲೆಯ ಬ್ಯಾಗ್ ಖರೀದಿ ಮಾಡ್ತಾರೆ. ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಇಷ್ಟವಾಗುವ ಸಾಕಷ್ಟು ಬ್ಯಾಗ್ ಗಳನ್ನು ನೀವು ನೋಡ್ಬಹುದು. 100, 200ರಿಂದ ಶುರುವಾಗುವ ಬ್ಯಾಗ್ ಬೆಲೆ ಲಕ್ಷ, ಕೋಟಿಗೆ ಸಿಗುತ್ತದೆ. ಭಾರತದಲ್ಲಿ ಹುಡುಗಿಯರು ಉತ್ತಮ ಬ್ರ್ಯಾಂಡ್ ಹಾಗೂ ಹೆಚ್ಚು ಬೆಲೆಯ ಬ್ಯಾಗ್ ಖರೀದಿಗೆ ಕಸರತ್ತು ಮಾಡ್ತಾರೆ. ಆದ್ರೆ ಅಮೆರಿಕಾದಲ್ಲಿ ಟ್ರೆಂಡ್ ಬೇರೆಯೇ ಇದೆ. ಇನ್ಸ್ಟಾಗ್ರಾಮ್ ನಲ್ಲಿ ಅಮೆರಿಕಾ ಮಹಿಳೆಯ ಬ್ಯಾಗ್ ಫ್ಯಾಷನ್ ವೈರಲ್ ಆಗಿದೆ. ಇದನ್ನು ನೋಡಿದ ಮಹಿಳೆಯರು ದಂಗಾಗಿದ್ದಾರೆ.
ಮನೆಯಲ್ಲಿರುವ ಹಳೆಯ ಅಥವಾ ಕಡಿಮೆ ಬೆಲೆಯ ಬ್ಯಾಗ್ ಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವವರ ಸಂಖ್ಯೆ ಬಹಳ ಕಡಿಮೆ. ಆದ್ರೆ ಈ ಮಹಿಳೆ ಬಾಸ್ಮತಿ ಅಕ್ಕಿ (basmati rice) ಚೀಲವನ್ನೇ ತನ್ನ ಹ್ಯಾಂಡ್ ಬ್ಯಾಗ್ ಮಾಡ್ಕೊಂಡಿದ್ದಾಳೆ. ಅಮಂಡಾ ಜಾನ್ ಮಂಗಳತಿಲ್ ಇನ್ಸ್ಟಾ ಖಾತೆಯಲ್ಲಿ ಬ್ಯಾಗ್ ವಿಡಿಯೋ ವೈರಲ್ ಆಗಿದೆ. ಮಹಿಳೆ ಬಾಸ್ಮತಿ ಬ್ಯಾಗ್ ಹಿಡಿದು ಮಾರುಕಟ್ಟೆಯಲ್ಲಿ ನಿಂತಿರುವ ಫೋಟೋವನ್ನು ನೀವು ನೋಡ್ಬಹುದು.
ಬಾಲಿವುಡ್ ಸ್ಟೈಲ್ ಐಕಾನ್ ಕರೀನಾ ಕಪೂರ್ ಶೈಲಿಯ 8 ಸಲ್ವಾರ್ ಸೂಟ್‌ಗಳು
ಬಾಸ್ಮತಿ ರಾಯಲ್ ಬ್ರಾಂಡ್ ಚೀಲವನ್ನು ಮಹಿಳೆ ಬ್ಯಾಗ್ ಮಾಡ್ಕೊಂಡಿದ್ದಾಳೆ. ಭಾರತದ ನನ್ನ ಸ್ನೇಹಿತರೇ, ಲೂಯಿ ವಿಟಾನ್ ಮತ್ತು ಮೈಕೆಲ್ ಕಾರ್ಸ್, ಕೋಚ್, ಕೇಡ್ ಸ್ಪೇಡ್ ಬ್ಯಾಗ್‌ಗಳನ್ನು ಖರೀದಿಸಲು ಬಯಸುವ ಎಲ್ಲಾ ಹುಡುಗಿಯರು ಅಮೆರಿಕದಲ್ಲಿ ಟ್ರೆಂಡಿಂಗ್ ಆಗಿರುವುದನ್ನು ನೋಡಬೇಕು. ಇದು ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಹಾಗೂ ಅತಿ ಸುಲಭವಾಗಿ ಸಿಗುತ್ತದೆ. ನನ್ನ ವಿಡಿಯೋ ಕೊನೆಯಲ್ಲಿ ಯಾವ ಬ್ಯಾಗ್ ಟ್ರೆಂಡ್ ಆಗ್ತಿದೆ ಎಂಬುದನ್ನು ನೋಡಿ ಎಂದು ಅಮಂಡಾ ಜಾನ್ ಮಂಗಳತಿಲ್ ಹೇಳಿದ್ದಾರೆ.
ಅತ್ಯಾಪ್ತರಿಗೆ ಗಿಫ್ಟ್ ಕೊಡಲು ಬಜೆಟ್ ಫ್ರೆಂಡ್ಲಿ ಚಿನ್ನದ ಬಳೆಗಳ ಕಲೆಕ್ಷನ್
ಅಮಂಡಾ ಜಾನ್ ಮಂಗಳತಿಲ್, ಅಮೆರಿಕದಲ್ಲಿ ಬಾಸ್ಮತಿ ಅಕ್ಕಿಯ ಚೀಲ ಟ್ರೆಂಡ್ ಆಗುತ್ತದೆ ಎಂದು ಯಾರು ಭಾವಿಸಿದ್ದರು. ಭಾರತೀಯ ಹುಡುಗಿಯರು ಅದನ್ನು ಸ್ವೀಕರಿಸೋಣ. ನಮ್ಮ ಚೀಲದ ಬಗ್ಗೆ ಹೆಮ್ಮೆ ಪಡೋಣ ಮತ್ತು ಅದನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳೋಣ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈವರೆಗೆ 8 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಸಾವಿರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಖಾಲಿಯಾದ ಚೀಲವನ್ನು ನಾನು ಕಸಕ್ಕೆ ಹಾಕಿದ್ದೇನೆ, ಮೊದಲೇ ತಿಳಿದಿದ್ದರೆ, ನಾನೂ ಬ್ಯಾಗ್ ರೀತಿ ಬಳಸುತ್ತಿದ್ದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ವಿಮಲ್ ಬ್ಯಾಗ್ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಈ ಚೀಲ ನಮಗೆ ಉಚಿತವಾಗಿ ಸಿಗುತ್ತದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಾವ್ಯಾಕೆ ಅಮೆರಿಕಾ ಟ್ರೆಂಡ್ ಫಾಲೋ ಮಾಡ್ಬೇಕು, ಭಾರತೀಯರು ಟ್ರೆಂಡ್ ಸೆಟರ್ ಎಂದು ಇನ್ನೊಬ್ಬರು ಹೇಳಿದ್ದಾರೆ. ಭಾರತದಲ್ಲಿ ಬರೀ ಅಕ್ಕಿ ಮಾತ್ರವಲ್ಲ, ಗೋಧಿ, ಟೀ ಪುಡಿ, ಕಾಫಿಪುಡಿಗೆ ಸಿಗುವ ಬ್ಯಾಗ್ ಗಳನ್ನು ಕೂಡ ಬಳಕೆ ಮಾಡ್ಬಹುದು ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಅನೇಕರು ಈ ಸ್ಟೈಲ್ ಇಷ್ಟಪಟ್ಟಿದ್ದಾರೆ. ಅಮೆರಿಕಾದವರು ಭಾರತೀಯರಿಗಿಂತ ಬಹಳ ಹಿಂದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.